Mobile Service cost: ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚು ದುಡ್ಡು ಕೊಡಬೇಕಾ?

By Suvarna NewsFirst Published Jan 6, 2022, 7:25 PM IST
Highlights

*ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು ಈಗಾಗಲೇ ತಮ್ಮ ಪ್ಲ್ಯಾನ್ ದರವನ್ನು ಪರಿಷ್ಕರಿಸಿವೆ
*2022ರಲ್ಲಿ ಈ ಮೊಬೈಲ್ ಕಂಪನಿಗಳು ಆಯ್ದ ನಗರಗಳಲ್ಲಿ 5ಜಿ ಸೇವೆ ಒದಗಿಸಲಿವೆ
*ಈ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರು ಸೇವೆಯನ್ನು ಪಡೆಯಲು ಹೆಚ್ಚಿನ ಬೆಲೆ ನೀಡಬೇಕಾಗಬಹುದು

Tech Desk: ಭಾರತದ (Indian) ಟೆಲಿಕಾಂ (Telecom) ಕ್ಷೇತ್ರವು ಈ ವರ್ಷ ಸಾಕಷ್ಟು ಬೆಳವಣಿಗೆಯನ್ನು ಕಾಣುವ ಸಾಧ್ಯತೆ ಇದೆ. ವಿಶೇಷವಾಗಿ ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು 5ಜಿ ಸೇವೆ (5G Service) ಯನ್ನು ಒದಗಿಸುವ ಬಗ್ಗೆ ಈಗಾಗಲೇ ಹೇಳಿವೆ. ಬಹುಶಃ ಆಯ್ದ ನಗರಗಳಲ್ಲಿ ಈ ವರ್ಷ 5ಜಿ ತರಾಂಗಂತರ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬಹುದು. ಆದರೆ ನಾವು ಚಿಂತಿಗೀಡು ಮಾಡುವ ಸಂಗತಿ ಏನೆಂದರೆ, ಮೊಬೈಲ್ ಬಳಕೆದಾರರ ಜೇಬಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ, ಈಗಾಗಲೇ ಮೊಬೈಲ್ ಸೇವಾ ಪೂರೈಕೆದಾರ ಕಂಪನಿಗಳು ತಮ್ಮ ದರದಲ್ಲಿ ಶೇ.20ರಿಂದ 25ರವರೆಗೂ ಹೆಚ್ಚಿಸಿವೆ. ಜಗತ್ತಿನ ಎರಡನೇ ಅತಿ ದೊಡ್ಡ ಟೆಲಿಕಾಂ ಮಾರುಕಟ್ಟೆ ಎನಿಸಿಕೊಂಡಿರುವ ಭಾರತದಲ್ಲಿ ಮೊಬೈಲ್ ಬಳಕೆದಾರರು ಮತ್ತೊಂದು ಬೆಲೆ ಏರಿಕೆಯನ್ನು ಅನುಭವಿಸಬೇಕಾಗುತ್ತದೆ. ಈ  ಕಂಪನಿಗಳು ಒದಗಿಸಲಿರುವ 5ಜಿ ಸೇವೆ ತುಟ್ಟಿಯಾಗಿರುವುದರಿಂದ ಬಳಕೆದಾರರು ಹೆಚ್ಚಿನ ಹಣವನ್ನು ನೀಡಬೇಕಾದ ಅನಿವಾರ್ಯತೆ ಈ ಹೊಸ ವರ್ಷದಲ್ಲಿ ಸೃಷ್ಟಿಯಾಗಲಿದೆ.

Whatsapp Accounts Ban ಒಂದೇ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ನಿಷೇಧ!    

ಟೆಲಿಕಾಂ ಕಂಪನಿಗಳಿಗೆ 5ಜಿ ಸೇವೆಯು ಡಿಜಿಟಲ್ ಸೇವಾ (Digital Services) ವಿಭಾಗದ ಸೃಜನೆಗೆ ಅನುವು ಮಾಡಿಕೊಡುತ್ತದೆ ಮತ್ತು ಇದು ಭಾರೀ ವೆಚ್ಚದಾಯಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕಂಪನಿಗಳು ಹೆಚ್ಚುವರಿ ವೆಚ್ಚವು ಅವು ಹರಾಜಿನಲ್ಲಿ ಖರೀದಿಸುವ ತರಾಂಗಂತರಗಳಿಗೆ ಸೇರಿದ್ದಾಗಿದೆ. ಈಗಲೂ ವಿಶ್ವದ ಅಗ್ಗದ ಮೊಬೈಲ್ ಡೇಟಾ ಪ್ಲ್ಯಾನ್‌ಗಳನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಹೆಚ್ಚಿನ ಅಂತರದ ಜೊತೆಗೆ ವೆಚ್ಚದ ಒತ್ತಡವು ಟೆಲಿಕಾಂ  ಕಂಪನಿಗಳು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಬೆಲೆ ಏರಿಕೆಯು ಟೆಲಿಕಾಂ ಉದ್ಯಮಕ್ಕೆ ಸಕಾರಾತ್ಮಕ ಬೆಳವಣಿಗೆ

ಟೆಲಿಕಾಂ ಉದ್ಯಮದ ಸಾಲದ ಮಟ್ಟವು ಹೆಚ್ಚಿನ ಮಟ್ಟದಲ್ಲಿಯೇ ಇದೆ. ICRA ಉದ್ಯಮದ ಸಾಲದ ಮಟ್ಟಗಳು 2022 ಮಾರ್ಚ್ 31ಕ್ಕೆ  ಸುಮಾರು ರೂ. 4.7 ಲಕ್ಷ ಕೋಟಿ ರೂ. ಹಾಗೂ  ಅದು ಮಾರ್ಚ್ 31, 2023 ರಂತೆ 4.5 ಲಕ್ಷ ಕೋಟಿಯಾಗಿರಬಹುದು. ಉದ್ಯಮವು 5G ಅನ್ನು ಪ್ಯಾನ್ ಇಂಡಿಯಾದಲ್ಲಿ ಲಭ್ಯವಾಗುವಂತೆ ಮಾಡಲು ಸ್ಪೆಕ್ಟ್ರಮ್‌ಗೆ ಕೈಗೆಟುಕುವ ಬೆಲೆಗೆ ಬೇಡಿಕೆಯಿಡುತ್ತಿದೆ. ಈ ಹಿನ್ನೆಲೆಯಲ್ಲೇ ಇತ್ತೀಚಿನ ಬೆಲೆ ಏರಿಕೆಯು ಟೆಲಿಕಾಂ ಉದ್ಯಮಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿದೆ ಎನ್ನುತ್ತಾರೆ ಈ ವಲಯದ ವಿಶ್ಲೇಷಕರು. ಪ್ರಮುಖ ಕಂಪನಿಗಳಾದ ಏರ್ಟೆಲ್ ಮತ್ತು ಜಿಯೋ  ಬಳಿಕ ಸಾಕಷ್ಟು ಹಣ ಮತ್ತು ಸಾಮರ್ಥ್ಯವಿದೆ. ಆದರೆ, ಸದ್ಯದ ಬೆಲೆ ಏರಿಕೆಯು ವೋಡಾಫೋನ್‌ ಐಡಿಯಾಗೆ ಏನೇನೂ ಸಾಲದು ಎಂಬುದು ಅವರ ಅಭಿಪ್ರಾಯವಾಗಿದೆ.

ದೇಶದಲ್ಲಿ 5ಜಿ ಸೇವೆಯನ್ನು ಒದಗಿಸುವ ಸಂಬಂಧ ಈಗಾಗಲೇ ರಿಲಯನ್ಸ್ ಜಿಯೋ (Reliance Jio), ಭಾರರ್ತಿ ಏರ್ಟೆಲ್ (Bharti Airtel) ಮತ್ತು ವೋಡಾಫೋನ್ ಐಡಿಯಾ (Vodafone Idea) ಕಂಪನಿಗಳು ಈಗಾಗಲೇ 5ಜಿಯನ್ನು ಪ್ರಾಯೋಗಿಕ ಪರೀಕ್ಷೆ ಮಾಡುತ್ತಿವೆ. ಇದಕ್ಕಾಗಿ ಕಂಪನಿಗಳು ಗುರುಗ್ರಾಂ (Gurugram), ಬೆಂಗಳೂರು (Bengaluru), ಕೋಲ್ಕೊತಾ(Kolkata), ಮುಂಬೈ (Mubmai), ಚಂಡೀಗಢ (Chandigarh), ದಿಲ್ಲಿ (Delhi), ಜಾಮನಗರ್ (Jamnagar), ಅಹಮದಾಬಾದ್ (Ahmedabad), ಚೆನ್ನೈ (Chennai), ಹೈದ್ರಾಬಾದ್ (Hyderabad), ಲಖನೌ (Luncknow), ಪುಣೆ (Pune) ಮತ್ತು ಗಾಂಧಿ ನಗರ (Gandhi Nagar)ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಈ ನಗರಗಳಲ್ಲಿ 5ಜಿ ಸೇವೆಯನ್ನು ನೀಡಲಾಗುತ್ತಿದೆ. ಆ ಬಳಿಕ ಇಡೀ ದೇಶಾದ್ಯಂತ 5ಜಿ ಸೇವೆ ದೊರೆಯಲಿದೆ.

Lava Agni 5G: ಹೊಸ ಆಫರ್! Realmeಯ ನಿರ್ದಿಷ್ಟ ಫೋನ್ ಕೊಟ್ಟರೆ ಲಾವಾ ಅಗ್ನಿ 5G ಉಚಿತ!

ಉದ್ಯಮದ ವಿಶ್ಲೇಷಕರ ಪ್ರಕಾರ, ಈಗಾಗಲೇ ಟೆಲಿಕಾಂ ಕಂಪನಿಗಳು ತಮ್ಮ ಪ್ಲ್ಯಾನ್‌ಗಳ ದರದಲ್ಲಿ ಹೆಚ್ಚಳ ಮಾಡಿವೆ. ಜೊತೆಗೆ, ಈ ವರ್ಷವೇ 5ಜಿ ಮೊಬೈಲ್ ಸೇವೆಯನ್ನು ಒದಗಿಸಲು ಮುಂದಾಗಿರುವುದರಿಂದ ಸಹಜವಾಗಿಯೇ ಮೊಬೈಲ್ ಬಳಕೆದಾರರಿಗೆ ಈ ವರ್ಷ ಹೆಚ್ಚಿನ ಹೊರೆಯಾಗಲಿದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

click me!