ಸೋಷಿಯಲ್ ಮೀಡಿಯಾ ಪೋಸ್ಟ್‌ ವ್ಯಂಗ್ಯ ಗುರುತಿಸಲು ಬಂದಿದೆ ಕೃತಕ ಬುದ್ಧಿಮತ್ತೆ ತಂತ್ರ!

By Suvarna News  |  First Published May 10, 2021, 3:15 PM IST

ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿನ ವ್ಯಂಗ್ಯ, ಸತ್ಯ, ವಿಡಂಬಣೆ ಅಥವಾ ಮಾಹಿತಿಯೇ ಎಂಬುದನ್ನು ಸರಿಯಾಗಿ ಗ್ರಹಿಸಲು ಆಗುವುದಿಲ್ಲ. ಎಷ್ಟೋ ಸಾರಿ ನಾವು ವ್ಯಂಗ್ಯವಾಗಿರುವ ಪೋಸ್ಟ್‌ಗಳನ್ನು ವಿದ್ವತ್‌ಪೂರ್ಣ ಇಲ್ಲವೇ ಮಾಹಿತಿಯುಕ್ತ ಎಂದು ಭಾವಿಸುತ್ತೇವೆ. ಆದರೆ, ಕಂಪ್ಯೂಟರ್ ವಿಜ್ಞಾನ ಸಂಶೋಧಕರ ತಂಡವೊಂದು, ಇಂಥ ಪೋಸ್ಟ್‌ಗಳಲ್ಲಿನ ವ್ಯಂಗ್ಯವನ್ನು ಗುರುತಿಸುವ ಎಐ ವ್ಯವಸ್ಥೆಯನ್ನು ರೂಪಿಸಿದೆ.


ಸೋಷಿಯಲ್ ಮೀಡಿಯಾ ವೇದಿಕೆಗಳೆಂದರೆ ಹಳ್ಳಿಯಲ್ಲಿರುವ ಹರಟೆ ಕಟ್ಟೆಗಳಿದ್ದ ಹಾಗೆ. ಅಲ್ಲಿ ಎಲ್ಲವೂ ಚರ್ಚೆಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೂ, ಜಗತ್ತಿನ ಎಲ್ಲ ವಿದ್ಯಮಾನಗಳಿಗೆ ಎಲ್ಲರೂ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಾರೆ. ಈ ತಾಣಗಳಲ್ಲಿ ಮೊನಚಿನ ಮಾತುಗಳು, ದ್ವೇಷದ ನುಡಿಗಳು, ವ್ಯಂಗ್ಯದ ಪೋಸ್ಟ್‌ಗಳು, ಮಾಹಿತಿ ಮತ್ತು ವಿದ್ವತ್‌ಪೂರ್ಣ ಅಭಿಪ್ರಾಯಗಳು... ಹೀಗೆ ನಾನಾ ತರಹದ ಪೋಸ್ಟ್‌ಗಳನ್ನು ಕಾಣಬಹುದು. ಸೋಷಿಯಲ್ ಮೀಡಿಯಾ ಎಂಬುದು ಮಿತಿ ಇಲ್ಲದೇ ಚರ್ಚಾ ತಾಣ, ಮಾಹಿತಿ ವಿನಿಮಯದ ವೇದಿಕೆಗಳಾಗಿವೆ.

ಮೇ 15ರ ನಂತರ ವಾಟ್ಸಾಪ್ ಅಕೌಂಟ್ ರದ್ದಾಗಲ್ಲ! ಯಾಕೆ ಗೊತ್ತಾ?

Latest Videos

ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್  ಆಗುವ ಪೋಸ್ಟ್‌ಗಳಲ್ಲಿ ವ್ಯಂಗ್ಯ ಹೆಚ್ಚಾಗಿರುತ್ತದೆ. ಅಂಥದ್ದು ನಮ್ಮ ಗಮನಕ್ಕೆ ಬರುವುದಿಲ್ಲ. ಅಸಲಿಗೆ ಅದು ವ್ಯಂಗ್ಯಾನೋ, ಹೊಗಳಿಕೆಯೇ, ತೆಗಳಿಕೆಯೇ ಎಂಬುದ ಗೊತ್ತಾಗಲ್ಲ. ಆದರೆ, ಸಂಶೋಧಕರು ಇದಕ್ಕೂ ಒಂದು ಪರಿಹಾರ ಕಂಡುಕೊಂಡಿದ್ದಾರೆ!

ಹೌದು, ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೋರಿಡಾದ ಕಂಪ್ಯೂಟರ್ ಸೈನ್ಸ್ ಸಂಶೋಧಕರು ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದು ಸೋಷಿಯಲ್ ಮೀಡಿಯಾ ತಾಣಗಳಲ್ಲಿನ ವ್ಯಂಗ್ಯ, ಚುಚ್ಚುಮಾತು, ಕೊಂಕುನುಡಿಯ ಪೋಸ್ಟ್‌ಗಳನ್ನು ಪತ್ತೆ ಮಾಡುತ್ತದೆ. ಈ ಕಂಪ್ಯೂಟರ್ ಸೈನ್ಸ್ ಸಂಶೋಧನಾ ತಂಡದಲ್ಲಿ ಭಾರತೀಯ ಮೂಲದ ಒಬ್ಬರು ಸಂಶೋಧಕರಿದ್ದಾರೆ. ಮನೋಭಾವದ ವಿಶ್ಲೇಷಣೆಯ ನಿಖರತೆಯನ್ನು ಹೆಚ್ಚಿಸಲು ವ್ಯಂಗ್ಯವು ಒಂದು ಪ್ರಮುಖ ಅಡಚಣೆಯಾಗಿದೆ.  ನಿಮ್ಮ ಮಾತಿನ ಧ್ವನಿ, ಮುಖದ ಮೇಲಿನ ಭಾವ ಮತ್ತು ಸನ್ನೆಗಳ ಮೂಲಕ ವ್ಯಂಗ್ಯವನ್ನು ಗುರುತಿಸಬಹುದು. ಆದರೆ, ಈ ರೀತಿಯಾಗಿ ನೀವು ಸೋಷಿಯಲ್ ಮೀಡಿಯಾಗಳಲ್ಲಿ ದಾಖಲಾಗುವ ಪೋಸ್ಟ್‌ಗಳಲ್ಲಿ ಗುರುತಿಸಲಾಗುವುದಿಲ್ಲ. ಪಠ್ಯಗಳಲ್ಲಿನ ವ್ಯಂಗ್ಯವನ್ನು ಗುರುತಿಸುವುದು ಕಷ್ಟ.

ಈ ಹಂತದಲ್ಲಿ ನಿಮಗೆ ಕೃತಕ ಬುದ್ಧಿಮತ್ತೆ ನೆರವಿಗೆ ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ದಾಖಲಾಗುವ ಭಾವನಾತ್ಮಕ ಸಂವಹನದ ಪೋಸ್ಟ್‌ಗಳನ್ನು ಪತ್ತೆ ಹಚ್ಚುವಲ್ಲಿ ಕೃತಕ ಬುದ್ಧಿಮತ್ತೆಯ(ಎಐ) ಲಾಜಿಕಲ್ ಡೇಟಾ ಅನಾಲಿಸೀಸ್ ಮತ್ತು ರೆಸ್ಪಾನ್ಸ್, ಸೆಂಟಿಮೆಂಟ್ ಅನಾಲಿಸೀಸ್ ನೆರವಿಗೆ ಬರುತ್ತದೆ. ಭಾವನಾತ್ಮಕ ಅನಾಲಿಸೀಸ್ ಕಾರ್ಯಕ್ಷಮತೆಗೆ ಪಠ್ಯದಲ್ಲಿನ ವ್ಯಂಗ್ಯವು ಮುಖ್ಯ ಅಡಚಣೆಯಾಗಿದೆ ಎನ್ನುತ್ತಾರೆ  ಸೆಂಟ್ರಲ್ ಫ್ಲೋರಿಡಾ ವಿಶ್ವವಿದ್ಯಾಲಯದ ಕಾಂಪ್ಲೆಕ್ಸ್ ಅಡಾಪ್ಟಿವ್ ಸಿಸ್ಟಮ್ಸ್ ಲ್ಯಾಬ್ (ಸಿಎಎಸ್ಎಲ್) ಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಇವಾನ್ ಗರಿಬೆ.

CoWIN ಮೂಲಕ ಲಸಿಕೆ ಪಡೆಯಲು 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಕಡ್ಡಾಯ

ಸಂಭಾಷಣೆಗಳಲ್ಲಿನ ವ್ಯಂಗ್ಯವನ್ನು ಯಾವಾಗಲೂ ಗ್ರಹಿಸುವುದು ಅಷ್ಟು ಸರಳವಲ್ಲ. ಆದ್ದರಿಂದ ಇದರ ಪತ್ತೆಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡುವಾಗ ಎದುರಾಗುವ ಸವಾಲುಗಳ ಬಗ್ಗೆ ನೀವು ಊಹೆ ಮಾಡಿಕೊಳ್ಳಬಹುದು.  ನಾವು ಮಲ್ಟಿ-ಹೆಡ್ ಸ್ವಯಂ-ಗಮನ ಮತ್ತು ಗೇಟೆಡ್ ಪುನರಾವರ್ತಿತ ಘಟಕಗಳನ್ನು ಬಳಸಿಕೊಂಡು ಅರ್ಥೈಸಬಲ್ಲ ಆಳವಾದ ಕಲಿಕೆಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಎರಿಟ್ರೋಪಿ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಗರಿಬೇ ತಿಳಿಸಿದ್ದಾರೆ.

ವ್ಯಂಗ್ಯವನ್ನು ಸೂಚಿಸುವ ಮಾದರಿಗಳನ್ನು ಕಂಡುಹಿಡಿಯಲು ತಂಡವು ಕಂಪ್ಯೂಟರ್ ಮಾದರಿಯನ್ನು ರೂಪಿಸಿತು ಮತ್ತು ವ್ಯಂಗ್ಯವನ್ನು ಸೂಚಿಸುವ ಸಾಧ್ಯತೆ ಇರುವ ಅನುಕ್ರಮಗಳಲ್ಲಿ ಕ್ಯೂ ಪದಗಳನ್ನು ಸರಿಯಾಗಿ ತೆಗೆದುಕೊಳ್ಳಲು ಪ್ರೋಗ್ರಾಂ ಅನ್ನು ರೂಪಿಸಲಾಯಿತು. ಈ ಕಂಪ್ಯೂಟರ್ ಮಾದರಿ ವ್ಯವಸ್ಥೆಗೆ ಅಸಂಖ್ಯೆ ಡೇಟಾ ಒದಗಿಸಿ ಮತ್ತು ಅದರ ನಿಖರತೆಯನ್ನು ಪರೀಕ್ಷಿಸಲಾಯಿತು ಎಂದು ವಿವರಿಸಲಾಗಿದೆ.

ವ್ಯಂಗ್ಯ ಪೋಸ್ಟ್ ಪತ್ತೆ ಹಚ್ಚುವ ಎಐ ವ್ಯವಸ್ಥೆ ರೂಪಿಸುವ ತಂಡದಲ್ಲಿ ಡಾಕ್ಟರಲ್ ಸ್ಟೂಡೆಂಟ್ ರಮ್ಯಾ ಅಕುಲ ಕೂಡ ಇದ್ದಾರೆ. ಇರವರು ಭಾರತೀಯ ಮೂಲದವರು. ಮುಖಾಮುಖಿ ಮಾತುಕತೆ ವೇಳೆ, ಸಂಭಾಷಣೆ ವೇಳೆ ವ್ಯಂಗ್ಯವನ್ನು ಸರಳವಾಗಿ ಗುರುತಿಸಬಹುದು. ಸಂಭಾಷಣೆ ವೇಳೆಯಲ್ಲಿ ಎದುರಿಗಿರುವ ವ್ಯಕ್ತಿಯ ಮುಖದ ಅಭಿವ್ಯಕ್ತಿ, ಸನ್ನೆ, ಮಾತನಾಡುವ ಧ್ವನಿಯ ಮೂಲಕ ವಂಗ್ಯವನ್ನು ಗುರುತಿಸಬುಹದು ಎನ್ನುತ್ತಾರೆ ರಮ್ಯಾ ಅಕುಲ ಅವರು.

ರೆಡ್‌ಮಿ ನೋಟ್ 10ಎಸ್ ಸ್ಮಾರ್ಟ್‌ಫೋನ್ ಟೀಸರ್, ಶೀಘ್ರವೇ ಭಾರತದಲ್ಲಿ ಬಿಡುಗಡೆ

ಪಠ್ಯ ಸಂವಹನದಲ್ಲಿ ವ್ಯಂಗ್ಯವನ್ನು ಕಂಡುಹಿಡಿಯುವುದು ಒಂದು ಸಾಧಾರಣ ಕೆಲಸವಲ್ಲ ಏಕೆಂದರೆ ಈ ಯಾವುದೇ ಸೂಚನೆಗಳು ಸುಲಭವಾಗಿ ಸಿಗುವುದಿಲ್ಲ. ವಿಶೇಷವಾಗಿ ಇಂಟರ್ನೆಟ್ ಬಳಕೆಯ ಹೆಚ್ಚಳದೊಂದಿಗೆ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಆನ್‌ಲೈನ್ ಸಂವಹನಗಳಲ್ಲಿ ವ್ಯಂಗ್ಯ ಪತ್ತೆ ಮಾಡುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ ಎನ್ನುತ್ತಾರೆ ರಮ್ಯಾ ಅಕುಲ ಅವರು.

click me!