30 ಕೋಟಿಗೂ ಹೆಚ್ಚು ಭಾರತೀಯರ ಡಿಜಿಟಲ್ ವಹಿವಾಟು ಬೆಳಕಿಗೆ ತರಲು PhonePe ಪಲ್ಸ್ ಬಿಡುಗಡೆ!

Published : Sep 04, 2021, 07:55 PM IST
30 ಕೋಟಿಗೂ ಹೆಚ್ಚು ಭಾರತೀಯರ ಡಿಜಿಟಲ್ ವಹಿವಾಟು ಬೆಳಕಿಗೆ ತರಲು PhonePe ಪಲ್ಸ್ ಬಿಡುಗಡೆ!

ಸಾರಾಂಶ

ಭಾರತದ ಮೊದಲ ಸಂವಾದಾತ್ಮಕ ವೆಬ್ ಸೈಟ್ PhonePe ಪಲ್ಸ್ ಅನ್ನು ಬಿಡುಗಡೆ PhonePe Pulse ವರದಿ ಉಚಿತವಾಗಿ ಡೌನ್‌ಲೋಡ್ ಅವಕಾಶ ಡಿಜಿಟಲ್ ಪೇಮೆಂಟ್‌ ಟ್ರೆಂಡ್‌ಗಳ ನಿಖರ ಮತ್ತು ಸಮಗ್ರ ದತ್ತಾಂಶ

ನವದೆಹಲಿ(ಸೆ.04): ಭಾರತದ ಪ್ರಮುಖ ಫಿನ್ ಟೆಕ್ ವೇದಿಕೆಯಾದ PhonePe ಇಂದು ದೇಶದಲ್ಲಿ ಡಿಜಿಟಲ್ ಪಾವತಿಗಳ ದತ್ತಾಂಶ, ಒಳನೋಟಗಳು ಮತ್ತು ಪ್ರವೃತ್ತಿಗಳೊಂದಿಗೆ ಭಾರತದ ಮೊದಲ ಸಂವಾದಾತ್ಮಕ ವೆಬ್ ಸೈಟ್ PhonePe ಪಲ್ಸ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. PhonePe ವೆಬ್ ಸೈಟ್ ಭಾರತದ ಸಂವಾದಾತ್ಮಕ ನಕ್ಷೆಯಲ್ಲಿ ಗ್ರಾಹಕರ 2000+ ಕೋಟಿಗೂ ಹೆಚ್ಚು ವಹಿವಾಟುಗಳನ್ನು ಪ್ರದರ್ಶಿಸುತ್ತದೆ. 45% ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ PhonePe ಯ ದತ್ತಾಂಶವು ದೇಶದ ಡಿಜಿಟಲ್ ಪಾವತಿಯ ಅಭ್ಯಾಸವನ್ನು ಪ್ರತಿಬಿಂಬಿಸುತ್ತದೆ.

ಮ್ಯೂಚುವಲ್ ಫಂಡ್ ಹೂಡಿಕೆಗೆ UPI ಆಟೋಪೇ ಸೌಲಭ್ಯ ಘೋಷಿಸಿದ PhonePe

ಕಳೆದ 5 ವರ್ಷಗಳಲ್ಲಿ ನಡೆದ ಡಿಜಿಟಲ್‌ ಪೇಮೆಂಟ್ಸ್‌ ವಿಕಾಸದ ಕುರಿತು ನಡೆದ ಆಳವಾದ ಅಧ್ಯಯನದ ಪಲ್ಸ್‌ ವರದಿಯನ್ನು PhonePe  ಬಿಡುಗಡೆ ಮಾಡಿದೆ. ಈ ವರದಿಯು 2016 ರಿಂದ ಭಾರತದಾದ್ಯಂತ ಡಿಜಿಟಲ್ ಪೇಮೆಂಟ್‌ ಅಳವಡಿಕೆ ಹೇಗೆ ವಿಕಸನಗೊಂಡಿದೆ ಎಂಬುದರ ಬಗ್ಗೆ ಒಳನೋಟಗಳನ್ನು ಹೊಂದಿದೆ, ಮತ್ತು ವಿವರವಾದ ಭೌಗೋಳಿಕ ಮತ್ತು ಕ್ಯಾಟಗರಿ ನಿರ್ದಿಷ್ಟ ಟ್ರೆಂಡ್ಸ್‌ ಗಳನ್ನು ಒಳಗೊಂಡಿದೆ.

ವೆಬ್‌ಸೈಟ್ ಮತ್ತು ವರದಿಯಲ್ಲಿನ ಒಳನೋಟಗಳನ್ನು ಎರಡು ಪ್ರಮುಖ ಮೂಲಗಳಿಂದ ಪಡೆಯಲಾಗಿದೆ - PhonePe ನ ಸಂಪೂರ್ಣ ವಹಿವಾಟು ಡೇಟಾವನ್ನು ವ್ಯಾಪಾರಿ ಮತ್ತು ಗ್ರಾಹಕರ ಸಂದರ್ಶನಗಳೊಂದಿಗೆ ಸಂಯೋಜಿಸಲಾಗಿದೆ. ಅಲ್ಲದೇ PhonePe Pulse ವೆಬ್‌ಸೈಟ್‌ನಲ್ಲಿ ವರದಿಯನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ; ಫೋನ್‌ಪೇಯಿಂದ QR Code ಸ್ಕ್ಯಾನ್!

ಈ ನವೀನ ಹೊಸ ಉತ್ಪನ್ನವು ಸರ್ಕಾರ, ಪಾಲಿಸಿ ನಿರೂಪಕರು, ನಿಯಂತ್ರಣ ಸಂಸ್ಥೆಗಳು, ಮಾಧ್ಯಮ, ಉದ್ಯಮ ವಿಶ್ಲೇಷಕರು, ವ್ಯಾಪಾರಿ ಪಾಲುದಾರರು, ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪರಿಸರ ವ್ಯವಸ್ಥೆ ಮಧ್ಯಸ್ಥಗಾರರಿಗೆ ಪ್ರಸ್ತುತವಾಗಿದೆ. ಗ್ರಾಹಕರು ಮತ್ತು ವ್ಯಾಪಾರಿ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಬೆಳವಣಿಗೆಗೆ ಹೊಸ ಅವಕಾಶಗಳನ್ನು ಗುರುತಿಸಲು ಈ ಪಾಲುದಾರರು ಟ್ರೆಂಡ್ಸ್‌ ಮತ್ತು ಕಥೆಗಳೊಂದಿಗೆ ಡೇಟಾ ಸೆಟ್ ಅನ್ನು ಬಳಸಬಹುದು.

PhonePe ಪಲ್ಸ್ ಭಾರತದಲ್ಲಿ ಪ್ರಾರಂಭವಾದ ಮೊದಲ ಹೊಸ ರೀತಿಯ ಉತ್ಪನ್ನವಾಗಿದೆ ಮತ್ತು ಕಾರ್ಪೊರೇಟ್ ಸಂವಹನ ವೃತ್ತಿಪರರು, ವ್ಯವಹಾರ ವಿಶ್ಲೇಷಕರು, ಮಾರುಕಟ್ಟೆದಾರರು, ವಿನ್ಯಾಸಕರು, ಬರಹಗಾರರು, ಎಂಜಿನಿಯರಿಂಗ್ ಮತ್ತು ವ್ಯವಹಾರ ತಂಡಗಳನ್ನು ಒಳಗೊಂಡ ಕ್ರಾಸ್-ಫಂಕ್ಷನಲ್ ತಂಡದ ಅನೇಕ ತಿಂಗಳುಗಳ ಸಂಶೋಧನೆ ಮತ್ತು ಸಹಯೋಗದಿಂದ ರಚಿಸಲಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್