
ನವದೆಹಲಿ(ಸೆ.13): ಪ್ರತಿ ತಿಂಗಳ ಮೊಬೈಲ್ ರೀಚಾರ್ಜ್ ಅನಿವಾರ್ಯ. ಆದರೆ ಒಂದು ತಿಂಗಳ ಪ್ಲಾನ್ ರೀಚಾರ್ಜ್ ಮಾಡಿದರೆ ದಿನಗಳ ಸಂಖ್ಯೆ 24, 26 ಅಥವಾ ಗರಿಷ್ಠ 28 ದಿನ ಮಾತ್ರ. ಈ ಕುರಿತು ಗ್ರಾಹಕರು ಹಲವು ದೂರುಗಳನ್ನು ನೀಡಿದ್ದಾರೆ. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಟೆಲಿಕಾಂ ರೆಗ್ಯೂಲೇಟರ್ ಆಥಾರಿಟಿ ಆಫ್ ಇಂಡಿಯಾ ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ. ಕನಿಷ್ಠ ವ್ಯಾಲಿಟಿಡಿಯನ್ನು 30 ದಿನ ನೀಡಬೇಕು ಎಂದು ಎಚ್ಚರಿಸಿದೆ. ಪ್ರತಿ ಟೆಲಿಕಾಂ ಕಂಪನಿ ಕನಿಷ್ಠ ಒಂದು ಪ್ಲಾನ್ ವೌಚರ್, ಸ್ಪೆಷಲ್ ಟಾರಿಫ್ ವೌಚರ್ ಹಾಗೂ ಕೊಂಬೋ ವೌಚರ್ ಅವಧಿಯನ್ನು ಕನಿಷ್ಠ 30 ದಿನ ನೀಡಬೇಕು. ಗ್ರಾಹಕರು ಈ ತಿಂಗಳು ರಿಚಾರ್ಜ್ ಮಾಡಿದರೆ ಮುಂದಿನ ತಿಂಗಳು ಅದೆ ಸಮಯಕ್ಕೆ ರೀಚಾರ್ಜ್ ಮಾಡುವಂತಿರಬೇಕು. ಈ ರೀಚಾರ್ಜ್ ಪ್ಲಾನ್ ಪ್ರತಿ ತಿಂಗಳು ಇರಬೇಕು. ಗ್ರಾಹಕರು ಯಾವುದೇ ಸಮಸ್ಯೆ ಇಲ್ಲದ 30 ದಿನಗಳ ವ್ಯಾಲಿಟಿಡಿ ಪ್ಲಾನ್ ರೀಚಾರ್ಜ್ ಮಾಡುವಂತಿರಬೇಕು ಎಂದು ಟ್ರಾಯ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಏರ್‌ಟೆಲ್, ಜಿಯೋ ಸೇರಿದಂತೆ ಭಾರತದ ಟೆಲಿಕಾಂ ಸರ್ವೀಸ್ ಕಂಪನಿಗಳು 30 ದಿನ ವ್ಯಾಲಿಡಿಟಿಯ ಹೊಸ ಪ್ಲಾನ್ ಘೋಷಿಸಿದೆ.
ಗ್ರಾಹಕರು 30 ದಿನ ವ್ಯಾಟಿಲಿಡಿ ಪ್ಲಾನ್(30 days validity plan) ಯಾವುದೇ ಅಡೆ ತಡೆ ಇಲ್ಲದ ಬಳಕೆ ಮಾಡುವಂತಿರಬೇಕು. 30 ದಿನ ವ್ಯಾಲಿಟಿಡಿ ಪ್ಲಾನ್ ಮುಗಿಯುತ್ತಿದ್ದಂತೆ ಅಥವಾ ಮುಗಿಯುವುದೊಳಗೆ ರೀಚಾರ್ಜ್(Mobile Reacharge) ಮಾಡಿದರೆ ಹೊಸ ಪ್ಲಾನ್ ಮೊದಲ ರೀಚಾರ್ಜ್ ವ್ಯಾಲಿಟಿಡಿ ದಿನ ಮುಗಿದ ಬಳಿಕ ಆರಂಭವಾಗಬೇಕು. ಇದರಲ್ಲಿ ಯಾವುದೇ ಬದಲಾವಣೆ ಇರಬಾರದು ಎಂದು ಟ್ರಾಯ್(TRAI) ಎಚ್ಚರಿಸಿತ್ತು.
ಅಕ್ಚೋಬರ್ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭ, ಟೆಲಿಕಾಂ ಸಚಿವ ಘೋಷಣೆ!
ಟ್ರಾಯ್ ಎಚ್ಚರಿಕೆ ಬೆನ್ನಲ್ಲೇ ಟೆಲಿಕಾಂಪ ಸರ್ವೀಸ್ ಕಂಪನಿಗಳು ತಮ್ಮ ಪ್ಲಾನ್ ಬದಲಿಸಿದೆ. ಇದೀಗ 30 ದಿನ ಪ್ಲಾನ್ ಘೋಷಿಸಿದೆ.
ಜಿಯೋ:
30 ದಿನ ಪ್ಲಾನ್ ವೌಚರ್; 296 ರೂಪಾಯಿ, ಇದೇ ಪ್ಲಾನ್ ಮುಂದಿನ ತಿಂಗಳು ರಿಚಾರ್ಜ್ ಮಾಡಲು 259 ರೂಪಾಯಿ
ಏರ್‌ಟೆಲ್:
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 128 ರೂಪಾಯಿ, ಇದೇ ಪ್ಲಾನ್ ಮುಂದುವರಿಸಲು ಮುಂದಿನ ತಿಂಗಳು 131 ರೂಪಾಯಿ
ವೋಡಾಫೋನ್ ಐಡಿಯಾ
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 137 ರೂಪಾಯಿ, ಮುಂದಿನ ತಿಂಗಳು ಇದೇ ಪ್ಲಾನ್ ಮುಂದುವರಿಸಲು ರೀಚಾರ್ಜ್ ಬೆಲೆ 141 ರೂಪಾಯಿ
5ಜಿ ಸ್ಪೆಕ್ಟ್ರಮ್ ಹರಾಜು ಅಂತ್ಯ, 1.50 ಲಕ್ಷ ಕೋಟಿ ಮೊತ್ತಕ್ಕೆ ಗರಿಷ್ಠ ಬಿಡ್!
ಬಿಎಸ್ಎನ್ಎಲ್
30 ದಿನದ ವ್ಯಾಲಿಡಿಟಿ ವೌಚರ್ ಬೆಲೆ 199 ರೂಪಾಯಿ, ಇದೇ ಪ್ಲಾನ್ ಮತ್ತೆ ಮುಂದುವರಿಸಲು ಬೆಲೆ 229 ರೂಪಾಯಿ
ಸುರಕ್ಷಿತ ಸಂವಹನ
ಸಂವಹನವನ್ನು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಕೈಗೊಂಡ ಎಲ್ಲ ರೀತಿಯ ಕ್ರಮಗಳನ್ನೂ ನಾವು ಸ್ವಾಗತಿಸುತ್ತೇವೆ. ಸ್ಪಾ್ಯಮ್ ಕರೆಗಳನ್ನು ನಿಯಂತ್ರಿಸಲು ಮೊಬೈಲ್ ಸಂಖ್ಯೆಯ ಬಳಕೆದಾರರನ ಮಾಹಿತಿ ಪತ್ತೆ ಹಚ್ಚುವುದು ಅತ್ಯಂತ ಅವಶ್ಯಕವಾಗಿದೆ. ಕಳೆದ 13 ವರ್ಷಗಳಿಂದ ನಾವು ಇದೇ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಟ್ರಾಯ್ ಕೈಗೊಂಡ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ ಹಾಗೂ ಭವಿಷ್ಯದಲ್ಲಿ ಸರ್ಕಾರದ ಉಪಕ್ರಮಗಳಿಗೂ ನಾವು ಬೆಂಬಲ ಸೂಚಿಸುತ್ತೇವೆ ಎಂದು ಟ್ರೂಕಾಲರ್ ವಕ್ತಾರ ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.