ನಾಲ್ಕು ಕಾಲಿನ ರೋಬೋಟ್ ನಾಯಿಯ ಬೆನ್ನಿಗೆ ಸಬ್ ಮಷಿನ್ ಗನ್‌ಅನ್ನು ಜೋಡಿಸಲಾಗಿದೆ. ಇದು ಭವಿಷ್ಯದಲ್ಲಿ ಯುದ್ಧಭೂಮಿ ಯಾವ ರೀತಿ ಇರಲಿದೆ ಎನ್ನುವುದನ್ನು ಅಂದಾಜು ಮಾಡಬಹುದು. ಟ್ವಿಟರ್‌ನಲ್ಲಿ ರಷ್ಯಾದ ಸಂಶೋಧಕ ಪೋಸ್ಟ್ ಮಾಡಿರುವ ಈಗಾಗಲೇ ವೈರಲ್ ಆಗಿದ್ದು, 7.5 ಮಿಲಿಯನ್ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ.
ಮಾಸ್ಕೋ (ಜುಲೈ 23): ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಅಗ್ನಿಪಥ್ ಕುರಿತಾಗಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಒಂದು ಪ್ರಮುಖವಾದ ಮಾತನ್ನನು ಹೇಳಿದ್ದರು. ಭವಷ್ಯದಲ್ಲಿ ಯುದ್ಧಭೂಮಿ ಈಗಿರುವ ಹಾಗೆ ಮನುಷ್ಯರ ನಡುವಿನ ಕಲಹವಾಗಿರುವುದಿಲ್ಲ. ಭಿನ್ನ ಭಿನ್ನ ಮಾದರಿಯ ಯುದ್ಧಗಳನ್ನು ಎದುರಿಸಲು ನಾವು ಸಜ್ಜಾಗಿರಬೇಕು ಎನ್ನುವ ಅರ್ಥದ ಮಾತನ್ನಾಡಿದ್ದರು. ಅದರಂತೆ ರಷ್ಯಾದ ಸಂಶೋಧಕನೊಬ್ಬ ಇತ್ತೀಚೆಗೆ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಭವಿಷ್ಯದಲ್ಲಿ ಯುದ್ಧಭೂಮಿಯಲ್ಲಿ ಯಾವೆಲ್ಲಾ ಬದಲಾವಣೆಗಳು ಇರಲಿದೆ ಎನ್ನುವುದನ್ನು ಅಂದಾಜು ಮಾಡಬಹುದಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ಕು ಕಾಲಿನ ರೋಬೋಟ್ ನಾಯಿ ಇದ್ದು, ಸಬ್ ಮಷೀನ್ ಗನ್ ಅನ್ನು ಅದರ ಬೆನ್ನಿಗೆ ಫಿಕ್ಸ್ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ತನ್ನ ಮುಂದೆ ಕೆಲ ಮೀಟರ್‌ಗಳ ಅಂತರದಲ್ಲಿರುವ ಟಾರ್ಗೆಟ್‌ಗೆ ಇದು ನಿಖರವಾಗಿ ಗುರಿ ಇಡುತ್ತಿರುವುದನ್ನ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡುವ ವೇಳೆ "ತಮಾಷೆಯ ಡ್ಯಾನ್ಸಿಂಗ್ ರೋಬೋಟ್‌ಗಳ ಬಗ್ಗೆ ತಲೆಕೆಡಿಸಿಕೊಂಡು ವರ್ಷಗಳ ಹಿಂದೆ ಈ ಬಗ್ಗೆ ವ್ಯಂಗ್ಯವಾಡಿದ್ದ ಎಲ್ಲಾ ಜನರು, ವರ್ಷದ ಉಳಿದ ದಿನಗಳಲ್ಲಿ ಈ ವೀಡಿಯೊವನ್ನು ದಿನಕ್ಕೆ ಒಮ್ಮೆ ನೋಡುವಂತೆ ಒತ್ತಾಯಿಸುತ್ತೇವೆ' ಎಂದು ಬರೆದುಕೊಂಡಿದೆ.
ಬೋಸ್ಟನ್ ಡೈನಾನಿಕ್ಸ್ ಕೂಡ ಅಭಿವೃದ್ಧಿಪಡಿಸಿತ್ತು: ಮೇಲ್ನೋಟಕ್ಕೆ ಈ ನಾಲ್ಕು ಕಾಲಿನ ರೋಬೋಟ್ ನಾಯಿ, ಬೋಸ್ಟನ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದ ಇದೇ ಮಾದರಿಯ ನಾಯಿಯ ರೀತಿಯಲ್ಲೇ ಕಾಣುತ್ತದೆ. ಬೋಸ್ಟನ್ ಡೈನಾಮಿಕ್ಸ್ ವಿಶ್ವದಲ್ಲಿಯೇ ಅತ್ಯಂತ ಆಕರ್ಷಕ ರೋಬೋಟ್ ಮಷೀನ್‌ಗಳನ್ನು ತಯಾರಿಸುವ ಸಂಸ್ಥೆ. ಲವು ವರ್ಷಗಳ ಹಿಂದೆ, ಅವರ ರಚನೆಗಳಲ್ಲಿ ಒಂದಾದ ಸ್ಪಾಟ್, ಬ್ರೂನೋ ಮಾರ್ಸ್‌ನ ಅಪ್‌ಟೌನ್ ಫಂಕ್‌ನಲ್ಲಿ ರೋಬೋಟ್ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಆ ರೋಬೋಟ್‌ಗಿಂತ ಮೇಲ್ಜರ್ಜೆಯ ರೋಬೋಟ್ ಇದಾಗಿದೆ.
Oh that robot dog is so cute they said.
But deep inside you all knew where this was going....pic.twitter.com/aR9LXmZnb2
undefined
ಡೈನೋಸಾರ್ಸ್ ರೀತಿ ಮಾನವ ಕೂಡ ಭೂಮಿಯ ಮೇಲೆ ನಶಿಸಿ ಹೋಗ್ತಾನೆ: ಇಸ್ರೋ ಚೀಫ್ ಸೋಮನಾಥ್
3 ಸಾವಿರ ಡಾಲರ್‌ನ ನಾಯಿ: ರೋಬೋಟಿಕ್ ನಾಯಿಯೊಂದು ಸಬ್‌ಮಷಿನ್ ಗನ್ ಅನ್ನು (robot dog with submachine gun) ಬೆನ್ನಿಗೆ ಕಟ್ಟಿಕೊಂಡು ಹೊರಾಂಗಣದಲ್ಲಿ ಗುಂಡು ಹಾರಿಸುತ್ತಿರುವುದನ್ನು ಆಘಾತಕಾರಿ ವೀಡಿಯೊ ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ಇದನ್ನು ರಷ್ಯಾದ ಹೋವರ್‌ಬೈಕ್ ಕಂಪನಿಯ ಸಂಸ್ಥಾಪಕ ಅಲೆಕ್ಸಾಂಡರ್ ಅಟಮನೋವ್ (Alexander Atamanov) ಅಪ್‌ಲೋಡ್ ಮಾಡಿದ್ದಾರೆ. ರೋಬೋಟ್ ನಾಯಿಗೆ, ಡಾಗ್‌ಬಾಟ್ ಎಂದು ಹೆಸರನ್ನಿಟ್ಟಿದ್ದು. ಸಬ್ ಮಷೀನ್ ಗನ್ ಇಲ್ಲದೆ ಇದರ ಬೆಲೆ 3 ಸಾವಿರ ಡಾಲರ್ ಆಗಿದೆ. ಇದು ಭವಿಷ್ಯದ ಯುದ್ಧಭೂಮಿಯಲ್ಲಿ ಗಮನಾರ್ಹ ಬದಲಾವಣೆ ತರಬಲ್ಲ ಅನ್ವೇಷಣೆ ಎನಿಸಿದ್ದು, ಅಮೆರಿಕದ ಪೆಂಟಗನ್ ಕೂಡ ಈಗಾಗಲೇ ಸೇನಾ ಪ್ರದರ್ಶನದಲ್ಲಿ ಈ ರೋಬೋಟ್ ನಾಯಿಯನ್ನು ಪರಿಚಯಿಸಿದೆ.
ಜುಲೈ 20ಕ್ಕೆ ಭೂಮಿಗೆ ಅಪ್ಪಳಿಸಲಿದೆ ಸೌರ ಜ್ವಾಲೆ ಚಂಡಮಾರುತ, NOAA ಎಚ್ಚರಿಕೆ!
ವಿನಾಶದ ಸೂಚನೆ ಎಂದ ತಜ್ಞರು: ಭಯೋತ್ಪಾದಕರನ್ನು ಗುರಿಯಾಗಿಸಲು ಮಾನವರಹಿತ ಡ್ರೋನ್‌ಗಳನ್ನು ಬಳಸುತ್ತಿರುವ ಸಮಯದಲ್ಲಿ ಮತ್ತು ಯುಎಸ್ ಸೈನ್ಯವು (US Army) ತನ್ನದೇ ಆದ ಸ್ನೈಪರ್ ರೈಫಲ್-ಶಸ್ತ್ರಸಜ್ಜಿತ ರೋಬೋಟ್ ನಾಯಿಯನ್ನು ಹೊಂದಿರುವ ಸಮಯದಲ್ಲಿ, ಈ ರೀತಿಯ ಆಯುಧವು ಮಾರುಕಟ್ಟೆಗೆ ಬರುತ್ತಿರುವುದು ವಿನಾಶದ ಸೂಚನೆಯೂ ಆಗಿದೆ ಎಂದು ತಜ್ಷರು ಅಭಿಪ್ರಾಯಪಟ್ಟಿದ್ದಾರೆ. ತಯಾರಕರಿಂದ 'ಟೆಕ್ನಾಲಜಿ ಡಾಗ್' ಎಂದೂ ಕರೆಯಲ್ಪಡುವ ರೋಬೋಟ್ ನಾಯಿ, ವೈಸ್ ಪ್ರಕಾರ, AK-47 ವಿನ್ಯಾಸವನ್ನು ಆಧರಿಸಿದ ಸಬ್‌ಮಷಿನ್ ಗನ್‌ನ PP-19 ವಿತ್ಯಾಜ್ ಎಂದು ಕರೆಯಲ್ಪಡುವ ರಷ್ಯಾದ ಗನ್ ಅನ್ನು ಹೊತ್ತೊಯ್ಯುತ್ತಿರುವಂತೆ ಕಂಡಿದೆ. ಆಕರ್ಷಕ ರೋಬೋಟ್‌ಗಳನ್ನು ತಯಾರಿಸುವ ಬೋಸ್ಟನ್ ಡೈನಾಮಿಕ್ಸ್, ಯಾವುದೇ ಕಾರಣನ್ನು ರೋಬೋಟ್‌ಗಳನ್ನು ಶಸ್ತ್ರಸಜ್ಜಿತಗೊಳಿಸಲು ಹಾಗೂ ಅವುಗಳ ಉದ್ದೇಶಕ್ಕಾಗಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಿದ್ದರೂ. ನ್ಯೂಯಾರ್ಕ್ ಪೊಲೀಸ್ ಡಿಪಾರ್ಟ್‌ಮೆಂಟ್ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಗಸ್ತು ತಿರುಗಲು ಇಂಥ ರೋಬಾಟ್ ನಾಯಿಗಳನ್ನು ಬಳಸಿಕೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.