ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

Suvarna News   | Asianet News
Published : Nov 26, 2020, 05:03 PM IST
ವಾಟ್ಸಾಪಿನಲ್ಲಿ Disappearing Messages ಸಕ್ರಿಯಗೊಳಿಸುವುದು ಹೇಗೆ?

ಸಾರಾಂಶ

ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗೆ ನೆರವಾಗುವ ರೀತಿಯಲ್ಲಿ ಅನೇಕ ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ, ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್ ಮೆಸೆಜಸ್ ಎಂಬ ಹೊಸ ಆಯ್ಕೆ ಅಳವಡಿಸಿದೆ. ಇದರಿಂದಾಗಿ ಸ್ವಯಂ ಆಗಿ ಸಂದೇಶಗಳು ನಿಗದಿತ ಸಮಯದ ಬಳಿಕ ಅಳಸಿ ಹೋಗಲಿವೆ.  

ಇತ್ತೀಚೆಗಷ್ಟೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ನೆರವಾಗುವ ಡಿಸ್ಅಪಿಯರಿಂಗ್ ಮೆಸೆಜಸ್ ಎಂಬ ಆಪ್ಷನ್‌ನನ್ನು ಆರಂಭಿಸಿದೆ. ಈ ಫೀಚರ್‌ಗೆ ಬಳಕೆದಾರರಿಂದ ಬಹುದಿನಗಳಿಂದಲೂ ಬೇಡಿಕೆ ಇತ್ತು. ಕೊನೆಗೂ ಆ ಫೀಚರ್ ಅನ್ನು ವಾಟ್ಸಾಪ್‌ ತಂದಿದೆ. 

ಒಂದೊಮ್ಮೆ ನೀವು ಈ ಡಿಸ್‌ಅಪಿಯರಿಂಗ್ ಮೆಸೆಸಜಸ್ ಆಯ್ಕೆಯನ್ನು ಸಕ್ರಿಯಗೊಳಿಸಿಕೊಂಡರೆ ಸ್ವಯಂ ಆಗಿ ಸಂದೇಶಗಳು ಕಣ್ಮರೆಯಾಗಲಿವೆ. ಈ ಹೊಸ ಫೀಚರ್ ಅನ್ನು ಇತ್ತೀಚೆಗಷ್ಟೇ ಕಂಪನಿ ಭಾರತೀಯ ಬಳಕೆದಾರರಿಗೂ ರಿಲೀಸ್ ಮಾಡಿದೆ. ಈ ಫೀಚರ್ ವೈಯಕ್ತಿಕವಾಗಿ ಮತ್ತು ಗ್ರೂಪ್ ಚಾಟ್‌ಗಳಿಗೂ ಸಕ್ರಿಯಗೊಳಿಸಬಹುದು. ಹೀಗಿದ್ದಾಗ್ಯೂ, ಗ್ರೂಪ್ ಚಾಟ್‌ಗಳಲ್ಲಿ ಈ ಡಿಸ್‌ಅಪಿಯರಿಂಗ್ ಮೆಸೆಜ್ ಆಯ್ಕೆಯನ್ನು ಎಲ್ಲರೂ ಸಕ್ರಿಯಗೊಳಿಸಲು ಬರುವುದಿಲ್ಲ. ಬದಲಿಗೆ ಗ್ರೂಪ್ ಅಡ್ಮಿನ್ ಮಾತ್ರ ಈ ಕಾರ್ಯವನ್ನು ಮಾಡಬಹುದಾಗಿದೆ. 

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?

ವಾಟ್ಸಾಪ್‌ನ ಈ ಹೊಸ ಫೀಚರ್, ಆಂಡ್ರಾಯ್ಡ್, ಐಒಎಸ್, ಲಿನಕ್ಸ್ ಆಧರಿತ ಕೈಒಎಸ್ ಸೇರಿದಂತೆ ಎಲ್ಲ ಆಪರೇಟಿಂಗ್ ಸಾಫ್ಟ್‌ವೇರ್ ಸಾಧನಗಳಿಗೆ ಸಪೋರ್ಟ್ ಮಾಡುತ್ತದೆ. ಜೊತೆಗೆ, ಡೆಸ್ಕ್‌ಟಾಪ್, ವಾಟ್ಸಾಪ್ ವೆಬ್‌ಗೂ ಇದು ಬೆಂಬಲಿಸುತ್ತದೆ. ಅಲ್ಲಿಯೂ ಬಳಕೆದಾರರು ಈ ಆಯ್ಕೆಯನ್ನು ಸಕ್ರಿಯಗೊಳಿಸಿಬಹುದು.

ಒಮ್ಮೆ ನೀವು ಈ ಡಿಸ್‌ಅಪಿಯರಿಂಗ್ ಆಯನ್ನು ಸಕ್ರಿಯಗೊಳಿಸದರೆ, ಆಟೋಮ್ಯಾಟಿಕ್ ಆಗಿ ಏಳು ದಿನದಲ್ಲಿ ಫೋಟೋಗಳು ಮತ್ತು ವಿಡಿಯೋಗಳು ಅಳಿಸಿಹೋಗಲಿವೆ. ಸಂದೇಶಗಳು ಎರಡೂ ಪಕ್ಷದವರಿಗೂ ಕಣ್ಮರೆಯಾಗಲಿವೆ. ಹಾಗಿದ್ದೂ ನಿಮಗೆ ಅಗತ್ಯವಾಗಿದ್ದರೆ ಸಂದೇಶಗಳ ಸ್ಕ್ರೀನ್ ಶಾಟ್ ಅಥವಾ  ಅವು ಸ್ವಯ ಆಗಿ ಡಿಲಿಟ್ ಆಗುವ ಮೂದಲೇ ಕಾಪಿ ಮಾಡಿಟ್ಟುಕೊಳ್ಳಬೇಕು ಅಥವಾ ಆಟೋ ಡೌನ್‌ಲೋಡ್ ಆಪ್ಷನ್ ಮೂಲಕ ಫೋಟೋಗಳು, ವಿಡಿಯೋಗಳನ್ನು ನೇರವಾಗಿ ಸೇವ್ ಮಾಡಿಟ್ಟುಕೊಳ್ಳಬಹುದು. ಆಟೋ ಡೌನ್‌ಲೋಡ್ ಆಪ್ಷನ್ ಆಯ್ಕೆ ಮಾಡಿಕೊಳ್ಳಲು ನೀವು ವಾಟ್ಸಾಪ್ ಸೆಟ್ಟಿಂಗ್ಸ್ ಹೋಗಿ. ಬಳಿಕ ಡೇಟಾ ಮತ್ತು ಸ್ಟೋರೇಜ್ ಯುಸೇಜ್ ಹೋಗಿ ಅಲ್ಲಿ ಈ ಆಯ್ಕೆಯನ್ನು ಸಕ್ರಿಯಗೊಳಿಸಬಹುದು. 

ಒಂದು ವೇಳೆ ಬಳಕೆದಾರರು ಏಳು ದಿನಗಳವರೆಗೂ ವಾಟ್ಸಾಪ್ ಅನ್ನು ತೆರೆಯದಿದ್ದರೆ ಸಂದೇಶಗಳು ತನ್ನಿಂದತಾನೇ ಅಳಿಸಿ ಹೋಗುತ್ತವೆ. ಹೀಗಿದ್ದಾಗ್ಯೂ, ವಾಟ್ಸಾಪ್ ಓಪನ್ ಆಗೋವರೆಗೂ ನೋಟಿಫಿಕೇಷನ್ ಸೆಕ್ಷನ್‌ನಲ್ಲಿ ಸಂದೇಶದ ಪ್ರಿವ್ಯೂ ಕಾಣುತ್ತಲೇ ಇರುತ್ತದೆ. 

ವಾಟ್ಸಾಪ್‌ನಲ್ಲಿ ಮೆಸೆಜಸ್ ಡಿಸ್‌ಅಪಿಯರಿಂಗ್  ಸಕ್ರಿಯಗೊಳಿಸುವುದು ಹೇಗೆ?
ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನದಲ್ಲಿ ನಿಮ್ಮ ವಾಟ್ಸ್‌ಆಪ್ ಚಾಟ್ ಓಪನ್ ಮಾಡಿ. ಹೆಸರಿನ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಕಾಂಟಾಕ್ಟ್ಸ್ ಮಾಹಿತಿ ಜೊತೆಗೆ, ಎನ್‌ಕ್ರಿಪ್ಷನ್‌ನ  ಬಲಬದಿಯ ಮೇಲ್ಗಡೆ ಸಂದೇಶ ಕಣ್ಮರೆ ಮಾಡುವ(ಡಿಸ್‌ಅಪಿಯರಿಂಗ್) ಆಯ್ಕೆ ಕಾಣುತ್ತದೆ. ಡಿಫಾಲ್ಟ್ ಆಗಿ ಆಫ್‌ ಮೋಡ್‌ನಲ್ಲಿರುತ್ತದೆ. ಅದನ್ನು ಆನ್ ಮಾಡುವ ಮೂಲಕ ಸಕ್ರಿಯಗೊಳಿಸಬಹುದು.

ಡಿಸ್‌ಅಪಿಯರಿಂಗ್ ಆಯ್ಕೆಯನ್ನು ಹೇಗೆ ಸ್ವಿಚ್ ಆಫ್ ಮಾಡುವುದು?
ವಾಟ್ಸಾಪ್ ಚಾಟ್ ಓಪನ್ ಮಾಡಿ. ಕಾಂಟಾಕ್ಟ್ ಮೇಲೆ ಟ್ಯಾಪ್ ಮಾಡಿ ಬಳಿಕ ಡಿಸ್‌ಅಪಿಯರಿಂಗ್ ಮೆಸೆಜ್‌ ಆಯ್ಕೆ ಮೇಲೆ ಮತ್ತೆ ಟ್ಯಾಪ್ ಮಾಡಿ. ಆಗ ನೀವು ಆಫ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು. ಹೀಗೆ ಮಾಡುವುದರ ಮೂಲಕ ಡಿಸ್‌ಅಪಿಯರಿಂಗ್ ಮೆಸೆಜ್ ಆಯ್ಕೆನ್ನು ಆಫ್ ಮಾಡಬಹುದು.

PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?

KaiOSನಲ್ಲಿ ಹೇಗೆ ಸಕ್ರಿಯಗೊಳಿಸುವುದು?
ವಾಟ್ಸಾಪ್ ಚಾಟ್ ಓಪನ್ ಮಾಡಿ. ಕಾಂಟಾಕ್ಟ್ ಆಪ್ಷನ್ ಮೆಲೆ ಒತ್ತಿ ಓಕೆ ಮಾಡಿ. ಬಳಿಕ ಡಿಸ್‌ಅಪಿಯರಿಂಗ್ ಮೆಸೆಜಸ್  ಆಯ್ಕೆ ಮಾಡಿ ಮತ್ತು ಎಡಿಟ್ ಮೇಲೆ ಪ್ರೆಸ್ ಮಾಡಿ. ಆ ಬಳಿಕ ನೆಕ್ಸ್ಟ್ ಮೇಲೆ ಪ್ರೆಸ್ ಮಾಡಿ. ಆ ಬಳಿಕ ನೀವು ಆನ್ ಸೆಲೆಕ್ಟ್ ಮಡಿಕೊಳ್ಳಬೇಕು ಮತ್ತು ಓಕೆ ಮೇಲೆ ಪ್ರೆಸ್ ಮಾಡಬೇಕು. 

ಇತ್ತೀಚೆಗೆ ವಾಟ್ಸಾಪ್ ಶಾಪಿಂಗ್  ಬಟನ್ ಕೂಡ ಪರಿಚಯಿಸಿದೆ. ಕಂಪನಿಗಳು ಒದಗಿಸುವ ವಸ್ತುಗಳು ಮತ್ತು ಸೇವೆಗಳ ಬಗ್ಗೆ ತಿಳಿದುಕೊಳ್ಳಲು,  ಬಿಸಿನೆಸ್ ಕ್ಯಾಟಲಾಗ್ ಶೋಧಿಸಲು ಇದು ಸಹಾಯ ಮಾಡುತ್ತದೆ. ಈ ಮೊದಲು ಬಳಕೆದಾರರು ಬಿಸಿನೆಸ್ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದಾಗ ಮಾತ್ರ ಬಿಸಿನೆಸ್ ಕ್ಯಾಟಲಾಗ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತು. ಈ ಹೊಸ ಬಟನ್ ಜಗತ್ತಿನ ಎಲ್ಲ ಬಳಕೆದಾರರಿಗೂ ಲಭ್ಯವಾಗಿದ್ದು, ಅದು ವಾಟ್ಸ್ ಕಾಲ್ ಬಟನ್‌ನನ್ನು ರಿಪ್ಲೇಸ್ ಮಾಡಲಿದೆ. 

OnePlus Education Benefits: ಫೋನ್, ಟಿವಿ ಖರೀದಿಸಿದರೆ ಸಾವಿರ ರೂ. ಆಫರ್

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?