ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮತ್ತು ಮಹಾಕಾಲ್ ಮಹಾಲೋಕ ದೇವಸ್ಥಾನಗಳಲ್ಲಿ ಇದೀಗ ಭಕ್ತರಿಗೆ ಜಿಯೋ ಟ್ರು 5ಜಿ ಸೇವೆ ಲಭ್ಯವಿದೆ. ಇಂದು ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ.
ಇಂದೋರ್(ಡಿ.14): ಮಧ್ಯಪ್ರದೇಶದ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮತ್ತು ಮಹಾಕಾಲ್ ಮಹಾಲೋಕದ ಪವಿತ್ರ ದೇಗುಲದಲ್ಲಿ ಜಿಯೋ ಟ್ರೂ 5G ಸೇವೆ ಆರಂಭಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜಿಯೋ ಟ್ರೂ 5ಜಿ ಮತ್ತು ಜಿಯೋ ಟ್ರೂ 5ಜಿ ಚಾಲಿತ ವೈ-ಫೈ ಸೇವೆಗಳನ್ನು ಬಿಡುಗಡೆ ಮಾಡಿದರು. ಧಾರ್ಮಿಕ ಪೂಜೆಯ ನಂತರ ಭಗವಾನ್ ಶಿವನಿಗೆ ಟ್ರೂ 5G ಸೇವೆಗಳನ್ನು ಅರ್ಪಿಸಲಾಯಿತು. ಜಿಯೋ ಕಮ್ಯುನಿಟಿ ಕ್ಲಿನಿಕ್ ವೈದ್ಯಕೀಯ ಕಿಟ್ ಮತ್ತು ಕ್ರಾಂತಿಕಾರಿ AR-VR ಸಾಧನವಾದ ಜಿಯೋ ಗ್ಲಾಸ್ (Jio Glass) ಮೂಲಕ ಆರೋಗ್ಯ ಕ್ಷೇತ್ರದಲ್ಲಿ 5Gಯ ಅದ್ಭುತ ಪ್ರಯೋಜನಗಳನ್ನು ಜಿಯೋ ಪ್ರದರ್ಶಿಸಿದೆ. ಈ ಪ್ರಯೋಜನಗಳು ಮಧ್ಯಪ್ರದೇಶದ ಜನರ ಜೀವನದಲ್ಲಿ ಪರಿವರ್ತನೆ ಬದಲಾವಣೆಗಳನ್ನು ತರುತ್ತವೆ.
ಮಹಾಕಾಳೇಶ್ವರ ದೇವಸ್ಥಾನ ಮತ್ತು ಮಹಾಕಾಲ್ ಮಹಾಲೋಕವು ಉಜ್ಜಯಿನಿಯಲ್ಲಿ ಧಾರ್ಮಿಕ ಹೆಗ್ಗುರುತಾಗಿದೆ. ಶಿವನ ಆಶೀರ್ವಾದ ಪಡೆಯಲು ದೇಶ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಪ್ರತಿದಿನ ದೇಗುಲಕ್ಕೆ ಭೇಟಿ ನೀಡುತ್ತಾರೆ. ಜಿಯೋದ ಟ್ರೂ 5G ಸೇವೆಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಮಧ್ಯಪ್ರದೇಶ ಮತ್ತು ಅದರ ಜನರಿಗೆ ಈ ಬಿಡುಗಡೆಯು ಪ್ರಮುಖ ಮೈಲುಗಲ್ಲು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಜಿಯೋ ಹಾಗೂ ಒನ್‌ಪ್ಲಸ್ ಒಪ್ಪಂದ, ಎಲ್ಲಾ ಫೋನ್‌ಗಳಲ್ಲಿ ಟ್ರೂ 5G ತಂತ್ರಜ್ಞಾನ ಲಭ್ಯ!
30 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಅಂದರೆ 2023ರ ಜನವರಿಯಲ್ಲಿ ಇಂದೋರ್ ಕೂಡ ಜಿಯೋ ಟ್ರೂ 5G ನೆಟ್‌ವರ್ಕ್ ಸೇವೆ ಪಡೆಯಲಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಟ್ರೂ 5Gಯೊಂದಿಗೆ ಸಾಮಾನ್ಯ ಜನರು ಹಾಗೂ ವಿದ್ಯಾರ್ಥಿಗಳು, ಉದ್ಯಮಿಗಳು, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ವೃತ್ತಿಪರರು ಹಾಗೂ ಕೃಷಿ, ಶಿಕ್ಷಣ, ಔಷಧ, ಮಾಹಿತಿ ತಂತ್ರಜ್ಞಾನ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳು ಹೊಸ ಅವಕಾಶಗಳು ಹಾಗೂ ಹೆಚ್ಚುವರಿ ಉದ್ಯೋಗಗಳೊಂದಿಗೆ ಮತ್ತಷ್ಟು ರೂಪಾಂತರಗೊಳ್ಳುತ್ತವೆ. 5G ತಂತ್ರಜ್ಞಾನವು ನಾಗರಿಕರು ಮತ್ತು ಸರ್ಕಾರವು ನೈಜ ಸಮಯದ (ರಿಯಲ್ ಟೈಮ್) ಆಧಾರದ ಮೇಲೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಇದರ ಜತೆಗೆ ಕೊನೆಯ ಬಳಕೆದಾರರಿಗೆ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ.
ಹೊಸ ದಾಖಲೆ ಬರೆದ ಜಿಯೋ ಒಂದೇ ತಿಂಗಳಲ್ಲಿ 7.2 ಲಕ್ಷ ವೈರ್‌ಲೆಸ್ ಚಂದಾದಾರರ ಸೇರ್ಪಡೆ!
ಮಹಾಕಾಲ್ ಮಹಾಲೋಕ್‌ನಿಂದ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಮಗೆ ಆ ದೇವರ ಆಶೀರ್ವಾದವಿದೆ. ಇದು ಈಗ ಮಧ್ಯಪ್ರದೇಶದ ಮೊದಲ ಜಿಯೋ ಟ್ರೂ 5ಜಿ ಕಾರಿಡಾರ್ ಆಗಿದೆ. ಶೀಘ್ರದಲ್ಲೇ ಟ್ರೂ 5G ನೆಟ್‌ವರ್ಕ್ ಮಧ್ಯಪ್ರದೇಶದಾದ್ಯಂತ ವೇಗವಾಗಿ ವಿಸ್ತರಿಸಲಿದೆ. ಇಲ್ಲಿ ಇರುವ ಏಕೈಕ 5G ನೆಟ್‌ವರ್ಕ್ ಜಿಯೋ ಆಗಿದೆ ಎಂದು ಜಿಯೋ ವಕ್ತಾರರು ಹೇಳಿದ್ದಾರೆ.
ಪ್ರತಿ ಭಾರತೀಯನಿಗೂ ಟ್ರೂ-5G ಅನ್ನು ತಲುಪಿಸಲು ಜಿಯೋ ಇಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿರುವುದಕ್ಕೆ ಕಾರಣ ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಹಾಗೂ ಪ್ರತಿಯೊಬ್ಬ ನಾಗರಿಕರಿಗೂ ಇದು ನೀಡಬಹುದಾದ ಅದ್ಭುತ ಪ್ರಯೋಜನಗಳು. ಮಧ್ಯಪ್ರದೇಶವನ್ನು ಡಿಜಿಟಲೈಸ್ ಮಾಡಲು ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ತಮ್ಮ ಬೆಂಬಲವನ್ನು ನೀಡಿದ ಮಧ್ಯಪ್ರದೇಶ ಸರ್ಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.