ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಿ ಅನ್ನೋ ಆಂದೋಲನ ನಡೆಯುತ್ತಿದೆ. ಇದರ ಜೊತೆ ಜೊತೆಯಾಗಿ ತುಳು ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಇದೀಗ ತುಳು ಲಿಪಿಗೆ ಯುನಿಕೋಡ್ ಬಿಡುಗಡೆಯಾಗಿದೆ. ಇದೀಗ ಕನ್ನಡ ಸೇರಿದಂತೆ ಇತರ ಭಾಷೆಗಳ ರೀತಿಯಲ್ಲಿ ತುಳು ಭಾಷೆಯಲ್ಲಿ ಟೈಪಿಂಗ್ ಮಾಡಬುಹುದಾಗಿದೆ.
ಮಂಗಳೂರು(ಆ.28): ತುಳು ಭಾಷೆ ಶ್ರೀಮಂತಿಕೆ ಹಲವು ಕಾರಣಗಳಿಂದ ಮುನ್ನಲೆಗೆ ಬಂದಿಲ್ಲ. ಭಾಷೆಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಅನ್ನೋದು ತುಳುವರ ಕೂಗು. ಇದಕ್ಕಾಗಿ ಆಂದೋಲನಗಳು ನಡೆಯುತ್ತಿವೆ. ತುಳು ಭಾಷೆಯಲ್ಲಿ ಹಲವು ಕೃತಿಗಳು, ಕಾದಂಬರಿ, ಕತೆ, ಕಾವ್ಯಗಳು, ಜಾನಪದ ಗೀತೆಗಳು ಸೇರಿದಂತೆ ಹಲವು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇದೆ. ಆದರೆ ಈ ಎಲ್ಲಾ ಕೃತಿಗಳು ತುಳು ಲಿಪಿಯಲ್ಲಿ ಇರಲಿಲ್ಲ. ಇದೀಗ ತುಳು ಲಿಪಿಯಲ್ಲೇ ಟೈಪಿಂಗ್ ಮಾಡಬಲ್ಲ, ತುಳು ಲಿಪಿಯಲ್ಲೇ ಪುಸ್ತಕ ಹೊರತರುವ ಪ್ರಯತ್ನಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಇದಕ್ಕೆ ಮುಖ್ಯ ಕಾರಣ ಇದೀಗ ತುಳು ಬರವು ಅನ್ನೋ ಯುನಿಕೋಡ್ ಲಿಪಿ ಬಿಡುಗಡೆಯಾಗಿದೆ.
ಐಬಿಎಮ್-ಎನ್‌ಎಸ್‌ಡಿಸಿ ಯೋಜನೆ: ವಿನೂತನ ಕಂಪ್ಯೂಟರ್ ತಂತ್ರಜ್ಞಾನ ಉಚಿತವಾಗಿ ಕಲಿಯಿರಿ!.
undefined
ತುಳು ಭಾಷೆಗೆ ತನ್ನದೇ ಆದ ಗ್ರಂಥ ಮೂಲದಿಂದ ಬಂದಂತಹ ಸ್ವತಂತ್ರ ಲಿಪಿಯೊಂದಿದ್ದು, ಒಂದು ಕಾಲದಲ್ಲಿ ತುಳು ಭಾಷೆಯ ಮಹಾಗ್ರಂಥಗಳು ಇದೇ ಲಿಪಿಯಲ್ಲಿ ರಚನೆಯಾಗಿವೆ. ತುಳು ಲಿಪಿಯಲ್ಲಿರುವ ಹಲವಾರು ಶಾಸನಗಳು ದೊರೆತಿದ್ದು, ಈಗ ತುಳು ಲಿಪಿಗೆ ಯೂನಿಕೋಡ್ ದೊರಕಿಸಲು ತುಳು ಅಕಾಡೆಮಿ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಜೈ ತುಳುನಾಡ್ ಸಂಘಟನೆಯ ತುಳು ಫಾಂಟ್ ತಂಡವು ತುಳು ಲಿಪಿಯನ್ನು ಲ್ಯಾಟಿನ್/ರೋಮನ್ ಅಕ್ಷರಗಳ ಸಹಾಯದಿಂದ ತುಳು ಲಿಪಿಯಲ್ಲಿ ಸುಲಭವಾಗಿ ಬರೆಯುಬಹುದಾದ ಯೂನಿಕೋಡ್ ಮಾದರಿಯ "ತುಳು ಬರವು" ಎಂಬ ಯುನಿಕೋಡ್ ಅಭಿವೃದ್ಧಿ ಪಡಿಸಿದೆ. ಈ ತುಳು ಲಿಪಿ ಫಾಂಟ್ ತುಳು ಬರವು ಯುನಿಕೋಡ್‌ನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ ಸಾರ್ ಬಿಡುಗಡೆ ಮಾಡಿದರು.
ಅಕಾಡೆಮಿಯ ಅಧ್ಯಕ್ಷರ ಸಲಹೆಯಂತೆ ತುಳು ಯೂನಿಕೋಡ್ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಅಕಾಡೆಮಿ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್, ತಾರಾ ಉಮೇಶ್ ಆಚಾರ್ಯ, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.