ನವೆಂಬರ್ 1 ರಿಂದ Google Hangouts ಸಂಪೂರ್ಣ ಸ್ಥಗಿತ, ನಿಮ್ಮ ಡೇಟಾ, ಚಾಟ್ ಡೌನ್ಲೋಡ್ ಹೇಗೆ?

By Suvarna NewsFirst Published Sep 13, 2022, 8:42 PM IST
Highlights

2013ರಲ್ಲಿ ಗೂಗಲ್ ಆರಂಭಿಸಿ ಗೂಗಲ್ ಹ್ಯಾಂಗೌಟ್ ಇದೀಗ ಸ್ಥಗಿತಗೊಳ್ಳುತ್ತಿದೆ. ನವೆಂಬರ್ 1 ರಿಂದ ಗೂಗಲ್ ಹ್ಯಾಂಗೌಟ್ ಕಾರ್ಯನಿರ್ವಹಿಸುವುದಿಲ್ಲ.

ನವದೆಹಲಿ(ಸೆ.13): ಮಲ್ಟಿ ಪ್ಲಾಟ್‌ಫಾರ್ಮ್ಇನ್‌ಸ್ಟಾಂಗ್ ಮೆಸೇಜಿಂಗ್ ಆ್ಯಪ್ ಗೂಗಲ್ ಹ್ಯಾಂಗೌಟ್ ಸ್ಥಗಿತಗೊಳ್ಳುತ್ತಿದೆ. 9 ವರ್ಷಗಳ ಹಿಂದೆ ಆರಂಭಗೊಂಡ ಗೂಗಲ್ ಹ್ಯಾಂಗೌಟ್ ಇದೀಗ ನವೆಂಬರ್ 1 ರಿಂದ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ಗೂಗಲ್ ಈಗಾಗಲೇ ಆ್ಯಪ್ ನೋಟಿಫಿಕೇಶ್ ಮೂಲಕ ಗೂಗಲ್ ಚಾಟ್ ಆರಂಭಿಸಿದೆ. ಗೂಗಲ್ ಚಾಟ್ ಆರಂಭಿಸಿರುವ ಕಾರಣ ಗೂಗಲ್ ಹ್ಯಾಂಗೌಟ್ ಸ್ಥಗಿತಗೊಳಿಸಲಾಗುತ್ತಿದೆ. ಈಗಾಗಲೇ ಗೂಗಲ್ ತನ್ನ ಹ್ಯಾಂಗೌಟ್ ಗ್ರಾಹಕರಿಗೆ ನೂತನ ಗೂಗಲ್ ಚಾಟ್ ಆ್ಯಪ್ ಸೇರಿಕೊಳ್ಳಲು ನೋಟಿಫಿಕೇಶನ್ ನೀಡಿದೆ. ಇಷ್ಟೇ ಅಲ್ಲ ಗೂಗಲ್ ಹ್ಯಾಂಗೌಟ್ ಬಳಕೆದಾರರು ಈಗಾಗಲೇ ತಮ್ಮ ಹ್ಯಾಂಗೌಟ್ ಮೂಲಕ ನಡೆಸಿರುವ ಚಾಟ್ ಹಿಸ್ಟರಿ, ಮೆಸೇಜ್ ಸಂಪೂರ್ಣವಾಗಿ ಗೂಗಲ್ ಚಾಟ್‌ಗೆ ಹಸ್ತಾಂತರವಾಗಲಿದೆ. ಗ್ರಾಹಕರ ಸಂಪೂರ್ಣ ಹಿಸ್ಟರಿ ಚಾಟ್‌ನಲ್ಲಿ ಸಿಗಲಿದೆ ಎಂದು ಗೂಗಲ್ ಹೇಳಿದೆ.

ಗೂಗಲ್ ಹ್ಯಾಂಗೌಟ್(Google hangout) ಸ್ಥಗಿತಗೊಳ್ಳುತ್ತಿರುವ ಕಾರಣ ಬಳಕೆದಾರರ ಚಾಟ್, ಡೇಟಾವನ್ನು ಹಿಸ್ಟರಿ(History) ಆಯ್ಕೆಯಲ್ಲಿ ತೆರಳಿ ಡೌನ್ಲೋಡ್(Download) ಮಾಡಿಕೊಳ್ಳಲು ಗೂಗಲ್(Google) ಹೇಳಿದೆ. ನವೆಂಬರ್ 1 ರಿಂದ ಗೂಗಲ್ ಹ್ಯಾಂಗೌಟ್ ಆ್ಯಪ್(App) ವರ್ಶನ್ ಸ್ಥಗಿತಗೊಳ್ಳಲಿದೆ. ಇನ್ನು ವೆಬ್ ವರ್ಶನ್(Web) ಈ ವರ್ಷದ ಅಂತ್ಯದ ವರೆಗೆ ಕಾರ್ಯನಿರ್ವಹಿಸಲಿದೆ. 2023ರ ಜನವರಿಯಿಂದ ವೆಬ್ ವರ್ಶನ್ ಗೂಗಲ್ ಹ್ಯಾಂಗೌಟ್ ಸ್ಥಗಿತಗೊಳ್ಳಲಿದೆ ಎಂದು ಗೂಗಲ್ ಅಧಿಕೃತವಾಗಿ ಹೇಳಿದೆ.

 

Malware App ಪ್ಲೇಸ್ಟೋರ್‌ನ 35 ಆ್ಯಪ್ ಅಪಾಯಕಾರಿ, ನಿಮ್ಮ ಫೋನ್‌ನಲ್ಲಿದ್ದರೆ ತಕ್ಷಣ ಡಲೀಟ್ ಮಾಡಿ!

ಗೂಗಲ್ ಹ್ಯಾಂಗೌಟ್ ಸ್ಥಗಿತಗೊಳ್ಳುತ್ತಿರುವ ಕಾರಣ, ನವೆಂಬರ್ 1ರೊಳಗೆ ಬಳಕೆದಾರರು ಚಾಟ್ಸ್ ಹಾಗೂ ಮೀಡಿಯಾ ಹಿಸ್ಟರಿ ಡನ್ಲೋಡ್ ಅಥವಾ ಸೇವ್ ಮಾಡಿಕೊಳ್ಳಲು ಸೂಚಿಸಿದೆ. ಹ್ಯಾಂಗೌಟ್  ಸ್ಥಗಿತಗೊಂಡ ಬಳಿಕ ಬಳಕೆದಾರರಿಗೆ ಚಾಟ್ ಹಿಸ್ಟರಿ, ಡೇಟಾ ಸಿಗುವುದಿಲ್ಲ ಎಂದಿದೆ.

ಗೂಗಲ್ ಟೇಕೌಟ್(Google Takeout) ಮೂಲಕ ಗೂಗಲ್ ಹ್ಯಾಂಗೌಟ್ ಚಾಟ್, ಡೇಟಾ, ಮೀಡಿಯಾ ಡೌನ್ಲೋಡ್ ಮಾಡಿಕೊಳ್ಳಲು ಹ್ಯಾಂಗೌಟ್ ಆ್ಯಪ್ಸ್ ಕ್ಲಿಕ್ ಮಾಡಿ ನೆಕ್ಸ್ಟ್ ಸ್ಟೆಪ್ ಕ್ಲಿಕ್ ಮಾಡಿ. ಬಳಿಕ ಒನ್ ಟೈನ್ ಡೌನ್ಲೋಡ್ ಫಾರ್ ಬ್ಯಾಕ್ ಅಪ್ ಕ್ಲಿಕ್ ಮಾಡಿ. ಈ ವೇಳೆ ಫೈಲ್ ಟೈಪ್ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಎಕ್ಸ್‌ಪೋರ್ಟ್ ಮೀಡಿಯಾ ಕ್ಲಿಕ್ ಮಾಡಿ. ಈ ವೇಳೆ ಗೂಗಲ್ ಹ್ಯಾಂಗೌಟ್ ಫೈಲ್ ರವಾನೆ ಸಂದೇಶ ಕಳುಹಿಸಲಿದೆ. ಪ್ರಕ್ರಿಯೆ ಮುಗಿದ ಬಳಿಕ ಹ್ಯಾಂಗೌಟ್ ಸೈನ್ ಇನ್ ವೇಳೆ ನೀಡಿರುವ ಇ ಮೇಲ್‌ಗೆ ಸಂದೇಶ ಬರಲಿದೆ, ಮೇಲ್‌ನಲ್ಲಿ ಬಂದಿರುವ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ.

ಶಿಕ್ಷಣಕ್ಕಾಗಿ ಯಟ್ಯೂಬ್‌ನಿಂದ ಜಾಹೀರಾತು ಮುಕ್ತ ಯುಟ್ಯೂಬ್ ಪ್ಲೇಯರ್!

2022ರಲ್ಲಿ ಗೂಗಲ್ ಚಾಟ್ ಲಾಂಚ್ ಮಾಡಲಾಗಿದೆ. ಹ್ಯಾಂಗೌಟ್ ಬಳಕೆದಾರರು ನೇರವಾಗಿ ಗೂಗಲ್ ಚಾಟ್‌ಗೆ(google chat App) ಸೇರಿಕೊಳ್ಳಬುಹುದು. ಬಳಕೆದಾರರ ಸಂಪೂರ್ಣ ಡೇಟಾ ಚಾಟ್‌ಗೆ ವರ್ಗಾವಣೆ ಆಗಲಿದೆ. 
 

click me!