ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ವಾರ್ನಿಂಗ್ ನೀಡಿದ ನೂತನ ಸಚಿವ ಅಶ್ವಿನಿ ವೈಷ್ಣವ್!

By Suvarna News  |  First Published Jul 8, 2021, 3:35 PM IST
  • ನೂತನ ಐಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶ್ವಿನಿ ವೈಷ್ಣವ್
  • ಸಂಪುಟ ಪುನಾರಚನೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರವಿ ಶಂಕರ್ ಪ್ರಸಾದ್ 
  • ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ಖಡಕ್ ವಾರ್ನಿಂಗ್

ನವದೆಹಲಿ(ಜು.07): ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಜಟಾಪಟಿ ಕೋರ್ಟ್‌ನಲ್ಲಿದೆ. ಭಾರತದ ಕಾನೂನು ಗೌರವಿಸಲು ಕೋರ್ಟ್ ಕೂಡ ಟ್ವಿಟರ್‌ಗೆ ತಾಕೀತು ಮಾಡಿದೆ. ಈ ಜಗಳ ತಾರಕಕ್ಕೇರಿರುವ ನಡುವೆ ಕೇಂದ್ರ ಸಂಪುಟ ಪುನಾರಚನೆ ಕೆಲ ಬದಲಾವಣೆಗಳನ್ನು ಮಾಡಿದೆ. ಆದರೆ ಕೇಂದ್ರದ ಧೋರಣೆಗಳಲ್ಲಿ, ನೀತಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಅನ್ನೋದು ಸಾಬೀತಾಗಿದೆ.

ಕೇಂದ್ರದ ವಿರುದ್ಧ ಸಮರ ಸಾರಿದ್ದ ಟ್ವಿಟರ್‌ಗೆ ಹಿನ್ನಡೆ; ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಎಂದ ಕೋರ್ಟ್!.

Tap to resize

Latest Videos

undefined

ಟ್ವಿಟರ್‌ಗೆ ಒಂದರ ಮೇಲೊಂದರಂತೆ ವಾರ್ನಿಂಗ್ ನೀಡುತ್ತಿದ್ದ ಐಟಿ ಸಚಿವ ರವಿ ಶಂಕರ್ ಪ್ರಸಾದ್ ಸಂಪುಟ ಪುನಾರಚನೆಯಿಂದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ ಅಶ್ವಿನಿ ವೈಷ್ಣವ್ ಆಗಮಿಸಿದ್ದಾರೆ. ನಿನ್ನೆ(ಜು.07) ಪ್ರಮಾಣ ವಚನ ಸ್ವೀಕರಿಸಿದ ವೈಷ್ಣವ್, ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಐಟಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಶ್ವಿನಿ ವೈಷ್ಣವ್, ಭಾರತದ ಕಾನೂನು ಪರಮೋಚ್ಚ. ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ಅವಕಾಶವೂ ನೀಡುವುದಿಲ್ಲ ಎಂದು ಟ್ವಿಟರ್‌ಗೆ ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್ ಸ್ಥಳೀಯ ಕಾನೂನು ಪಾಲಿಸಲೇಬೇಕು: ಐಟಿ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ.

ಭಾರತದಲ್ಲಿ ಕಾರ್ಯಕ್ಷೇತ್ರ, ಭಾರತದಿಂದ ಹಣ ಗಳಿಕೆ, ಭಾರತದಿಂದ ಸವಲತ್ತು ಪಡೆದು ಇದೀಗ ಅಮೆರಿಕ ನಿಯಮ ಪಾಲಿಸುತ್ತೇವೆ ಅನ್ನೋದು ಸರಿಯಲ್ಲ. ಇಲ್ಲಿನ ನೆಲದ ಕಾನೂನು ಶ್ರೇಷ್ಠ. ಅದನ್ನು ಎಲ್ಲರೂ ಅನುಸರಿಸಬೇಕು. ಭಾರತದಲ್ಲಿ  ಟ್ವಿಟರ್‌ಗಾಗಿ ಬೇರೆ ಕಾನೂನಿನಲ್ಲ. ಎಲ್ಲರಿಗೂ ಒಂದೇ ಕಾನೂನು. ಅದನ್ನು ಪಾಲಿಸಲಬೇಕು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
 

click me!