3.6 ಬಿಲಿಯನ್‌ ಅಮೆರಿಕನ್ ಡಾಲರ್‌ ಸಂಗ್ರಹಿಸಿ ದಾಖಲೆ ಬರೆದ ಫ್ಲಿಪ್‌ಕಾರ್ಟ್

By Suvarna NewsFirst Published Jul 12, 2021, 8:06 PM IST
Highlights
  • ಗ್ರಾಹಕ ಇಂಟರ್ನೆಟ್‌ ವ್ಯವಸ್ಥೆಯ ಅಭಿವೃದ್ಧಿಗೆ ಫ್ಲಿಪ್‌ಕಾರ್ಟ್‌ನಿಂದ ಹಣ ಸಂಗ್ರಹ
  •  ಸವರಿನ್‌ ಫಂಡ್, ನಿವೃತ್ತಿ ವೇತನ ನಿಧಿ ಮತ್ತು ಜಾಗತಿಕ ಖಾಸಗಿ ಈಕ್ವಿಟಿ ಹೂಡಿಕೆಗಳಿಂದ ಸಂಗ್ರಹ
  • 350 ಮಿಲಿಯನ್‌ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಫ್ಲಿಪ್‌ಕಾರ್ಟ್ ಮತ್ತೊಂದು ಹೆಜ್ಜೆ

ಬೆಂಗಳೂರು(ಜು.12): ಭಾರತದ ಪ್ರಮುಖ ಗ್ರಾಹಕ ಇಂಟರ್ನೆಟ್‌ ವ್ಯವಸ್ಥೆಯಾದ ಫ್ಲಿಪ್‌ಕಾರ್ಟ್  ಗ್ರೂಪ್‌, ಭಾರತದಲ್ಲಿ ಡಿಜಿಟಲ್‌ ವಾಣಿಜ್ಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನೆಲೆಗೆ ತರುವ ಉದ್ದೇಶದಿಂದ ಇಂದು 3.6 ಬಿಲಿಯನ್‌ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿದ್ದಾಗಿ ಹೇಳಿದೆ. ಈ ಹೂಡಿಕೆಯನ್ನು ಪ್ರಮುಖ ಹೂಡಿಕೆದಾರರದಾದ ಜಾಗತಿಕ ಹೂಡಿಕೆದಾರರಾದ ಸವರಿನ್‌ ಫಂಡುಗಳು, ಖಾಸಗಿ ಈಕ್ವಿಟಿ ಮತ್ತು ವಾಲ್‌ಮಾರ್ಟ್‌ನ ಪೂರಕ ಹೂಡಿಕೆ ವ್ಯವಸ್ಥೆಗಳ ಮೂಲಕ ಮಾಡಲಾಗಿದೆ. 

ಫ್ಲಿಪ್‌ಕಾರ್ಟ್ ಕ್ಯಾಶ್ ಆನ್ ಡೆಲಿವರಿ ಮತ್ತಷ್ಟು ಸುಲಭ; ಫೋನ್‌ಪೇಯಿಂದ QR Code ಸ್ಕ್ಯಾನ್!.

ಈ ಹೂಡಿಕೆ ಕ್ರೋಡೀಕರಣವನ್ನು ಹಣಕಾಸು ಹೂಡಿಕೆದಾರರಾದ ಜಿಐಸಿ, ಕೆನಡಾದ ನಿವೃತ್ತಿ ವೇತನ ಹೂಡಿಕೆ ಮಂಡಳಿ (ಸಿಪಿಪಿ ಇನ್‌ವೆಸ್ಟ್‌ಮೆಂಟ್ಸ್‌), ಸಾಫ್ಟ್‌ ಬ್ಯಾಂಕ್‌ ವಿಷನ್‌ ಫಂಡ್‌ 2 ಮತ್ತು ವಾಲ್‌ಮಾಟ್‌F ಮತ್ತು ಡಿಸ್‌ರಪ್ಟ್‌ ಎಡಿಯ ಸವರಿನ್‌ ಫಂಡಗಳು, ಖತಾರ್‌ ಇನ್‌ವೆಸ್ಟ್‌ ಮೆಂಟ್‌ ಅಥಾರಿಟಿ, ಖಝಾನಾ ನಾಸಿನಲ್‌ ಬೆರ್ಹಾದ್, ಮರ್ಕ್ಯೂಯಿ ಇನ್‌ವೆಸ್ಟರ್ಸ್‌ ಟೀಸೆಂಟ್‌, ವಿಲ್ಲೋಗ್ಬಿ ಕ್ಯಾಪಿಟಲ್‌, ಅಂತಾರಾ ಕ್ಯಾಪಿಟಲ್‌, ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಮತ್ತು ಟೈಗರ್‌ ಗ್ಲೋಬಲ್‌ಗಳ ಮೂಲಕ ಸಂಗ್ರಹಿಸಲಾಗಿದೆ. ಈ ಗುಂಪುಗಳ ಒಟ್ಟು ಹೂಡಿಕೆ ಅನಂತರದ ಮೊತ್ತವು $37.6 ಬಿಲಿಯನ್‌ ಆಗಿರಲಿದೆ.

ಗ್ರಾಹಕರಿಗೆ ಸುಲಭ ಲಭ್ಯತೆ ಮತ್ತು ಮೌಲ್ಯಗಳೊಂದಿಗೆ ಭಾರತದಲ್ಲಿ ಗ್ರಾಹಕ ಅಂತರ್ಜಾಲ ಪರಿಸರ ವ್ಯವಸ್ಥೆಯನ್ನು ಪರಿವರ್ತನೆಗೊಳಿಸಲು ಫ್ಲಿಪ್‌ಕಾರ್ಟ್‌ ಬದ್ಧವಾಗಿದೆ. ಹೂಡಿಕೆದಾರರ ಹೂಡಿಕೆಯು ಭಾರತದಲ್ಲಿ ಡಿಜಿಟಲ್‌ ವಾಣಿಜ್ಯದ ಮೇಲಿನ ಭರವಸೆ ಮತ್ತು ಫ್ಲಿಪ್‌ಕಾರ್ಟ್‌ ಮೇಲಿನ ಭರವಸೆಯನ್ನು ಪ್ರತಿಬಿಂಬಿಸುತ್ತದೆ. ನಾವು ಗ್ರಾಹಕರ ಸೇವೆಯಲ್ಲಿ ತೊಡಗಿಕೊಂಡಿರುವಂತೆ ಇದು ಕಿರಾಣಿ ಅಂಗಡಿಗಳೂ ಸೇರಿದಂತೆ ಭಾರತದ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯಾಪಾರ ನಡೆಸುವ ಉದ್ಯಮದಾರರ ಅಭಿವೃದ್ಧಿಗೆ ನೆರವು ನೀಡಲಿದೆ. ಇದರೊಂದಿಗೆ ನಾವು ಮೇಡ್‌ ಇನ್‌ ಇಂಡಿಯಾ ತಂತ್ರಜ್ಞಾನದೊಂದಿಗೆ ಹೊಸ ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಗ್ರಾಹಕರ ಅನುಭವಗಳನ್ನು ಪರಿವರ್ತಿಸುವುದರೊಂದಿಗೆ ವಿಶ್ವದರ್ಜೆಯ ಪೂರೈಕೆ ವ್ಯವಸ್ಥೆಯೊಂದನ್ನು ನಡೆಸುವಲ್ಲಿ ಮುಂದುವರಿಯಲಿದ್ದೇವೆ ಎಂದು  ಫ್ಲಿಪ್‌ಕಾರ್ಟ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಕಲ್ಯಾಣ್‌ ಕೃಷ್ಣಮೂರ್ತಿ ಹೇಳಿದ್ದಾರೆ.

ಸ್ಥಳೀಯ ಉದ್ಯಮಿಗಳ ವ್ಯವಹಾರ ವೃದ್ಧಿಗೆ ಫ್ಲಿಪ್ ಕಾರ್ಟ್‌ನಿಂದ ಡಿಜಿಟಲ್ ಪ್ಲಾಟ್ ಫಾರ್ಮ್!

ಭಾರತದಾದ್ಯಂತ ಫ್ಲಿಪ್‌ಕಾರ್ಟ್‌ 350 ಮಿಲಿಯನ್‌ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಪ್ರಮುಖ ವಿಭಾಗಗಳಾದ ಫ್ಯಾಶನ್‌, ಪ್ರವಾಸ, ದಿನಸಿ ವಸ್ತುಗಳು ಮುಂತಾದುವುಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದು ಭಾರತದ ಪ್ರಬುದ್ಧಗೊಳ್ಳುತ್ತಿರುವ ಡಿಜಿಟಲ್‌ ವಾಣಿಜ್ಯ ಉದ್ಯಮ ಕ್ಷೇತ್ರವನ್ನು ಪ್ರತಿಬಿಂಬಿಸುತ್ತದೆ. ಸಮೂಹದ ಫ್ಯಾಶನ್‌ ಘಟಕವಾದ ಮಿಂತ್ರಾ, ಈ ವಿಭಾಗದಲ್ಲಿ ನಾಯಕನಾಗಿ ಹೊರಹೊಮ್ಮಿದ್ದು, ಫ್ಲಾಶನ್‌ ಕ್ಷೇತ್ರದಲ್ಲಿ ಸಮಗ್ರ ಮತ್ತು ಅತ್ಯಾಧುನಿಕ ಆಯ್ಕೆಗಳೊಂದಿಗೆ ಇತ್ತೀಚಿನ ಸಂಗ್ರಹಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರೊಂದಿಗೆ ಗುಂಪಿನ ಮೂಲ ಸಾಮರ್ಥ್ಯವಾದ ಫ್ಲಿಪ್‌ಕಾರ್ಟ್‌ನ ಪೂರೈಕೆ ವ್ಯವಸ್ಥೆ ಇಕಾರ್ಟ್‌, ವೇರ್‌ಹೌಸ್‌ಗಳಿಗೆ ಮೂಲಸೌಕರ್ಯ ಹೂಡಿಕೆಯೊಂದಿಗೆ 1ಲಕ್ಷಕ್ಕೂ ಮಿಕ್ಕಿ ಉದ್ಯೋಗಿಗಳನ್ನು ಹೊಂದಿದ್ದು, ಭಾರತದ ಶೇ.90ಕ್ಕೂ ಹೆಚ್ಚಿನ ಪಿನ್‌ಕೋಡ್‌ಗಳಿಗೆ ಸಮರ್ಥವಾಗಿ ಪೂರೈಕೆ ಮಾಡುತ್ತಿದೆ.

click me!