ನವದೆಹಲಿ(ಜು.19): ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಮಂತ್ರಿಗಳ, ರಾಜಕೀಯ ನಾಯಕರ ಫೋನ್ ಹ್ಯಾಕ್ ಮಾಡಲು ಭಾರತ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಸಿಕೊಂಡಿದೆ ಅನ್ನೋ ವರದಿ ಭಾರತದ ಪ್ರಜಾಪ್ರಭುತ್ವ ಹಾಗೂ ಸ್ಥಾಪಿತ ಸಂಸ್ಥೆಗಳ ಕೆಣಕುವ ಪ್ರಯತ್ನ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಹೇಳಿದ್ದಾರೆ.
Spyware Pegasus: 'ಟಾರ್ಗೆಟ್' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!
undefined
ಕೆಲವು ವ್ಯಕ್ತಿಗಳ ಫೋನ್ ಡೇಟಾ ಹ್ಯಾಕ್ ಮಾಡಲು ಸ್ಪೈವೇರ್ ಪೆಗಾಸಸ್ ಅನ್ನು ಬಳಸಲಾಗಿದೆ ಎಂದು ಜುಲೈ 18 ರಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಒಂದು ದಿನ ಮೊದಲು ಈ ವರದಿ ಪ್ರಕಟವಾಗಿದೆ. ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Pegasus report says that there is a consortium that has got access to a leaked database of 50k phone numbers.
However, the report says that presence of a number does not reveal whether a device was infected or subjected to an attempted hack: IT Min Shri in LS pic.twitter.com/YGSEcK8H7j
ಈ ಹಿಂದೆ ವ್ಯಾಟ್ಸ್ಆ್ಯಪ್‌ನಲ್ಲೂ ಪೆಗಾಸಸ್ ಬಳಕೆ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪಗಳಿಗೆ ಆಧಾರಗಳಿರಲಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿತ್ತು. ಇದೀಗ ಮತ್ತೆ ಪೆಗಾಸಸ್ ಸ್ಪೈವೇರ್ ಸದ್ದು ಮಾಡುತ್ತಿದೆ. ಆಧಾರ ರಹಿತ ಈ ಸುದ್ದಿ ಭಾರತೀಯ ಪ್ರಜಾಪ್ರಭುತ್ವ ಕೆಣಕುವ ಪ್ರಯತ್ನದ ರೀತಿ ತೋರುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್ ಒಳಗೆ ನುಸುಳುತ್ತದೆ?: ತಜ್ಞರ ಉತ್ತರ
ಸದನದ ಎಲ್ಲಾ ಸದಸ್ಯರು ಸತ್ಯ ಹಾಗೂ ಆರೋಪಗಳನ್ನು ಪರೀಕ್ಷಿಸಬೇಕು. ಈ ಪೆಗಾಸಸ್ ಸ್ಪೈವೇರ್ ವರದಿಯಲ್ಲಿ 50,000 ಫೋನ್ ಡೇಟಾ ಬೇಸ್ ಸೋರಿಕೆ ಹಾಗೂ ಈ ಫೋನ್‌ಗಳ ವ್ಯಕ್ತಿಗಳ ಮೇಲೆ ಕಣ್ಣಿಡಲಾಗಿದೆ ಎಂದಿದೆ. ಆದರೆ ಇದೇ ವರದಿಯಲ್ಲಿ ಡೇಟಾ ಸೋರಿಕೆ ಪೆಗಾಸಸ್‌ನಿಂಗ ಅಗಿದೆಯೇ ಅಥವಾ ಹ್ಯಾಕ್‌ಗೆ ಒಳಪಟ್ಟಿದೆಯೇ ಅನ್ನೋದನ್ನು ಬಹಿರಂಗ ಪಡಿಸಿಲ್ಲ. ಈ ತಾಂತ್ರಿಕ ವಿಶ್ಲೇಷಣೆಗೆ ಫೋನ್ ಒಳಪಡಿಸದೆ, ಆಕ್ರಮಣ ಪ್ರಯತ್ನಕ್ಕೆ ಸಾಕ್ಷಿಯಾಗಿದೆಯೆ ಅಥವಾ ಯಶಸ್ವಿಯಾಗಿ ರಾಜಿ ಮಾಡಿಕೊಂಡಿದೆಯೆ ಎಂದು ನಿರ್ಣಾಯಕವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಶ್ವಿನಿ ಹೇಳಿದ್ದಾರೆ.
ಡೇಟಾ ಕಣ್ಗಾವಲು ಅಥವಾ ಎನ್‌ಎಸ್‌ಒಗೆ ಯಾವುದೇ ಸಂಬಂಧವಿಲ್ಲ ಎಂಬುದು ವಿವಾದಕ್ಕೂ ಮೀರಿದೆ. ಆದ್ದರಿಂದ ದತ್ತಾಂಶದ ಬಳಕೆ ಕಣ್ಗಾವಲುಗೆ ಸಮನಾಗಿರುತ್ತದೆ ಎಂದು ಸೂಚಿಸಲು ಯಾವುದೇ ವಾಸ್ತವಿಕ ಆಧಾರಗಳಿಲ್ಲ. ಅಂತಹ ಸೇವೆಗಳು ಯಾರಿಗಾದರೂ, ಎಲ್ಲಿಯಾದರೂ, ಮತ್ತು ಯಾವುದೇ ಸಮಯದಲ್ಲಿ ಮುಕ್ತವಾಗಿ ಲಭ್ಯವಿರುತ್ತವೆ ಮತ್ತು ಇದನ್ನು ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳು ಮತ್ತು ವಿಶ್ವಾದ್ಯಂತ ಖಾಸಗಿ ಕಂಪನಿಗಳು ಬಳಸುತ್ತವೆ.
Spyware Pegasus: ತನ್ನ ವಿರುದ್ಧದ ಆರೋಪ ಸುಳ್ಳೆಂದ ಇಸ್ರೇಲ್ ಕಂಪನಿ!
ವರದಿಯಲ್ಲಿ ಹೇಳಿದ ಪೆಗಾಸಸ್ ಬಳಕೆ ಮಾಡುತ್ತಿರುವ ದೇಶಗಳ ಪಟ್ಟಿಯಲ್ಲಿ ತಪ್ಪಿದೆ. ಇದರಲ್ಲಿನ ಹಲವು ದೇಶಗಳು ನಮ್ಮ ಗ್ರಾಹಕರಲ್ಲ. ತನ್ನ ಗ್ರಾಹಕರಲ್ಲಿ ಹೆಚ್ಚಿನವರು ಪಾಶ್ಚಿಮಾತ್ಯ ದೇಶಗಳಾಗಿದ್ದಾರೆ ಎಂದು ಎನ್ಎಸ್ಒ ಹೇಳಿದೆ.
ಪ್ರತಿಪಕ್ಷದಲ್ಲಿರುವ ಸಹೋದ್ಯೋಗಿಗಳಿಗೆ ಐಟಿ ಕಣ್ಗಾವಲು ಕುರಿತು ಭಾರತದ ಪ್ರೋಟೋಕಾಲ್ ಸ್ಪಷ್ಟ ಅರಿವಿದೆ. ಈ ದೇಶವನ್ನು ಆಳಿದ ಅವರಿಗೆ ನಮ್ಮ ಕಾನೂನು ಕುರಿತು ಅರಿವಿದೆ. ಹೀಗಾಗಿ ಈ ಪ್ರೋಟೋಕಾಲ್ ಮೀರಿ ಯಾವುದೇ ರೀತಿಯ ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ತಿಳಿದಿದೆ.
ರಾಷ್ಟ್ರೀಯ ಭದ್ರತೆಯ ಉದ್ದೇಶಕ್ಕಾಗಿ ಭಾರತದಲ್ಲಿ ವಿಶೇಷವಾಗಿ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಕೇಂದ್ರ ಮತ್ತು ರಾಜ್ಯಗಳ ಏಜೆನ್ಸಿಗಳಿಂದ ಎಲೆಕ್ಟ್ರಾನಿಕ್ ಸಂವಹನದ ಕಾನೂನುಬದ್ಧ ಪ್ರತಿಬಂಧವನ್ನು ನಡೆಸಲಾಗುತ್ತದೆ. ಎಲೆಕ್ಟ್ರಾನಿಕ್ ಸಂವಹನದ ಈ ಕಾನೂನುಬದ್ಧ ಪ್ರತಿಬಂಧದ ವಿನಂತಿಗಳನ್ನು ಭಾರತೀಯ ಟೆಲಿಗ್ರಾಫ್ ಕಾಯ್ದೆ, 1885 ರ ಸೆಕ್ಷನ್ 5 (2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ರ ಅಡಿಯಲ್ಲಿ ಮಾಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.