Area Busyness : ನಿಮ್ಮ ನಗರದ ಜನನಿಬಿಡ ಪ್ರದೇಶಗಳ ಮಾಹಿತಿ ನೀಡುತ್ತದೆ ಗೂಗಲ್‌ ಮ್ಯಾಪ್ ಹೊಸ ಫೀಚರ್!

By Suvarna NewsFirst Published Dec 22, 2021, 1:01 PM IST
Highlights

ನಿಮ್ಮ ನೆರೆಹೊರೆ ಅಥವಾ ನಿಮ್ಮ ನಗರದ  ಯಾವುದಾದರೂ ಭಾಗದಲ್ಲಿ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಿನ ಜನರು ಸೇರಿದ್ದಾರೆಯೇ  ಎಂಬುದನ್ನು ತಕ್ಷಣವೇ ಪತ್ತೆಹಚ್ಚಲು ಗೂಗಲ್‌ ಏರಿಯಾ ಬಿಸಿನೆಸ್‌ ಫೀಚರ್ ಸಹಾಯ ಮಾಡಲಿದೆ.

Tech Desk: ಗೂಗಲ್ ನಕ್ಷೆಗಳು (Google Map) ನಿಮ್ಮ ನಗರ ಅಥವಾ ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶಗಳನ್ನು ಹೈಲೈಟ್ ಮಾಡುವ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. 'ಏರಿಯಾ ಬ್ಯುಸಿನೆಸ್'  (Area Busyness) ಎಂದು ಕರೆಯಲ್ಪಡುವ ಈ ಹೊಸ ಫೀಚರ್ ಜನಸಂದಣಿಯ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಿದೆ. ನಿಮ್ಮ ನೆರೆಹೊರೆ ಅಥವಾ ನಿಮ್ಮ ನಗರದ  ಯಾವುದಾದರೂ ಭಾಗದಲ್ಲಿ ಸಾಮಾನ್ಯ ಸಂಖ್ಯೆಗಿಂತ ಹೆಚ್ಚಿನ ಜನರು ಸೇರಿದ್ದಾರೆಯೇ  ಎಂಬುದನ್ನು ತಕ್ಷಣವೇ ಪತ್ತೆಹಚ್ಚಲು ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. 

ಈ ವೈಶಿಷ್ಟ್ಯವು  ಆ್ಯಂಡ್ರಾಯ್ಡ್ (Android) ಮತ್ತು ಐಓಎಸ್ (iOS) ಸೇರಿದಂತೆ‌ ಇತರ ಪ್ಲಾಟ್‌ಫಾರ್ಮ್‌ಗಳಾದ್ಯಂತ ಕಾರ್ಯನಿರ್ವಹಿಸಲಿದೆ.  ರೆಸ್ಟೋರೆಂಟ್‌ಗಳು, ಅಂಗಡಿಗಳು ಮತ್ತು ಮ್ಯೂಸಿಯಂಗಳಂತಹ ಮನರಂಜನಾ ಸ್ಥಳಗಳಲ್ಲಿ ಜನದಟ್ಟನೆಯ ಬಗ್ಗೆ ಮಾಹಿತಿ ನೀಡುವಲ್ಲಿ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. 

ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಸಾಧನಗಳಲ್ಲಿ ಗೂಗಲ್ ನಕ್ಷೆಗಳ ನವೀಕರಿಸಿದ ಆವೃತ್ತಿಯನ್ನು ಪಡೆದ ನಂತರ ಏರಿಯಾ ಬ್ಯುಸಿನೆಸ್ ವೈಶಿಷ್ಟ್ಯವನ್ನು ಬಳಸಬಹುದು. ಸಹಜವಾಗಿ ಗೂಗಲ್‌ ಮ್ಯಾಪ್‌ನಲ್ಲಿ ಲೋಕೇಶನ್‌ ಸರ್ಚ್‌ ಮಾಡಿದಾಗಾ  Live ಆಪ್ಶನ್‌ನಲ್ಲಿ (Option) ಈ ಜನಸಂದಣಿ ಬಗ್ಗೆ ಗೂಗಲ್‌ ತಿಳಿಸುತ್ತದೆ.

ಜನನಿಬಿಡ ಪ್ರದೇಶಗಳು ಬ್ಯುಸಿ ಏರಿಯಾ" ಎಂದು ಲೇಬಲ್ !

ಕಳೆದ ತಿಂಗಳು ಗೂಗಲ್‌ ಈ ವೈಶಿಷ್ಟ್ಯವನ್ನು ಘೋಷಿಸಿತ್ತು. ನಿರ್ದಿಷ್ಟ ನಗರ ಅಥವಾ ಪಟ್ಟಣದ ಅತ್ಯಂತ ಜನನಿಬಿಡ ಸ್ಥಳಗಳನ್ನು ತೋರಿಸಲು ಗೂಗಲ್ ನಕ್ಷೆಗಳಲ್ಲಿ ಏರಿಯಾ ಬ್ಯುಸಿನೆಸ್ ಲೈವ್ ಬ್ಯುಸಿನೆಸ್ ಟ್ರೆಂಡ್‌ಗಳನ್ನು ಸಂಯೋಜಿಸುತ್ತದೆ.  ತಮ್ಮ ಗೂಗಲ್ ಖಾತೆಯಿಂದ‌ ಲೋಕೆಶನ್ (Location) ಆಯ್ಕೆಮಾಡಿರುವ ಜನರಿಂದ  ಮಾಹಿತಿ ಪಡೆದು  ಬಿಸಿನೆಸ್‌ ಫೀಚರ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

"ವಾರದ ಪ್ರತಿ ಗಂಟೆಗೆ ನಿರ್ದಷ್ಟ ಸ್ಥಳವು ಎಷ್ಟು ಕಾರ್ಯನಿರತವಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ಈ ಡೇಟಾವು ಪ್ರಮುಖವಾಗಿದೆ" ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ. ಅದರ ಅತ್ಯಂತ ಜನನಿಬಿಡ ಸಮೀಪದಲ್ಲಿರುವ ಪ್ರದೇಶವನ್ನು ಗೂಗಲ್‌  ನಕ್ಷೆಗಳಲ್ಲಿ "ಬ್ಯುಸಿ ಏರಿಯಾ" ಎಂದು ಲೇಬಲ್ ಮಾಡಲಾಗಿದೆ. ದಿನದ ವಿವಿಧ ಸಮಯಗಳಲ್ಲಿ ಪ್ರದೇಶವು ಎಷ್ಟು ಕಾರ್ಯನಿರತವಾಗಿದೆ ಎಂಬುದನ್ನು ತೋರಿಸುವ ಚಾರ್ಟ್ ಅನ್ನು ನೋಡಲು ನೀವು ಅದನ್ನು ಒಮ್ಮೆ ಟ್ಯಾಪ್ ಮಾಡಬೇಕಾಗುತ್ತದೆ.

Hinglish, Speech to Text, ವ್ಯಾಕ್ಸಿನ್ ಬುಕ್ಕಿಂಗ್‌

ಡಿಜಿಟಲ್ (Digital) ಪಾವತಿಗಳನ್ನು ಇನ್ನಷ್ಟು ಸರಳಗೊಳಿಸಲು ವಿಶೇಷವಾಗಿ ಭಾರತೀಯ ಗ್ರಾಹಕರಿಗಾಗಿ ರಚಿಸಲಾದ ಹಿಂದಿ ಮತ್ತು ಇಂಗ್ಲಿಷ್‌ನ ಮಿಶ್ರಣವಾದ ಗೂಗಲ್ ಪೇನಲ್ಲಿ 'ಹಿಂಗ್ಲಿಷ್' ಭಾಷಾ ಆಯ್ಕೆಯನ್ನು ಸೇರಿಸುವುದಾಗಿ ಗೂಗಲ್ ಘೋಷಿಸಿದೆ. ವರ್ಚುವಲ್ ಇವೆಂಟ್‌ನಲ್ಲಿ ಈ ಹೊಸ ಫೀಚರ್‌ಗಳನ್ನು ಅನಾವರಣಗೊಳಿಸಿದ ಗೂಗಲ್, ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಬ್ಗಗೆ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಂಡಿದೆ. 

ಗೂಗಲ್  ಪ್ರಕಾರ,  ಗೂಗಲ್ ಪೇ (Google Pay) ಸೇವೆಯ್ಲಲಿ ಎರಡನೇ ಭಾಷೆಯ ಆಯ್ಕೆಯನ್ನು ಸೇರ್ಪಡೆ ಮಾಡುವ ಮೂಲಕ, Google Payಯನ್ನು ಹೆಚ್ಚು ಅರ್ಥಗರ್ಭಿತ ಮತ್ತು ನೈಸರ್ಗಿಕವಾಗಿ ಮಾಡಲು ಪ್ರಯತ್ನಿಸಲಾಗಿದೆ. ಬಳಕೆದಾರರು ಈಗ ಕನ್ನಡ (Kannada) ಸೇರಿದಂತೆ ಹಿಂದಿ (Hindi), ಬೆಂಗಾಲಿ (Bengali), ಗುಜರಾತಿ (Guajarati), ಮರಾಠಿ (Marathi), ತಮಿಳು (Tamil) ಮತ್ತು ತೆಲುಗು (Telagu) ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಗೂಗಲ್ ಹೇಳಿಕೊಂಡಿದೆ. ಸಂಪೂರ್ಣ ಸ್ಟೋರಿ ಇಲ್ಲಿಓದಿ 

ಇದನ್ನೂ ಓದಿ:

1) Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್‌ ಮಾಡಿದ ವಿಷಯ ಯಾವುದು ಗೊತ್ತಾ?

2) Bill Gates Covid 19 Tweets: ಒಮಿಕ್ರೋನ್‌ ಶೀಘ್ರದಲ್ಲೇ ಎಲ್ಲ ದೇಶಗಳಿಗೂ ಹರಡಲಿದೆ, ನಿರ್ಲ್ಯಕ್ಷಿಸಬೇಡಿ!

3) Fake News, Anti-India Propaganda : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್!

click me!