ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಗೂಗಲ್ ಬಾರ್ಡ್‌ನಿಂದ ಕನ್ನಡಿಗರಿಗೆ ಸಿಹಿ ಸುದ್ದಿ, 40 ಭಾಷೆಯಲ್ಲಿ AI ಸಂವಹನ!

By Suvarna News  |  First Published Jul 13, 2023, 3:01 PM IST

ಚಾಟ್‌ಜಿಪಿಟಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಹಲವು ಕ್ಷೇತ್ರಗಳಿಗೆ ಕಾಲಿಟ್ಟು ಉದ್ಯೋಗವನ್ನು ಕಸಿದುಕೊಳ್ಳುತ್ತಿದೆ. ಈ ಚಾಟ್‌ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಗೂಗಲ್ ಬಾರ್ಡ್ ಇದೀಗ ಸಂಚಲನ ಸೃಷ್ಟಿಸಿದೆ. ಇದೀಗ ಗೂಗಲ್ ಬಾರ್ಡ್ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. ಕಾರಣ ಕನ್ನಡ ಸೇರಿದಂತೆ ಭಾರತದ 9 ಹಾಗೂ ಒಟ್ಟು 40 ಭಾಷೆಗಳಲ್ಲಿ ಸಂವಹನ ನಡೆಸಲು ಸಾಧ್ಯವಿದೆ.
 


ನವದೆಹಲಿ(ಜು.13) ಚಾಟ್‌ಜಿಪಿಟಿಗೆ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಬಾರ್ಡ್ ಸದ್ಯ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಗೂಗಲ್ ಬಾರ್ಡ್ ಮತ್ತಷ್ಟು ಸ್ಥಳೀಯ ಮಟ್ಟಕ್ಕೆ ತಲುಪಲು ಅತೀ ದೊಡ್ಡ ಅಪ್‌ಡೇಟ್ ಮಾಡಿದೆ. ಇದೀಗ ಗೂಗಲ್ ಬಾರ್ಡ್ ಕನ್ನಡ ಸೇರಿ ಭಾರತದ 9 ಭಾಷೆಗಳು ಹಾಗೂ ಒಟ್ಟು 40 ಭಾಷೆಗಳಲ್ಲಿ AI ಚಾಟ್‌ಬಾಟ್ ಸಂವಹನಕ್ಕೆ ಫೀಚರ್ ಅಪ್‌ಡೇಟ್ ಮಾಡಿದೆ. ಭಾರತದ ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಮಳೆಯಾಳಂ, ಬಂಗಾಳಿ, ಗುಜರಾತಿ ಹಾಗೂ ಉರ್ದು ಭಾಷೆಯಲ್ಲಿ AI ಸಂವಹನ ಲಭ್ಯವಿದೆ. ಇದೀಗ ಗೂಗಲ್ ಬಾರ್ಡ್ ಹೆಚ್ಚಿನ ವಲಯಗಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ. ಚಾಟ್‌ಜಿಪಿಟಿಯಲ್ಲಿರುವ ಇಮೇಜ್ ಪ್ರಾಂಪ್ಟ್ ಫೀಚರ್ಸ್ ಇದೀಗ ಗೂಗಲ್ ಬಾರ್ಡ್‌ನಲ್ಲೂ ಲಭ್ಯವಿದೆ. ಚಾಟ್‌ಜಿಪಿಟಿಯಲ್ಲಿ ಪಾವತಿ ಮಾಡಿದ ಸದಸ್ಯರಿಗೆ ಮಾತ್ರ ಈ ಫೀಚರ್ ಲಭ್ಯವಿದ್ದರೆ, ಗೂಗಲ್ ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಆದರೆ ಕೇವಲ ಇಂಗ್ಲೀಷ್ ಬಳಕೆದಾರರಿಗೆ ಮಾತ್ರ.

ಇಮೇಜ್ ಪ್ರಾಂಪ್ಟ್ ಅಪ್‌ಡೇಟ್‌ನಲ್ಲಿ ಗೂಗಲ್ ಹತ್ತು ಹಲವು ಫೀಚರ್ಸ್‌ ನೀಡಿದೆ. ಇಮೇಜ್ ಕುರಿತು ಹೆಚ್ಚುವರಿ ಮಾಹಿತಿ ಬೇಕಿದ್ದರೆ, ಈ ಇಮೇಜ್‌ನ್ನು ಬಾರ್ಡ್‌ನಲ್ಲಿ ಅಪ್ಲೋಡ್ ಮಾಡಿದರೆ ಸಾಕು. ಗೂಗಲ್ ಬಾರ್ಡ್ ವಿಶ್ಲೇಷಣೆ ನಡೆಸಿ ಎಲ್ಲಾ ಮಾಹಿತಿ ನೀಡಲಿದೆ. ಸದ್ಯ ಈ ಫೀಚರ್ ಇಂಗ್ಲೀಷ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಬಾರ್ಡ್‌ನ ಎಲ್ಲಾ ಭಾಷೆಗಳಲ್ಲಿ ಲಭ್ಯವಾಗಲಿದೆ. ಇನ್ನು ಯಾವುದೇ ಖಾದ್ಯದ ಫೋಟೋವನ್ನು ಗೂಗಲ್ ಬಾರ್ಡ್‌ಗೆ ಅಪ್ಲೋಡ್ ಮಾಡಿ, ಮಾಹಿತಿ ಕೇಳಿದರೆ, ಈ ಖಾದ್ಯಕ್ಕೆ ಬೇಕಾಗವು ಸಾಮಾಗ್ರಿ, ಇದರ ಇತಿಹಾಸ ಸೇರಿದಂತೆ ಎಲ್ಲಾ ಮಾಹಿತಿಯನ್ನು ಗೂಗಲ್ ಬಾರ್ಡ್ ನೀಡಲಿದೆ.

Latest Videos

undefined

 

ಪರಿಸ್ಥಿತಿ ಎಲ್ಲಿಗ್ ಬಂತು ನೋಡಿ! ಮಕ್ಕಳಿಗೆ ಹೆಸ್ರಿಡೋಕೂ ChatGPT ಬೇಕು

ಗೂಗಲ್ ಬಾರ್ಡ್‌ಗೆ ಬಳಕೆದಾರ ತನ್ನ ಅವಶ್ಯಕತೆಗೆ ತಕ್ಕಂತೆ ಮಾಹಿತಿ ಒದಗಿಸಲೂ ಸೂಚಿಸಬಹುದು. ಉದಾಹರಣೆಗೆ ಸುದೀರ್ಘ ಮಾಹಿತಿ, ಒಂದೇ ವಾಕ್ಯದ ಮಾಹಿತಿ ಬೇಕಿದ್ದರೂ ಇಲ್ಲಿ ಸಾಧ್ಯವಿದೆ. ಬಾರ್ಡ್ ರೆಸ್ಪಾನ್ಸ್ ಪೇಜ್‌ನಲ್ಲಿ ಬಾರ್ಡ್‌ನ ಬಲಭಾಗದ ಮೇಲಿರುವ ಮೂರು ಚುಕ್ಕೆ ಕ್ಲಿಕ್ ಮಾಡಿದರೆ,ಸಿಂಪಲ್ , ಶಾರ್ಟ್, ಲಾಂಗ್, ಪ್ರೊಫೆಶನ್ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಿದೆ.

ಪಿನ್ ಥ್ರೆಡ್ ಫೀಚರ್ ಮೂಲಕ ಬಳಕೆದಾರ ಇತ್ತೀಚೆಗೆ ಮಾಡಿದ ಸಂವಹನ, ಚಾಟ್‌ಗಳನ್ನು ಪಿನ್ ಮಾಡಿಕೊಳ್ಳಬಹುದು. ಈ ಮೂಲಕ ಮತ್ತೆ ಸುಲಭವಾಗಿ ಈ ಚಾಟ್ ಬಾಕ್ಸ್ ಮಾಹಿತಿಗಳು ಲಭ್ಯವಾಗಲಿದೆ. ಗೂಗಲ್ ಬಾರ್ಡ್ ಇದೀಗ ಹಲವು ಫೀಚರ್ ಸೇರಿಸುವ ಮೂಲಕ ಚಾಟ್‌ಜಿಪಿಟಿಗೆ ಭಾರಿ ಪ್ರತಿಸ್ಪರ್ಧೆ ಒಡ್ಡಿದೆ. ಇಷ್ಟೇ ಅಲ್ಲ ಬಳಕೆದಾರ ಸ್ನೇಹಿಯಾಗಿ ಮಾಡಿದೆ.

ಮಾನವನ ಮಿದುಳಿಗಿಂತ ಚಾಟ್‌ಜಿಪಿಟಿ ಪ್ರಭಾವಶಾಲಿಯಲ್ಲ; ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಹೀಗೆ ಹೇಳಿದ್ಯಾಕೆ ?

ಗೂಗಲ್ ಇತ್ತೀಚೆಗೆ  ತನ್ನ ಸರ್ಚ್ ಎಂಜಿನ್‌ನಲ್ಲಿ ‘ಕೃತಕ ಬುದ್ಧಿಮತ್ತೆ’ಯನ್ನು (AI) ಸೇರಿಸಲು ನಿರ್ಧರಿಸಿದೆ ಎಂದು ಗೂಗಲ್‌ನ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ. ಚಾಟ್‌ ಜಿಪಿಟಿಯಿಂದ ಗೂಗಲ್‌ಗೆ ಉಂಟಾಗಿರುವ ಸ್ಪರ್ಧೆಯನ್ನು ಎದುರಿಸಲು ಈ ನಿರ್ಧಾರ ಕೈಗೊಂಡಿದೆ. ಕೃತಕ ಬುದ್ಧಿಮತ್ತೆಯನ್ನು ಗೂಗಲ್‌ನಲ್ಲಿ ಅಳವಡಿಸುವುದರಿಂದ ವಿವಿಧ ವಿಷಯಗಳ ಬಗ್ಗೆ ಜನರು ಪ್ರಶ್ನೆ ಕೇಳಿದಾಗ ಗೂಗಲ್‌ಗೆ ಉತ್ತರಿಸುವುದು ಸುಲಭವಾಗಲಿದೆ ಎಂದು ಪಿಚೈ ಹೇಳಿದ್ದಾರೆ.

ಇದೇ ವೇಳೆ ಚಾಟ್‌ಬಾಟ್‌ನಿಂದ ಗೂಗಲ್‌ ತೊಂದರೆ ಉಂಟಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿರುವ ಪಿಚೈ, ಇದು ಅವಕಾಶಗಳನ್ನು ಸೃಷ್ಟಿಸುತ್ತದೆ. ಅದು ಹಿಂದೆ ಇದ್ದುದ್ದಕ್ಕಿಂತಲೂ ದೊಡ್ಡ ಅವಕಾಶವನ್ನು ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.  
 

click me!