ಇಂದಿನಿಂದ ಪ್ರಮುಖ ನಗರಗಳಲ್ಲಿ Jio 5G ಟ್ರಯಲ್ ರನ್ ಶುರು: ನಮ್ಮ ಬೆಂಗಳೂರಲ್ಲಿ ಇದ್ಯಾ..

By Anusha KbFirst Published Oct 5, 2022, 7:05 AM IST
Highlights

ನಾಡಿನೆಲ್ಲೆಡೆ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವಿಜಯದಶಮಿಯ ಶುಭ ದಿನದಂದೇ ಜಿಯೋ ರಿಲಯನ್ಸ್ ಸಂಸ್ಥೆ ತನ್ನ ಜಿಯೋ 5ಜಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ. ದೇಶದ ನಾಲ್ಕು ಪ್ರಮುಖ ನಗರಗಳಾದ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ವಾರಣಾಸಿ ಹಾಗೂ ಕೋಲ್ಕತ್ತಾದಲ್ಲಿ ಇಂದಿನಿಂದ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭವಾಗಲಿದೆ.

ಮುಂಬೈ: ನಾಡಿನೆಲ್ಲೆಡೆ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವಿಜಯದಶಮಿಯ ಶುಭ ದಿನದಂದೇ ಜಿಯೋ ರಿಲಯನ್ಸ್ ಸಂಸ್ಥೆ ತನ್ನ ಜಿಯೋ 5ಜಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಿದೆ. ದೇಶದ ನಾಲ್ಕು ಪ್ರಮುಖ ನಗರಗಳಾದ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ವಾರಣಾಸಿ ಹಾಗೂ ಕೋಲ್ಕತ್ತಾದಲ್ಲಿ ಇಂದಿನಿಂದ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭವಾಗಲಿದೆ.

ಜಿಯೋ ತನ್ನ ಗ್ರಾಹಕರಿಗೆ ಇಂದು ವೆಲ್ಕಮ್ ಆಫರ್ (‘welcome offer)ಘೋಷಣೆ ಜೊತೆ ಪ್ರಾಯೋಗಿಕ 5ಜಿ ಸೇವೆ (5G network services) ಆರಂಭಿಸಲಿದೆ. ಹೀಗಾಗಿ ಪ್ರಾಯೋಗಿಕ ಸೇವೆ ಘೋಷಣೆಯಾಗಿರುವ ಈ ನಗರಗಳಲ್ಲಿ 5Gಯೂ 1 ಜಿಬಿಪಿಎಸ್ ನಷ್ಟು ವೇಗದಲ್ಲಿ ಗ್ರಾಹಕರಿಗೆ ಬಳಕೆಗೆ ಸಿಗಲಿದೆ. ಇದರ ಜೊತೆಗೆ ಶೀಘ್ರದಲ್ಲೇ ಇತರ ನಗರಗಳು ಸಿದ್ಧಗೊಳ್ಳುತ್ತಿದ್ದಂತೆ ಅಲ್ಲೂ ಕೂಡ 5G ಪ್ರಾಯೋಗಿಕ ಸೇವೆ ಆರಂಭಿಸಲಾಗುವುದು ಎಂದು ಜಿಯೋ ಹೇಳಿದೆ. 


ನಿಮ್ಮ ಫೋನ್‌ನಲ್ಲಿ ಜಿಯೋ 5ಜಿ ಸೇವೆ ಪಡೆಯುವುದು ಹೇಗೆ?
ಈ ಪ್ರಯೋಗದಲ್ಲಿ ಭಾಗವಹಿಸುವ ಬಳಕೆದಾರರು ತಮ್ಮ ಜೊತೆ ಇರುವ ಸಿಮ್ ಕಾರ್ಡ್ (SIM card) ಅಥವಾ ಹ್ಯಾಂಡ್‌ಸೆಟ್ (handset) ಅನ್ನು ಬದಲಿಸದೆಯೇ ಈ 5ಜಿ ನೆಟ್‌ವರ್ಕ್ ಅನ್ನು ಬಳಸಬಹುದಾಗಿದೆ. ಈ ಪ್ರಯೋಗದಲ್ಲಿ ಭಾಗವಹಿಸಲು ಬಳಕೆದಾರರನ್ನು ಆಹ್ವಾನಿಸಲಾಗುತ್ತದೆ ಎಂದು ಜಿಯೋ ಸಂಸ್ಥೆ ಈಗಾಗಲೇ ಹೇಳಿದೆ. ಹೀಗಾಗಿ ಈ ನಗರಗಳಲ್ಲಿರುವ ಎಲ್ಲರೂ ಕೂಡ ಈ 5ಜಿ ಸೇವೆಯನ್ನು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ಪಡೆಯಲು ಅಥವಾ 5ಜಿಗೆ ಅಪ್‌ಗ್ರೇಡ್ ಆಗಲು ಸಾಧ್ಯವಿಲ್ಲ ಎಂದು ಜಿಯೋ ಸ್ಪಷ್ಟಪಡಿಸಿದೆ. ಹೀಗಾಗಿ ಈ ಪ್ರಯೋಗದಲ್ಲಿ ಭಾಗವಹಿಸುವ ಜಿಯೋ ಬಳಕೆದಾರರು ಮಾತ್ರವೇ 1Gbps + ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾವನ್ನು ಪಡೆಯುತ್ತಾರೆ. ಪ್ರಸ್ತುತ ಜಿಯೋ 5ಜಿ ಸೇವೆಯನ್ನು ಬಳಸಲು ಸಾಕಷ್ಟು ಸಂಖ್ಯೆಯ 5G ಬ್ಯಾಂಡ್‌ಗಳನ್ನು ಹೊಂದಿರುವ 5ಜಿ ಬೆಂಬಲಿಸುವ ಸ್ಮಾರ್ಟ್‌ಫೋನ್ ಗ್ರಾಹಕರ ಬಳಿ ಇರಬೇಕಾಗಿದೆ. 

5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?

ಆದರೆ ಈ ಪ್ರಯೋಗದಲ್ಲಿ ಭಾಗವಹಿಸಲು ಯಾರನ್ನು ಆಹ್ವಾನಿಸಲಾಗಿದೆಯೋ ಅವರು ಮಾತ್ರ ತಮ್ಮ ಬಳಿ ಇರುವ ಜಿಯೋ ಸಿಮ್ ಅಥವಾ ಸ್ಮಾರ್ಟ್‌ ಫೋನ್ ಬದಲಿಸದೇ ಸ್ವಯಂಚಾಲಿತವಾಗಿ ಜಿಯೋ 5ಜಿ ಸೇವೆ ಪಡೆಯಲು ಸಾಧ್ಯವಾಗುತ್ತದೆ. ಅಗತ್ಯವಿದ್ದಲ್ಲಿ ಹೊಸ ಬದಲಾವಣೆಯೊಂದಿಗೆ 5ಜಿಗೆ ಹ್ಯಾಂಡ್ಸೆಟ್ ಅನ್ನು ಅಪ್‌ಗ್ರೇಡ್ ಗೊಳಿಸಲು ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ತಾನು ಕೆಲಸ ಮಾಡುತ್ತಿರುವುದಾಗಿ ಜಿಯೋ ಹೇಳಿಕೆಯಲ್ಲಿ ತಿಳಿಸಿದೆ. ವಿಸ್ತಾರವಾದ ವ್ಯಾಪ್ತಿಯನ್ನು ತಲುಪಲು 700MHz ಲೋ-ಬ್ಯಾಂಡ್ ಸ್ಪೆಕ್ಟ್ರಮ್ (low-band spectrum) ಅನ್ನು ಬಳಸುವ ಏಕೈಕ ಆಪರೇಟರ್ ಜಿಯೋ ಎಂದು ಸಂಸ್ಥೆ ಹೇಳಿಕೊಂಡಿದೆ. 

Jio ಸ್ವತಂತ್ರ (SA) ನೆಟ್‌ವರ್ಕ್ ಮೂಲಸೌಕರ್ಯವನ್ನು ಬಳಸುತ್ತಿದೆ, ಇದು ಆಪರೇಟರ್‌ಗಳು ಪ್ರಾರಂಭಿಸುತ್ತಿರುವ ಇತರ 4G-ಆಧಾರಿತ ನಾನ್-ಸ್ಟಾಂಡಲೋನ್ (NSA) ನೆಟ್‌ವರ್ಕ್‌ಗಳಿಗಿಂತ "ಉತ್ತಮ" ಎಂದು ಹೇಳಿಕೊಳ್ಳುತ್ತದೆ. ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಟೆಲ್ಕೊ ಎಲ್ಲಾ 5G ಪ್ರದೇಶಗಳಲ್ಲಿ ಕ್ಯಾರಿಯರ್ ಒಟ್ಟುಗೂಡಿಸುವಿಕೆಯನ್ನು ಸಹ ಬೆಂಬಲಿಸುತ್ತದೆ.

5G Launch In India: ಹಳೆಯದಾಯ್ತು 4ಜಿ, ಇನ್ನು 5ಜಿ ಯುಗ..!

ಇದರೊಂದಿಗೆ ಜಿಯೋ ತನ್ನದೇ ಸ್ವತಂತ್ರವಾದ ನೆಟ್‌ವರ್ಕ್ ಮೂಲ ಸೌಕರ್ಯವನ್ನು ಬಳಸಿಕೊಳ್ಳುತ್ತಿರುವುದಾಗಿ ಹೇಳಿದ್ದು, ಇದು ಇತರ ಆಪರೇಟರ್‌ಗಳು ಪ್ರಾರಂಭಿಸುವ ನಾನ್‌  ಸ್ಟಾಂಡಲೋನ್ ನೆಟ್‌ವರ್ಕ್‌ಗಿಂತ ಉತ್ತಮವಾದುದಾಗಿದೆಯಂತೆ. ಈ ಮಧ್ಯೆ ಜಿಯೋ ತನ್ನ ಜಿಯೋ 5G ಯೋಜನೆಗಳ ಬೆಲೆಯನ್ನು (Jio 5G plans) ಹೇಗೆ ನಿಗದಿಪಡಿಸಲಾಗಿದೆ ಎಂಬ ವಿವರಗಳು ಇನ್ನೂ ಹೊರ ಬಂದಿಲ್ಲ. ಮುಂದಿನ ದಿನಗಳಲ್ಲಿ ಕಂಪನಿಯು ಇವುಗಳನ್ನು ದೃಢೀಕರಿಸಲಿದೆ. 

ಒಟ್ಟಿನಲ್ಲಿ ನಿಮ್ಮ ಬಳಿ 5ಜಿ ಸಾಮರ್ಥ್ಯದ ಫೋನ್ ಇದ್ದರೂ ಅಲ್ಲಿ 5ಜಿ ನೆಟ್‌ವರ್ಕ್ ಅನ್ನು ಸಕ್ರಿಯಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಫೋನ್ ತಯಾರಕರಿಂದ ಕೆಲವು ರೀತಿಯ OTA ಅಥವಾ ಸಾಫ್ಟ್‌ವೇರ್ ನವೀಕರಣದ ಅಗತ್ಯವಿರುತ್ತದೆ ಎಂಬುದು ಗಮನಿಸಬೇಕಾದ ಅಂಶ. ಉದಾಹರಣೆಗೆ Apple ಫೋನ್ ವಿಚಾರದಲ್ಲಿ 5ಜಿ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಏಕೆಂದರೆ ಆಪಲ್ ಫೋನ್‌ ಸೆಟ್ಟಿಂಗ್ ಅಲ್ಲಿ ಬದಲಾವಣೆ ತರಬೇಕಿದೆ. ಶೀಘ್ರದಲ್ಲೇ ಬದಲಾಯಿಸುವುದಾಗಿ ಐಫೋನ್ ಹೇಳಿದೆ ಎಂದು ಏರ್‌ಟೆಲ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಣದೀಪ್ ಸೆಖೋನ್ ಹೇಳಿದ್ದರು.

click me!