ಇನ್ಮುಂದೆ ವ್ಯಾಟ್ಸ್ಆ್ಯಪ್ ಮೂಲಕ ಶಾಪಿಂಗ್ ಸಾಧ್ಯ, ಮೆಟಾ ಜೊತೆ ಜಿಯೋ ಒಪ್ಪಂದ!

By Suvarna News  |  First Published Aug 29, 2022, 5:26 PM IST

ವಾಟ್ಸಾಪ್ ಚಾಟ್‍ನಲ್ಲಿಯೇ ಜಿಯೋಮಾರ್ಟ್‍ನಿಂದ ಶಾಪಿಂಗ್ ಮಾಡಬಹುದು. ವಾಟ್ಸಾಪ್‍ನಲ್ಲಿನ ಜಿಯೋಮಾರ್ಟ್ ಸಂಖ್ಯೆಗೆ 'ಹಾಯ್' ಎಂದು ಕಳುಹಿಸುವ ಮೂಲಕ ಗ್ರಾಹಕರು ವಾಟ್ಸಾಪ್ ಮೂಲಕ ಜಿಯೋಮಾರ್ಟ್‍ನಲ್ಲಿ ಶಾಪಿಂಗ್ ಪ್ರಾರಂಭಿಸಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿವೆ.
 


ಮುಂಬೈ(ಆ.29): ಮೆಟಾ ಮತ್ತು ಜಿಯೋ ಪ್ಲಾಟ್‍ಫಾರ್ಮ್‍ಗಳು ಇಂದು ವಾಟ್ಸಾಪ್‍ನಲ್ಲಿ ಮೊಟ್ಟಮೊದಲ ಎಂಡ್-ಟು-ಎಂಡ್ ಶಾಪಿಂಗ್ ಅನುಭವವನ್ನು ಪ್ರಾರಂಭಿಸುವುದಾಗಿ ಘೋಷಿಸಿವೆ. ಇಲ್ಲಿ ಗ್ರಾಹಕರು ತಮ್ಮ ವಾಟ್ಸಾಪ್ ಚಾಟ್‍ನಲ್ಲಿಯೇ ಜಿಯೋಮಾರ್ಟ್‍ನಿಂದ ಶಾಪಿಂಗ್ ಮಾಡಬಹುದು. ಜಾಗತಿಕ-ಪ್ರಥಮ, ವಾಟ್ಸಾಪ್ ನಲ್ಲಿನ ಜಿಯೋಮಾರ್ಟ್ ಭಾರತದಲ್ಲಿನ ಬಳಕೆದಾರರನ್ನು, ಹಿಂದೆಂದೂ ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡದೇ ಇರುವವರು ಸೇರಿದಂತೆ, ಜಿಯೋಮಾರ್ಟ್ ನ ಸಂಪೂರ್ಣ ದಿನಸಿ ಕ್ಯಾಟಲಾಗ್ ಅನ್ನು ಮನಬಂದಂತೆ ಬ್ರೌಸ್ ಮಾಡಲು, ಕಾರ್ಟ್‍ಗೆ ಐಟಂಗಳನ್ನು ಸೇರಿಸಲು ಮತ್ತು ಖರೀದಿಯನ್ನು ಪೂರ್ಣಗೊಳಿಸಲು ಪಾವತಿಯನ್ನು ಮಾಡಲು - ಎಲ್ಲವನ್ನೂ ಸಕ್ರಿಯಗೊಳಿಸುತ್ತದೆ, ಅದೂ  ವಾಟ್ಸಾಪ್ ಚಾಟ್ ಅನ್ನು ಬಿಡದೆಯೇ.

ಭಾರತದಲ್ಲಿ ಜಿಯೋಮಾರ್ಟ್ ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಇದು ವಾಟ್ಸಾಪ್ ನಲ್ಲಿ ನಮ್ಮ ಮೊದಲ ಎಂಡ್-ಟು-ಎಂಡ್ ಶಾಪಿಂಗ್ ಅನುಭವವಾಗಿದೆ - ಜನರು ಈಗ ಕೇವಲ ಒಂದು ಚಾಟ್‍ನಲ್ಲಿಯೇ ಜಿಯೋಮಾರ್ಟ್ ನಿಂದ ದಿನಸಿಗಳನ್ನು ಖರೀದಿಸಬಹುದು. ವ್ಯಾಪಾರ ಸಂದೇಶ ಕಳುಹಿಸುವಿಕೆಯು ವಾಸ್ತವಿಕ ಆವೇಗವನ್ನು ಹೊಂದಿರುವ ಕ್ಷೇತ್ರವಾಗಿದೆ ಮತ್ತು ಈ ರೀತಿಯ ಚಾಟ್-ಆಧಾರಿತ ಅನುಭವಗಳು ಮುಂಬರುವ ವರ್ಷಗಳಲ್ಲಿ ಜನರು ಮತ್ತು ವ್ಯವಹಾರಗಳು ಸಂವಹನ ನಡೆಸಲು ಬಳಸುವ ಮಾರ್ಗವಾಗಿದೆ ಎಂದು ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ.

Tap to resize

Latest Videos

undefined

 

WhatsApp Communities: ಏಕಕಾಲದಲ್ಲಿ 512 ಜೊತೆ ಸಂಪರ್ಕ, ವಾಟ್ಸಾಪ್‌ ಹೊಸ ವೈಶಿಷ್ಟ್ಯ!

ಭಾರತವನ್ನು ವಿಶ್ವದ ಪ್ರಮುಖ ಡಿಜಿಟಲ್ ಸಮಾಜವಾಗಿ ಮುನ್ನಡೆಸುವುದು ನಮ್ಮ ಗುರಿಯಾಗಿದೆ. 2020 ರಲ್ಲಿ ಜಿಯೋ ಪ್ಲಾಟ್‍ಫಾರ್ಮ್ಸ್ ಮತ್ತು ಮೆಟಾ ನಮ್ಮ ಪಾಲುದಾರಿಕೆಯನ್ನು ಘೋಷಿಸಿದಾಗ, ಮಾರ್ಕ್ ಮತ್ತು ನಾನು ಹೆಚ್ಚು ಜನರು ಮತ್ತು ವ್ಯವಹಾರಗಳನ್ನು ಆನ್‍ಲೈನ್‍ಗೆ ತರುವ ಮತ್ತು ಪ್ರತಿಯೊಬ್ಬ ಭಾರತೀಯನ ದೈನಂದಿನ ಜೀವನಕ್ಕೆ ಅನುಕೂಲವಾಗುವಂತಹ ನಿಜವಾದ ನವೀನ ಪರಿಹಾರಗಳನ್ನು ರಚಿಸುವ ದೃಷ್ಟಿಯನ್ನು ಹಂಚಿಕೊಂಡಿದ್ದೇವೆ. ವಾಟ್ಸಾಪ್ ನಲ್ಲಿನ ಜಿಯೋಮಾರ್ಟ್ ನೊಂದಿಗಿನ ಪ್ರಪ್ರಥಮ ಎಂಡ್-ಟು-ಎಂಡ್ ಶಾಪಿಂಗ್ ಅನುಭವವು ನಾವು ಅಭಿವೃದ್ದಿಪಡಿಸಲು ಹೆಮ್ಮೆಪಡುವ ನವೀನ ಗ್ರಾಹಕ ಅನುಭವದ ಒಂದು ಉದಾಹರಣೆಯಾಗಿದೆ. ವಾಟ್ಸಾಪ್ ನಲ್ಲಿನ ಜಿಯೋಮಾರ್ಟ್ ನ ಅನುಭವದ ಲಕ್ಷಾಂತರ ಭಾರತೀಯರಿಗೆ ಆನ್‍ಲೈನ್ ಶಾಪಿಂಗ್‍ನ ಸರಳ ಮತ್ತು ಅನುಕೂಲಕರ ಮಾರ್ಗವನ್ನು ಸಕ್ರಿಯಗೊಳಿಸುವ ನಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಹೇಳಿದ್ದಾರೆ.

 

ಜಿಯೋ ಘೋಷಣೆಗೆ ಭಾರತದಲ್ಲಿ ಸಂಚಲನ, ದೀಪಾವಳಿ ಹಬ್ಬಕ್ಕೆ 5ಜಿ ಸೇವೆ ಆರಂಭ!

ಭಾರತದ ಡಿಜಿಟಲ್ ರೂಪಾಂತರವನ್ನು ಚುರುಕುಗೊಳಿಸಲು ಮತ್ತು ಜನರು ಮತ್ತು ಎಲ್ಲಾ ಪ್ರಮಾಣದ ವ್ಯವಹಾರಗಳಿಗೆ ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ಮತ್ತು ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮೆಟಾ ಮತ್ತು ಜಿಯೋ ಪ್ಲಾಟ್‍ಫಾರ್ಮ್‍ಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದೆ, ವಾಟ್ಸಾಪ್‍ನಲ್ಲಿನ ಜಿಯೋಮಾರ್ಟ್ ನಲ್ಲಿನ ಅನುಭವದಲ್ಲಿ ದೇಶದಾದ್ಯಂತ ಲಕ್ಷಾಂತರ ವ್ಯವಹಾರಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ರೀತಿಯಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ ಮತ್ತು ಜನರ ಶಾಪಿಂಗ್ ಅನುಭವಕ್ಕೆ ಸಾಟಿಯಿಲ್ಲದ ಸರಳತೆ ಮತ್ತು ಅನುಕೂಲತೆಯನ್ನು ತರುತ್ತದೆ.

ವಾಟ್ಸಾಪ್‍ನಲ್ಲಿನ ಜಿಯೋಮಾರ್ಟ್ ಸಂಖ್ಯೆಗೆ 'ಹಾಯ್' ಎಂದು ಕಳುಹಿಸುವ ಮೂಲಕ ಗ್ರಾಹಕರು ವಾಟ್ಸಾಪ್ ಮೂಲಕ ಜಿಯೋಮಾರ್ಟ್‍ನಲ್ಲಿ ಶಾಪಿಂಗ್ ಪ್ರಾರಂಭಿಸಬಹುದು.

click me!