ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?

By Suvarna News  |  First Published Jun 28, 2021, 5:11 PM IST

ಜೆಪಿಜಿಯಿಂದ ಪಿಡಿಎಫ್, ವರ್ಡ್‌ನಿಂದ ಪಿಡಿಎಫ್‌ಗೆ ಕನ್ವರ್ಟ್ ಮಾಡುವ ಅಗತ್ಯಗಳು ನಮಗೆ ಆಗಾಗ ಎದುರಾಗುತ್ತವೆ. ಆದರೆ, ಬಹಳಷ್ಟು ಜನರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಲ್ಲಿ ಈ ಕನ್ವರ್ಟ್ ಪ್ರಕ್ರಿಯೆ ತುಂಬ ಸುಲಭವೂ ಹೌದು. ಇದಕ್ಕಾಗಿ ಹಲವು ಆಪ್‌ಗಳು ಕೂಡ ಇವೆ. 


ಕೊರೊನಾ ಹಿನ್ನೆಲೆಯಲ್ಲಿ ಈಗ ಆನ್‌ಲೈನ್ ಕ್ಲಾಸುಗಳದ್ದೇ  ಭರಾಟೆ. ಎಲ್ಲವೂ ಆನ್‌ಲೈನ್‌ಮಯವಾಗಿದೆ. ಶಿಕ್ಷಕರು ಮಕ್ಕಳಿಗೆ ಹೋಮ್‌ವರ್ಕ್ ನೀಡುತ್ತಾರೆ. ಅದು ಜೆಪಿಜಿ ಇಲ್ಲವೇ ವರ್ಡ್ ರೂದಲ್ಲಿರುತ್ತದೆ. ಅಥವಾ ಮಕ್ಕಳು ಮಾಡಿದ ಹೋಮ್‌ವರ್ಕ್ ಅನ್ನು ಪಿಡಿಎಫ್ ರೂಪದಲ್ಲಿ ಕಳುಹಿಸುವಂತೆ ಕೇಳುತ್ತಾರೆ. ಆದರೆ, ಪೋಷಕರಿಗೆ ಈ ಬಗ್ಗೆ ಗೊತ್ತಿಲ್ಲದಿದ್ದರೆ ಪೇಚಾಡುವ ಸಂದರ್ಭ ಎದುರಾಗುತ್ತದೆ.

ಸಾಮಾನ್ಯವಾಗಿ ಜಿಪಿಜಿಯನ್ನು ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು, ಪಿಡಿಎಫ್ ಫೈಲ್ ಅನ್ನು ವರ್ಡ್ಸ್‌ಗೆ ಕನ್ವರ್ಟ್ ಮಾಡುವುದು ಬಹಳಷ್ಟು ಜನರಿಗೆ ಗೊತ್ತಿರುತ್ತದೆ. ಹಾಗಿದ್ದೂ, ಸುಮಾರು ಜನರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಈ ಕನ್ವರ್ಟ್‌ಗಳನ್ನು ತುಂಬಾ ಸುಲಭವಾಗಿ ಮಾಡಬಹುದು. 

Latest Videos

undefined

ಜೆಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೀಗೆ...
hipdf.com ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ಇಮೇಜ್ ಟು ಪಿಡಿಎಫ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಬಳಿಕ ಮುಂದಿನ ಸ್ಕ್ರೀನ್‌ನಲ್ಲಿ ಜೆಪಿಜಿ ಟು ಪಿಡಿಎಫ್  ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ, Choose File ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಬಳಿಕ ನೀವು ಆಯ್ಕೆ ಮಾಡಿದ ಫೈಲ್ ಅಪ್‌ಲೋಡ್ ಆದ ಬಳಿಕ Convert ಬಟನ್ ಒತ್ತಿ. ಕನ್ವರ್ಟ್ ಪ್ರಕ್ರಿಯೆ ಪೂರ್ತಿಯಾದ ಬಳಿಕ ಡೌನ್‌ಲೋಡ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಜಿಪಿಜಿ ಫೈಲ್ ಪಿಡಿಎಫ್‌ಗೆ ಕನ್ವರ್ಟ್ ಆಗಿ ದೊರೆಯುತ್ತದೆ.

ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್

ಆಂಡ್ರಾಯ್ಡ್ ಫೋನ್‌ಗಳಲ್ಲಿ ಪಿಡಿಎಫ್‌ಗೆ ಕನ್ವರ್ಟ್ ಮಾಡುವುದು ಹೇಗೆ?
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಪಿಡಿಎಫ್ ಕನ್ವರ್ಟರ್ ಡೌನ್‌ಲೋಡ್ ಮಾಡಿಕೊಳ್ಳಿ. ಈ ಆಪ್ ಇನ್‌ಸ್ಟಾಲ್ ಆದ ಮೇಲೆ, ಅದನ್ನು ಓಪನ್ ಮಾಡಿ. ಮೇನ್‌ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಬಳಿಕ, ನಿಮಗೆ ಕನ್ವರ್ಟ್ ಮಾಡಬೇಕಿರುವ ಜೆಪಿಜಿ ಫೈಲ್ ಸೆಲೆಕ್ಟ್ ಮಾಡಿ.

ನಿಮ್ಮ ಆಯ್ಕೆಯನ್ನು ಪೂರ್ತಿಗೊಳಿಸಿದ ಬಳಿಕ, ಮೇಲ್ತುದಿಯ ಬಲಭಾಗದಲ್ಲಿರುವ ಪಿಡಿಎಫ್ ಐಕಾನ್ ಮೇಲೆ ಟ್ಯಾಪ್ ಮಾಡಿ ಬಳಿಕ ಪಿಡಿಎಫ್ ಡಿಟೇಲ್ಸ್ ನೀಡಿ, ಓಕೆ ಮೇಲೆ ಟ್ಯಾಪ್ ಮಾಡಿ. ಇಷ್ಟಾದ ಬಳಿಕ ಪಿಡಿಎಫ್ ಫೈಲ್ ನಿಮ್ಮ ಫೋನ್‌ನಲ್ಲಿ ಸೇವ್ ಆಗುತ್ತದೆ. 

ವರ್ಡ್ ಅನ್ನು ಪಿಡಿಎಫ್ ಕನ್ವರ್ಟ್ ಮಾಡುವುದು ಹೀಗೆ...
ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಮೈಕ್ರೋಸಾಫ್ಟ್ ವರ್ಡ್ ಇದ್ದರೆ, ಈ ಪ್ರಕ್ರಿಯೆ ತುಂಬ ಸುಲಭವಾಗಿರುತ್ತದೆ. ನೀವು ವರ್ಡ್ಸ್ ಫೈಲ್ ಅನ್ನು ಇನ್ನು ಈಸೀ ಆಗಿ ಪಿಡಿಎಫ್ ಆಗಿ ಕನ್ವರ್ಟ್ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ: 

ರಿಯಲ್‌ಮಿ ಸಿ11 ಸ್ಮಾರ್ಟ್‌ಫೋನ್ ಬಿಡುಗಡೆ, ಬೆಲೆ ಕೇವಲ 6,999 ರೂ.

ನಿಮಗೆ ಯಾವ ವರ್ಡ್ ಫೈಲ್ ಅನ್ನು ಪಿಡಿಎಫ್‌ಗೆ ಕನ್ವರ್ಟ್ ಮಾಡಬೇಕಿದೆಯೋ ಆ ಫೈಲ್ ಅನ್ನು ಓಪನ್ ಮಾಡಿ. ಬಳಿಕ ಆ ಫೈಲ್‌ನಲ್ಲಿರುವ ಫೈಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಆಗ ಕಾಣಿಸಿಕೊಳ್ಳುವ ಪಟ್ಟಿಯಲ್ಲಿರುವ Save As ಸೆಲೆಕ್ಟ್ ಮಾಡಿ. ಸೇವ್ ಸ್ಕ್ರೀನ್ ಮೇಲೆ ಪಿಡಿಎಫ್ ಫೈಲ್ ಅನ್ನು ಎಲ್ಲಿ ಸೇವ್ ಮಾಡಬೇಕಿದೆಯೋ ಆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ, ಆನ್‌ಡ್ರೈವ್, ದಿಸ್ ಪಿ.ಸಿ., ಅಥವಾ ನಿರ್ದಿಷ್ಟ ಫೋಲ್ಡರ್ ಇತ್ಯಾದಿ. 

ಇಷ್ಟಾದ  ಬಳಿಕ ಮುಂದೆ, Save as type ಬಾಕ್ಸ್‌ನ ಬಲಭಾಗದಲ್ಲಿರುವ ಡ್ರಾಪ್‌ಡೌನ್ ಬಾಣ(ಆರೋ)ವನ್ನು ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್ ಮೆನುವಿನಿಂದ “ಪಿಡಿಎಫ್ (* .ಪಿಡಿಎಫ್)” ಆಯ್ಕೆಮಾಡಿ. ಇಷ್ಟು ಪ್ರಕ್ರಿಯೆಗೊಳಿಸಿದರೆ ನಿಮಗೆ ವರ್ಡ್ ಫೈಲ್ ಪಿಡಿಎಫ್ ರೂಪದಲ್ಲಿ ದೊರೆಯುತ್ತದೆ.

ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಫೈಲ್ ಅನ್ನು ಇನ್ನೊಂದು ರೀತಿಯ ಫಾರ್ಮಾಟ್‌ಗೆ ಕನ್ವರ್ಟ್ ಮಾಡಲು ಸಾಧ್ಯವಿದೆ. ಇದಕ್ಕಾಗಿಯೇ ಹಲವು ಆಪ್‌ಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಆನ್‌ಲೈನ್ ಕನ್ವರ್ಟ್ ಮಾಡುವುದು ತುಂಬ ಸುಲಭವು ಆಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

click me!