ಪ್ರತಿ ವರ್ಷದಂತೆ, CES ಜಗತ್ತಿನಾದ್ಯಂತ ಕೆಲವು ನವೀನ ತಂತ್ರಜ್ಞಾನಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ible Airvida E1 ಇಯರ್‌ಫೋನ್‌ಗಳು ವಿಶ್ವದ ಅತಿ ದೊಡ್ಡ ಟೆಕ್ ಶೋ ನಲ್ಲಿ ಸದ್ದು ಮಾಡುತ್ತಿವೆ.
Tech Desk:2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಏರ್ ಪ್ಯೂರಿಫೈಯರ್‌ಗಳಿಗೆ (Air Purifier) ಭಾರಿ ಬೇಡಿಕೆಯಿದೆ. ಕೊರೋನಾ ಪ್ರಾರಂಭವಾಗಿ 2 ವರ್ಷ ಕಳೆದರು ಅದರ ಅಬ್ಬರ ಇನ್ನು ಜೋರಾಗಿದೆ. ದಿನ ಕಳೆದಂತೆ ಪ್ರಪಂಚದಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ಜಗತ್ತಿನ ಟೆಕ್ ದೈತ್ಯ ಕಂಪನಿಗಳು ಗಾಳಿ ಶುದ್ಧವಾಗಿಡಲು ಸಹಾಯ ಮಾಡುವ ಹೊಸ ತಂತ್ರಜ್ಞಾನದ ನಿರಂತರ ಆವಿಷ್ಕಾರಗಳನ್ನು ಹೊರ ತರುತ್ತಿವೆ. ಈ ಆವಿಷ್ಕಾರದ ಇತ್ತೀಚಿನ ಫಲಿತಾಂಶವೆಂದರೆ Airvida E1. ಶಬ್ದ ರದ್ದತಿಯೊಂದಿಗೆ ಬರುವ ಈ ಇಯರ್ ಫೋನ್‌ಗಳು ಏರ್ ಪ್ಯೂರಿಫೈಯರ್‌ನಂತೆ ಕೂಡ ಕೆಲಸ ಮಾಡಲಿವೆ.
ಇಯರ್ ಫೋನ್‌ಗಳು ಕೂಡ ಗಾಳಿಯನ್ನು ಶುದ್ಧೀಕರಿಸಬಲ್ಲವು ಎಂದರೆ ಆಶ್ಚರ್ಯವಾಗಬಹುದು. ಆದರೆ Airvida E1 ಇಂಥಹದೊಂದು ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ನೋಡಲು ಸಾಮಾನ್ಯ ಇಯರ್‌ಫೋನ್‌ಗಳಂತಿರುವ ಇವು ಎರ್ ಪ್ಯೂರಿಫೈಯರ್ ಆಗಿ ಕಾರ್ಯ ನಿರ್ವಹಿಸಲಿವೆ . 2015 ರಲ್ಲಿ ಸ್ಥಾಪಿಸಲಾದ IoT ಮತ್ತು ಧರಿಸಬಹುದಾದ ಸಾಧನ ಕಂಪನಿಯಾದ ible ಟೆಕ್‌ನಿಂದ ಈ ನಾವೀನ್ಯತೆ ಬಂದಿದೆ ಮತ್ತು ಇದನ್ನು ಇತ್ತೀಚೆಗೆ CES 2022 ನಲ್ಲಿ ಅನಾವರಣಗೊಳಿಸಲಾಗಿದೆ. ಇದು ಧರಿಸಬಹುದಾದ ಏರ್ ಪ್ಯೂರಿಫೈಯರ್‌ಗಳಲ್ಲಿ ಕಂಪನಿಯ ಹೊಸ ಪ್ರಯೋಗವಾಗಿದ್ದು, ಇದು 2020 ರ CES ಇನ್ನೋವೇಶನ್ ಪ್ರಶಸ್ತಿಯನ್ನು ಸಹ ಗೆದ್ದಿದೆ.
ಕೊರೋನಾ ವೈರಸ್‌ನಿಂದ ರಕ್ಷಣೆ ನೀಡುವ ಇಯರ್‌ಫೋನ್ಸ್
Airvida E1 ಅನ್ನು ಏರ್ ಫಿಲ್ಟರ್ ಮತ್ತು ಇಯರ್‌ಫೋನ್‌ನ ವಿಶ್ವದ ಮೊದಲ ಸಂಯೋಜನೆ ಎಂದು ಹೇಳಲಾಗುತ್ತಿದೆ. ಇದರಲ್ಲಿನ ಏರ್ ಫಿಲ್ಟರ್ ತಂತ್ರಜ್ಞಾನವನ್ನು ಐಬಲ್‌ನ ಬ್ರೀಥಿಂಗ್ ಪಾಥ್‌ವೇ ಇಕೋ ಐಯಾನ್ (Breathing Pathway Eco Ion) ಟೆಕ್ನಾಲಜಿಯಿಂದ ಅಭಿವೃದ್ಧಿಪಡಿಸಲಾಗಿದೆ. ಏರ್‌ವಿಡಾ ಧರಿಸಿದಾಗ ಬಳಕೆದಾರರ ಮುಖದ ಸುತ್ತಲೂ Negative Ionsಗಳನ್ನು ಇದು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳುತ್ತದೆ. ಈ ಅಯಾನುಗಳು ಸುತ್ತಮುತ್ತಲಿನ ವೈರಸ್ ಮತ್ತು ಕಣಗಳಿಗೆ ವೇಗವಾಗಿ ಅಂಟಿಕೊಳ್ಳುತ್ತವೆ, ಅವುಗಳನ್ನು ದೊಡ್ಡ ಮತ್ತು ಭಾರವಾದ ತುಂಡುಗಳಾಗಿ ಪರಿವರ್ತಿಸುತ್ತವೆ, ನಂತರ ಅವು ಉಸಿರಾಟದ ಮೂಲಕ ಧರಿಸಿರುವವರನ್ನು ಪ್ರವೇಶಿಸುವ ಬದಲು ನೆಲಕ್ಕೆ ಬೀಳುತ್ತವೆ.
ಇದನ್ನೂ ಓದಿ: Huawei Smart Glasses: ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು!
Airvida E1 ಬಳಕೆದಾರರ ಮುಖದ ಪ್ರತಿ ಘನ ಸೆಂಟಿಮೀಟರ್ ಸುತ್ತಲು ಪ್ರತಿ 0.6 ಸೆಕೆಂಡಿಗೆ "6 ಮಿಲಿಯನ್ ಋಣಾತ್ಮಕ ಅಯಾನುಗಳನ್ನು" ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ. ತಂತ್ರಜ್ಞಾನವು ಕರೋನವೈರಸ್ ವಿರುದ್ಧ ಮಾತ್ರವಲ್ಲದೆ PM2.5, ಪೋಲೆನ್, ಅಲರ್ಜಿನ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧವೂ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ. ತನ್ನ Airvida ಕುಟುಂಬಕ್ಕೆ ಸೇರಿದ ಉತ್ಪನ್ನಗಳನ್ನು ಬಳಸಿದಾಗ 97 ಪ್ರತಿಶತ ಹೇ ಜ್ವರದಿಂದ ( hay fever) ಬಳಲುತ್ತಿರುವವರು ಶುದ್ಧ ಗಾಳಿಯನ್ನು ಉಸಿರಾಡುವ ಮೂಲಕ ಸುಧಾರಿಸುತ್ತಾರೆ ಎಂದು ible ಹೇಳುತ್ತದೆ.
ಕೇವಲ 42 ಗ್ರಾಂ ತೂಗುವ Airvida E1
Airvida E1 ಅಪ್ಲಿಕೇಶನ್ ಗಾಳಿಯ ಶುದ್ಧೀಕರಣವನ್ನು ಆನ್ ಮಾಡಲು ಅಥವಾ ಅಗತ್ಯವಿದ್ದಾಗ ಋಣಾತ್ಮಕ ಅಯಾನುಗಳ ಮಟ್ಟವನ್ನು ಸರಿಹೊಂದಿಸಲು ಬಳಕೆದಾರರಿಗೆ ನೆನಪಿಸುತ್ತದೆ. Airvida E1 ಕೇವಲ 42 ಗ್ರಾಂ ತೂಗುತ್ತದೆ ಮತ್ತು ಆದ್ದರಿಂದ ಹಲವು ಗಂಟೆಗಳ ಕಾಲ ಧರಿಸಲು ಆರಾಮದಾಯಕವಾಗಿದೆ ಎಂದು ible ಹೇಳುತ್ತದೆ. ಗಾಳಿಯ ಶುದ್ಧೀಕರಣ ಮತ್ತು ಇಯರ್‌ಫೋನ್‌ಗಳು ಕಾರ್ಯನಿರ್ವಹಿಸುತ್ತಿರುವಾಗ ಒಂದೇ ಚಾರ್ಜ್‌ನಲ್ಲಿ ಬ್ಯಾಟರಿ ಬಾಳಿಕೆ 8 ಗಂಟೆಗಳಿಗಿಂತ ಹೆಚ್ಚು ಎಂದು ಕಂಪನಿ ತಿಳಿಸಿದೆ. ಏರ್ ಪ್ಯೂರಿಫೈಯರ್ ಆಗಿ ಮಾತ್ರ ಧರಿಸಿದರೆ, ಅದೇ ಬ್ಯಾಟರಿಯು 30 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: Realme TechLife: Dizo Buds Z Pro ವೈಯರ್‌ಲೆಸ್ ಇಯರ್‌ಫೋನ್, Dizo Watch R ಸ್ಮಾರ್ಟ್‌ವಾಚ್ ಬಿಡುಗಡೆ!
ible ಇನ್ನೂ ಇಯರ್‌ಫೋನ್ ಬಿಡುಗಡೆ ದಿನಾಂಕ ಅಥವಾ ಬೆಲೆ ಮಾಹಿತಿಯನ್ನುಬಹಿರಂಗ ಮಾಡಿಲ್ಲ. ಆದರೆ ಟಾಮ್ಸ್ ಗೈಡ್‌ನ ವರದಿಯು ಸುಮಾರು $200 ಅಥವಾ ರೂ 15,000 ಕ್ಕೆ ರಿಟೇಲ್ ಮಾರಾಟವನ್ನು ನಿರೀಕ್ಷಿಸಬಹದು ಎಂದು ಹೇಳಿದೆ. ಉತ್ಪನ್ನವು ಜಾಗತಿಕ ಮಾರುಕಟ್ಟೆ ಬಿಡುಗಡೆ ನಂತರ ಭಾರತದಲ್ಲಿ ಬಿಡುಗಡೆಯಾಗುವುದು ತಡವಾಗಬಹುದು ಎಂದು ಹೇಳಲಾಗಿದೆ.