ಸೋಷಿಯಲ್ ಡಿಸ್ಟೆನ್ಸ್‌ಗೆ ಗೂಗಲ್ ಆ್ಯಪ್!

By Suvarna News  |  First Published Jun 4, 2020, 2:20 PM IST

ನೀವು ಹಾಗೇ ಚಲಿಸುತ್ತಿರುತ್ತೀರ ಈ ಸಂದರ್ಭದಲ್ಲಿ ನಿಮ್ಮ ಪಕ್ಕ ಒಬ್ಬ ವ್ಯಕ್ತಿ ಬಂದು ನಿಲ್ಲುತ್ತಾರೆ. ಅವರೇನು ನಿಮ್ಮನ್ನು ಅಂಟಿಕೊಳ್ಳದೆ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿದ್ದಾರೆಂದೇ ಇಟ್ಟುಕೊಳ್ಳೋಣ. ಆದರೆ, ಅವರು ನಿಜವಾಗಿಯೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬುದನ್ನು ಅರಿಯುವುದು ಹೇಗೆ ಎಂಬ ಪ್ರಶ್ನೆಗೆ ಈಗ ಗೂಗಲ್ ಉತ್ತರ ಕೊಟ್ಟಿದೆ. ಇದಕ್ಕಾಗಿಯೇ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಅದು ಏನು-ಎತ್ತ ಎಂಬುದನ್ನು ಅರಿಯೋಣ ಬನ್ನಿ…


ಕೊರೋನಾ ಮೇನಿಯಾದಲ್ಲಿ ಎಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯದ ವಿಚಾರವಾಗಿದೆ. ಪಕ್ಕದಲ್ಲಿ ಸೋಂಕಿತ ಬಂದರೂ ಗೊತ್ತಾಗುವಂತಹ ಲಕ್ಷಣವೂ ಅದಲ್ಲ. ಹಾಗಾಗಿ ಸೋಷಿಯಲ್ ಡಿಸ್ಟೆನ್ಸ್ (ಸಾಮಾಜಿಕ ಅಂತರ) ಮಂತ್ರ ಇಲ್ಲಿ ಪ್ರಮುಖವಾಗುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಇದು ಸಾಧ್ಯ ಎಂಬುದೂ ಮುಖ್ಯವಾಗುತ್ತದೆ. ಅಂದರೆ, ಈ ಅಂತರವನ್ನು ಎಷ್ಟು ಕಾಯ್ದುಕೊಳ್ಳಬೇಕು. ಮತ್ತು ಎದುರಿಗಿನ ವ್ಯಕ್ತಿ ಆ ವ್ಯಾಪ್ತಿಯಲ್ಲಿದ್ದಾರಾ ಎಂಬುದನ್ನು ತಿಳಿಯುವುದು ಹೇಗೆ ಎಂಬುದು ಮತ್ತೊಂದು ಪ್ರಶ್ನೆ. ಈಗ ಅದಕ್ಕೆಲ್ಲ ಉತ್ತರ ಸಿಗುವ ಕಾಲ ಬಂದಿದೆ.

ಹೌದು. ಗೂಗಲ್ ಇದಕ್ಕೊಂದು ಪರಿಹಾರ ಕಂಡುಹಿಡಿದಿದೆ. ಸೋಷಿಯಲ್ ಡಿಸ್ಟೆನ್ಸ್ ಹೊಂದಲಾಗಿದೆಯೇ ಇಲ್ಲವೇ ಎಂಬುದನ್ನು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದಾಗಿದ್ದು, ಇದಕ್ಕಾಗಿ ಆ್ಯಪ್ ಬಳಸಿದರೆ ಸಾಕು. ಗೂಗಲ್ ಇದಕ್ಕೆಂದೇ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. 

ಇದನ್ನು ಓದಿ: Whatsapp ಬಳಕೆದಾರರೇ ಹುಷಾರ್, ನಿಮಗಿದು 'ಹ್ಯಾಕ್’ಟಿಕ್!...

ಸೊಡಾರ್ ಮೋಡಿ
ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆಯೇ ಎಂಬುದನ್ನು ಗಮನಿಸಿಕೊಳ್ಳುವ ಸಲುವಾಗಿಯೇ ಸೊಡಾರ್ ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದನ್ನು ಪ್ರಯೋಗಾತ್ಮಕವಾಗಿ ಅಭಿವೃದ್ಧಿಪಡಿಸಲಾಗಿದ್ದರೂ ಸಾರ್ವಜನಿಕ ಮುಕ್ತವಾಗಿಲ್ಲ. ಅಂದರೆ, ಗೂಗಲ್ ಪ್ಲೇಸ್ಟೋರ್ ನಲ್ಲಿ ಈ ಆ್ಯಪ್ ಅನ್ನು ಎಷ್ಟೇ ಹುಡುಕಿದರೂ ಸಿಗುವುದಿಲ್ಲ. ಇದನ್ನು ಪ್ರತ್ಯೇಕವಾಗಿ ಲೋಡ್ ಮಾಡಿಕೊಳ್ಳಬಹುದಾಗಿದೆ. 


ಇದಕ್ಕಾಗಿ ಕ್ರೋಮ್ ಬ್ರೌಸರ್ ಗಳ ಮೂಲಕ ಆ್ಯಪ್ ಅನ್ನು ಇನ್‌‌‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇದು ಸುಲಭ ವಿಧಾನದಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರ ಕ್ಯಾಮರಾ ಮೂಲಕ ಒಂದು ವಿಶುವಲ್ ಬೌಂಡರಿಯನ್ನು ಕ್ರಿಯೇಟ್ ಮಾಡಲಿದೆ. ಆ ಮೂಲಕ ಆ ವ್ಯಾಪ್ತಿಯೊಳಗೆ ಯಾರಾದರೂ ಕಂಡರೆ ತಕ್ಷಣ ಅಲರ್ಟ್ ಮಾಡಲಿದೆ. 

Latest Videos

ನಿಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ಅನ್ನು ಕಾಪಾಡಿಕೊಳ್ಳಲು ಸೊಡಾರ್ ಆ್ಯಪ್‌ನಲ್ಲಿ ವೆಬ್‌ಎಕ್ಸ್ಆರ್ (WebXR) ಸಹಾಯದ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗಿದೆಯೇ ಎಂಬುದನ್ನು ಗಮನಿಸಿಕೊಳ್ಳಬಹುದು. 

2 ಮೀಟರ್ ಸುತ್ತಳತೆ
ಇಲ್ಲಿ ಕೊರೋನಾ ಭಯದಿಂದ ಮುಕ್ತರಾಗಬೇಕಾದರೆ ಎಲ್ಲಿಯೇ ಸಾಗುತ್ತಿದ್ದರೂ ಇನ್ನೊಬ್ಬ ವ್ಯಕ್ತಿಯ ನಡುವೆ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಈ ಕೆಲಸವನ್ನು ಸೊಡಾರ್ ಆ್ಯಪ್ ಮಾಡಲಿದ್ದು, ನಿಮ್ಮ ಸುತ್ತ ರಿಂಗ್ ಮಾದರಿಯಲ್ಲಿ ಕಾಪಾಡಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಹೀಗಾಗಿ ಅಕ್ಕ-ಪಕ್ಕದಲ್ಲಿ ಅಪ್ಪಿ-ತಪ್ಪಿಯೂ ಸುಳಿದರೆ ಅಲರ್ಟ್ ಆಗಬಹುದಾಗಿದೆ. ಆದರೆ, ನಿಮ್ಮ ಜೊತೆಗೆ ಮೊಬೈಲ್ ಇಟ್ಟುಕೊಳ್ಳುವುದನ್ನು ಮರೆಯಬಾರದು. ಒಂದು ವೇಳೆ ನಿಮ್ಮ ಫೋನ್ ಒಂದು ಕಡೆ ನೀವು ಒಂದು ಕಡೆ ಇದ್ದೀರಾದರೆ, ಇದು ವರ್ಕ್ ಮಾಡುವುದಿಲ್ಲ. 

ಇದನ್ನು ಓದಿ: ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!...

ಇದೊಂಥರ ಪೋಕ್ ಮನ್ ಗೇಮ್ ನಂತೆ!
ನಿಮಗೆ ಪೋಕ್ ಮನ್ ಗೇಮ್ ಬಗ್ಗೆ ಗೊತ್ತಿರಬಹುದು. ಅದೇ ಮಾದರಿಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ. ಈ ಗೇಮ್ ನಲ್ಲಿ ಬಳಕೆ ಮಾಡುವ AR ತಂತ್ರಜ್ಞಾನವನ್ನೇ ಇಲ್ಲೂ ಬಳಸಲಾಗಿದ್ದು, ಬಹುತೇಕ ಒಂದೇ ಮಾದರಿಯಲ್ಲಿ ಇವು ಕಾರ್ಯನಿರ್ವಹಿಸುತ್ತವೆ. ಬೇರೆ ಯಾವುದೇ ವ್ಯಕ್ತಿಯು ಆ್ಯಪ್ ನಿಗದಿಪಡಿಸಿಕೊಂಡ ಸರ್ಕಲ್ ವ್ಯಾಪ್ತಿಯೊಳಗೆ ಬಂದಿದ್ದೇ ಆದಲ್ಲಿ ಅಲರ್ಟ್ ಮಾಡಲಿದೆ. ಇದರಿಂದ ಎಚ್ಚೆತ್ತುಕೊಂಡು ದೂರ ನಿಲ್ಲಬಹುದಾಗಿದೆ.

ಮೊಬೈಲ್ ನಲ್ಲಿ ಬಳಕೆ ಹೇಗೆ?
ಕ್ರೋಮ್ ಬ್ರೌಸರ್ ಮೂಲಕ ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಮಾತ್ರ ಈ ಸೇವೆಯನ್ನು ಕಾಣಬಹುದಾಗಿದ್ದು, ಸೊಡಾರ್ ಆ್ಯಪ್ ಅನ್ನು ಲಿಂಕ್ ಬಳಸಿ ಮೊಬೈಲ್ ನಲ್ಲಿ ಹೊಂದಬಹುದಾಗಿದೆ. ಇಲ್ಲವೇ ಕ್ಯೂಆರ್ ಕೋಡ್ ಬಳಸಿಯಾದರೂ ಆ್ಯಪ್ ಅನ್ನು ಹೊಂದಬಹುದಾಗಿದೆ. 

ಇದನ್ನು ಓದಿ: ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!...

ಆ್ಯಪಲ್ ಜೊತೆ ಪಾರ್ಟ್ನರ್ಶಿಪ್
ಇದಲ್ಲದೇ ಆ್ಯಪಲ್ ಜೊತೆ ಪಾರ್ಟ್ನರ್‌ಶಿಪ್ ಮಾಡಿಕೊಂಡಿರುವ ಗೂಗಲ್, ಕಾಂಟ್ಯಾಕ್ಟ್ ಟ್ರೇಸಿಂಗ್ API ಯನ್ನು ಅಭಿವೃದ್ಧಿಪಡಿಸಿದೆ. ಕೋವಿಡ್ -19 ಸೋಂಕಿರುವ ವ್ಯಕ್ತಿಯನ್ನು ಸಂಪರ್ಕಿಸಿದರೆ API ಮೂಲಕ ಅದನ್ನು ಪತ್ತೆಹಚ್ಚಬಹುದಾಗಿದೆ. ಇದನ್ನು ದೇಶದ ಎಲ್ಲ ಆಸ್ಪತ್ರೆಗಳಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು, ಸೊಡಾರ್ API ಆ್ಯಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

click me!