ಅನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಗೆ ಖನ್ನ ಹಾಕಿ ಸದ್ದಿಲ್ಲದೆ ಹಣ ವರ್ಗಾವಣೆ ಪ್ರಕರಣಗಳು ನಡೆಯುತ್ತಿದೆ. ಈ ವಂಚನೆಯಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಕ್ಯೂರಿಟಿ ವಿಭಾಗ ಸರಳ ಸೂತ್ರ ನೀಡಿದೆ.
ನವದೆಹಲಿ(ಆ.30): ಭಾರತದಲ್ಲೀಗ ಬಹುತೇಕ ಬ್ಯಾಕಿಂಗ್ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಹಣ ವರ್ಗಾವಣೆ, ಸ್ವೀಕರಣೆ, ವಿಮೆ, ಕಂತು, ಬಿಲ್ ಪಾವತಿ ಸೇರಿದಂತೆ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯತ್ತಿದೆ. ಅದರಲ್ಲೂ ಮೊಬೈಲ್ ಮೂಲಕವೇ ಶೇಕಡಾ 90 ರಷ್ಟು ಬ್ಯಾಂಕಿಂಗ್ ವ್ಯವಹಾರ ನಡೆಯುತ್ತದೆ. ಆನ್‌ಲೈನ್ ವ್ಯವಹಾರ ಹೆಚ್ಚಾದಂತೆ ವಂಚನೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಆನ್‌ಲೈನ್ ವಂಚಕರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಡಲು ಕೇಂದ್ರ ಗೃಹ ಸಚಿವಾಲದಯ ಸೈಬರ್ ಸೆಕ್ಯೂರಿಟಿ ವಿಭಾಗ ಸರಳ ಸೂತ್ರ ನೀಡಿದೆ
Google Pay ನಲ್ಲಿ ಹೊಸ ಫೀಚರ್ಸ್: ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ!..
ಸಾಮಾನ್ಯವಾಗಿ ಬ್ಯಾಂಕಿಂಗ್ ವ್ಯವಹಾರಗಳು ಮೊಬೈಲ್‌ನಲ್ಲಿ ನಡೆಯುತ್ತಿದೆ. ಇದು ಕೂಡ ಅಪಾಯಕಾರಿಯಾಗಿದೆ. ಆನ್‌ಲೈನ್ ವಂಚಕರಿಂದ ಬ್ಯಾಂಕ್ ಖಾತೆ ಸುರಕ್ಷತವಾಗಿಡಲು ಎರಡು ಇ ಮೇಲ್ ಖಾತೆ ತೆರೆಯಬೇಕು. ಒಂದು ಇ-ಮೇಲ್ ಐಡಿಯನ್ನು ಕೇವಲ ಬ್ಯಾಂಕಿಂಗ್ ವ್ಯವಾಹರಕ್ಕೆ ನೀಡಬೇಕು. ಮತ್ತೊಂದು ಇ-ಮೇಲ್ ಐಡಿಯನ್ನು ಇತರ ವ್ಯವಹಾರಗಳಿಗೆ ನೀಡಬೇಕು ಇದರಿಂದ ಬಹುತೇಕ ಆನ್‌ಲೈನ್ ವಂಚನೆಯಿಂದ ದೂರವಿರಬಹುದು ಎಂದು ಸೈಬರ್ ಸೆಕ್ಯೂರಿಟಿ ಸೆಲ್ ಹೇಳಿದೆ.
ದೇಶೀಯ ಮೈಕ್ರೋಚಿಪ್ ಬಳಸಿ 4 ಕೋಟಿ ರೂ. ಬಹುಮಾನ ಗೆಲ್ಲಿ!
ಸಾಮಾನ್ಯವಾಗಿ ಒಂದು ಮುಖ್ಯ ಇ ಮೇಲ್ ಐಡಿ ಮೂಲಕ ಎಲ್ಲಾ ವ್ಯವಹಾರಗಳು ನಡೆಯುತ್ತದೆ. ಬ್ಯಾಂಕಿಂಗ್ ವ್ಯವಹಾರ, ಸಾಮಾಜಿಕ ಜಾಲತಾಣದ ಖಾತೆ, ಸಂವಹನ, ಕಚೇರಿ ಕೆಲಸ ಸೇರಿದಂತೆ ಒಂದು ಇ-ಮೇಲ್ ಐಡಿ ಮೂಲಕ ನಡೆಯುತ್ತದೆ. ಸಾಮಾಜಿಕ ಜಾಲತಾಣ, ಕಚೇರಿ ಕೆಲಸ, ಸೇರಿದಂತ ಸಂವಹನಕ್ಕಾಗಿ ಬಳಸುವ ಇ ಮೇಲ್ ಐಡಿಗೆ ನಮಗೆ ಪರಿಚಯವಿಲ್ಲದವರಿಗೂ ಸುಲಭವಾಗಿ ಸಿಗಲಿದೆ, ಆನ್ ಲೈನ್ ವಂಚಕರೂ ಇ ಮೇಲ್ ಪಡೆದುಕೊಂಡು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ.
ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ರತ್ಯೇಕವಾಗಿ ಇ ಮೇಲ್ ಐಡಿಯನ್ನು ಬಳಸಬೇಕು ಎಂದು ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಕ್ಯೂರಿಟಿ ವಿಂಗ್ ಹೇಳಿದೆ.