ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಬ್ಯಾಡ್ ನ್ಯೂಸ್, ಫೋಟೋ ಸುಂದರವಾಗಿಸುತ್ತಿದ್ದ ಬ್ಯೂಟಿ ಫಿಲ್ಟರ್‌ಗೆ ಕೊಕ್!

By Chethan KumarFirst Published Sep 19, 2024, 2:12 PM IST
Highlights

ಇನ್‌ಸ್ಟಾಗ್ರಾಂ ಬಳಕೆದಾರರು ಫೋಟೋ ಪೋಸ್ಟ್ ಮಾಡುವಾಗಿ ಮತ್ತಷ್ಟು ಸುಂದರವಾಗಿ ಕಾಣಲು ಬಳಸುತ್ತಿದ್ದ ಎಆರ್ ಬ್ಯೂಟಿ ಫಿಲ್ಲರ‌ಗೆ ಇದೀಗ ಕೊಕ್ ನೀಡಿದೆ. ಇದೀಗ ಮೆಟಾ ಈ ಕುರಿತು ಘೋಷಣೆ ಮಾಡಿದ್ದು, ಯಾವಾಗಿನಿಂದ ಜಾರಿ ಅನ್ನೋದು ಸೂಚಿಸಿದೆ.
 

ಇನ್‌ಸ್ಟಾಗ್ರಾಂ ಆ್ಯಪ್ ಬಹುತೇಕರು ಬಳಕೆ ಮಾಡುತ್ತಿದ್ದಾರೆ. ಫೋಟೋ, ವಿಡಿಯೋ, ರೀಲ್ಸ್ ಪೋಸ್ಟ್ ಮಾಡುತ್ತಾ ಇನ್‌ಸ್ಟಾಗ್ರಾಂ ಮೂಲಕವೇ ಜನಪ್ರಿರಾದವರೂ ಇದ್ದಾರೆ. ಇದೀಗ ಇನ್‌ಸ್ಟಾ ಮಾತೃಸಂಸ್ಥೆ ಮೆಟಾ ಮಹತ್ವದ ನಿರ್ಧಾರ ಪ್ರಕಟಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಯಾವುದೇ ಫೋಟೋಗಳನ್ನು ಪೋಸ್ಟ್ ಮಾಡುವಾಗ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬ್ಯೂಟಿ ಫಿಲ್ಲರ್‌ಗಳನ್ನು ಬಳಕೆ ಮಾಡಲು ಅವಕಾಶವಿತ್ತು. ಆದರೆ ಈ ಬ್ಯೂಟಿ ಫಿಲ್ಲರ್ಸ್‌ಗೆ ಮೆಟಾ ಕೊಕ್ ನೀಡಿದೆ. ಇನ್‌ಸ್ಟಾಗ್ರಾಂಲ್ಲಿ ಥರ್ಡ್ ಪಾರ್ಟಿ ಆಗ್ಯುಮೆಂಟ್ ರಿಯಾಲಿಟಿ ಬ್ಯೂಟಿ ಫಿಲ್ಲರ್ಸ್ ಇನ್ಮುಂದೆ ಇರಲ್ಲ.

ಫೋಟೋ ಪೋಸ್ಟ್ ಮಾಡುವಾಗ ಥರ್ಡ್ ಪಾರ್ಟಿ ಬ್ಯೂಟಿ ಫಿಲ್ಲರ್ಸ್ ಬಳಕೆ ಮಾಡಿ ಫೋಟೋವನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿತ್ತು. ಬಹುತೇಕ ಸಮಯದಲ್ಲಿ ಇದು ನೈಜತೆಗಿಂತೆ ದೂರವಾಗಿರುತ್ತಿತ್ತು ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಇಷ್ಟೇ ಅಲ್ಲ ಈ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಅತೀ ಹೆಚ್ಚಿನ ಬಳಕೆದಾರರು ಈ ಬ್ಯೂಟಿ ಫಿಲ್ಲರ್ ಬಳಸಿ ತಮ್ಮ ಫೋಟೋಗಳನ್ನು ಮತ್ತಷ್ಟು ಅಂದವಾಗಿಸಿ ಪೋಸ್ಟ್ ಮಾಡಲಾಗುತ್ತಿತ್ತು. ಈ ಫೀಚರ್ 2025ರ ಜನವರಿಯಿಂದ ಸಂಪೂರ್ಣ ಬಂದ್ ಆಗಲಿದೆ. 

Latest Videos

ರೀಲ್ಸ್ ಮಾಡುವವರಿಗೆ ಯೂಟ್ಯೂಬ್‌ನಿಂದ ಗುಡ್ ನ್ಯೂಸ್, ಶಾರ್ಟ್ ವಿಡಿಯೋ ಕ್ರಿಯೇಶನ್‌ಗೆ AI ಫೀಚರ್!

ಸೌಂದರ್ಯ ಮಾನದಂಡಗಳಿಗೆ ಹೋಲಿಸಿದರೆ ಬ್ಯೂಟಿ ಫಿಲ್ಲರ್ ಬಳಸಿದ ಫೋಟೋಗಳು ವಾಸ್ತವಿಕದಿಂದ ಸಾಕಷ್ಟು ದೂರ ಹಾೂ ವ್ಯತ್ಯಾಸವಾಗಿರುತ್ತದೆ. ಇದೇ ವೇಳೆ ಇನ್‌ಸ್ಟಾಗ್ರಾಂ ನಡೆಸಿದ ಅಧ್ಯಯನ ವರದಿಯಲ್ಲಿ ಈ ಕುರಿತು ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿತ್ತು. ಈ ಬ್ಯೂಟಿ ಫಿಲ್ಲರ್ಸ್ ಫೋಟೋಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಅನ್ನೋ ಅಂಶವೂ ಬಯಲಾಗಿತ್ತು. 

ಥರ್ಟ್ ಪಾರ್ಟಿ ಬ್ಯೂಟಿ ಫಿಲ್ಲರ್ಸ್ ಲಭ್ಯವಿರುವುದಿಲ್ಲ, ಆದರೆ ಮೆಟಾದ ಅಭಿವೃದ್ಧಿಪಡಿಸಿರುವ ಫಿಲ್ಲರ್ಸ್ ಲಭ್ಯವಿರಲಿದೆ. ಬಹುತೇಕರು ಥರ್ಡ್ ಪಾರ್ಟಿ ಬ್ಯೂಟಿ ಫಿಲ್ಲರ್ಸ್ ಬಳಕೆ ಮಾಡುತ್ತಿದ್ದರು. ಈ ರೀತಿಯ ಹಲವು ಬ್ಯೂಟಿ ಫಿಲ್ಲರ್ಸ್ ಲಭ್ಯವಿದೆ. ಈ ಫಿಲ್ಲರ್ಸ್ ಬಳಕೆ ಮಾಡಲು ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಅವಕಾಶವಿರುವುದಿಲ್ಲ. ಇದೇ ಆ್ಯಪ್ಲಿಕೇಶನ್ ಫೇಸ್‌ಬುಕ್‌ನಲ್ಲಿ ಲಭ್ಯವಿತ್ತು. ಆದರೆ 2019ರಲ್ಲೇ ಮೆಟಾ ಈ ಅವಕಾಶಕ್ಕೆ ಬ್ರೇಕ್ ಹಾಕಿದೆ. ಇದೀಗ ಇನ್‌ಸ್ಟಾಗ್ರಾಂನಲ್ಲೂ ಥರ್ಡ್ ಪಾರ್ಟಿ ಬ್ಯೂಟಿ ಫಿಲ್ಲರ್ಸ್ ಕಣ್ಮರೆಯಾಗುತ್ತಿದೆ.

ಮೆಟಾ ಅಧ್ಯಯನ ವರದಿ ಪ್ರಕಾರ ಈ ಥರ್ಡ್ ಪಾರ್ಟಿ ಬ್ಯೂಟಿ ಫಿಲ್ಲರ್ಸ್ ಶೇಕಡಾ 87ರಷ್ಟು ಬಳಕದಾರರ ಮೂಗನ್ನು ವಿರೂಪಗೊಳಿಸಿದೆ ಅಥವಾ ಕುಗ್ಗಿಸಿದೆ. ಇನ್ನು ಶೇಕಡಾ 90 ರಷ್ಟು ಬಳೆಕೆದಾರರ ತುಟಿಗಳು ದೊಡ್ಡದಾಗಿ ಚಿತ್ರಿಸಿದೆ ಎಂದಿದೆ. ಈ ರೀತಿಯ ಹಲವು ಸಮಸ್ಯೆಗಳನ್ನು ಬಳಕೆದಾರರು ವ್ಯಕ್ತಪಡಿಸಿದ್ದಾರೆ. ಮೂರನೆ ಪಾರ್ಟಿಯ ಕೆಲ ತಾಂತ್ರಿಕ ಸಮಸ್ಸೆಗಳು ಇನ್‌ಸ್ಟಾಗ್ರಾಂ ಬ್ರ್ಯಾಂಡ್‌ಗೆ ಧಕ್ಕೆ ತರುತ್ತಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು.ಫೇಸ್‌ಬುಕ್‌ನಲ್ಲಿ 2019ರಲ್ಲಿ ನಿಷೇಧ ಮಾಡಿದ್ದ ಬ್ಯೂಟಿ ಫಿಲ್ಲರ್ಸ್ ಇದೀಗ ಇನ್‌ಸ್ಟಾದಲ್ಲೂ ನಿಷೇಧವಾಗುತ್ತಿದೆ.

ಇನ್‌ಸ್ಟಾಗ್ರಾಂ ಅತ್ಯಂತ ಜನಪ್ರಿಯ ಆ್ಯಪ್ ಆಗಿ ಹೊರಹೊಮ್ಮಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳು, ರಾಜಕಾರಣಿಗಳು, ಉದ್ಯಮಿಗಳು ಇನ್‌ಸ್ಟಾಗ್ರಾಂ ಮೂಲಕ ಸಕ್ರಿಯರಾಗಿದ್ದಾರೆ. ತಮ್ಮ ಅಭಿಮಾನಿಗಳು, ಫಾಲೋವರ್ಸ್ ಜೊತೆ ನೇರ ಸಂಪರ್ಕದಲ್ಲಿರುತ್ತಾರೆ. ಹೆಚ್ಚಿನ ಫಾಲೋವರ್ಸ್, ಬ್ರ್ಯಾಂಡ್ ಎಂಡೋರ್ಸಮೆಂಟ್, ಲೈಕ್ಸ್, ಕ್ಲಿಕ್ಲ್ ಮೂಲಕ ಹಲವು ಆದಾಯದ ಮೂಲವಾಗಿ ಇನ್‌ಸ್ಟಾಗ್ರಾಂ ಬಳಸುತ್ತಿದ್ದಾರೆ. ಮೆಟಾ ಮಾಲೀಕತ್ವದ ಫೇಸ್‌ಬುಕ್, ವ್ಯಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಮೂರು ಪ್ಲಾಟ್‌ಫಾರ್ಮ್‌ಗಳು ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾಗಳಾಗಿದೆ. ಜೊತೆಗೆ ಮೂರು ಪ್ಲಾಟ್‌ಫಾರ್ಮ್ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಹೆಗ್ಗಳಿಕೆಗೂ ಪಾತ್ರವಾಗಿದೆ.ಮೂರು ಸೋಶಿಯಲ್ ಮೀಡಿಯಾಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ತಾಣವಾಗಿದೆ.  

ಒಂದೇ ವರ್ಷದಲ್ಲಿ ಇಷ್ಟೊಂದು ಸಂಪತ್ತಾ?..ಈ ವರ್ಷದಲ್ಲಿಯೇ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ ಮಾರ್ಕ್‌ ಜುಕರ್‌ಬರ್ಗ್!

click me!