ಈ ಶೌಚಾಲಯದಲ್ಲಿ ನೀರೇ ಇರಲ್ಲ... 'ಮಲ' ಮಾಡಿದ್ರೆ ಕ್ಷಣದಲ್ಲಿ ಬೂದಿಯಾಗುತ್ತೆ..!

Published : Mar 27, 2023, 05:29 PM ISTUpdated : Mar 27, 2023, 05:32 PM IST
ಈ ಶೌಚಾಲಯದಲ್ಲಿ ನೀರೇ ಇರಲ್ಲ... 'ಮಲ' ಮಾಡಿದ್ರೆ  ಕ್ಷಣದಲ್ಲಿ ಬೂದಿಯಾಗುತ್ತೆ..!

ಸಾರಾಂಶ

ಟಾಯ್ಲೆಟ್‌ನಲ್ಲಿ ನೀರಿನ ಬದಲು ಪೇಪರ್‌ ಬಳಕೆ ಮಾಡುತ್ತಾರೆ ಎಂಬುದು ಅನೇಕರಿಗೆ ಗೊತ್ತು.  ಆದರೆ ಕೆಳಗಿರುವ ಕಾಮೋಡ್‌ನಲ್ಲಿಯೂ ನೀರಿರಲ್ಲ, ಅಷ್ಟೇ ಅಲ್ಲದೇ ಅಲ್ಲಿ ನೀವು ಮಾಡಿದ ಮಲ ಕ್ಷಣದಲ್ಲಿ ಬುದ್ಧಿಯಾಗುತ್ತದೆ ಎಂದರೆ ನಿಮಗೆ ಅಚ್ಚರಿ ಆಗದೇ ಇರದು

ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರೆದಿದೆ.  ಎಷ್ಟು ಮುಂದುವರೆದಿದೆ ಎಂದು ನಾವು ಅದನ್ನು ಊಹಿಸಲು ಕೂಡ ಸಾಧ್ಯವಿಲ್ಲ.  ಈಗ ನಾವು ನಿಮಗೆ ತಿಳಿಸಲು ಹೊರಟಿರುವ ತಂತ್ರಜ್ಞಾನದ ಬಗ್ಗೆ ಕೇಳಿದರೆ ನೀವು ಅಚ್ಚರಿಯಾಗುವುದಂತೂ ಪಕ್ಕಾ. ಅಲ್ಲದೇ ಈ ವಿಚಾರ ತಿಳಿದರೆ ನಿಮಗೆ ನಗು ಬಾರದೇ ಇರದು.  ಟಾಯ್ಲೆಟ್‌ನಲ್ಲಿ ನೀರಿನ ಬದಲು ಪೇಪರ್‌ ಬಳಕೆ ಮಾಡುತ್ತಾರೆ ಎಂಬುದು ಅನೇಕರಿಗೆ ಗೊತ್ತು.  ಆದರೆ ಕೆಳಗಿರುವ ಕಾಮೋಡ್‌ನಲ್ಲಿಯೂ ನೀರಿರಲ್ಲ, ಅಷ್ಟೇ ಅಲ್ಲದೇ ಅಲ್ಲಿ ನೀವು ಮಾಡಿದ ಮಲ ಕ್ಷಣದಲ್ಲಿ ಬುದ್ಧಿಯಾಗುತ್ತದೆ ಎಂದರೆ ನಿಮಗೆ ಅಚ್ಚರಿ ಆಗದೇ ಇರದು. ಹೌದು ಇದು ಈಗ ಬಂದಿರುವ ಹೊಸ ತಂತ್ರಜ್ಞಾನವಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

vanwives ಎಂಬ ಇನ್ಸ್ಟಾ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ.  ಈ ವಿನೂತನವಾದ ನೀರಿಲ್ಲದ್ದ ಟಾಯ್ಲೆಟ್‌ನ ವೀಡಿಯೋವನ್ನು ನೀವು ನೋಡಬಹುದಾಗಿದೆ. 
ಇದರಲ್ಲಿ ನೀವು ಮಾಡಿದ ತ್ಯಾಜ್ಯ ಕ್ಷಣದಲ್ಲಿ ಬೂದಿಯಾಗುತ್ತದೆ.  ಟಾಯ್ಲೆಟ್‌ನಲ್ಲಿ ಮಲವಿಸರ್ಜನೆಗೆ ಹೋದ ನಂತರ ಪ್ಲಶ್ ಮಾಡೋದು ಗೊತ್ತು. ಇದೇಂಗೆ ಬೂದಿಯಾಗೋದು ಏನ್‌ ಬೆಂಕಿ ಹಾಕ್ಬೇಕಾಗುತ್ತ ಅಂತ ಅಚ್ಚರಿ ಆಗ್ಬೇಡಿ.  ಇದೊಂದು ಪರಿಸರ ಸ್ನೇಹಿ ತಂತ್ರಜ್ಞಾನವಿರುವ ಕಾಮೋಡ್ ಆಗಿದ್ದು, ಅದರೊಳಗೆ ಕರೆಂಟ್ ಇದ್ದು, ಇದು ಮಲವನ್ನು ಕ್ಷಣದಲ್ಲಿ ಬೂದಿ ಮಾಡಬಲ್ಲದು.  ಮಲ ವಾಸನೆ ಇರುತ್ತೆ. ಹಾಗಿದ್ರೆ ಈ ಇದರ ಬೂದಿ ಹೇಗಿರುತ್ತೆ ಎಂಬ ಕುತೂಹಲ ನಿಮಗೂ ಇದೆ ಅಲ್ಲವೇ. ಮಲದಂತೆ ವಾಸನೆ ಬಂದರೆ ಮನೆಯೆಲ್ಲಾ ಕೆಟ್ಟ ವಾಸನೆ ಬರುವುದಲ್ಲ ಎಂದು ಯಾರು ಹೆದರಬೇಕಿಲ್ಲ.ಈ ಮಲದಿಂದಾದ ಬೂದಿಗೆ ಯಾವುದೇ ವಾಸನೆ ಇರುವುದಿಲ್ಲ.  

ಮಹೀಂದ್ರ ಎಲೆಕ್ಟ್ರಿಕ್ ರಿಕ್ಷಾ ರೈಡ್ ಮಾಡಿದ ಬಿಲ್ ಗೇಟ್ಸ್, ಆಟೋ ಶ್ರೀಮಂತನ ಜಾಲಿ ಸವಾರಿ!

ಈ ವಿಡಿಯೋದ ಆರಂಭದಲ್ಲಿ ಮಹಿಳೆಯೊಬ್ಬಳು ತನ್ನ ಸಿಂಡರೆಲ್ಲಾ ಇನ್ಸಿನರೇಶನ್ ಟಾಯ್ಲೆಟ್ ಮಲವನ್ನು ಹೇಗೆ ಬೂದಿಯಾಗಿ ಪರಿವರ್ತಿಸುತ್ತದೆ ಎಂದು ವಿವರಿಸುತ್ತಾಳೆ. ಈ ವಿಶೇಷ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂದು ಮಹಿಳೆ ವಿವರಿಸುತ್ತಾಳೆ. ಅದರಲ್ಲಿರುವಂತೆ ಮೊದಲಿಗೆ ಟಾಯ್ಲೆಟ್‌ನ್ನು ತೆರೆದು ಅದರಲ್ಲಿ ಬಿಳಿ ಹಾಳೆಯಂತಹ ವಸ್ತುವನ್ನು ಹಾಕಬೇಕಾಗುತ್ತದೆ. ನಂತರ ಮಲ ವಿಸರ್ಜನೆ ಮಾಡಬೇಕು. ಬಳಿಕ  ಪ್ಲಶ್ ಮಾಡುವಂತೆ ಒಂದು ಸ್ವಿಚ್‌ ಅನ್ನು ಒತ್ತಿದರೆ ಮಲ ಬೂದಿಯಾಗುವುದು. 

ಇನ್ಸ್ಟಾಗ್ರಾಮ್‌ನಲ್ಲಿ (Instagram) ಕೆಲ ದಿನಗಳ ಹಿಂದಷ್ಟೇ ಹಂಚಿಕೊಂಡ ಈ ವಿಡಿಯೋಗೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಜನ ಮೆಚ್ಚಿದ್ದು, 9 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಅನೇಕರ ಕುತೂಹಲವನ್ನು ಹೆಚ್ಚಿಸಿದೆ. ಒಂದು ವೇಳೆ ಮಲ ವಿಸರ್ಜನೆಯ ವೇಳೆಯೇ ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತದೆ ಎಂದು ಜನ ಪ್ರಶ್ನಿಸಿದ್ದಾರೆ. 

ಬುಲೆಟ್ ಪ್ರೂಫ್‌ ಕಾರಿಗೆ ಹೀಗೂ ಪ್ರಮೋಷನ್ : ತನ್ನ ಉತ್ಪನ್ನದ ಬಗ್ಗೆ ಅದೆಂಥಾ ವಿಶ್ವಾಸ ನೋಡಿ

ನಿಮ್ಮ ಅತಿಥಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗಲೆಲ್ಲಾ ನಿಮ್ಮ ಮನೆಯಲ್ಲಿ ಕೆಟ್ಟ ವಾಸನೆ ಏಕೆ ಬರುತ್ತಿದೆ ಎಂಬುದನ್ನು ನಿಮಗೆ ವಿವರಿಸಲು ಸಾಧ್ಯವೇ ಎಂದು ಅನೇಕರು ತಮಾಷೆಯಾಗಿ ಪ್ರಶ್ನಿಸಿದ್ದಾರೆ. ಆದರೆ ಮಲವನ್ನು ಸುಡಲು ನೈಸರ್ಗಿಕ ಪ್ರಕ್ರಿಯೆಗಿಂತ ಹೆಚ್ಚಿನ ಶಕ್ತಿ ಬೇಕಾಗುವುದು ಹಾಗೂ ಈ ವಿಧಾನ ಹೆಚ್ಚು ಕಲುಷಿತಕಾರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾಗಿಯೂ ಉತ್ತಮವಾಗಿದೆ. ಭವಿಷ್ಯದಲ್ಲಿ ಎಲ್ಲಾ ಶೌಚಾಲಯಗಳು ಹೀಗಿರುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ವೆಬ್‌ಸೈಟ್ ಪ್ರಕಾರ, ಈ ಸಿಂಡರೆಲ್ಲಾ ಇನ್ಸಿನರೇಶನ್ ಟಾಯ್ಲೆಟ್  (toilets) ಶಾಖದೊಂದಿಗೆ ಕೆಳಗಿನಿಂದ ಒತ್ತಡವನ್ನು ಸಂಯೋಜಿಸುವ ಮೂಲಕ ತ್ಯಾಜ್ಯವನ್ನು ಸುಡುತ್ತದೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?