e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

By Suvarna NewsFirst Published Aug 2, 2021, 7:18 PM IST
Highlights
  • ಡಿಜಿಟಲ್ ಪಾವತಿಗೆ ಪರಿಣಾಮಕಾರಿ ವ್ಯವಸ್ಥೆ ಜಾರಿ
  • e-RUPIಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
  • ವೋಚರ್ ಆಧಾರಿತ ಡಿಜಿಟಲ್ ಪಾವತಿ ಆರಂಭ
  • ಡಿಜಿಟಲ್ ಇಂಡಿಯಾ ಕ್ರಾಂತಿಗೆ ಬೆರಗಾದ ವಿಶ್ವ

ನವದೆಹಲಿ(ಆ.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದೆ. ಭೀಮ್ ಆ್ಯಪ್, ಡಿಜಿ ಲಾಕರ್, ಕೋವಿನ್, NDHM, ಫಾಸ್ಟಾಗ್ ಸೇರಿ ಹಲವು ಡಿಜಿಟಲ್ ಪ್ಲಾಟ್‌ಫಾರ್ಮ್ ಅತ್ಯಂತ ಯಶಸ್ವಿಯಾಗಿದೆ. ಇದರ ಜೊತೆಗೆ ಇದೀಗ ಪ್ರಧಾನಿ ಮೋದಿ ಡಿಜಿಟಲ್ ಪಾವತಿ ಹಾಗೂ ಪಾವತಿಯಲ್ಲಿನ ಸೋರಿಕೆ ತಡೆಯಲು ಸುಲಭ ಹಾಗೂ ಸುರಕ್ಷಿತ e-RUPI(ಇ ರುಪಿ) ಪೇಮೆಂಟ್‌ಗೆ ಚಾಲನೆ ನೀಡಿದ್ದಾರೆ.

 

Launching e-RUPI. Watch. https://t.co/JeQo93yZXM

— Narendra Modi (@narendramodi)

ಆರ್‌ಬಿಐನ ಡಿಜಿಟಲ್‌ ಕರೆನ್ಸಿ ಶೀಘ್ರ ಬಿಡುಗಡೆ

ಡಿಜಿಟಲ್ ಕ್ರಾಂತಿಯಲ್ಲಿ ಅಮೆರಿ, ಚೀನಾಗಿಂತ ಭಾರತ ಮುಂಚೂಣಿಯತ್ತ ದಾಪುಗಾಲಿಟ್ಟಿದೆ. ಇದೀಗ ಮೋದಿ ಚಾಲನೆ ನೀಡಿರುವ e-RUPI ದೇಶದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಮಹತ್ತರ ಬದಲಾವಣೆ ತರಲಿದೆ. ನೂತನ e-RUPI ವೋಚರ್ ಆಧಾರಿತ ಪಾವತಿಯಾಗಿದೆ. ಹೀಗಾಗಿ ಅತ್ಯಂತ ಸುರಕ್ಷತವಾಗಿದೆ.

ಮತ್ತೊಂದು ವಿಶೇಷ ಅಂದರೆ e-RUPI ಪಾವತಿಗೆ ಸ್ಮಾರ್ಟ್‌ಫೋನ್, ಇಂಟರ್ನೆಟ್ ಅವಶ್ಯಕತೆ ಇಲ್ಲ. ಬೇಸಿಕ್ ಮೊಬೈಲ್ ಸೆಟ್ ಬಳಕೆ ಮಾಡುವವರು e-RUPI ಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಕಾರಣ e-RUPI ಪಾವತಿ ವ್ಯವಸ್ಥೆ QR code ಆಧಾರಿತ ಅಥವಾ ವೋಚರ್ ಆಧಾರಿತ ಪಾವತಿಯಾಗಿದೆ.

 

Thanks to technology, things which were earlier deemed impossible have become a reality.

Through eRUPI, numerous tech solutions, particularly in healthcare will be available. pic.twitter.com/szScb1gn5Y

— Narendra Modi (@narendramodi)

e-RUPIಯಿಂದ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪಲಿದೆ. ಇಷ್ಟೇ ಅಲ್ಲ ಯಾವ ಕಾರಣಕ್ಕಾಗಿ ಈ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆಯೋ ಅದೇ ಕಾರಣಕ್ಕೆ ಬಳಸಲು ಮಾತ್ರ ಸಾಧ್ಯವಾಗಲಿದೆ. ಪಾವತಿ ವ್ಯವಸ್ಥೆಯಲ್ಲಿನ ಸೋರಿಕೆ, ದುರ್ಬಳಕೆ ತಪ್ಪಿಸಲು  e-RUPI ಅತ್ಯಂತ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ದೇಶದ ಆಡಳಿತ ವ್ಯವಸ್ಥೆಯಲ್ಲೂ  e-RUPI ಮಹತ್ತರ ಬದಲಾವಣೆ ತರಲಿದೆ.

ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ 6 ವರ್ಷ, ಇನ್ನು ರೂರಲ್ ಇಂಡಿಯಾ ಕಡೆ ಹೆಜ್ಜೆ!

ಆರಂಭಿಕ ಹಂತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅದರಲ್ಲೂ ಲಸಿಕೆಗೆ  e-RUPI ಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಕ್ಕೂ ಮೊದಲು ಲಸಿಕೆಗಾಗಿ  e-RUPI ಪಾವತಿ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಇದೀಗ  e-RUPI ಪಾವತಿ ಜಾರಿಯಾಗಿದೆ.

 

The launch of e-RUPI is in line with our efforts to make India a leader in Fintech and leverage technology to boost 'Ease of Living.' pic.twitter.com/NGsWfJepZX

— Narendra Modi (@narendramodi)

ಲಸಿಕೆ ಇ ವೋಚರ್ ಖರೀದಿಸಿ ಇತರರಿಗೆ ಗಿಫ್ಟ್ ನೀಡಬಹುದು. ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ವೋಚರ್ ಮೂಲಕ ಇತರರಿಗೆ ಲಸಿಕೆ ವೋಚರ್ ಕಳುಹಿಸಬಹುದು. ಈ ವೋಚರ್ ಪಡೆದ ವ್ಯಕ್ತಿ ಲಸಿಕೆಗಾಗಿ ಮಾತ್ರ e-RUPI ವೋಚರ್ ಬಳಕೆ ಮಾಡಬಹುದು. 

ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI)ಕೇಂದ್ರದ ಹಲವು ಇಲಾಖೆಗಳ ಸಹಕಾರದೊಂದಿಗೆ  e-RUPI ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಹಣಕಾಸು ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನೂತನ  e-RUPI ಪೇಮೆಂಟ್ ಜಾರಿಗೆ ನೆರವಾಗಿದೆ.

 

People don’t realize how massive this is.

Outstanding work by the Govt and . India is at the forefront of digital payments globally - showing there is a third way eschewing both the US and China approaches to digitalization https://t.co/taaWRJiQaB https://t.co/6MMQ1FeqnI

— Rajeev Mantri (@RMantri)

ಕೇಂದ್ರ ಸರ್ಕಾರ ಭಾರತದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದ ಮೂಲಕ ದೇಶದ ಹಲವು ಸಂಪ್ರದಾಯಕ್ಕೆ ಗುಡ್‌ಬೈ ಹೇಳಿ ಹೊಸ ಕ್ರಾಂತಿ ಮಾಡಿದೆ. ಈ ಮೂಲಕ ಆಡಳಿತದಲ್ಲಿ ಪಾರದರ್ಶಕತೆ, ಗ್ರಾಹಕರಿಗೆ ಸುಲಭ ಹಾಗೂ ತ್ವರಿತ ಆನ್‌ಲೈನ್ ವ್ಯವಸ್ಥೆಗಳು ಜಾರಿಯಾಗಿದೆ. ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ ವಿಶ್ವವನ್ನೇ ಬೆರಗುಗೊಳಿಸಿದೆ. 130ಕೋಟಿಗೂ ಅಧಿಕ ಜನಸಂಖ್ಯೆ, ಸಂಪೂರ್ಣ ಸಾಕ್ಷರತೆ ಕೊರತೆ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ಭಾರತ ಅತ್ಯಂತ ಯಶಸ್ವಿಯಾಗಿ ಆಧುನೀಕರಣ ಹಾಗೂ ಡಿಜಿಟಲೀಕರಣಗೊಳ್ಳುತ್ತಿದೆ. 

click me!