UPI Payments in UAE: ಗಲ್ಫ್‌ ಕಂಟ್ರಿಯಲ್ಲೂ ಭಾರತೀಯರಿಗೆ ಹಣ ಪಾವತಿಗೆ ಅವಕಾಶ

By Suvarna News  |  First Published Apr 23, 2022, 3:04 PM IST

ಗಲ್ಫ್ ರಾಷ್ಟ್ರದಲ್ಲಿ ಯುಪಿಐ ಆಧಾರಿತ ಪಾವತಿಗಳನ್ನು ಸಕ್ರಿಯಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಶ್ರೆಕ್ ಬ್ಯಾಂಕ್‌ನ ನಿಯೋಪೇ (NEOPAY) ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 


ನವದೆಹಲಿ (ಏ. 23): ಭಾರತೀಯ ಪ್ರಯಾಣಿಕರು ಈಗ  ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಯುಎಇನಲ್ಲಿ ಹಣ ತಪಾವತಿಗಳನ್ನು ಮಾಡಬಹುದು. ಗಲ್ಫ್ ರಾಷ್ಟ್ರದಲ್ಲಿ ಯುಪಿಐ ಆಧಾರಿತ ಪಾವತಿಗಳನ್ನು ಸಕ್ರಿಯಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಶ್ರೆಕ್ ಬ್ಯಾಂಕ್‌ನ ನಿಯೋಪೇ (NEOPAY) ಯೊಂದಿಗೆ ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2021 ರಲ್ಲಿ, ಯುಪಿಐ ಸೇವೆಗಳನ್ನು ಭೂತಾನ್‌ನಲ್ಲಿ ಅದರ ಕೇಂದ್ರ ಬ್ಯಾಂಕ್ ರಾಯಲ್ ಮಾನಿಟರಿ ಅಥಾರಿಟಿಯ ಸಹಯೋಗದೊಂದಿಗೆ ಪ್ರಾರಂಭಿಸಲಾಗಿತ್ತು. 

ಯುಎಇ ಭಾರತೀಯ ವಲಸಿಗರ ಅಪಾರ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಪಾವತಿ ವಿಧಾನಗಳಲ್ಲಿ ಒಂದಾದ ಯುಪಿಐಯನ್ನು ಹೊಂದಿರುವ ಭಾರತೀಯ ಪ್ರಯಾಣಿಕರು ಯುಎಇಯಲ್ಲಿ ಈಗ ಪಾವತಿಗಳನ್ನು ಮಾಡಲು ಇದು ಸಹಾಯವಾಗಲಿದೆ. ಯುಎಇಯಲ್ಲಿ ಯುಪಿಐ ಕುರಿತು ಮಾತನಾಡಿದ ಎನ್‌ಐಪಿಎಲ್ ಸಿಇಒ ರಿತೇಶ್ ಶುಕ್ಲಾ, “ನಿಯೋಪೇ ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ ಯುಎಇಯಲ್ಲಿ ಭೀಮ್ ಯುಪಿಐ ಕಾರ್ಯ ಮಾಡುವುದನ್ನು ನೋಡಲು ನಮಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ. 

Tap to resize

Latest Videos

undefined

ಇದನ್ನೂ ಓದಿ: ಯುಪಿಐ ಮೂಲಕ ಡಿಜಿಟಲ್ ವಹಿವಾಟು, 6 ವರ್ಷಗಳಲ್ಲಿ ಉತ್ತುಂಗಕ್ಕೆ, ಮೋದಿ ಶ್ಲಾಘನೆ!

"ಈ ಉಪಕ್ರಮವು ಭಾರತೀಯ ನಾಗರಿಕರ ಆದ್ಯತೆಯ ಪಾವತಿ ವಿಧಾನವಾಗಿ ಹೊರಹೊಮ್ಮಿರುವ ಭೀಮ್‌ ಯಪಿಐ (BHIM UPI) ಬಳಸಿಕೊಂಡು ಪಾವತಿಗಳನ್ನು ನಿರ್ವಹಿಸಲು ಭಾರತೀಯ ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತದೆ. ಡಿಜಿಟಲ್ ಪಾವತಿಗಳನ್ನು ಸರಳಗೊಳಿಸುವ ಮತ್ತು ನಮ್ಮ ಅತ್ಯಾಧುನಿಕ ಪರಿಹಾರಗಳೊಂದಿಗೆ ಜಗತ್ತಿನಾದ್ಯಂತ ಡಿಜಿಟಲ್ ಮಾರುಟಕಟ್ಟೆಯನ್ನು ಸರಳ ಮಾಡುವ ನಿಟ್ಟಿನಲ್ಲಿ NIPL ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಪಾವತಿಗಳ ವಿಷಯಕ್ಕೆ ಬಂದಾಗ ತಡೆರಹಿತ ಬಳಕೆದಾರರ ಅನುಭವಗಳನ್ನು ಖಚಿತಪಡಿಸಿಕೊಳ್ಳಲು ಯುಪಿಐಗಾಗಿ ವಿಶಾಲವಾದ ಜಾಗತಿಕ ನೆಟ್‌ವರ್ಕ್ ನಿರ್ಮಿಸಲು ನಾವು ಸಮರ್ಪಿತರಾಗಿದ್ದೇವೆ" ಎಂದು  ರಿತೇಶ್ ಶುಕ್ಲಾ ಹೇಳಿದ್ದಾರೆ.

ಯುಇನಲ್ಲಿ ಯುಪಿಐ ಹೇಗೆ ಕಾರ್ಯನಿರ್ವಹಿಸುತ್ತದೆ?: ನಿಯೋಪೇ ಟರ್ಮಿನಲ್‌ಗಳನ್ನು ಹೊಂದಿರುವ ಯಎಐ ಅಂಗಡಿಗಳಲ್ಲಿ ಮಾತ್ರ ಯುಪಿಐ ಪಾವತಿಗಳನ್ನು ಅಮಡಲು ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಯುಪಿಐ ಪಾವತಿಗಳನ್ನು ಬೆಂಬಲಿಸುವ ಭೀಮ್‌ನಂತಹ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರು ಭಾರತೀಯ ಬ್ಯಾಂಕ್‌ನೊಂದಿಗೆ ಖಾತೆಯನ್ನು ಹೊಂದಿರಬೇಕು. ಪ್ರಸ್ತುತ, ಭೂತಾನ್ ಮತ್ತು ನೇಪಾಳದಲ್ಲಿ ಯುಪಿಐ ಪಾವತಿಗಳನ್ನು ಸ್ವೀಕರಿಸಲಾಗುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಇದು ಸಿಂಗಾಪುರದಲ್ಲೂ ಬಿಡುಗಡೆಯಾಗುವ  ಸಾಧ್ಯತೆಯಿದೆ. 

ಇದನ್ನೂ ಓದಿ: UPI Tap to Pay: ಗೂಗಲ್‌ ಪೇ ಹೊಸ ಫೀಚರ್:‌ ಹಣ ಪಾವತಿ ಈಗ ಇನ್ನೂ ಸುಲಭ!

ಯುಪಿಐ ಹೇಗೆ ಕೆಲಸ ಮಾಡುತ್ತದೆ?: ಯುಪಿಐಅನ್ನು 2016 ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಭಾರತೀಯ ಪಾವತಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಿಜಿಟಲ್ ಪಾವತಿ ವಿಧಾನವಾಗಿದೆ.  ಯುಪಿಐ ಪ್ಲಾಟ್‌ಫಾರ್ಮನ್ನು ಎನ್‌ಸಿಪಿಐ (NPCI) ಅಭಿವೃದ್ಧಿಪಡಿಸಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿಸುತ್ತದೆ.  

ಯುಪಿಐ ಪಾವತಿಗಳನ್ನು ಮಾಡಲು, ನಿಮಗೆ ಸ್ಮಾರ್ಟ್‌ಫೋನ್, ಬ್ಯಾಂಕ್ ಖಾತೆ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಸಂಖ್ಯೆ ಮತ್ತು ಮುಖ್ಯವಾಗಿ ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. BHIM, Paytm, Google Pay ಮತ್ತು  PhonePe ಸೇರಿಂದತೆ ಹಲವು ಅಪ್ಲಿಕೇಶನ್‌ಗಳು  ಯುಪಿಐ ಆಧಾರಿತ ಪಾವತಿಗಳನ್ನು ಬೆಂಬಲಿಸುತ್ತವೆ. 

click me!