AI ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಸ್ಕಾಮ್, ವ್ಯಾಟ್ಸ್ಆ್ಯಪ್ ಮೂಲಕ 40 ಸಾವಿರ ಕಳೆದುಕೊಂಡ ಯುವಕ!

By Suvarna News  |  First Published Jul 18, 2023, 4:11 PM IST

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇದೀಗ ಎಲ್ಲಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದರಿಂದ ಕೆಲಸ ಸುಲಭವಾಗಿದೆ. ಇದೀಗ ಎಐ ಟೆಕ್ನಾಲಜಿ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಆದರೆ ಇದೇ AI ತಂತ್ರಜ್ಞಾನ ಬಳಸಿ ಅತೀ ದೊಡ್ಡ ದಂಧೆಯೊಂದು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಡೀಪ್‌ಫೇಕ ಸ್ಕ್ಯಾಮ್ ಮೂಲಕ ಕೇರಳದ ಯುವಕ 40,000 ರೂಪಾಯಿ ಕಳೆದುಕೊಂಡಿದ್ದಾನೆ. ಏನಿದು ಡೀಪ್‌ಫೇಕ್ ಸ್ಕಾಮ್?AI ತಂತ್ರಜ್ಞಾನ ಬಳಸಿ ವ್ಯಾಟ್ಸ್ಆ್ಯಪ್ ಮೂಲಕ ವಂಚನೆ ಹೇಗೆ ಸಾಧ್ಯ? ಇಲ್ಲಿದೆ ವಿವರ
 


ಕೋಝಿಕೋಡ್(ಜು.18) ದೇಶ ವಿದೇಶಗಳಲ್ಲಿ ಇದೀಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಚರ್ಚೆ. ಇದೀಗ ಯಾವುದೇ ಕೆಲಸಕ್ಕೂ AI ತಂತ್ರಜ್ಞಾನ ಬಳಸಲಾಗುತ್ತಿದೆ. AI ತಂತ್ರಜ್ಞಾನ ಇದೀಗ ಮಾನವ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇದೀಗ ದಂಧೆಕೋರರು, ಸೈಬರ್ ಹ್ಯಾಕರ್ಸ್ ಇದೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಳ್ಳುತ್ತಿರುವುದು ಅಪಾಯ ಹೆಚ್ಚಿಸಿದೆ. AI ತಂತ್ರಜ್ಞಾನ ಬಳಸಿ ಕೇರಳದ ಯುವಕನಿಂದ 40 ಸಾವಿರ ರೂಪಾಯಿ ದೋಚಿದ ಘಟನೆ ನಡೆದಿದೆ. ವ್ಯಾಟ್ಸ್ಆ್ಯಪ್ ಮೂಲಕ ಯುುವಕ 40,000 ರೂಪಾಯಿ ಕಳೆದುಕೊಂಡಿದ್ದಾನೆ. ಡೀಪ್‌ಫೇಕ್ ಸ್ಕಾಮ್ ಮೂಲಕ ಈ ವಂಚನೆ ನಡೆದಿದೆ. ಇದರ ಹಿಂದೆ AI ತಂತ್ರಜ್ಞಾನ ಬಳಕೆ ಮಾಡಲಾಗಿದೆ.

ಕೋಝಿಕೋಡ್ ನಿವಾಸಿ ರಾಧಾಕೃಷ್ಣನ್ ವ್ಯಾಟ್ಸ್ಆ್ಯಪ್‌ಗೆ ವಿಡಿಯೋ ಕರೆಯೊಂದು ಬಂದಿದೆ. ಅಪರಿಚಿತ ನಂಬರ್‌ನಿಂದ ಬಂದ ವಿಡಿಯೋ ಕರೆಯನ್ನು ರಾಧಾಕೃಷ್ಣನ್ ಸ್ವೀಕರಿಸಿದ್ದಾನೆ. ಆಂಧ್ರ ಪ್ರದೇಶದಲ್ಲಿ ತಾನು ಕೆಲಸ ಮಾಡುತ್ತಿದ್ದ ವೇಳೆ ಜೊತೆಗಿದ್ದ ಸಹದ್ಯೋಗಿಯಂತೆ ಕಾಣುವ ವ್ಯಕ್ತಿ ಮಾತನಾಡಿದ್ದಾನೆ. ಮಾತು, ಹಾವಭಾವ, ಧ್ವನಿ, ಮುಖ ಎಲ್ಲವೂ ಅದೆ. ಹೀಗಾಗಿ ಈತ ತನ್ನ ಮಾಜಿ ಸಹದ್ಯೋಗಿ ಎಂದು ಮಾತನಾಡಿದ್ದಾನೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ರಾಧಾಕೃಷ್ಣನ್ ಕೆಲ ಸಹದ್ಯೋಗಿಗಳ ಹೆಸರನ್ನು ಹೇಳಿದ್ದಾನೆ. ಈ ಮೂಲಕ ರಾಧಾಕೃಷ್ಣನ್ ವಿಶ್ವಾಸ ಪಡೆದುಕೊಂಡಿದ್ದಾನೆ.

Tap to resize

Latest Videos

ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಗೂಗಲ್ ಬಾರ್ಡ್‌ನಿಂದ ಕನ್ನಡಿಗರಿಗೆ ಸಿಹಿ ಸುದ್ದಿ, 40 ಭಾಷೆಯಲ್ಲಿ AI ಸಂವಹನ!

ಮಾತಿನ ನಡುವೆ ತನ್ನ ಆಪ್ತರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೀಗಾಗಿ 40,000 ರೂಪಾಯಿ ಹಣ ಬೇಕೆಂದು ಮನವಿ ಮಾಡಿದ್ದಾನೆ.ಈ ನಂಬರ್‌ಗೆ ಹಣ ಕಳುಹಿಸುವಂತೆ ಹೇಳಿದ್ದಾನೆ. ವಿಡಿಯೋ ಕಾಲ್ ಬಳಿಕ ರಾಧಾಕೃಷ್ಣನ್ 40,000 ರೂಪಾಯಿ ಹಣವನ್ನು ಕಳುಹಿಸಿದ್ದಾನೆ. ಹಣ ಸ್ವೀಕರಿಸಿದ ವಂಚಕ, ಧನ್ಯವಾದಗಳು ಎಂದು ಸಂದೇಶ ಹಾಕಿದ್ದಾನೆ. 

ಕೆಲ ಹೊತ್ತಿನ ಬಳಿಕ ಮತ್ತೆ ವಿಡಿಯೋ ಕಾಲ್ ಬಂದಿದೆ. ಕರೆ ಸ್ವೀಕರಿಸಿದ ರಾಧಾಕೃಷ್ಣನ್‌ಗೆ ಅನುಮಾನ ಹೆಚ್ಚಾಗಿದೆ. ಕಾರಣ ಸಹದ್ಯೋಗಿ ಮಾತುಗಳು ಕೊಂಚ ಭಿನ್ನವಾಗುತ್ತಿದೆ. ಇಷ್ಟೇ ಅಲ್ಲ ಮುಖ ಚರ್ಯೆದಲ್ಲೂ ಕೆಲ ಅನುಮಾನ ಬಂದಿದೆ.  ಮಾತಿನ ನಡುವೆ 35,000 ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ವೇಳೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ತನ್ನ ಬಳಿ ಇದ್ದ ಮಾಜಿ ಸಹದ್ಯೋಗಿ ಹಳೆ ನಂಬರ್‌ಗೆ ಕರೆ ಮಾಡಿದ್ದಾನೆ. ಈ ವೇಳೆ ತಾನು ಮೋಸಹೋಗಿರುವುದು ರಾಧಾಕೃಷ್ಣನ್‌ಗೆ ಅರಿವಾಗಿದೆ. ಈ ಕುರಿತು ರಾಧಾಕೃಷ್ಣನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. 

Bengaluru: AI ಬಂತು.. ಈ ಸ್ಟಾರ್ಟಪ್‌ನ ಶೇ. 90 ಜನರ ಕೆಲಸ ಹೋಯ್ತು: ನಿಮ್ಮ ಉದ್ಯೋಗಕ್ಕೂ ಕುತ್ತು ಬರ್ಬೋದು ಹುಷಾರ್!

ಏನಿದು ಡೀಪ್‌ಫೇಕ್ ಸ್ಕಾಮ್?
AI ತಂತ್ರಜ್ಞಾನದ ಮೂಲಕ ಡೀಪ್‌ಫೇಕ್ ಯಾವ ರೂಪದಲ್ಲಿ ಮಾಡಲಾಗುತ್ತಿದೆ ಅನ್ನೋ ಸಣ್ಣ ಊಹೆಯನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಆಪ್ತರ ಧ್ವನಿಯಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಬಹುದು, ನಿಮ್ಮ ಆಪ್ತರ ಫೋಟೋ ಬಳಸಿ AI ತಂತ್ರಜ್ಞಾನದ ಮೂಲಕ ಡೀಪ್‌ಫೇಕ್ ವಿಡಿಯೋ ಕಾಲ್ ಮಾಡುತ್ತಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕೆಲ ಅನುಮಾನಗಳ ಮೂಡಲಿದೆ. ಮೊದಲ ನೋಟಕ್ಕೆ ಯಾವುದೇ ವ್ಯತ್ಯಾಸಗಳು ಬರುವುದಿಲ್ಲ. ಹೀಗಾಗಿ ಸೈಬರ್ ತಜ್ಞರು ಕೆಲ ಎಚ್ಚರಿಕೆಯನ್ನು ನೀಡಿದ್ದಾರೆ. ಡೀಪ್‌ಫೇಕ್ ಕಾಲ್ ಆಗಿದ್ದರೆ ವಿಡಿಯೋ ಕರೆಯ ಕ್ವಾಲಿಟಿ ಕಳಪೆಯಾಗಿರುತ್ತದೆ. ಕಳಪೆ ವಿಡಿಯೋ ಕ್ವಾಲಿಟಿಯ ಅಪರಿಚಿತ ಕರೆಯಾಗಿದ್ದರೆ ಎಚ್ಚರಿಕೆ ವಹಿಸುವುದು ಅಗತ್ಯ. ಇತ್ತ ಡಿಪ್‌ಫೇಕ್ ವಾಯ್ಸ್ ಕಾಲ್ ಆಗಿದ್ದರೂ ಈ ಧ್ವನಿಯ ಕ್ವಾಲಿಟಿ ಕಳಪೆಯಾಗಿರುತ್ತದೆ. ಇನ್ನು ಹಣ ವರ್ಗಾವಣೆ ಮಾಡುವ ಮೊದಲು ಅವರಿಗೆ ಕರೆ ಮಾಡಿ, ಅಥವಾ ಇನ್ಯಾವುದೇ ಮೂಲಗಳಿಂದ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.

click me!