ಫೇಸ್‌ಬುಕ್‌ನಲ್ಲಿ ಭಾರೀ ಬದಲಾವಣೆ: ಶೀಘ್ರದಲ್ಲೇ ಟಿಕ್‌ಟಾಕ್‌ನಂತಹ ವೈಶಿಷ್ಟ್ಯಗಳು ಬಿಡುಗಡೆ

By Suvarna News  |  First Published Jul 25, 2022, 3:46 PM IST

Facebook Update: ಮೆಟಾ ಒಡೆತನದ ಸೋಷಿಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್  ಇಂಟರ್‌ಫೇಸ್‌ನಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ವರದಿಗಳು ತಿಳಿಸಿವೆ.


ನವದೆಹಲಿ (ಜು. 25): ಮೆಟಾ ಒಡೆತನದ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ (Facebook) ತನ್ನ ಇಂಟರ್‌ಫೇಸ್‌ನಲ್ಲಿ ದೊಡ್ಡ ಬದಲಾವಣೆ ತರಲಿದೆ.  ನಿಮ್ಮ ಫೇಸ್‌ಬುಕ್ ಅನುಭವಕ್ಕೆ ಶೀಘ್ರದಲ್ಲೇ ದೊಡ್ಡ ಬದಲಾವಣೆಗಳು ಬರಲಿವೆ. ಅಪ್ಲಿಕೇಶನನ್ನು ತೆರೆದ ಕ್ಷಣದಿಂದ ಈ  ಬದಲಾವಣೆ ಗೋಚರಿಸಲಿವೆ.  ಫೇಸ್‌ಬುಕ್ ತನ್ನ ಮುಖಮುಟದಲ್ಲಿ ಟಿಕ್‌ಟಾಕ್‌ ನಂತಹ ಬದಲಾವಣೆಗಳನ್ನು ತರುತ್ತಿದ್ದು ಫೇಸ್‌ಬುಕ್‌ ತೆರೆದ ತಕ್ಷಣ ಹೋಮ್‌ ಟ್ಯಾಬ್‌ನಲ್ಲಿ ಕಿರು-ರೂಪದ ವೀಡಿಯೊ ವೈಶಿಷ್ಟ್ಯ ರೀಲ್ಸ್‌ (Reels) ಹಾಗೂ ಸ್ಟೋರಿಸ್‌ (Story) ವೈಶಿಷ್ಟ್ಯ ಕಾಣಬಹುದು. 

ಫೇಸ್‌ಬುಕ್ ಸ್ವಯಂಚಾಲಿತವಾಗಿ ಬಳಕೆದಾರರಿಗಾಗಿ ಫೋಟೋ- ವಿಡಿಯೋ ಕಂಟೆಂಟನ್ನು ತೋರಿಸಲಿದೆ. ಟಿಕ್‌ಟಾಕ್‌ನ “For You” ಪುಟದಂತೆಯೇ ಫೇಸ್‌ಬುಕ್‌ ಈ ವೈಶಿಷ್ಟ್ಯವನ್ನು ಹೊರತರುತ್ತಿದೆ.  ಸ್ನೇಹಿತರು (Friends), ಪುಟಗಳು (Pages) ಮತ್ತು ಗುಂಪುಗಳಿಂದ (Groups) ಇತ್ತೀಚಿನ ನವೀಕರಣಗಳನ್ನು ಫೀಡ್ (Feed) ವಿಭಾಗದಲ್ಲಿ ನೀವು ಕಾಣಬಹುದು ಎಂದು ಫೇಸ್‌ಬುಕ್ ಪೋಷಕ ಕಂಪನಿ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. 

Tap to resize

Latest Videos

undefined

ಫೇಸ್‌ಬುಕ್‌ನಲ್ಲಿ  ಫೀಡ್ಸ್ ಎಲ್ಲಿವೆ?:‌ ಫೀಡ್‌ಗಳು ಶಾರ್ಟ್‌ಕಟ್ ಬಾರ್‌ನಲ್ಲಿ ಟ್ಯಾಬ್‌ನಂತೆ ಕಾಣಲಿದೆ.  ಐಓಎಸ್‌ನಲ್ಲಿ(iOS) ಈ ಬಾರ್ ಅಪ್ಲಿಕೇಶನ್‌ನ ಕೆಳಭಾಗದಲ್ಲಿದೆ ಇರಲಿದೆ.  ಆಂಡ್ರಾಯ್ಡ್‌ನಲ್ಲಿ ಇದು ಮೇಲ್ಭಾಗದಲ್ಲಿರಲಿದೆ.

ನೀವು ಯಾವುದನ್ನು ಹೆಚ್ಚು ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಶಾರ್ಟ್‌ಕಟ್ ಬಾರ್‌ನಲ್ಲಿರುವ ಟ್ಯಾಬ್‌ಗಳು ಬದಲಾಗುತ್ತವೆ. ನಿಮ್ಮ ಶಾರ್ಟ್‌ಕಟ್ ಬಾರ್‌ಗೆ ನೀವು ಟ್ಯಾಬನ್ನು ಸಹ ಪಿನ್ ಮಾಡಬಹುದು.

ಫೇಸ್‌ಬುಕ್‌ನಿಂದ ಹಿಂದೆ ಸರಿಯುತ್ತಿರುವ ಮಹಿಳೆಯರು: ಕಾರಣ ಇಲ್ಲಿದೆ..

"Favorites" ಪಟ್ಟಿಯಲ್ಲಿ ನೀವು ಹೆಚ್ಚು ಕಾಳಜಿವಹಿಸುವ ಜನರು ಮತ್ತು ಸಮುದಾಯಗಳನ್ನು ಗೊತ್ತುಪಡಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಆ ಜನರಿಂದ ಮಾತ್ರ ಪೋಸ್ಟ್‌ ಅಥವಾ ವಿಡಿಯೋಗಳನ್ನು ನೋಡಬಹುದು. 

ಈ ಹೊಸ ನವೀಕರಣಗಳು ಕೆಲವು ಫೇಸ್‌ಬುಕ್ ಬಳಕೆದಾರರಿಗೆ ಈಗಾಗಲೇ ಲಭ್ಯವಾಗಿದ್ದು ಮತ್ತು ಮುಂದಿನ ವಾರದಲ್ಲಿ ಎಲ್ಲಾ ಫೇಸ್‌ಬುಕ್ ಬಳಕೆದಾರರಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. 

ಫೇಸ್‌ಬುಕ್ ಬದಲಾವಣೆಯ ಉದ್ದೇಶವೇನು?: 2018 ರಲ್ಲಿ ಫೇಸ್‌ಬುಕ್ ಕೊನೆಯ ಬಾರಿಗೆ ಫೀಡ್ ನವೀಕರಿಸಿದಾಗ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಾಮಾಜಿಕ ಮಾಧ್ಯಮ ವೇದಿಕೆಯು "ಅರ್ಥಪೂರ್ಣ ಸಾಮಾಜಿಕ ಸಂವಹನಗಳಿಗೆ" ಆದ್ಯತೆ ನೀಡುತ್ತದೆ ಎಂದು ಹೇಳಿದ್ದರು. 

ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್‌, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್‌!

ಟಿಕ್‌ಟಾಕ್‌ನ ಹೆಚ್ಚುತ್ತಿರುವ ಖ್ಯಾತಿಯನ್ನು ಎದುರಿಸಲು ಈಗ ಫೇಸ್‌ಬುಕ್ ಈ ನವೀಕರಣಗಳನ್ನು ಹೊರತರುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಇನ್‌ಸ್ಟಾಗ್ರಾಮನ್ನು ಟಿಕ್‌ಟಾಕ್‌ನಂತೆ ಮಾಡುವ ಪ್ರಯತ್ನಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈಗ ಫೇಸ್‌ಬುಕ್‌ನಲ್ಲಿ ಟಿಕ್‌ ಟಾಕ್‌ನಂತಹ ಬದಲಾವಣೆ ತರಲು ಮೆಟಾ ಮುಂದಾಗಿದೆ. 

click me!