ಸಿನಿಮಾ ಪೈರಸಿಗೆ ಬ್ರೇಕ್ ಹಾಕೋಕೆ ಬಂತು ಪೆಂಡಿ ಸಾಫ್ಟ್ ವೇರ್/ ಪೈರಸಿ ತಡಿಯೋಕೆ ಹುಡುಗರ ಹೊಸ ಆಲೋಚನೆ / ಪೆಂಡಿ ಸಾಫ್ಟ್‌ವೇರ್ ನಿಂದ ಇನ್ಮುಂದೆ ಸಿನಿಮಾ ಪೈರಸಿಗೆ ಬೀಳಲಿದೆ ಕಡಿವಾಣ/ ಮೊಬೈಲ್ ನಲ್ಲಿ ಕ್ಯಾಪ್ಚರ್ ಮಾಡುದ್ರೆ ಸೀಟ್ ನಂಬರ್ ಡಿಟೆಕ್ಟ್ ಮಾಡಲಿದೆ ಈ ಹೊಸ ಸಾಫ್ಟ್‌ವೇರ್
ಬೆಂಗಳೂರು(ನ. 26) ಸಿನಿಮಾ ಪೈರಸಿಗೆ ಬ್ರೇಕ್ ಹಾಕೋಕೆ ಪೆಂಡಿ ಸಾಫ್ಟ್ ವೇರ್ ಬಂದಿದೆ. ಪೈರಸಿ ತಡಿಯೋಕೆ ಹುಡುಗರ ತಂಡ ಹೊಸ ಆಲೋಚನೆ ಮಾಡಿದ್ದು ಲೋಕಾರ್ಪಣೆಯಾಗಿದೆ.
ಪೆಂಡಿ ಸಾಫ್ಟ್‌ವೇರ್ ನಿಂದ ಇನ್ಮುಂದೆ ಸಿನಿಮಾ ಪೈರಸಿಗೆ ಕಡಿವಾಣ ಬೀಳಲಿದೆ. ಮೊಬೈಲ್ ನಲ್ಲಿ ಕ್ಯಾಪ್ಚರ್ ಮಾಡಿದ್ರೆ ಸೀಟ್ ನಂಬರ್ ಡಿಟೆಕ್ಟ್ ಮಾಡಲಿದೆ ಈ ಹೊಸ ಸಾಫ್ಟ್‌ವೇರ್ ಪೈರಸಿಗೆ ತಡೆಯೊದಕ್ಕೆ ಕಾಂಟ್ರೋಪೈನ್ ಸಂಸ್ಥೆ ಇದನ್ನು ಸಿದ್ಧಮಾಡಿದೆ.
ಸಾಫ್ಟ್ ವೇರ್ ಲಾಂಚ್ ವೇಳೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕೊರೊನಾ ಸಂಕಷ್ಟ ಕಾಲದಲ್ಲಿ ನಿರ್ಮಾಪಕರ ಪಾಲಿಗೆ ಇದು ಸಂಜೀವಿನಿ ಆಗಲಿದೆ. ಕಾಂಟ್ರೋಪೈನ್ ಮಾಡ್ತಿರೋರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಫ್ರೆಂಚ್ ಬಿರಿಯಾನಿ, ಕನ್ನಡಕ್ಕೆ ತಪ್ಪದ ಪೈರಸಿ ಕಾಟ!
ನಲ್ವತ್ತು ನಲ್ವತೈದು ವರ್ಷದಿಂದ ಪೈರಸಿಯಿಂದ ಸಾಕಷ್ಟು ತೊಂದರೆ ಆಗ್ತಿತ್ತು ಈಗ ಒಂದು ಟೆಕ್ನಾಲಜಿಯಿಂದ ಎಲ್ಲರಿಗೂ ಉಪಯೋಗ ಆಗಲಿ,.ಮತ್ತೆ ನಾವೆಲ್ಲಾ ಉಸಿರಾಡೋಕೆ ಶುರು ಮಾಡಿದ್ದೀವಿ ಎಂದರು.
ಈ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ?
- ಈ ಹೊಸ ಸಾಫ್ಟ್‌ವೇರ್ ಒಳಗೊಂಡ ಉಪಕರಣವನ್ನು ಚಿತ್ರಮಂದಿರದಲ್ಲಿರುವ ಸ್ಪೀಕರ್‌ಗಳ ಬಳಿ ಅಳವಡಿಸಲಾಗುತ್ತದೆ. ಚಿತ್ರಮಂದಿರದ ಸೀಟು, ಅದರ ವಿಸ್ತೀರ್ಣ, ಸೌಂಡ್ ವ್ಯಾಪ್ತಿಯನ್ನು ಆಧರಿಸಿ ಈ ಡಿವೈಸ್‌ಗಳನ್ನು ಅಳವಡಿಸಬೇಕು.
- ಈ ಡಿವೈಸ್‌ನಿಂದಾಗಿ ಯಾರಾದರೂ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದರೂ ಆಡಿಯೋ ಕೇಳಿಸುವುದಿಲ್ಲ. ಕೇವಲ ದೃಶ್ಯಗಳನ್ನು ಮಾತ್ರ ಸೆರೆ ಹಿಡಿಯಬಹುದು.
ಇವರ ಹೆಸರು ಕೇಳಿದ್ರೆ ಸೂಪರ್ ಸ್ಟಾರ್ ಗಳೇ ಹೆದರುತ್ತಾರೆ!
- ದೃಶ್ಯಗಳನ್ನು ಸೆರೆ ಹಿಡಿಯಲು ಮೊಬೈಲ್ ಕ್ಯಾಮೆರಾ ಆನ್ ಮಾಡಿದರೆ ಆ ಮಾಹಿತಿಯನ್ನು ತಕ್ಷಣ ತಲುಪಿಸುವಂತಹ ಕ್ಯಾಮೆರಾ ಕೂಡ ಈ ಹೊಸ ಸಾಫ್ಟ್‌ವೇರ್ ಜತೆ ಅಳವಡಿಸಲಾಗುತ್ತದೆ. ಹಾಗಾಗಿ ಯಾರಾದರೂ ಕದ್ದು ರೆಕಾರ್ಡ್ ಮಾಡಿದರೂ ತಕ್ಷಣ ತಿಳಿಯುತ್ತದೆ.
- ಸದ್ಯಕ್ಕೆ ಪ್ರಾಯೋಗಿಕವಾಗಿ ಬೆಂಗಳೂರಿನ ಚಿತ್ರಮಂದಿರಗಳಿಗೆ ಈ ಹೊಸ ಸಾಫ್ಟ್‌ವೇರ್ ಡಿವೈಸ್‌ಗಳನ್ನು ಅಳವಡಿಸಲಾಗುತ್ತದೆ.
-ಈ ಸಾಫ್ಟ್‌ವೇರ್ ಐಡಿಯಾ ಕೊಟ್ಟಿದ್ದು ರಾಹುಲ್ ರೆಡ್ಡಿ. ಇಂಜಿನಿಯರ್ ಅಶ್ವಿನ್ ಈ ಸಾಫ್ಟ್‌ವೇರ್ ಡೆವಲಪ್ ಮಾಡಿದ್ದಾರೆ. ಕಾಂಟ್ರಪೈನ್ ಸಂಸ್ಥೆ ಈ ಸಾಫ್ಟ್‌ವೇರ್ ಸಿದ್ಧಪಡಿಸಿದೆ.