ಪೆಗಾಸಸ್ ಪೂರ್ವನಿಯೋಜಿತ ಪಿತೂರಿ; ಕಾಂಗ್ರೆಸ್ ರಾಜಕೀಯದಾಟ ತೆರೆದಿಟ್ಟ ರವಿಶಂಕರ್ ಪ್ರಸಾದ್!

By Suvarna News  |  First Published Jul 19, 2021, 8:51 PM IST
  • ಪೆಗಾಸಸ್ ಆರೋಪಕ್ಕೆ ಮಾಜಿ ಐಟಿ ಸಚಿವ ರವಿ ಶಂಕರ್ ಪ್ರಸಾದ್ ತಿರುಗೇಟು
  • ಕಾಂಗ್ರೆಸ್ ಪೂರ್ವನಿಯೋಜಿತ ಪಿತೂರಿ ಪೆಗಾಸಸ್, ಇದು ಕಾಂಗ್ರೆಸ್ ಪರಿಸ್ಥಿತಿ
  • ಆಧಾರ ರಹಿತ ಕಾಂಗ್ರೆಸ್ ಆರೋಪಕ್ಕೆ ಉತ್ತರ ನೀಡಿದ ಪ್ರಸಾದ್

ನವದೆಹಲಿ(ಜು.19): ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತ ವಿರೋಧಿ ಚಟುವಟಿಕೆ ಯತ್ನಿಸುತ್ತಲೇ ಇದೆ. ಇದರ ಜೊತೆಗೆ ಕಾಂಗ್ರೆಸ್ ಕೂಡ ಸೇರಿಕೊಂಡು ಭಾರತವನ್ನು ಅವಮಾನಿಸುವ ಯತ್ನ ಮಾಡುತ್ತಿದೆ. ಇದಕ್ಕೆ ಪೆಗಾಸಸ್ ಆರೋಪ ಕೂಡ ಒಂದಾಗಿದೆ ಎಂದು ಮಾಜಿ ಐಟಿ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ಪೆಗಾಸಸ್ ಆರೋಪಕ್ಕೆ ಖಡಕ್ ಉತ್ತರ ನೀಡಿರುವ ಪ್ರಸಾದ್, ದೇಶದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಿತೂರಿಯನ್ನು ಬಿಚ್ಚಿಟ್ಟಿದ್ದಾರೆ.

ಭಾರತವನ್ನು ಅವಮಾನಿಸುವ ಯತ್ನ; ಪ್ರತಿಪಕ್ಷದ ಪೆಗಾಸಸ್ ಆರೋಪಕ್ಕೆ ಅಮಿತ್ ಶಾ ತಿರುಗೇಟು!

Latest Videos

undefined

ಮುಂಗಾರು ಅಧಿವೇಶನಕ್ಕೆ ಅಡ್ಡಿಪಡಿಸಲು ಪೆಗಾಸಸ್ ವರದಿ ಹರಿಬಿಡಲಾಗಿದೆ. 2019ರ ಚುನಾವಣೆ ವೇಳೆಯೂ ಪೆಗಾಸಸ್ ಕತೆ ಪ್ರಸಾರ ಮಾಡಲಾಗಿತ್ತು. ಇನ್ನು ಟ್ರಂಪ್ ಭಾರತ ಭೇಟಿ ವೇಳೆ ಗಲಭೆಗೆ ಪ್ರಚೋದನೆ ನೀಡಲಾಗಿತ್ತು. 50ಕ್ಕೂ ಹೆಚ್ಚು ವರ್ಷ ದೇಶ ಆಳಿದ ಕಾಂಗ್ರೆಸ್ ಇದೀಗ ಹೀನಾಯ ಸ್ಥಿತಿಗೆ ತಲುಪಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಯಾವಮಟ್ಟಕ್ಕೂ ಇಳಿಯಲು ಕಾಂಗ್ರೆಸ್ ಹಿಂಜರಿಯುವುದಿಲ್ಲ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

 

Our IT Minister confirmed today that for lawful interceptions of a phone can only be made as per relevant rules under provisions of Section 5 of Indian Telegraph Act along with the permission of Home Secretary of the centre or Home Secretary of the state. pic.twitter.com/P5FuAFx5cc

— Ravi Shankar Prasad (@rsprasad)

ಪೆಗಾಸಸ್ ವರದಿ ಭಾರತೀಯ ಪ್ರಜಾಪ್ರಭುತ್ವ ಕೆಣಕುವ ಪ್ರಯತ್ನ; IT ಸಚಿವ ಅಶ್ವಿನಿ ವೈಷ್ಣವ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,  ಪತ್ರಕರ್ತರು, ಸಾಮಾಜಿ ಕಾರ್ಯಕರ್ತರು ಸೇರಿದಂತೆ ಪ್ರತಿಪಕ್ಷದ ನಾಯಕರ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪೆಗಾಸಸ್ ಸ್ಪೈವೇರ್ ನಡೆಸಿದ್ದಾರೆ. ಈ ಮೂಲಕ ಅವರ ಡೇಟಾ ಕದಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಷ್ಟೇ ಅಲ್ಲ ಅಮಿತ್ ಶಾ ರಾಜೀನಾಮೆಗೂ ಒತ್ತಾಯಿಸಿದೆ.

Spyware Pegasus: 'ಟಾರ್ಗೆಟ್‌' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!

ಪೆಗಾಸಸ್‌ ಆರೋಪದಲ್ಲಿ ಭಾರತ ಸರ್ಕಾರ ಅಥಾವ ಬಿಜೆಪಿಯ ಯಾವುದೇ ಸಂಪರ್ಕವಿಲ್ಲ. ಅಮ್ನೆಸ್ಟಿಯಂತಹ ಹಲವು ಸಂಸ್ಥೆಗಳು ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿತ್ತು. ಈ ಚಟುವಟಿಕೆಗೆ ಬಳಸುವ ಹಣಕಾಸು ಮೂಲವನ್ನು ಕೇಳಿದರೆ, ಭಾರತದಲ್ಲಿ ಕೆಲಸ ಮಾಡುವುದೇ ಕಷ್ಟ ಎಂಬ ಸಬೂಬು ನೀಡಿತ್ತು. ಇದೀಗ ಮುಂಗಾರು ಅಧಿವೇಶನಕ್ಕೂ ಮುನ್ನ ಪೆಗಾಸಸ್ ಸುದ್ದಿ ಹರಿಬಿಟ್ಟಿರುವುದೇಕೆ? ಎಂದು ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.

 

जानबूझकर मानसून सत्र के समय सदन को disrupt करने और देश में बेबुनियाद agenda खड़ा करने की कोशिश की जा रही है और इसका कारण यह है कि कांग्रेस पार्टी अब सिमट रही है और हार रही है। pic.twitter.com/2HpsPA4Hwc

— Ravi Shankar Prasad (@rsprasad)

NSO ಕಂಪನಿ ಪೆಗಾಸಸ್ ಬಳಕೆ ಮಾಡುತ್ತಿರುವುದು ಪಾಶ್ಚಿಮಾತ್ಯ ದೇಶದಲ್ಲಿ. ಆದರೆ ಭಾರತವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

click me!