Jio vs Airtel ಏರ್ ಫೈಬರ್; ಡೇಟಾ ಸ್ಪೀಡ್, ಬೆಲೆ, ಒಟಿಟಿ ಸೇರಿ ತಿಂಗಳ ಪ್ಲಾನ್ ಯಾವುದು ಉತ್ತಮ?

Published : Aug 31, 2023, 03:32 PM ISTUpdated : Aug 31, 2023, 03:36 PM IST
Jio vs Airtel ಏರ್ ಫೈಬರ್; ಡೇಟಾ ಸ್ಪೀಡ್, ಬೆಲೆ, ಒಟಿಟಿ ಸೇರಿ ತಿಂಗಳ ಪ್ಲಾನ್ ಯಾವುದು ಉತ್ತಮ?

ಸಾರಾಂಶ

ಜಿಯೋ ಇತ್ತೀಚೆಗೆ ಏರ್ ಫೈವರ್ ಸೇವೆ ಘೋಷಿಸಿದೆ. ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಲಭ್ಯವಾಗಲಿದೆ. ವೈಯರ್‌ಲೆಸ್ 5ಜಿಬಿ ಡೇಟಾ ಸೇವೆಯಲ್ಲಿ ಹತ್ತು ಹಲವು ಸೌಲಭ್ಯಗಳಿವೆ. ಇದೇ  ಸೇವೆಯನ್ನು ಏರ್‌ಟೆಲ್ ಈಗಾಗಲೇ ನೀಡುತ್ತಿದೆ.  ಹಾಗಾದರೆ ತಿಂಗಳ ಪ್ಲಾನ್, ಡೇಟಾಸ್ಪೀಡ್, ಬೆಲೆ, ಒಟಿಟಿ ಸೇರಿದಂತೆ ಯಾವುದು ಬೆಸ್ಟ್?

ನವದೆಹಲಿ(ಆ.31) ಇಂಟರ್ನೆಟ್ ಸಂಪರ್ಕ್, ಡೇಟಾ ಸ್ಪೀಡ್‌ಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಾರಣ ಸದ್ಯ ಭಾರತದಲ್ಲಿ 5ಜಿ ಸ್ಪೀಡ್ ಡೇಟಾ ಲಭ್ಯವಿದೆ. ಇಷ್ಟೇ ಅಲ್ಲ ಇತರ ಎಲ್ಲಾ ದೇಶಗಳಿಗಿಂತ ಕಡಿಮೆ ದರದಲ್ಲಿ ಡೇಟಾ ಸೇರಿದಂತೆ ಇತರ ಸೇವೆಗಳು ಲಭ್ಯವಿದೆ. ಇದೀಗ ಜಿಯೋ ಏರ್‌ಫೈಬರ್ ಸೇವೆ ಲಾಂಚ್ ಮಾಡುತ್ತಿದೆ.  ಸೆಪ್ಟೆಂಬರ್ 18 ರಂದು ಜಿಯೋ ವೈಯರ್‌ಲೆಸ್ ಏರ್ ಫೈಬರ್ ಸೇವೆ ಲಭ್ಯವಾಗಲಿದೆ.  ಇದೇ ಸೇವೆಯನ್ನು ಏರ್‌ಟೆಲ್ ಈಗಾಗಲೇ ನೀಡುತ್ತಿದೆ. ಏರ್‌ಟೆಲ್ Xstream ಏರ್‌ಫೈಬರ್ ಮೂಲಕ ಗ್ರಾಹಕರಿಗೆ ವೈಯರ್‌ಲೆಸ್ ಡೇಟಾ ಸೇವೆ ನೀಡುತ್ತಿದೆ.  ಜಿಯೋ ಹಾಗೂ ಏರ್‌ಟೆಲ್ ಏರ್ ಫೈಬರ್ ಸೇವೆಯಲ್ಲಿ ಯಾವುದು ಉತ್ತಮ? ಸ್ಪೀಡ್, ಒಟಿಟಿ ಸೇರಿದಂತೆ ಇತರ ಯಾವೆಲ್ಲಾ ಸೇವೆಗಳು ಲಭ್ಯವಿದೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ ಹಾಗೂ ಏರ್‌ಟೆಲ್ ಏರ್‌ಫೈಬರ್ ಎರಡೂ ಕೂಡ 30 Mbps ನಿಂದ 1 Gbps ಡೇಟಾ ಸ್ಪೀಡ್ ನೀಡುತ್ತಿದೆ. ಎರಡಲ್ಲೂ ಪ್ರೀ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಪ್ಲಾನ್ ಲಭ್ಯವಿದೆ. ಇನ್ನು ಒಟಿಟಿ ಚಂದಾದಾರಿಕೆ ಸೇರಿದಂತೆ ಇತರ ಕೆಲ ಸೌಲಭ್ಯಗಳನ್ನು ನೀಡುತ್ತಿದೆ.

ಗಣೇಶ ಹಬ್ಬಕ್ಕೆ ಜಿಯೋ ಏರ್ ಫೈಬರ್ ಸೇವೆ ಆರಂಭ,ಇಲ್ಲಿದೆ ಡೇಟಾ ಸ್ಪೀಡ್, ಬೆಲೆ ವಿವರ!

ಜಿಯೋ ಏರ್‌ಫೈಬರ್ ಪ್ಲಾನ್ ಲಿಸ್ಟ್: 
399 ರೂಪಾಯಿ ಪ್ಲಾನ್: 30 Mbps ಸ್ಪೀಡ್ ಅನ್‌ಲಿಮಿಟೆಡ್ ಡೇಟಾ, ವಾಯ್ಸ್ ಕಾಲ್ ಹಾಗೂ 30 ದಿನ ವಾಲಿಡಿಟಿ ಇರಲಿದೆ
699 ರೂಪಾಯಿ ಪ್ಲಾನ್: ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ 100 Mbps ಸ್ಪೀಡ್ ಅನ್‌ಲಿಮಿಟೆಡ್ ಡೇಟಾ, ಫ್ರೀ ವಾಯ್ಸ್ ಕಾಲ್ ಹಾಗೂ ಅನ್‌ಲಿಮಿಟೆಡ್ ಇಂಟರ್ನೆಟ್ ಆಕ್ಸೆಸ್, 30 ದಿನದ ವಾಲಿಟಿಡಿ ಇರಲಿದೆ.
1499 ರೂಪಾಯಿ ಪ್ಲಾನ್: ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ ಉಚಿತ 300 Mbps speed ಡೇಟಾ, ನೆಟ್‌ಫ್ಲಿಕ್ಸ್(ಬೇಸಿಕ್) ಜಿಯೋ ಸಿನಿಮಾ, ಜಿಯೋ ಸಾಮನ್, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಸೇರಿದಂತೆ 18 ಉಚಿತ ಒಟಿಟಿ ಚಾನೆಲ್ 
2499 ರೂಪಾಯಿ ಪ್ಲಾನ್: 500 Mbps ಸ್ಪೀಡ್ ಉಚಿತ ನೆಟ್‌‌ಫ್ಲಿಕ್ಸ್ ಆಕ್ಸೆಸ್,  ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಸೇರಿದಂತೆ  16 ಇತರ ಆ್ಯಪ್  ಸೇವೆಗಳು ಉಚಿತವಾಗಿದೆ
3999 ರೂಪಾಯಿ ಪ್ಲಾನ್: ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ 1 Gbps ಸ್ಪೀಡ್ ಜೊತೆಗೆ 35000GB ಡೇಟಾ (35000GB + 7500GB ಬೋನಸ್)  ನೆಟ್‌ಫ್ಲಿಕ್ಸ್,  ಅಮೆಜಾನ್ ಪ್ರೈಮ್ ಸೇರಿದಂತೆ 17 ಸೇವೆಗಳು ಉಚಿತವಾಗಲಿದೆ.
8499 ರೂಪಾಯಿ ಪ್ಲಾನ್: ಈ ಯೋಜನೆ ಆಯ್ಕೆ ಮಾಡಿಕೊಂಡಲ್ಲಿ1Gbps ಸ್ಪೀಡ್  ಜೊತೆಗೆ  6600GB ಡೇಟಾ ನೆಟ್‌ಫ್ಲಿಕ್ಸ್,  ಅಮೆಜಾನ್ ಪ್ರೈಮ್ ಸೇರಿದಂತೆ 19 ಆ್ಯಪ್ ಸೇವೆಗಳು ಉಚಿತವಾಗಿ ಸಿಗಲಿದೆ.

ಏರ್ ಟೆಲ್, ಜಿಯೋಗೆ BSNL ಟಕ್ಕರ್; 150 ದಿನಗಳ ಪ್ಲ್ಯಾನ್ ಕೇವಲ 397ರೂ.ಗೆ!

ಜಿಯೋ ಏರ್‌ಫೈಬರ್ ಉಚಿತ ರೂಟರ್, ಉಚಿತ  ಇನ್‌ಸ್ಟಾಲೇಶನ್ ಸೇವೆ ನೀಡಲಿದೆ. ಇದರ ಜೊತೆಗೆ ಗ್ರಾಹಕರು ಹೆಚ್ಚುವರಿ ಡೇಟಾಸೇರಿದಂತೆ ಹಲವು ಇತರ ಪ್ರಯೋಜನಗಳನ್ನು ಗ್ರಾಹಕರು ಪಡೆಯಲಿದ್ದಾರೆ.

ಏರ್‌ಟೆಲ್ Xstream ಏರ್‌ಫೈಬರ್ ಪ್ಲಾನ್ ಲಿಸ್ಟ್: 
499 ರೂಪಾಯಿ ಪ್ಲಾನ್: ಏರ್‌ಟೆಲ್  Xstream ಏರ್‌ಫೈಬರ್ ಸೇವೆಯಲ್ಲಿ 499 ರೂಪಾಯಿ ಪ್ಲಾನ್ ಆಯ್ಕೆ ಮಾಡಿಕೊಂಡರೆ 40 Mbps ಸ್ಪೀಡ್‌ನೊಂದಿಗೆ  ಅನ್‌ಲಿಮಿಟೆಡ್ ಇಂಟರ್ನೆಟ್ ಹಾಗೂ ವಾಯ್ಸ್ ಕಾಲ್, ಉಚಿತ ಏರ್‌ಟೆಲ್  Xstream ಪ್ರೀಮಿಯಂ ಪ್ಯಾಕ್, Wynk ಮ್ಯೂಸಿಕ್ ಹಾಗೂ ಅಪೋಲೋ 24X7.
799 ರೂಪಾಯಿ ಪ್ಲಾನ್:  ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ 100 Mbps ಸ್ಪೀಡ್ ಅನ್‌ಲಿಮಿಟೆಡ್ ಜೇಟಾ ಹಾಗೂ ಕಾಲ್, ಉಚಿತ ಏರ್‌ಟೆಲ್ Xstream ಪ್ರೀಮಿಯಂ ಪ್ಯಾಕ್, Wynk ಮ್ಯೂಸಿಕ್ ಹಾಗೂ ಅಪೋಲೋ 24X7. 
999 ರೂಪಾಯಿ ಪ್ಲಾನ್: ಇದು ಮನರಂಜನಾ ಪ್ಲಾನ್. ಇದರಲ್ಲಿ 200 Mbps ಸ್ಪೀಡ್, ಉಚಿತ ಏರ್‌ಟೆಲ್ Xstream ಪ್ರಿಮೀಯಂ, ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್.  
1498 ರೂಪಾಯಿ ಪ್ಲಾನ್: ಇದು ವೃತ್ತಿಪರ ಪ್ಯಾಕ್ ಆಗಿದ್ದು,  300 Mbps ಸ್ಪೀಡ್ ಉಚಿತ ನೆಟ್‌ಫ್ಲಿಕ್ಸ್(ಬೇಸಿಕ್) ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಹಾಗೂಇತರ ಸೇವೆಗಳು ಲಭ್ಯವಾಗಲಿದೆ. 
3999 ರೂಪಾಯಿಪ್ಲಾನ್: ಇದು ಇನ್ಫಿನಿಟಿ ಪ್ಲಾನ್.   1 Gbps ಸ್ಪೀಡ್, ಉಚಿತ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಸೇರಿದಂತೆ ಇತರ ಕೆಲ ಸೇವೆಗಳು ಲಭ್ಯವಿದೆ.  
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?