15 ಪ್ರೀಮಿಯಂ ಒಟಿಟಿ, 1000ಕ್ಕೂ ಹೆಚ್ಚು ಲೈವ್ ಟಿವಿಯ ಜಿಯೋ OTT ಪಾಸ್ ವಿಸ್ತರಣೆ ಆಫರ್

Published : Aug 08, 2026, 04:03 PM IST
Jio OTT Pass Offer Extended

ಸಾರಾಂಶ

15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್ , 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು , ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G ಸೇರಿದಂತೆ ಹತ್ತು ಹಲವು ಕೊಡುಗೆಯ ಜಿಯೋ ಒಟಿಟಿ ಪಾಸ್ ವಿಸ್ತರಣೆ ಮಾಡಲಾಗಿದೆ.

ನವದೆಹಲಿ (ಆ.08) ವೆಬ್ ಸಿರೀಸ್, ಸಿನಿಮಾ, ಲೈವ್ ಸ್ಪೋರ್ಟ್ಸ್ ಸೇರಿದಂತೆ ಹತ್ತು ಹಲವು ಭಿನ್ನ ವೀಕ್ಷಕರಿಗೆ ಬೇರೇ ಬೇರೆಯಾಗಿ ರೀಚಾರ್ಜ್, ಪ್ರತಿ ಚಾನೆಲ್‌ಗೆ ರೀಚಾರ್ಜ್ ಮಾಡುವ ಪದ್ಥತಿ ಹೋಗಿದೆ. ಈಗ ಡೇಟಾ ಕನೆಕ್ಷನ್ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಲೈವ್ ಟಿವಿ, ಒಟಿಟಿ, ಲೈವ್ ಸ್ಪೋರ್ಟ್ಸ್, ಹೈಸ್ಪೀಡ್ ಡೇಟಾ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗುತ್ತಿದೆ. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಜಿಯೋ ಇದೀಗ ತನ್ನ ಒಟಿಟಿ ಪಾಸ್ ವ್ಯಾಪ್ತಿ ವಿಸ್ತರಣೆ ಮಾಡಿದೆ.

ಜಿಯೋ ಗ್ರಾಹಕರಿಗೆ ದೀರ್ಘಾವಧಿಯ ಒಟಿಟಿ-ಪಾಸ್‌ಗಳು ಈಗ ಲಭ್ಯವಿವೆ. ಮೂರು ತಿಂಗಳ ಮತ್ತು ಒಂದು ವರ್ಷದ ಹೊಸ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ. ಎಲ್ಲಾ ಮೂರು ಪಾಸ್‌ಗಳು ಜಿಯೋ ಟಿವಿಯಲ್ಲಿ ಹೈಸ್ಪೀಡ್ ಡೇಟಾ, ಅನಿಯಮಿತ 5 ಜಿ, 15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್ ಗಳು ಮತ್ತು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ಪಡೆಯುತ್ತವೆ. ಹೊಸ ಒಟಿಟಿ-ಪಾಸ್ ಒಂದು ವರ್ಷದ ಸಕ್ರಿಯ ಬೇಸ್ ಪ್ಲಾನ್ ಹೊಂದಿರುವ ಗ್ರಾಹಕರಿಗಾಗಿ ಇರುತ್ತದೆ. ಇದರಲ್ಲಿ ವಾಯ್ಸ್ ಓನ್ಲಿ ಪ್ಲಾನ್ ಸೇರಿಸಲಾಗಿಲ್ಲ.

ಜಿಯೋ ಆಫರ್

ದೀರ್ಘಾವಧಿಯ ಪಾಸ್ ತೆಗೆದುಕೊಳ್ಳುವಾಗ ಗ್ರಾಹಕರಿಗೆ ವೆಚ್ಚವೂ ಕಡಿಮೆಯಾಗುತ್ತದೆ. ಗ್ರಾಹಕರು ಮೊದಲ 200 ರೂಪಾಯಿ, 28 ದಿನಗಳ ಪಾಸ್ ಮೂರು ಬಾರಿ ತೆಗೆದುಕೊಂಡಿದ್ದರೆ, ಅವರು 84 ದಿನಗಳಿಗೆ 600 ರೂ.ಗಳನ್ನು ಖರ್ಚು ಮಾಡಬೇಕಾಗಿತ್ತು, ಆದರೆ ಹೊಸ 84 ದಿನಗಳ ಪಾಸ್ 550 ರೂ. ಅಂದರೆ ನೇರ 50 ರೂಪಾಯಿ ಉಳಿತಾಯ. ಈಗ ವರ್ಷದ ಪಾಸ್‌ಗಾಗಿ 2400 ರೂ.ಗಳ ಬದಲು 2000 ರೂ.ಗಳನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ. ಅಂದರೆ ಮೊದಲಿಗಿಂತ 400 ರೂಪಾಯಿ ಕಡಿಮೆ. ಈ ಅವಧಿಯಲ್ಲಿ ಡೇಟಾವು ಸಹ ಹೆಚ್ಚಾಗುತ್ತದೆ. 200 ರೂ.ಗಳ ಪಾಸ್‌ಗೆ 30 ಜಿಬಿ, 550 ರೂ.ಗಳ ವಾರ್ಷಿಕ ಪಾಸ್‌ಗೆ 90 ಜಿಬಿ ಮತ್ತು ವಾರ್ಷಿಕ 2,000 ರೂ.ಗಳ ಪಾಸ್‌ಗೆ 365 ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ.

ಪ್ರೀಮಿಯಂ ಪ್ಯಾಕೇಜ್

ಒಟಿಟಿ ಪ್ಯಾಕೇಜ್‌ನಲ್ಲಿ ಯೂಟ್ಯೂಬ್ ಪ್ರೀಮಿಯಂ, ಜಿಯೋ ಹಾಟ್‌ಸ್ಟಾರ್ ಮೊಬೈಲ್ + ಹಾಲಿವುಡ್ ಮತ್ತು ಅಮೆಜಾನ್ ಪ್ರೈಮ್ ಸೇರಿವೆ. ಅಮೆಜಾನ್ ಪ್ರೈಮ್ ಲೈಟ್ ಸದಸ್ಯತ್ವವು 550 ಮತ್ತು 2,000 ರೂ.ಗೆ ಲಭ್ಯವಿದ್ದರೆ, ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ 200 ರೂ.ಗೆ ಲಭ್ಯವಿರುತ್ತದೆ. ಇದಲ್ಲದೆ, ಗ್ರಾಹಕರು ಸೋನಿಲಿವ್, ಝೀ 5, ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ +, ಸನ್ ಎನ್‌ಎಕ್ಸ್‌ಟಿ, ಫ್ಯಾನ್ ಕೋಡ್, ಹೋಯ್ಚೋಯ್, ಚೌಪಾಲ್, ಪ್ಲಾನೆಟ್ ಮರಾಠಿ, ಕಾಂಚ ಲನ್ನಕಾ, ಟೈಮ್ಸ್ ಪ್ಲೇ ಮತ್ತು ತರಂಗ್ ಪ್ಲಸ್‌ ಸಹ ಬಳಸಬಹುದು.

1000ಕ್ಕೂ ಹೆಚ್ಚು ಲೈವ್ ಟಿವಿ

ಜಿಯೋ ಟಿವಿಯಲ್ಲಿ 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು. ಇವುಗಳಲ್ಲಿ ಸ್ಟಾರ್ ಪ್ಲಸ್ ಎಚ್‌ಡಿ, ಕಲರ್ಸ್ ಎಚ್‌ಡಿ, ಸೆಟ್ ಎಚ್‌ಡಿ, ಸನ್ ಟಿವಿ ಎಚ್‌ಡಿ, ಡಿಸ್ಕವರಿ ಮತ್ತು ಕಾರ್ಟೂನ್ ನೆಟ್ ವರ್ಕ್ ನಂತಹ ಚಾನೆಲ್ ಗಳು ಸೇರಿವೆ. ಕಂಪನಿಯ ಪ್ರಕಾರ, ಈ ಪ್ಯಾಕೇಜ್ ಗ್ರಾಹಕರಿಗೆ ಪ್ರತಿ ತಿಂಗಳು 1,500 ರೂ.ಗಿಂತ ಹೆಚ್ಚಿನ ಮೌಲ್ಯದ ಮನರಂಜನಾ ಪ್ರಯೋಜನಗಳನ್ನು ನೀಡುತ್ತದೆ. ಹೊಸ 550 ಮತ್ತು 2,000 ರೂ.ಗಳ ಒಟಿಟಿ-ಪಾಸ್‌ಗಳು ಆಗಸ್ಟ್ 7 ರಿಂದ ಮೈಜಿಯೋ ಆ್ಯಪ್, ಜಿಯೋ ವೆಬ್‌ಸೈಟ್ ಮತ್ತು ಅಧಿಕೃತ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಮೂರು ದಿನದ ಡೆಡ್ ಲೈನ್ ನೀಡಿದ ಸಂಸದೀಯ ಸಮಿತಿ
ಟೆಕ್ ಜಗತ್ತಿನಲ್ಲಿ ಎಐ ಭರಾಟೆ: ತಂತ್ರಜ್ಞಾನದ ಮೇಲೆ ನಂಬಿಕೆ ಇಟ್ಟ ಕಂಪನಿಗಳಿಗೆ ಲಾಭದ ಲೆಕ್ಕಾಚಾರವೇ ಗೊತ್ತಿಲ್ಲ! ವರದಿ