ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ದೈತ್ಯ ಕಂಪನಿ ತನ್ನ ನೆರವಿನ ಹಸ್ತ ಚಾಚಿದೆ. ಕಂಪನಿಯು ಗೂಗಲ್ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿದ್ದು, ಇದರ ಅನ್ವಯ ಬಳಕೆದಾರರು ಆಸ್ಪತ್ರೆಗಳಲ್ಲಿ ಲಭ್ಯತೆ ಇರುವ ಬೆಡ್ ಮತ್ತು ಮೆಡಿಕಲ್ ಆಕ್ಸಿಜನ್ ಲೊಕೇಷನ್‌ಗಳನ್ನು ಕಂಡುಕೊಳ್ಳಬಹುದಾಗಿದೆ. ಜೊತೆಗೆ, ವಾಕ್ಸಿನೇಷನ್ ಸೆಂಟರ್‌ಗಳನ್ನು ಶೋಧಿಸಬಹುದಾಗಿದೆ.
ಕೊರೊನಾ ಹೊಡೆತಕ್ಕೆ ಸಿಲುಕಿರುವ ಭಾರತಕ್ಕೆ ಹಲವು ರಾಷ್ಟ್ರಗಳು, ಕಂಪನಿಗಳು ನೆರವು ನೀಡುತ್ತಿವೆ. ಈ ಸಾಲಿನಲ್ಲಿ ಇಂಟರ್ನೆಟ್ ದೈತ್ಯ ಗೂಗಲ್ ಕೂಡ ಸೇರಿದೆ. ಕೋವಿಡ್ ಎರಡನೇ ಅಲೆಯಲ್ಲಿ ಬೆಡ್ ಮತ್ತು ಆಕ್ಸಿಜನ್‌ಗೆ ವಿಪರೀತ ಬೇಡಿಕೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಗೂಗಲ್, ತನ್ನ ಮ್ಯಾಪ್ ಅಪ್ಲಿಕೇಷನ್‌ನಲ್ಲಿ ಹೊಸ ಫೀಚರ್ ಅನ್ನು ಸಕ್ರಿಯಗೊಳಿಸಲಿದ್ದು, ಇದರ ನೆರವಿನಂದ ಜನರು ಸ್ಥಳೀಯವಾಗಿ ಲಭ್ಯವಿರುವ ಬೆಡ್ ಮತ್ತು ಆಕ್ಸಿಜನ್ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಸೋಷಿಯಲ್ ಮೀಡಿಯಾ ಪೋಸ್ಟ್ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!
undefined
ಎರಡನೇ ಅಲೆಯಲ್ಲಿ ಸಿಲುಕಿರುವ ಭಾರತಕ್ಕೆ ನೆರವು ನೀಡುವುದರ ಯೋಜನೆಯ ಭಾಗವಾಗಿ ಗೂಗಲ್ ಈ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಈ ವಿಷಯವನ್ನು ಅದು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.
ಈಗಿನ ಪರಿಸ್ಥಿತಿಯಲ್ಲಿ ಜನರು ಹೆಚ್ಚು ಶೋಧಿಸುತ್ತಿರುವ ಸಂಗತಿ ಎಂದರೆ ಬೆಡ್ ಮತ್ತು ಆಕ್ಸಿಜನ್ ಲಭ್ಯತೆಯೇ ಆಗಿದೆ. ಇಂಥವರಿಗೆ ಹೆಚ್ಚು ನಿಖರ ಉತ್ತರ ಒದಗಿಸಲು ನಾವು ಮ್ಯಾಪ್ಸ್‌ನಲ್ಲಿ ಕ್ಯೂ ಮತ್ತು ಎ ಫಂಕ್ಷನ್ ಬಳಸಿಕೊಂಡ ಹೊಸ ಫೀಚರ್ ಅನ್ನು ಪರೀಕ್ಷಿಸುತ್ತಿದ್ದೇವೆ. ಈ ಫೀಚರ್ ಜನರಿಗೆ ಲಭ್ಯವಿರುವ ಬೆಡ್ ಮತ್ತು ಮೆಡಿಕಲ್ ಆಕ್ಸಿಜನ್ ಇರುವ ಲೊಕೇಷನ್‌ಗಳ ಬಗ್ಗೆ ದಾಖಲಿಸುವಂತೆ ಕೇಳಿಕೊಳ್ಳುತ್ತದೆ. ಈ ಮಾಹಿತಿ ಬಳಕೆದಾರರಿಂದಲೇ ಸೃಷ್ಟಿಯಾಗಿರುತ್ತದೆ ಮತ್ತು ಯಾವುದೇ ಅಧಿಕೃತ ಮೂಲಗಳಿಂದಲ್ಲ. ಹಾಗಾಗಿ, ಇಲ್ಲಿ ದೊರೆಯುವ ಮಾಹಿತಿಯನ್ನು ಬಳಸಿಕೊಳ್ಳುವ ಮುನ್ನ ಅದರ ನಿಖರತೆ ಹಾಗೂ ಸತ್ಯವನ್ನು ಕಂಡುಕೊಳ್ಳುವುದು ಮುಖ್ಯ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.
ಎಲ್ಲರಿಗೂ ಗೊತ್ತಿರವಂತೆ ಭಾರತದಲ್ಲಿ ಕೋವಿಡ್ ಎರಡನೇ ಅಲೆಯು ಸಿಕ್ಕಾಪಟ್ಟೆ ಹಬ್ಬುತ್ತಿದೆ. ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಾಗಿ ಹಲವು ರಾಜ್ಯಗಳಲ್ಲಿ ಮೆಡಿಕಲ್ ಆಕ್ಸಿಜನ್ ಮತ್ತು ಬೆಡ್‌ಗಳ ಕೊರತೆಯಾಗಿದೆ. ಈ ಹಾಹಾಕಾರವನ್ನು ತಪ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಎಸ್ಒಎಸ್ ಸಂದೇಶಗಳೇ ತುಂಬಿವೆ. ಬಹಳಷ್ಟು ಬಳಕೆದಾರರು ಆಕ್ಸಿಜನ್ ಸಿಲಿಂಡರ್, ಬೆಡ್, ಪ್ಲಾಸ್ಮಾ ಡೋನರ್ಸ್ ಮತ್ತು ವೆಂಟಿಲೆಟರ್ಸ್‌ಗೆ ಬೇಡಿಕೆ ಇಡುತ್ತಿದ್ದಾರೆ.
Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ
ಈ ಹಂತದಲ್ಲಿ ಭಾರತೀಯರಿಗೆ ನೆರವು ಒದಗಿಸಲು ಗೂಗಲ್ ತನ್ನ ತಂಡಗಳ ಮೂಲಕ ಮೂರು ಸಂಗತಿಗಳ ಮೇಲೆ ಹೆಚ್ಚು ಗಮನವನ್ನ ಕೇಂದ್ರೀಕರಿಸಿದೆ. ಮೊದಲನೆಯದ್ದು- ಅತಿ ನಿಖರ ಮತ್ತು ಹೊಚ್ಚ ಹೊಸ ಮಾಹಿತಿ ಸಿಗುವಂತೆ ಮಾಡುವುದು. ಎರಡನೆಯದ್ದು- ಸುರಕ್ಷತೆ ಮತ್ತು ವ್ಯಾಕ್ಸಿನೇಷನ್ ಸಂದೇಶಗಳನ್ನು ಹೆಚ್ಚಿಸುವುದು ಮತ್ತು ಮೂರನೆಯದ್ದು-ಪೀಡಿತ ಸಮುದಾಯಗಳು, ಹೆಲ್ತ್ ಅಧಿಕಾರಿಗಳು ಮತ್ತು ಇತರ ಸಂಘ ಸಂಸ್ಧಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವುದು. ಈ ಮೂರು ಸಂಗತಿಗಳ ಮೇಲೆ ಗೂಗಲ್ ಹೆಚ್ಚು ಮಗ್ನವಾಗಿದೆ.
ಗೂಗಲ್ ಸರ್ಚ್ ಮತ್ತು ಮ್ಯಾಪ್ಸ್‌ನಲ್ಲಿ 2,500ಕ್ಕೂ ಹೆಚ್ಚು ಟೆಸ್ಟಿಂಗ್ ಸೆಂಟರ್‌ಗಳನ್ನು ತೋರಿಸಲಾಗುತ್ತದೆ. ಗೂಗಲ್ ಈಗ ರಾಷ್ಟ್ರಾದ್ಯಂತ ಇರುವ 23,000 ವ್ಯಾಕ್ಸಿನೇಷನ್ ಸೆಂಟರ್ ಲೊಕೇಷನ್‌ಗಳನ್ನು ಪ್ರದರ್ಶಿಸುತ್ತಿದೆ. ಜೊತೆಗೆ, ಇವುಗಳ ಬಗ್ಗೆ ಇಂಗ್ಲಿಷ್ ಹಾಗೂ ಭಾರತೀಯ ಎಂಟು ಭಾಷೆಗಳಲ್ಲಿ ಮಾಹಿತಿಯನ್ನು ಒದಗಿಸುತ್ತಿದೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾವು ನಿರಂತರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಭಾರತಾದ್ಯಂತ ಬಳಕೆದಾರರಿಗೆ ಗೂಗಲ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್ ಸೆಂಟರ್‌ಗಳ ಮಾಹಿತಿಯ ದೊರೆಯುವಂತೆ ಮಾಡುತ್ತಿದ್ದೇವೆ. ಆರೋಗ್ಯ ಮಾಹಿತಿ ವೇಗವಾಗಿ ಎಲ್ಲರಿಗೂ ತಲುಪುವಂತೆ ಮಾಡಲು ನಮ್ಮ ಚಾನೆಲ್‌ಗಳನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಬ್ಲಾಗ್ ಗೂಗಲ್ ಹೇಳಿಕೊಂಡಿದೆ.
CoWIN ಮೂಲಕ ಲಸಿಕೆ ಪಡೆಯಲು 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಕಡ್ಡಾಯ
ಗಿವ್ಇಂಡಿಯಾ, ಚಾರ್ಟೀಸ್ ಏಡ್ ಫೌಂಡೇಷನ್ ಇಂಡಿಯಾ, ಗೂಂಜ್ ಮತ್ತು ಯುನೈಡೆಟ್ ವೈ ಆಫ್ ಮುಂಬೈ ಸೇರಿದಂತೆ ಸರ್ಕಾರೇತರ ಸಂಸ್ಥೆಗಳಿಗೆ ನೆರವಾಗುವ ನಿಟ್ಟಿನಲ್ಲಿ ನಾವು ಆಂತರಿಕಾಗಿ ಡೊನೇಷನ್ ಕ್ಯಾಂಪೇನ್‌ಗಳನ್ನು ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.