ಬೆಂಗಳೂರು(ಆ.28): ಕರೋನಾ ಮಹಾಮಾರಿ ದಿನೇ ದಿನೇ ತನ್ನ ಕಬಂಧ ಬಾಹುಗಳನ್ನು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ಹಾಗೆಯೇ, ಇದನ್ನು ತಡೆಗಟ್ಟಲು ಹೊಸ ಹೊಸ ವಿಧಾನಗಳನ್ನು ಆವಿಷ್ಕರಿಸುವ ಪ್ರಯತ್ನವೂ ಅಷ್ಟೇ ವ್ಯಾಪಕವಾಗಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪುಣೆಯಲ್ಲಿರುವ ಸ್ವದೇಶಿ ಕಂಪನಿಯಾದ ಇಂಡೋಟೆಕ್ ಇಂಡಸ್ಟ್ರೀಯಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಹೊಸ ಯಂತ್ರವೊಂದನ್ನು ಆವಿಷ್ಕರಿಸಿದ್ದು ಅದು ಗಾಳಿಯಲ್ಲಿರುವ ಹಾನಿಕಾರ ಕರೋನಾ ವೈರಸ್ ನ್ನು ಕೊಲ್ಲುವ ಶಕ್ತಿಯನ್ನು ಹೊಂದಿದೆ.
ಬರುತ್ತಿದೆ ಬ್ಯಾಟರಿ ಚಾಲಿತ LG ಏರ್ ಪ್ಯೂರಿಫೈಯರ್ ಮಾಸ್ಕ್!.
undefined
ಹೆಚ್ಚು ಗಾಳಿ ಆಡದೇ ಇರುವ ಕೋಣೆಗಳಲ್ಲಿ ವೈರಸ್ ಗಾಳಿಯ ಮೂಲಕವೂ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಕೊಣೆಯ ಒಳಗೆ ಪರಿಣಾಮಕಾರಿಯಾಗಿ ಕರೋನಾ ವೈರಸ್ ಹಬ್ಬುವುದನ್ನು ತಪ್ಪಿಸುವ ಉದ್ದೇಶದಿಂದ ಪುಣೆಯ ಇಂಡೋಟೆಕ್ ಇಂಡಸ್ಟ್ರೀಯಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ - ಕರೋನಾ ಕಿಲ್ಲರ್ ಎಲೆಕ್ಟ್ರಾನಿಕ್ ಯಂತ್ರವನ್ನು ಸಿದ್ದಪಡಿಸಿದ್ದು, ಈ ಯಂತ್ರಕ್ಕೆ ಪುಣೆಯ ಐಸಿಎಂಆರ್ - ಎನ್‌ಐವಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ - ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ) ಯಿಂದ ಪ್ರಮಾಣ ಪತ್ರವೂ ಕೂಡಾ ಲಭಿಸಿದೆ ಎಂದು ಸಂಸ್ಥೇಯ ವ್ಯವಸ್ಥಾಪಕ ನಿರ್ದೇಶಕರಾದ ಬಾಹುಸಾಹೇಬ್ ಜಂಜಿರೆ ತಿಳಿಸಿದ್ದಾರೆ.
ಕರೋನಾ ಕಿಲ್ಲರ್ - ಯಂತ್ರ ಹೇಗೆ ಕೆಲಸ ಮಾಡುತ್ತದೆ: ಮನೆ, ಆಫೀಸ್, ಮಾಲ್ ಗಳು ಹೀಗೆ ಜನರು ಸೇರುವ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿನ ಗಾಳಿಯಲ್ಲಿನ ಕರೋನಾ ವೈರಸನ್ನು ಇದು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಈ ಯಂತ್ರ ಅಯಾನ್ ಗಳನ್ನು ಉತ್ಪತ್ತಿಸುತ್ತದೆ. ಈ ಮೂಲಕ ಗಾಳಿ ತಲುಪುವ ಎಲ್ಲಾ ಜಾಗದಲ್ಲೂ ಕರೋನಾ ವೈರಸ್, ಬ್ಯಾಕ್ಟೀರಿಯಾ, ಫಂಗಸ್ ಹಾನಿಕಾರಕ ವೈರಸ್ ಗಳನ್ನು ಕೊಲ್ಲುತ್ತದೆ. ಮನೆ, ದೇವಾಲಯ, ಜಿಮ್, ಬೋಗಿಗಳು, ಏರ್ ಕ್ರಾಫ್ಟ್, ಕಾರ್ಖಾನೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಆಯಾ ಕೋಣೆಯ ಏರಿಯಾ ಗೆ ತಕ್ಕಂತೆ ಇದನ್ನು ತಯಾರು ಮಾಡಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಬಾಹುಸಾಹೇಬ್ ಜಂಜಿರೆ ತಿಳಿಸಿದರು.
ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಮೂಲಕ ತಯಾರಿಸಲಾಗಿರುವ ಈ ಯಂತ್ರದಲ್ಲಿ ಸ್ವದೇಶಿ ನಿರ್ಮಿತ ಬಿಡಿ ಭಾಗಗಳನ್ನು ಬಳಸಲಾಗಿದೆ.