Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!

Suvarna News   | Asianet News
Published : Dec 21, 2021, 10:58 AM IST
Tesla CEO Elon Musk ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ!

ಸಾರಾಂಶ

* ಟ್ವೀಟ್ ಮೂಲಕ ತೆರಿಗೆ ಮಾಹಿತಿಯನ್ನು ಬಹಿರಂಗಪಡಿಸಿದ ಜಗತ್ತಿನ ಶ್ರೀಮಂತ ಉದ್ಯಮಿ ಮಸ್ಕ್ * ಈ ವರ್ಷ ಎಲಾನ್ ಮಸ್ಕ್ 11 ಬಿಲಿಯನ್ ಡಾಲರ್ (ಅಂದಾಜು 83 ಸಾವಿರ ಕೋಟಿ ರೂ.) ತೆರಿಗೆ ಕಟ್ಟಲಿದ್ದಾರಂತೆ * ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಅಮೆರಿಕದ ಸೆನೆಟರ್ ಎಲಿಜಬೆಥ್ ಮತ್ತು ಮಸ್ಕ್ ಮಧ್ಯೆ ಜಟಾಪಟಿ  

Tech Desk: ಟೆಕ್ ದೈತ್ಯ ಉದ್ಯಮಿ, ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ವರ್ಷಕ್ಕೆ ಎಷ್ಟು ತೆರಿಗೆ (Tax)ಯನ್ನು ಕಟ್ಟುತ್ತಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದಕ್ಕೆ ಎಲಾನ್ ಮಸ್ಕ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಇದಕ್ಕೆ ಉತ್ತರ ನೀಡಿದ್ದಾರೆ. ಟೆಸ್ಲಾ (Tesla), ಸ್ಪೇಸ್ಎಕ್ಸ್ (SpaceX) ಹಾಗೂ ಮತ್ತಿರ ಕಂಪನಿಗಳ ಒಡೆಯನಾಗಿರುವ ಎಲಾನ್ ಮಸ್ಕ್, ಈ ವರ್ಷ 11 ಶತಕೋಟಿ ಡಾಲರ್‌ಗೂ ಅಧಿಕ ಟ್ಯಾಕ್ಸ್ ಕಟ್ಟಲಿದ್ದಾರಂತೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಇದು ಹೆಚ್ಚು ಕಡಿಮೆ 83 ಸಾವಿರ ಕೋಟಿ ರೂಪಾಯಿಯಾಗುತ್ತದೆ!  ಇದು ಕೇವಲ ಒಂದು ವರ್ಷದ ತೆರಿಗೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದು ಒಂದು ವೇಳೆ ಇದು ನಿಜವೇ ಆದರೆ, ಅಮೆರಿಕದ ಆಂತರಿಕ ಆದಾಯ ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡ ಮೊತ್ತದ ತೆರಿಗೆಯಾಗಲಿದೆಯಂತೆ! ತಾನು ವರ್ಷಕ್ಕೆ ಎಷ್ಟು ಟ್ಯಾಕ್ಸ್ ಕಟ್ಟಲಿದ್ದೇನೆ ಎಂಬ ಮಾಹಿತಿಯನ್ನು ಎಲಾನ್ ಮಸ್ಕ್ ಅವರೇ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. 

Pinaka-ER: ಹೊಸ ರಾಕೆಟ್ ಲಾಂಚರ್ ಪಿನಾಕಾ ಯಶಸ್ವಿ ಪರೀಕ್ಷೆ, ಭಾರತಕ್ಕೆ ಮತ್ತೊಂದು ಗರಿ

For those wondering, I will pay over $11 billion in taxes this year ಎಂದು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ತೆರಿಗೆ ವಂಚಿಸುತ್ತಾರೆಂಬ ಆರೋಪಗಳಿಗೆ ಉತ್ತರ ನೀಡಿದಂತಿದೆ. ತೆರಿಗೆಗೆ ಸಂಬಂಧಿಸಿದಂತೆ ಎಲಾನ್ ಮಸ್ಕ್ ಮ್ತತು ಮೆಸ್ಸಾಚುಸೆಟ್ಸ್ ಸೆನೆಟರ್ ಎಲಿಜಬೆಥ್ ವಾರೆನ್ (Elizabeth Warren) ಇಬ್ಬರ ನಡುವೆ ಸಂಘರ್ಷ ಏರ್ಪಿಟ್ಟಿದೆ. ಎಲಿಜಬೆಥ್ ಅವರು, ಮಾಸ್ಕ್ ಸೂಕ್ತ ರೀತಿಯಲ್ಲಿ ತೆರಿಗೆಗಳನ್ನ ಕಟ್ಟಿಲ್ಲ ಎಂದು ಆರೋಪಿಸಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.  ಸೆನೆಟರ್ ಎಲಿಜಬೆಥ್ ವಾರೆನ್ ಟ್ವೀಟ್ ಗೆ ಪ್ರತಿಯಾಗಿ ಎಲಾನ್ ಮಸ್ಕ್ ತಾವು ಈ ವರ್ಷ ಎಷ್ಟು ತೆರಿಗೆ ಕಟ್ಟಲಿದ್ದೇನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಪ್ರತಿಷ್ಠಿತ ಟೈಮ್ (TIME) ಮ್ಯಾಗ್‌ಜಿನ್‌ನ ವರ್ಷದ ವ್ಯಕ್ತಿಯಾಗಿ ಎಲಾನ್ ಮಸ್ಕ್ ಆಯ್ಕೆಯಾಗಿದ್ದಾರೆ. ಎಲಾನ್ ನೇತೃತ್ವ ವಹಿಸಿರುವ ಟೆಸ್ಲಾ ಆಗಿರಬಹುದು, ಸ್ಪೇಸ್ಎಕ್ಸ್ ಆಗಿರಬಹುದು ಅಥವಾ ಇನ್ನಿತರ ಕಂಪನಿಗಳು ತಮ್ಮ ಕ್ಷೇತ್ರದಲ್ಲಿ ತೋರುತ್ತಿರುವ ಉತ್ಕೃಷ್ಟ ಪ್ರದರ್ಶನವನ್ನು ಪರಿಗಣಿಸಿ ಟೈಮ್ ವರ್ಷದ ವ್ಯಕ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಟೆಸ್ಲಾ ಮುಂಚೂಣಿಯ ನಾಯಕನಾಗಿದ್ದರೆ, ಬಾಹ್ಯಾಕಾಶ ಟೂರಿಸಮ್‌ನಲ್ಲಿ ಹೊಸ ವ್ಯಾಖ್ಯಾನ ಮಾಡಿರುವ ಸ್ಪೇಸ್ಎಕ್ಸ್ ಕಂಪನಿಯು ಚಂದ್ರ ಮತ್ತು ಮಂಗಳನತ್ತ ಹೋಗಲು ಪ್ರೇರೇಪಿಸುತ್ತಿದೆ ಎಂದು ಹೇಳಬಹುದು.

 

 

52 ಸ್ಟಾರ್‌ಲಿಂಕ್ ಉಪಗ್ರಹ ಉಡಾವಣೆ

ಸ್ಯಾಟ್‌ಲೈಟ್‌ಗಳ ಮೂಲಕ ಜಗತ್ತಿನ ಎಲ್ಲ ಕಡೆಯೂ ಇಂಟರ್ನೆಟ್‌ (Internet) ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ (SpaceX) ಈಗ ಮತ್ತೊಂದು  ಕಾರ್ಯವನ್ನು ಮಾಡಿದೆ. ಸ್ಯಾಟ್‌ಲೈಟ್ ಇಂಟರ್ನೆಟ್ ಒದಗಿಸುವುದಕ್ಕಾಗಿ ಸ್ಪೇಸ್ ಎಕ್ಸ್ (SpaceX) ಕ್ಯಾಲಿಫೋರ್ನಿಯಾ ಹತ್ತಿರದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಎಲ್ಲ ಸ್ಯಾಟ್‌ಲೈಟ್‌ಗಳನ್ನು ಸುರಕ್ಷಿತವಾಗಿ ಅವುಗಳ ಕಕ್ಷೆಯಲ್ಲಿ ಇರಿಸಲು ಸ್ಪೇಸ್‌ಎಕ್ಸ್ (SpaceX) ಯಶಸ್ವಿಯಾಗಿದೆ. ಸ್ಪೇಸ್ಎಕ್ಸ್ ಕಂಪನಿಯ ಭಾಗವಾಗಿರುವ ಸ್ಟಾರ್‌ಲಿಂಕ್ ಭಾರತದಲ್ಲೂ ತನ್ನ ಕಾರ್ಯಾಚರಣೆ ಆರಂಭಿಸಲಿದೆ ಎಂಬುದು ಈಗಾಗಲೇ ಗೊತ್ತಿರುವ ಸಂಗತಿ. ಸ್ಯಾಟ್‌ಲೈಟ್ ಇಂಟರ್ನೆಟ್ ಸೇವೆಯನ್ನು ಒದಗಿಸಲು ಭಾರತದ ಸರಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಲಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

SpaceX Launches Starlink: 52 ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್ ಉಡಾವಣೆ ಮಾಡಿದ ಎಲಾನ್‌ ಮಸ್ಕ್‌ ಕಂಪನಿ!

ಕ್ಯಾಲಿಫೋರ್ನಿಯಾದ ವಂಡೇನ್‌ಬರ್ಗ್ ಸ್ಪೇಸ್ ಫೋರ್ಸ್ ಬೇಸ್ (Vandeberg Space Force Base) ಶನಿವಾರ ಸ್ಟಾರ್‌ಲಿಂಕ್ ಸ್ಯಾಟ್‌ಲೈಟ್‌ಗಳನ್ನು ಹೊತ್ತ ಎರಡು ಹಂತದ ಫಾಲ್ಕನ್ 9 (Falcon 9) ರಾಕೆಟ್‌ಗಳು ಉಡಾವಣೆಯಾದವು. ಆ ನಂತರ ಮೊದಲ ಹಂತದ ರಾಕೆಟ್ ಹಿಂದುರಿಗಿ, ಸಮುದ್ರದಲ್ಲಿನ ಸ್ಪೇಸ್‌ಎಕ್ಸ್ (SpaceX) ಡ್ರೋನ್‌ಶಿಪ್‌ನಲ್ಲಿ ಇಳಿಯಿತು. ಇದು 11ನೇಯ ಉಡಾವಣೆಯಾಗಿದೆ. ರಾಕೆಟ್‌ನ ಎರಡನೇ ಹಂತವು ಕಕ್ಷೆಗೆ ನೆಗೆದಿದ್ದು, ಸ್ಯಾಟ್ಲೈಟ್‌ಗಳನ್ನು ಅವುಗಳ ಸ್ಥಾನದಲ್ಲಿ ಇರಿಸಲು ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?