I&B blocks channels ಭಾರತದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನದ 6 ಸೇರಿದಂತೆ 16 Youtube ಚಾನೆಲ್ ಬ್ಲಾಕ್

By Suvarna News  |  First Published Apr 25, 2022, 7:22 PM IST
  • ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧ ಕುರಿತು ಸುಳ್ಳು ಮಾಹಿತಿ
  • ಭಾರತದ 10, ಪಾಕಿಸ್ತಾನದ ಮೂಲಕ 6 ಯೂಟ್ಯೂಬ್ ಚಾನೆಲ್
  • ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದ ಚಾನೆಲ್

ನವದೆಹಲಿ(ಏ.25): ಭಾರತದ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸೌಹಾರ್ಧತೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಅನ್ನೋದನ್ನು ಕೇಂದ್ರ ಮತ್ತೊಮ್ಮೆ ಸಾಬೀತು ಪಡಿಸಿದೆ. ಭಾರತದಲ್ಲಿ ಭಯದ ವಾತಾವರಣ ಸೃಷ್ಟಿಸುವ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತಿದ್ದ 16 ಯೂಟ್ಯೂಬ್ ಚಾನೆಲಲ್‌ಗಳನ್ನು ಇದೀಗ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿಷೇಧಿಸಿದೆ.

2021ರ ಐಟಿ ನಿಯಮ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ತಪ್ಪು ಮಾಹಿತಿ ಹರಡುತ್ತಿದ್ದ ಪಾಕಿಸ್ತಾನದ ಮೂಲಕ 6 ಹಾಗೂ ಭಾರತದ 10 ಯೂಟ್ಯೂಬ್ ಚಾನೆಲ್ ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದೆ. ಈ ಒಟ್ಟು ಚಾನೆಲ್‌ಗಳ ವೀಕ್ಷರ ಸಂಖ್ಯೆ ಬರೋಬ್ಬರಿ 68 ಕೋಟಿಗೂ ಹೆಚ್ಚು.

Tap to resize

Latest Videos

undefined

ಸುಳ್ಳು ಹರಡುತ್ತಿದ್ದ ಭಾರತದ 18, ಪಾಕಿಸ್ತಾನದ 4 YouTube ಚಾನೆಲ್ ಬ್ಲಾಕ್!

ಭಾರತದ ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ನೀತಿ, ಕೋಮು ಸಂಘರ್ಷಕ್ಕೆ ಪ್ರಚೋದನೆ, ಸಾರ್ವಜನಿಕ ಸುವ್ಯವಸ್ಥೆ ಕುರಿತು ವಿಚಾರಗಳನ್ನು ಮಂದಿಟ್ಟು ಸುಳ್ಳು ಮಾಹಿತಿ ಹರಡುತ್ತಿತ್ತು. ಈ ಚಾನೆಲ್‌ಗಳ ಮೇಲೆ ನಿಗಾ ವಹಿಸಿದ್ದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಕ್ರಮ ಕೈಗೊಂಡಿದೆ. 2021ರ ಐಟಿ ನಿಯಮದ 18ನೇ ಕಲಂ ಆಡಿ ಈ ಕ್ರಮ ತೆಗೆದುಕೊಂಡಿದೆ. ಸುಳ್ಳು ಮಾಹಿತಿ ಹರಡುವುದರ ಜೊತೆಗೆ ಈ ಯೂಟ್ಯೂಬ್ ಚಾನೆಲ್ ನಿಖರ ಮಾಹಿತಿಗಳನ್ನು ಒದಗಿಸಿಲ್ಲ ಎಂದು I&B ಸಚಿವಾಲಯ ಹೇಳಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು  ಭಾರತದ ಯೂಟ್ಯೂಬ್ ಚಾನೆಲ್ ಸೇರಿದಂತೆ ಡಿಟಲ್ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಈ ತಿಂಗಳ ಆರಂಭದಲ್ಲೂ ಕೇಂದ್ರ ಸರ್ಕಾರ ಪಾಕಿಸ್ತಾನ ಹಾಗೂ ಭಾರತದ 22 ಯೂಟ್ಯೂಬ್ ಚಾನೆಲ್ ನಿಷೇಧಿಸಿತ್ತು.

ಭಾರತ,ಪಾಕ್‌ನ 22 ಯೂಟ್ಯೂಬ್‌ ಚಾನೆಲ್‌ಗೆ ಕೇಂದ್ರ ನಿಷೇಧ
ಸುಳ್ಳು ಸುದ್ದಿ ಪ್ರಸಾರ ಹಾಗೂ ದೇಶ ವಿರೋಧಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ಭಾರತದ 18 ಹಾಗೂ ಪಾಕಿಸ್ತಾನದ 4 ಯೂಟ್ಯೂಬ್‌ ಚಾನೆಲ್‌ಗಳ ಮೇಲೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿರ್ಬಂಧ ಹೇರಿದೆ. ಈ ಯೂಟ್ಯೂಬ್‌ ಚಾನೆಲ್‌ಗಳು ಜನಪ್ರಿಯ ಟೀವಿ ಚ್ಯಾನೆಲ್‌ಗಳ ಲೋಗೊ ಬಳಸಿ ಭಾರತದ ಸೇನೆ, ಜಮ್ಮು ಮತ್ತು ಕಾಶ್ಮೀರ ಸಂಬಂಧಿತ ಸುಳ್ಳುಸುದ್ದಿ ಪ್ರಸಾರ ಮಾಡುತ್ತಿದ್ದವು. ಅಲ್ಲದೇ ಉಕ್ರೇನಿನ ಬಿಕ್ಕಟ್ಟಿನ ವಿಚಾರವಾಗಿ ಸುಳ್ಳುಸುದ್ದಿಯನ್ನು ಹಬ್ಬಿ ವಿದೇಶಗಳ ಜೊತೆಗೆ ದೇಶದ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದವು. ಪಾಕಿಸ್ತಾನದಿಂದ ನಿರ್ವಹಿಸಲ್ಪಡುವ ಚ್ಯಾನೆಲ್‌ಗಳು ಹಲವಾರು ಬಾರಿ ಭಾರತ ವಿರೋಧಿ ವಿಚಾರಗಳನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಿದ್ದವು. ಈ ಹಿನ್ನೆಲೆಯಲ್ಲಿ ಇವಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

2021ರ ಡಿಸೆಂಬರ್ ತಿಂಗಳಲ್ಲಿ ಪಾಕ್‌ನ 20 ಹಾಗೂ 2 ವೆಬ್ ಸೈಟ್ ನಿಷೇಧ
ಭಾರತೀಯ ಸೇನೆ, ಅಯೋಧ್ಯೆ ರಾಮಮಂದಿರ, ಕಾಶ್ಮೀರ, ಭಾರತದಲ್ಲಿನ ಅಲ್ಪಸಂಖ್ಯಾತರು, ಜ.ಬಿಪಿನ್‌ ರಾವತ್‌ ವಿಷಯದಲ್ಲಿ ಸತತವಾಗಿ ಸುಳ್ಳು ಸುದ್ದಿ ಮತ್ತು ಭಾರತ ವಿರೋಧಿ ಸುದ್ದಿ ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನ ಮೂಲದ 20 ಯೂಟ್ಯೂಬ್‌ ಚಾನೆಲ್‌ ಮತ್ತು 2 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ಬಂದ್‌ ಮಾಡಿಸಿದೆ.ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ‘ದ ನಯಾ ಪಾಕಿಸ್ತಾನ್‌ ಗ್ರೂಪ್‌’ ಈ ಟ್ಯೂಬ್‌ ಚಾನೆಲ್‌ ಮತ್ತು ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿತ್ತು. ಈ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿ ನಿಜ ಎಂದು ಜನರನ್ನು ನಂಬಿಸಲು, ಪಾಕ್‌ ಸುದ್ದಿವಾಹಿನಿಗಳ ಪ್ರಮುಖ ಆ್ಯಂಕರ್‌ಗಳನ್ನೇ ಬಳಸಿಕೊಂಡು ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಹೀಗಾಗಿ ಸಾಕಷ್ಟುಜನಪ್ರಿಯವಾಗಿದ್ದ ಈ ಚಾನೆಲ್‌ಗಳು 35 ಲಕ್ಷಕ್ಕೂ ಸಬ್‌ಸ್ಕೈಬ್ರರ್‌ಗಳನ್ನು ಹೊಂದಿದ್ದು, 55 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿವೆ.

click me!