ಫೋನ್ ಆಕ್ಸೆಸರಿಗಳು, ಆಡಿಯೋ ಸಲಕರಣೆಗಳು, ಪರ್ಸನಲ್ ಕೇರ್ ಸೇರಿದಂತೆ 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ಸುಲಭವಾಗಿ ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ರಿಲಯನ್ಸ್ ರೀಕನೆಕ್ಟ್ ಒದಗಿಸಿದೆ
ಮುಂಬೈ(ನ.26): ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆದ ರೀಕನೆಕ್ಟ್ (Reconnect) ನಿಂದ ಗುರುವಾರ "ಡಿಸ್ನಿ|ಮಾರ್ವೆಲ್- ಫ್ಯಾನ್ ಅಟ್ ಹಾರ್ಟ್" ("Disney|Marvel - Fan at Heart") ಲೈಫ್ ಸ್ಟೈಲ್ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹವನ್ನು ಭಾರತದಲ್ಲಿ ಘೋಷಣೆ ಮಾಡಲಾಗಿದೆ.
ರಿಲಾಯನ್ಸ್ ಡಿಜಿಟಲ್‌ನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಕೊಡುಗೆ!.
ದಂತಕಥೆಯಂಥ ಪಾತ್ರಗಳಾದ ಮಿಕ್ಕಿ ಮೌಸ್ ಮತ್ತು ಮಿನ್ನಿ ಮೌಸ್, ಡಿಸ್ನಿ ರಾಜಕುಮಾರಿ, ಮಾರ್ವೆಲ್ ಅವೆಂಜರ್ಸ್ ಮತ್ತು ಇತರ ಪಾತ್ರಗಳ ಸಂಗ್ರಹವನ್ನು ತರಲಿದ್ದು, ಡಿಸ್ನಿ- ಮಾರ್ವೆಲ್ ಪಾತ್ರಗಳನ್ನು ಪ್ರೀತಿಸುವವರಿಗೆ ಸಂತೋಷ ತರುತ್ತದೆ. ಈ ಸಂಗ್ರಹದೊಂದಿಗೆ ಗ್ರಾಹಕರು ರೀಕನೆಕ್ಟ್ ವಿಶ್ವಾಸಾರ್ಹತೆಯೊಂದಿಗೆ ಡಿಸ್ನಿಯ ಮ್ಯಾಜಿಕ್ ಹಾಗೂ ಮಾರ್ವೆಲ್ ಮಹಾಕಾವ್ಯದ ರೀತಿಯ ಕಥನ ಹೇಳುವ ರೀತಿಯು ಜತೆಯಾಗುತ್ತವೆ.
ಫೋನ್ ಆಕ್ಸೆಸರಿಗಳು, ಆಡಿಯೋ ಸಲಕರಣೆಗಳು, ಪರ್ಸನಲ್ ಕೇರ್ ಮತು ಅಡುಗೆಮನೆಯ ವಸ್ತುಗಳಲ್ಲಿ ಇವುಗಳನ್ನು ಕಾಣಬಹುದು. ರೀಕನೆಕ್ಟ್ ಡಿಸ್ನಿ ಮತ್ತು ಮಾರ್ವೆಲ್ ನ 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ಪವರ್ ಬ್ಯಾಂಕ್, ಚಾರ್ಜರ್, ಸ್ಪೀಕರ್, ಹೆಡ್ ಫೋನ್, ಹೇರ್ ಡ್ರೈಯರ್, ಟೋಸ್ಟರ್ಸ್, ಇತರ ಎಲೆಕ್ಟ್ರಾನಿಕ್ ವಸ್ತುಗಳು ಒಳಗೊಂಡಿವೆ.
AJIO ಆನ್‌ಲೈನ್ ಮೂಲಕ 40,000 ಕುಶಲಕರ್ಮಿಗಳ ಉತ್ಪನ್ನ ಮಾರಾಟಕ್ಕೆ ವೇದಿಕೆ!
ವಿದ್ಯಾರ್ಥಿಗಳು, ವೃತ್ತಿಪರರು, ಹವ್ಯಾಸಿಗಳು ಅಥವಾ ಗೃಹಿಣಿಯರು ಹೀಗೆ ಎಲ್ಲರಿಗೂ ತಮ್ಮ ನೆಚ್ಚಿನ ಆಯ್ಕೆಯನ್ನು ಮಾಡಿಕೊಳ್ಳಬಹುದು. "ಡಿಸ್ನಿ|ಮಾರ್ವೆಲ್- ಫ್ಯಾನ್ ಅಟ್ ಹಾರ್ಟ್" ಸಂಗ್ರಹವು ರೂ. 249ರಿಂದ ಆರಂಭವಾಗಲಿದೆ. ದೇಶಾದ್ಯಂತ ಎಲೆಕ್ಟ್ರಾನಿಕ್ ರೀಟೇಲರ್ ಔಟ್ ಲೆಟ್ ಗಳು, ಸೂಪರ್ ಮಾರ್ಕೆಟ್ ಗಳು ಮತ್ತು ಬೊಂಬೆ ಮಳಿಗೆಗಳಲ್ಲಿ ದೊರೆಯುತ್ತವೆ. ಈ ಸಂಗ್ರಹವು ವೆಬ್ ಸೈಟ್ www.reliancedigital.inನಲ್ಲೂ ದೊರೆಯುತ್ತದೆ.
ರೀಕನೆಕ್ಟ್ ಆರಂಭವಾದದ್ದು 2011ರಲ್ಲಿ. ಅತ್ಯುತ್ತಮ ಗುಣಮಟ್ಟದ, ಕೈಗೆಟುಕುವ ದರದ, ಸ್ಟೈಲಿಷ್ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಅದರಲ್ಲಿ ಎಲ್ ಇಡಿ ಟೀವಿಗಳು, ಏರ್ ಕಂಡೀಷನರ್ ಗಳು, ವಾಷಿಂಗ್ ಮಶೀನ್, ಅಡುಗೆ ಮನೆ ವಸ್ತುಗಳು, ಸ್ಪೀಕರ್ ಗಳು ಮತ್ತಿತರ ವಸ್ತುಗಳು ದೊರೆಯುತ್ತವೆ. ಭಾರತದ 800ಕ್ಕೂ ಹೆಚ್ಚು ನಗರಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ರೀಕನೆಕ್ಟ್ ಸೇವೆ ಒದಗಿಸುತ್ತಿದೆ.