2019ರಲ್ಲಿ ಜನರಿಗೆ ಹೆಚ್ಚು ಖುಷಿ ಕೊಟ್ಟ ವಿಚಾರ ಯಾವುದು? ಮಾಹಿತಿ ಬಹಿರಂಗ ಪಡಿಸಿದ ಟ್ವಿಟರ್!

By Suvarna News  |  First Published Sep 17, 2020, 2:14 PM IST

ಕಳೆದ ವರ್ಷ ಭಾರತೀಯರು, ಪ್ರತಿದಿನದ ಸಂಭಾಷಣೆಗಳಲ್ಲಿ ಆನಂದ ಕಂಡುಕೊಂಡರು ಎಂಬುದನ್ನು ಟ್ವಿಟ್ಟರ್ ಇಂಡಿಯಾ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಅಧ್ಯಯನ ತಂಡವು 2019ರ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೆ ಭಾರತದ 22 ನಗರಗಳಾದ್ಯಂತ 850,000 ಟ್ವೀಟ್‍ಗಳ ವಿಶ್ಲೇಷಣೆ ಕೈಗೊಂಡಿತು.


ಭಾರತ(ಸೆ.17): ನಮ್ಮ ಸುತ್ತಲಿನ ಪರಿಸರ ಮತ್ತು ಪ್ರತಿದಿನದ ಸಂಭಾಷಣೆಗಳಲ್ಲಿ ಆನಂದ ಅಡಗಿದೆ-ಅವು ಚಿರಪರಿಚಿತವಾದವುಗಳು ಹಾಗು ಸ್ವಾಭಾವಿಕವಾದವುಗಳು. 2020 ರಲ್ಲಿ ಸಾಮಾಜಿಕ ಅಂತರವನ್ನು ನಾವು ಕಾಯ್ದುಕೊಳ್ಳುತ್ತಿರುವ ಸಂದರ್ಭದಲ್ಲಿ, ಟ್ವಿಟ್ಟರ್ 2019ರ ಸಂತಸ ವಿಚಾರ ಮತ್ತೆ ನೆನಪಿಸುತ್ತಿದೆ.  ಭಾರತೀಯರು ಕಳೆದ ವರ್ಷ ತಮ್ಮ ದಿನನಿತ್ಯದ ಜೀವನದಲ್ಲಿ ಕಂಡುಕೊಂಡ ಆ ಸಣ್ಣ ಆನಂದದ  ಕ್ಷಣಗಳನ್ನು ಟ್ವಿಟರ್ ಬಹಿರಂಗ ಪಡಿಸಿದೆ. 

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!

Tap to resize

Latest Videos

ತಮ್ಮ ದಿನನಿತ್ಯದ ಕಥೆ ಹಾಗು ಅನುಭವಗಳನ್ನು ಹಂಚಿಕೊಳ್ಳಲು ಭಾರತೀಯರು ಸದಾ ಟ್ವಿಟರ್ ಮೊರೆ ಹೋಗಿದ್ದಾರೆ.   ಆಹಾರದ ಬಗ್ಗೆ ಸಾಧಾರಣ ಮಾತುಕತೆಯಾಡುವ ಮೂಲಕ  ಆನಂದವು ಈ ಚಿಕ್ಕ ಚಿಕ್ಕ ವಿಷಯಗಳಿಂದಲೇ ದೊರಕುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 2020ಕ್ಕೆ ಮುನ್ನ ಯಾವ ವಿಷಯಗಳು ಜನರಿಗೆ ಖುಷಿ ಕೊಟ್ಟಿತ್ತು ಎಂಬುದರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲು, ಟ್ವಿಟ್ಟರ್ ಇಂಡಿಯಾ ಸೇವೆಯ ಮೂಲಕ ನಡೆದ ಸಂಭಾಷಣೆಗಳನ್ನು ವಿಶ್ಲೇಷಿಸಿದೆ. 100 ದಿನಗಳ ಕಾರ್ಯಾವಧಿಯಲ್ಲಿ, ಕಳೆದ ವರ್ಷ ಇದೇ ಸಮಯದಲ್ಲಿ ಅಂದರೆ, ಸೆಪ್ಟೆಂಬರ್-ನವಂಬರ್ 2019ರಲ್ಲಿ ಭಾರತದ 22 ನಗರಗಳಾದ್ಯಂತ 850,000 ಟ್ವೀಟ್‍ಗಳ ಅಧ್ಯಯನ ಮಾಡಿತು.

ಟ್ವಿಟ್ಟರ್ ಬಳಸೋಕೆ ನೀವು ದುಡ್ಡುಕಟ್ಟೋ ಕಾಲ ಬರ್ತಿದೆಯಾ?

ಅಧ್ಯಯನ ತಂಡದ ಪ್ರಕಾರ ಹತ್ತು ಅತ್ಯಂತ ಹೆಚ್ಚು ಮಾತನಾಡಲ್ಪಟ್ಟ ವಿಷಯಗಳು: ಪ್ರಾಣಿಗಳು, ಆಚರಣೆ, ಸೆಲೆಬ್ರಿಟಿ ವಿಷಯಗಳು, ಒಳ್ಳೆಯ ಕೆಲಸಗಳನ್ನು ಮಾಡುವುದು, ಕುಟುಂಬ, ಆಹಾರ, ಹಾಸ್ಯ, ಹಳೆಯ ನೆನಪುಗಳು, ಪ್ರೇಮ ಮತ್ತು ಕ್ರೀಡೆ ವಿಷಯಗಳು ಇತ್ಯಾದಿ. ಎರ್ನಾಕುಲಮ್, ಹೈದರಾಬಾದ್ ಹಾಗು ಚೆನ್ನೈನಂತಹ ದಕ್ಷಿಣಾತ್ಯ ನಗರಗಳು ಕ್ರೀಡೆಗಳು, ಆಹಾರ, ಆಚರಣೆ, ಸೆಲೆಬ್ರಿಟಿ ವಿಷಯಗಳು ಹಾಗು ಹಾಸ್ಯದ ವಿಷಯಗಳ ಸುತ್ತ ಸಂಭಾಷಣೆ ನಡೆಸಿದರೆ, ಲೂಧಿಯಾನ, ಪ್ರಣಯದ ಸಂಭಾಷಣೆಗಳಲ್ಲಿ ಅಗ್ರಸ್ಥಾನ ಪಡೆದಿತ್ತು. ರಾಯಪುರವು ಪ್ರಾಣಿಗಳ ಕುರಿತಾದ ಸಂಭಾಷಣೆಗಳನ್ನು ಹೊಂದಿದ್ದರೆ, ಭುವನೇಶ್ವರವು ಬಹುತೇಕವಾಗಿ ಕುಟುಂಬ ಹಾಗು ಒಳ್ಳೆಯ ಕೆಲಸಗಳನ್ನು ಮಾಡುವ ಸಂಭಾಷಣೆಗಳನ್ನು ನಡೆಸಿತ್ತು. ಹಳೆಯ ನೆನಪುಗಳ ಸಂಭಾಷಣೆಗಳಲ್ಲಿ ಮುಂಬೈ ನಗರವು ಮುಂಚೂಣಿಯಲ್ಲಿತ್ತು.

 ಟ್ವಿಟ್ಟರ್ ಎಂದರೆ ವಿವಿಧ ಧ್ವನಿಗಳು ತಮ್ಮ ಆಸಕ್ತಿಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸೂಚಿಸುವ ಒಂದು ಆಧುನಿಕ ವೇದಿಕೆ. ಕಳೆದ ವರ್ಷ ಜನರು ಜೀವನದ ಅನೇಕ ಸಂತೋಷಗಳಲ್ಲಿ ತೊಡಗಿಕೊಂಡಿದ್ದರು. ಅoಟಿveಡಿsಚಿಣioಟಿ ಖeಠಿಟಚಿಥಿ ದೊಂದಿಗೆ ನಾವು ಭಾರತದ ವೈವಿಧ್ಯಮಯ ಭಾಗಗಳಿಂದ ಬಂದ ಸಂತೋಷದ ಆ ವಿವಿಧ ವಿಷಯಗಳ ಸುತ್ತ ನಡೆದ ಆ ಚುರುಕಿನ ಸಂಭಾಷಣೆಗಳನ್ನು ಮರಳಿ ತರಲು ಉದ್ದೇಶಿಸಿದ್ದೇವೆ. ಈ ಸಂಭಾಷಣೆಗಳನ್ನು ಹಂಚಿಕೊಳ್ಳುವುದು, ಭಾರತೀಯರಿಗೆ ಅವರ ಸಂತೋಷದ ಕ್ಷಣಗಳಿಗೆ ಕಾರಣವಾದ ಆ ಚಿಕ್ಕ ಚಿಕ್ಕ ಆನಂದಗಳ ಬಗ್ಗೆ ಅವರಿಗೆ ಅoಟಿveಡಿsಚಿಣioಟಿ ಖeಠಿಟಚಿಥಿ ಮೂಲಕ ನೆನಪು ಮಾಡಿಕೊಡುವುದು ಇದರ ಉದ್ದೇಶ ಎಂದು ಟ್ವಿಟ್ಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಾಹೇಶ್ವರಿ ಹೇಳಿದರು.
 

click me!