ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಭಯಪಡಬೇಕಿಲ್ಲ; ಹೊಸ ನಿಯಮ ಕುರಿತು ಕೇಂದ್ರ ಸ್ಪಷ್ಟನೆ!

By Suvarna NewsFirst Published May 27, 2021, 9:49 PM IST
Highlights
  • ಹೊಸ ಸೋಶಿಯಲ್ ಮಿಡಿಯಾ ನಿಯಮದಿಂದ ಭಯಬೇಡ
  • ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಆತಂಕ ಬಡಬೇಕಿಲ್ಲ
  • ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರ ಸ್ಪಷ್ಟನೆ

ನವದೆಹಲಿ(ಮೇ.27): ಭಾರದಲ್ಲೀಗ ಹೊಸ ಡಿಜಿಟಲ್ ನಿಯಮ ಭಾರಿ ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಭಾರತದ ಕಾನೂನು ಗೌರವಿಸಲೇಬೇಕು ಎಂದು ಕೇಂದ್ರ ಖಡಕ್ ವಾರ್ನಿಂಗ್ ನೀಡಿದ್ದರೆ, ಇತ್ತ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಮಾಜಿಕ ಮಾಧ್ಯಮ ಕೋರ್ಟ್ ಮೆಟ್ಟಿಲೇರಿದೆ. ಇದರ ನಡುವೆ ಬಳಕೆದಾರರ ಆತಂಕ ಹೆಚ್ಚಾಗಿದೆ. ಆದರೆ ಸಾಮಾನ್ಯಾ ವ್ಯಾಟ್ಸ್ಆ್ಯಪ್ ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ.  ಎಂದು ಭಯ, ಗೊಂದಲಕ್ಕೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಉತ್ತರ ನೀಡಿದ್ದಾರೆ.

ಕೇಂದ್ರದ ಹೊಸ ಐಟಿ ನಿಯಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ Whatsapp!

ಸಾಮಾಜಿಕ ಮಾಧ್ಯಮಗಳ ಹೊಸ ನಿಯಮ ಮೇ.26ರಿಂದ ಭಾರತದಲ್ಲಿ ಜಾರಿಗೆ ಬಂದಿದೆ. ಭಾರತದ ಸಾರ್ವಭೌಮತ್ವ, ಸಮಗ್ರತೆ ,  ಸುರಕ್ಷತೆ, ಸಾರ್ವಜನಿಕ ಸುವ್ಯವಸ್ಥೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ  ವಿಡಿಯೋ, ಮಾಹಿತಿಗಳನ್ನು ಯಾರು ಮೊದಲು ಹಂಚಿಕೊಳ್ಳುತ್ತಾರೋ ಎಂಬುದನ್ನು ಪತ್ತೆಹಚ್ಚಲು ಹೊಸ ನಿಯಮ ನೆರವಾಗಲಿದೆ. ಇದರಿಂದ ಸಾಮಾನ್ಯ ವ್ಯಾಟ್ಸ್ಆ್ಯಪ್ ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಟೂಲ್‌ಕಿಟ್ ಜಟಾಪಟಿ: ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹೇಳಿಕೆಗೆ ದೆಹಲಿ ಪೊಲೀಸರ ತಿರುಗೇಟು!...

ಕೇಂದ್ರದ ಹೊಸ ನಿಯಮದ ವಿರುದ್ಧ ವ್ಯಾಟ್ಸ್ಆ್ಯಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಈ ನಿಯಮ ಗೌಪ್ಯತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದೆ. ಆದರೆ ವ್ಯಾಟ್ಸ್‌ಆ್ಯಪ್ ಬಳಕೆದಾರರ ಗೌಪ್ಯತೆ ಹಕ್ಕನ್ನು ಕೇಂದ್ರ ಸರ್ಕಾರ ಗೌರವಿಸುತ್ತದೆ. ಆದರೆ ಸರ್ಕಾರದ ನೂತನ ನಿಯಮ ಕಾನೂನು ಬಾಹಿರ ಹಾಗೂ ಆಕ್ರಮಣಕಾರಿ ಮಾಹಿತಿ, ಸಂದೇಶ, ಚಿತ್ರ, ವಿಡಿಯೋಗಳ ಮೂಲ ಬಹಿರಂಗಪಡಿಸುವಿಕೆಯಾಗಿದೆ ಎಂದಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

ಅಪರಾಧ ಕೃತ್ಯ ಎಸೆಗಿದವರ ಮೂಲ ಪತ್ತೆ ಹಚ್ಚಲು ಈ ನಿಯಮ ಸಹಕಾರಿಯಾಗಿದೆ. ಇದರಿಂದ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನೆರವಾಗಲಿದೆ. ಸಾಮಾಜಿಕ ಮಾಧ್ಯಮದಿಂದ ದೌರ್ಜನ್ಯ ಒಳಗಾಗುವುದನ್ನು ತಪ್ಪಿಸಲು ನೆರವಾಗಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

click me!