ಒಂದು ಶತಕೋಟಿ ಡೌನ್‌ಲೋಡ್ ಕಂಡ ಟೆಲಿಗ್ರಾಮ್

Suvarna News   | Asianet News
Published : Sep 02, 2021, 12:18 PM IST
ಒಂದು ಶತಕೋಟಿ ಡೌನ್‌ಲೋಡ್ ಕಂಡ ಟೆಲಿಗ್ರಾಮ್

ಸಾರಾಂಶ

ತ್ವರಿತ ಸಂದೇಶ ಸಂವಹನ ವಾಟ್ಸಾಪ್‌ಗೆ ಪರ್ಯಾಯ ಎನಿಸಿಕೊಂಡಿರುವ ಟೆಲಿಗ್ರಾಮ್ ಆಪ್ ಮತ್ತೊಂದು ವಿಕ್ರಮವನ್ನು ಸಾಧಿಸಿದೆ. ಜಗತ್ತಿನಾದ್ಯಂತ ಟೆಲಿಗ್ರಾಮ್ ಆಪ್ 1 ಶತಕೋಟಿ ಡೌನ್‌ಲೋಡ್‌ಗಳನ್ನು ಕಂಡಿದೆ. ಆಪ್ ಆರಂಭವಾದ 8 ವರ್ಷದಲ್ಲಿ ಈ ಮೈಲುಗಲ್ಲನ್ನು ಸ್ಥಾಪಿಸಲು ಸಾಧ್ಯವಾಗಿದೆ.

ವಾಟ್ಸಾಪ್‌ ಭಾರಿ ಸ್ಪರ್ಧೆಯೊಡ್ಡುತ್ತಿರುವ ತ್ವರಿತ ಸಂದೇಶ ಸಾಫ್ಟ್‌ವೇರ್ ಟೆಲಿಗ್ರಾಮ್ ವಿಶ್ವಾದ್ಯಂತ ಒಂದು ಶತಕೋಟಿ ಡೌನ್‌ಲೋಡ್‌ಗಳನ್ನು ಮೀರಿದೆ. ಈ ಮೂಲಕ ಟೆಲಿಗ್ರಾಮ್ ಜಗತ್ತಾದ್ಯಂತ ಜನಪ್ರಿಯ ಆಪ್ ಆಗಿ ಹೊರ ಹೊಮ್ಮಿದೆ. ಭಾರತದಲ್ಲೂ ಈ ಟೆಲಿಗ್ರಾಂ ಬಹುದೊಡ್ಡ ಬಳಕೆದಾರರ ವರ್ಗವಿದೆ.

2013ರಲ್ಲಿ ಈ ಟೆಲಿಗ್ರಾಮ್ ಆಪ್ ಆರಂಭವಾಯಿತು. 2021ರ ಆಗಸ್ಟ್ 27ರ ಹೊತ್ತಿಗೆ ಒಂದು ಶತಕೋಟಿ ಡೌನ್‌ಲೋಡನ್‌ಗಳನ್ನು ಕಾಣುವ ಮೂಲಕ ಟೆಲಿಗ್ರಾಮ್ ಹೊಸ ವಿಕ್ರಮವನ್ನು ಸಾಧಿಸಿದೆ. ಅಂದರೆ, ಈ ಮೈಲಿಗಲ್ಲು ಸ್ಥಾಪಿಸಲು ಟೆಲಿಗ್ರಾಮ್ ಆಪ್‌ಗೆ  ಬರೋಬ್ಬರಿ 8 ವರ್ಷಗಳು ಬೇಕಾದವು.

ಸೆನ್ಸರ್ ಟವರ್ ಅಧ್ಯಯನದ ಪ್ರಕಾರ, ಟೆಲಿಗ್ರಾಂಗೆ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಒಟ್ಟು ಡೌನ್‌ಲೋಡ್‌ಗಳಲ್ಲಿ ಭಾರತದಲ್ಲಿ ಶೇಕಡಾ 22 ರಷ್ಟಿದೆ. ಇದನ್ನು ಟೆಲಿಗ್ರಾಮ್‌ನ ಮುಖ್ಯ ಪ್ರತಿಸ್ಪರ್ಧಿ ವಾಟ್ಸಾಪ್‌ಗೆ ಹೋಲಿಸಬಹುದು, ಇದು ಕೂಡ ಭಾರತವನ್ನು ತನ್ನ ಅತಿದೊಡ್ಡ ಮಾರುಕಟ್ಟೆಯಾಗಿ ಹೊಂದಿದೆ. 

ಪ್ರಾದೇಶಿಕ ಭಾಷೆಗಳಿಗೆ ಜಿಯೋಮೀಟ್ ಸಪೋರ್ಟ್, ಶೀಘ್ರವೇ ಕನ್ನಡದಲ್ಲೂ ಲಭ್ಯ

ವರದಿಗಳ ಪ್ರಕಾರ, 2021ರಲ್ಲಿ ಹೆಚ್ಚು ಡೌನ್‌ಲೋಡ್‌ಗಳನ್ನು ಟೆಲಿಗ್ರಾಮ್ ಕಂಡಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಮತ್ತು ಕಂಪನಿಯು ಅದನ್ನು ನಿರ್ವಹಿಸುವ ಬಗೆಗಿನ ಕೋಲಾಹಲ ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ವಾಟ್ಸಾಪ್ ಜಾರಿಗೆ ತಂದಿರುವ ಗೌಪ್ಯತಾ ನೀತಿಗೆ ಭಾರತವು ಸೇರಿದಂತೆ ವಿಶ್ವಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಿದ್ದೂ ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ನೀತಿಯನ್ನ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ಬಳಕೆದಾರರು ವಾಟ್ಸಾಪ್ ಬದಲಿಗೆ ಪರ್ಯಾಯ ಆಪ್‌ಗಳ ಹುಡುಕಾಟದಲ್ಲಿದ್ದರು. ಆಗ ಟೆಲಿಗ್ರಾಮ್ ಅವರಿಗೆ ಪರ್ಯಾಯ ಆಪ್ ಆಗಿ ಕಂಡಿರುವ ಸಾಧ್ಯತೆಗಳಿವೆ. 
 

ಟೆಲಿಗ್ರಾಂ ಡೌನ್‌ಲೋಡ್‌ಗಳಲ್ಲಿ ಭಾರತವು ಶೇಕಡಾ 22 ರಷ್ಟಿದೆ ಎಂದು ವರದಿಗಳು ಸೂಚಿಸುತ್ತವೆ. ಭಾರತದ ನಂತರದ ಸ್ಥಾನದಲ್ಲಿ ರಷ್ಯಾ ಇದ್ದು, ಶೇ.10 ಇನ್ಸ್‌ಟಾಲ್ ಕಂಡಿದ್ದರೆ, ಇಂಡೋನೇಷ್ಯಾ ಮೂರನೇ ಸ್ಥಾನದಲ್ಲಿದೆ. ಶೇ.8ರಷ್ಟು ಡೌನ್‌ಲೋಡ್‌ಗಳನ್ನು ಟೆಲಿಗ್ರಾಮ್ ಕಂಡಿದೆ.

ಕೋರೊನಾ ತಪ್ಪು ಮಾಹಿತಿ: ಲಕ್ಷಾಂತರ ವಿಡಿಯೋ ಡಿಲಿಟ್ ಮಾಡಿದ ಯುಟ್ಯೂಬ್

ಅಧ್ಯಯನದ ಪ್ರಕಾರ, ಟೆಲಿಗ್ರಾಮ್ 2021 ರ ಮೊದಲಾರ್ಧದಲ್ಲಿ 214.7 ಮಿಲಿಯನ್ ಇನ್‌ಸ್ಟಾಲ್‌ಗಳನ್ನು ಹೊಂದಿದೆ, ಇದು ಮೊದಲರ್ಧ ವರ್ಷದಲ್ಲಿ 133 ಮಿಲಿಯನ್‌ನಿಂದ ವರ್ಷಕ್ಕೆ 61 ಶೇಕಡಾ ಹೆಚ್ಚಳವಾಗಿದೆ. ಒಟ್ಟು ಇನ್‌ಸ್ಟಾಲ್‌ಗಳ ಸಂಖ್ಯೆಯು ಪ್ರೋಗ್ರಾಂನ ಸಕ್ರಿಯ ಬಳಕೆದಾರರ ನೆಲೆಯನ್ನು ಸಮನಾಗಿರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. 2021 ರ ಆರಂಭದ ವೇಳೆಗೆ, ಟೆಲಿಗ್ರಾಮ್ ಸುಮಾರು 500 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿತ್ತು.

ಟೆಲಿಗ್ರಾಮ್ ಒಂದು ಶತಕೋಟಿ ಬಾರಿ ಅಥವಾ ಅದಕ್ಕಿಂತ ಹೆಚ್ಚು ಡೌನ್‌ಲೋಡ್ ಮಾಡಿದ ವಿಶ್ವದ ಹದಿನೈದನೇ ಅಪ್ಲಿಕೇಶನ್ ಆಗಿದೆ. ವಾಟ್ಸಾಪ್, ಮೆಸ್ಸೆಂಜರ್, ಫೇಸ್‌ಬುಕ್, ಇನ್ಸಟಾಗ್ರಾಂ, ಸ್ನ್ಯಾಪ್‌ಚಾಟ್ ಮತ್ತು ನೆಟ್‌ಫ್ಲಿಕ್ಸ್  ಇತರ ಅಪ್ಲಿಕೇಶನ್‌ಗಳಲ್ಲಿ ಒಂದು ಶತ ಕೋಟಿ ಡೌನ್‌ಲೋಡ್‌ಗಳನ್ನು ಹೊಂದಿವೆ. ಟೆಲಿಗ್ರಾಮ್ ಈ ವರ್ಷದ ಆರಂಭದಲ್ಲಿ ತನ್ನ ಇತ್ತೀಚಿನ ಹೂಡಿಕೆಯ ಸುತ್ತಿನಲ್ಲಿ ಒಂದು ಶತ ಕೋಟಿ ಡಾಲರ್ (ಅಂದಾಜು ರೂ. 7,326 ಕೋಟಿ) ಗಳಷ್ಟು ಸಂಗ್ರಹಿಸಿದೆ.

ಟೆಲಿಗ್ರಾಮ್ ನಿಧಾನವಾಗಿ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಏಕಸ್ವಾಮ್ಯದ ರೀತಿಯಲ್ಲಿ ವರ್ತಿಸುತ್ತಿದ್ದ ವಾಟ್ಸಾಪ್‌ ಈಗ ಸರಿಯಾದ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ. ಬಳಕೆದಾರರಿಗೆ ಟೆಲಿಗ್ರಾಮ್ ಪರ್ಯಾಯ ತ್ವರಿತ ಸಂದೇಶ ರವಾನೆ ಆಪ್ ಕಂಡಿದೆ. ಇದೇ ಸಾಲಿನಲ್ಲಿ ಸಿಗ್ನಲ್ ಆಪ್ ಕೂಡ ನೀವು ಇಲ್ಲಿ ಹೆಸರಿಸಬಹುದು. 

ಐಫೋನ್ ನ್ಯಾನೋ ಸ್ಮಾರ್ಟ್‌ಫೋನ್‌ಗೆ ಮುಂದಾಗಿದ್ಯಾ ಆ್ಯಪಲ್?

ಭಾರತದಂತ ದೊಡ್ಡ ಮಾರುಕಟ್ಟೆಯಲ್ಲಿ ಟೆಲಿಗ್ರಾಂ ಕೂಡ ಒಳ್ಳೆಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ವಾಟ್ಸಾಪ್‌ಗೆ ಹೋಲಿಸಿದರೆ, ಟೆಲಿಗ್ರಾಮ್ ಸುರಕ್ಷತೆಯ ದೃಷ್ಟಿಯಿಂದಲೂ ಹೆಚ್ಚು ಉತ್ತಮವಾಗಿದೆ ಎಂಬ ಮಾತುಗಳಿವೆ. ಹಾಗಾಗಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನರು ಟೆಲಿಗ್ರಾಮ್ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?