ಬೆಂಗಳೂರು(ಅ.01): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ದೇಶದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹವಾದ ದೇಣಿಗೆ ಪ್ಲಾಟ್ ಫಾರ್ಮ್ ಆಗಿರುವ ಗೀವ್ ಇಂಡಿಯಾದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಪೀಡಿತರಾಗಿರುವವರು ಸೇರಿದಂತೆ ಅಗತ್ಯವಿರುವ ಸಮುದಾಯಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ `ದಾನ ಉತ್ಸವ ಮತ್ತು ಗೀವಿಂಗ್ ಟ್ಯೂಸ್ ಡೇ ಇಂಡಿಯಾ ಗಾಗಿ ಈ ಒಪ್ಪಂದ ಮಾಡಿಕೊಂಡಿವೆ.
ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಗ್ಯಾಲಕ್ಸಿ F ಸೀರಿಸ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್!...
ಸಂಕಷ್ಟದ ಸಂದರ್ಭದಲ್ಲಿ ಸಮುದಾಯಕ್ಕೆ ವಾಪಸ್ ನೀಡುವ ಬದ್ಧತೆಯನ್ನು ಹೊಂದಿರುವ ಫ್ಲಿಪ್ ಕಾರ್ಟ್ ಈ ಉದ್ದೇಶಕ್ಕಾಗಿ ಗೀವಿಂಗ್ ಟ್ಯೂಸ್ ಡೇ ಇಂಡಿಯಾ ಮತ್ತು ದಾನ ಉತ್ಸವದ ಸಹಯೋಗ ಮಾಡಿಕೊಂಡಿದೆ. ಈ ಕಾರ್ಯಕ್ರಮ ಅಕ್ಟೋಬರ್ 2 ರಂದು ಆರಂಭವಾಗಲಿದ್ದು, ಫ್ಲಿಪ್ ಕಾರ್ಟ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಈ ಕಳಕಳಿಗಳನ್ನು ಪ್ರಮುಖವಾಗಿಸಲಿದೆ ಮತ್ತು ದೇಣಿಗೆ ನೀಡುವಂತೆ ತನ್ನ ಸಿಬ್ಬಂದಿ, ಮಾರಾಟಗಾರರು ಮತ್ತು ಗ್ರಾಹಕರಿಗೆ ಉತ್ತೇಜಿಸಲಿದೆ ಹಾಗೂ ಧನಾತ್ಮಕವಾಗಿ ಪರಿಣಾಮಕಾರಿಯಾದ ದೇಣಿಗೆಗಳನ್ನು ನೀಡುವಂತೆ ಪ್ರೇರೇಪಿಸಲಿದೆ. ಗೀವಿಂಗ್ ಟ್ಯೂಸ್ ಡೇ ಇಂಡಿಯಾ ಮತ್ತು ದಾನ ಉತ್ಸವ 2020 ಯಲ್ಲಿ ಕೌಶಲ್ಯಾಭಿವೃದ್ಧಿ, ಸುಸ್ಥಿರವಾದ ಜೀವನೋಪಾಯ ಮತ್ತು ಒಳಗೊಳ್ಳುವಿಕೆ ಹಾಗೂ ಮಹಿಳಾ ಸಬಲೀಕರಣದಂತಹ ಅಂಶಗಳು ಸೇರಿರುತ್ತವೆ.
ಫ್ಲಿಪ್‌ಕಾರ್ಟ್‌ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ TV ಬಿಡುಗಡೆ..
ಹಬ್ಬದ ಋತು ಹತ್ತಿರ ಬರುತ್ತಿದ್ದು, ಇದಕ್ಕಾಗಿ ಭಾರತ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ಶಕ್ತಿಯುತವಾದ ತಂತ್ರಜ್ಞಾನವನ್ನು ಬಳಸಿಕೊಂಡು ದೇಣಿಗೆಯನ್ನು ನೀಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದೆ. ಈ ವ್ಯವಸ್ಥೆಯ ಮೂಲಕ ಫ್ಲಿಪ್ ಕಾರ್ಟ್ 250 ದಶಲಕ್ಷಕ್ಕೂ ಅಧಿಕ ಬಳಕೆದಾರರಿಗೆ ತಡೆರಹಿತವಾದ ಮತ್ತು ಅನುಕೂಲಕರವಾದ ರೀತಿಯಲ್ಲಿ ಆನ್ ಲೈನ್ ಮೂಲಕ ದೇಣಿಗೆ ನೀಡಿ ದುರ್ಬಲರಿಗೆ ನೆರವಾಗುವಂತೆ ಮಾಡಲಿದೆ. ಫ್ಲಿಪ್ ಕಾರ್ಟ್ ನ ಗ್ರಾಹಕರು ತಡೆರಹಿತವಾದ ಮತ್ತು ಸುಲಭವಾದ ರೀತಿಯ ವ್ಯವಸ್ಥೆಯಾಗಿರುವ ಸೂಪರ್ ಕಾಯಿನ್ಸ್ ಮೂಲಕವೂ ತಮ್ಮ ಕರೆನ್ಸಿಯಲ್ಲಿಯೇ ದೇಣಿಗೆಯನ್ನು ನೀಡಬಹುದಾಗಿದೆ. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಕ್ಷಾಂತರ ವ್ಯವಹಾರಗಳು ಮತ್ತು ಜೀವನೋಪಾಯಗಳ ಮೇಲೆ ಗಂಭೀರ ಸ್ವರೂಪದಲ್ಲಿ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಈ ಹಿಂದಿಗಿಂತಲೂ ಸಮುದಾಯಗಳಿಗೆ ವಾಪಸ್ ನೀಡುವುದು ಈಗ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ ಆರೋಗ್ಯ ಬಿಕ್ಕಟ್ಟು ಸಾಮಾಜಿಕ ಅಸಮಾನತೆಗೆ ಒತ್ತು ನೀಡಿದಂತೆ, ಫ್ಲಿಪ್ ಕಾರ್ಟ್ ತನ್ನ ವಿಸ್ತಾರವಾದ ತಲುಪುವಿಕೆ ಮತ್ತು ಲಭ್ಯತೆ ಮೂಲಕ ಪಾಲುದಾರರನ್ನು ತಲುಪಿ ಸಮುದಾಯಗಳನ್ನು ಪ್ರೇರೇಪಿಸಿ ದೇಣಿಗೆ ನೀಡುವಂತೆ ಮಾಡಲಿದೆ.
ಫ್ಲಿಪ್ ಕಾರ್ಟ್ ನ ಸುಸ್ಥಿರತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮುಖ್ಯಸ್ಥ ಮಹೇಶ್ ಪ್ರತಾಪ್ ಸಿಂಗ್ ಅವರು ಮಾತನಾಡಿ, ``ಫ್ಲಿಪ್ ಕಾರ್ಟ್ ನಲ್ಲಿ ನಾವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಧನಾತ್ಮಕವಾದ ಪರಿಣಾಮಗಳನ್ನು ಉಂಟು ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಹಬ್ಬದ ಸಂದರ್ಭದಲ್ಲಿ ಮೌಲ್ಯಯುತವಾದ ಕಾಳಜಿಗಳಿಗೆ ಪ್ರೋತ್ಸಾಹ ನೀಡುವುದು, ಸಾಂಕ್ರಾಮಿಕದಿಂದ ಬಾಧಿತರಾಗಿರುವ ಸಮುದಾಯಗಳಿಗೆ ಸೇವೆ ಸಲ್ಲಿಸುವುದು ನಮ್ಮ ಗುರಿಯಾಗಿದೆ. ಉತ್ತಮ ಕಾಳಜಿಗಾಗಿ ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ದೇಣಿಗೆ ನೀಡಲು ಗ್ರಾಹಕರು, ಸಿಬ್ಬಂದಿ ಮತ್ತು ಮಾರಾಟಗಾರರಲ್ಲಿ ನಮ್ಮ ಪರಿಸರ ವ್ಯವಸ್ಥೆಗೆ ಪ್ರೇರಣೆ ನೀಡುವುದು ಸಹ ನಮ್ಮ ಉದ್ದೇಶವಾಗಿದೆ’’ ಎಂದು ತಿಳಿಸಿದರು.
ಗೀವ್ ಇಂಡಿಯಾದ ಅಧ್ಯಕ್ಷ ಇ.ಆರ್.ಅಶೋಕ್ ಕುಮಾರ್ ಅವರು ಮಾತನಾಡಿ, ``ಫ್ಲಿಪ್ ಕಾರ್ಟ್ ಸಮುದಾಯವು ನೀಡುವ ಎಲ್ಲಾ ಪರಿಸರ ವ್ಯವಸ್ಥೆಗೆ ತರುವುದನ್ನು ನಾವು ನಿಜವಾಗಿಯೂ ಗೌರವಿಸುತ್ತೇವೆ. ಈ ಪ್ಲಾಟ್ ಫಾರ್ಮ್ ಗಳೊಂದಿಗೆ ಈ ಪಾಲುದಾರಿಕೆಗಳು ಸಮಾಜಕ್ಕೆ ಪ್ರತಿಯೊಬ್ಬ ಭಾರತೀಯನೂ ವಾಪಸ್ ನೀಡುವ ನಮ್ಮ ದೂರದೃಷ್ಟಿಯ ಪರಿಕಲ್ಪನೆಯನ್ನು ಮತ್ತಷ್ಟು ಹತ್ತಿರಕ್ಕೆ ತರಲಿವೆ. ಈಗ ಸಾಂಕ್ರಾಮಿಕವು ಈ ಹಿಂದೆಂದಿಗಿಂತಲೂ ಅತ್ಯಂತ ಪ್ರಮುಖವಾಗಿದೆ. ಎಲ್ಲರಿಗೂ ದಾನ ಉತ್ಸವದ ಶುಭಾಶಯಗಳು!’’ ಎಂದು ತಿಳಿಸಿದರು.
ಕೋವಿಡ್ ರೆಸ್ಪಾನ್ಸ್ ಫಂಡ್ ಮೂಲಕ 4 ಕೋಟಿ ರೂಪಾಯಿಗಳ ದೇಣಿಗೆ ಸಂಗ್ರಹಿಸುವ ಸಲುವಾಗಿ ಫ್ಲಿಪ್ ಕಾರ್ಟ್ ಗೀವ್ ಇಂಡಿಯಾ ಜತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದಲ್ಲದೇ ಫ್ಲಿಪ್ ಕಾರ್ಟ್ ತನ್ನ ಸೂಪರ್ ಕಾಯಿನ್ಸ್ ಕಾರ್ಯಕ್ರಮ (ರಿವಾರ್ಡ್ ಕಾರ್ಯಕ್ರಮ)ವನ್ನು ಬಳಸಿಕೊಂಡಿದೆ ಹಾಗೂ ಅರ್ಹ ಗ್ರಾಹಕರು ಮುಂಚೂಣಿಯಲ್ಲಿರುವ ಕಾರ್ಮಿಕರು ಹಾಗೂ ದುರ್ಬಲ ವರ್ಗದ ಸಮುದಾಯಗಳಿಗೆ 4 ಲಕ್ಷಕ್ಕೂ ಅಧಿಕ ಮಾಸ್ಕ್ ಗಳನ್ನು ದಾನ ಮಾಡಲು ಮತ್ತು 8 ಲಕ್ಷಕ್ಕೂ ಅಧಿಕ ಬಡವರ್ಗದ ಜನರಿಗೆ ಊಟ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಗೈಡ್ ಸ್ಟಾರ್ ಇಂಡಿಯಾದ ಸಿಇಒ ಮತ್ತು ಗೀವಿಂಗ್ ಟ್ಯೂಸ್ ಡೇ ಇಂಡಿಯಾದ ಗ್ಲೋಬಲ್ ಲೀಡರ್ ಪುಷ್ಪ ಅಮನ್ ಸಿಂಗ್ ಅವರು ಮಾತನಾಡಿ, ``ಪ್ರತಿಯೊಬ್ಬ ವ್ಯಕ್ತಿಯೂ ಎಷ್ಟು ಅಥವಾ ಎಷ್ಟು ಪುಟ್ಟ ಜೀವಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಫ್ಲಿಪ್ ಕಾರ್ಟ್ ನೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಮೂಲಕ ತಮ್ಮ ಔದಾರ್ಯತೆಯನ್ನು ತೋರ್ಪಡಿಸಲು ಲಕ್ಷಾಂತರ ಭಾರತೀಯರಿಗೆ ವರ್ಚುವಲ್ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ’’ ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಔದಾರ್ಯವನ್ನು ತೋರ್ಪಡಿಸಲು ಮತ್ತು ನಿಸ್ವಾರ್ಥವಾಗಿ ದೇಣಿಗೆ ನೀಡಲು ಪ್ರೇರೇಪಿಸುವ ಒಂದು ಕಾರ್ಯಕ್ರಮ ಈ ದಾನ ಉತ್ಸವವಾಗಿದೆ. ಕೇವಲ ಬೆರಳೆಣಿಕೆಯಷ್ಟು ಜನರಿಂದ ಆರಂಭವಾದ ಈ ಕಾರ್ಯಕ್ರಮ ಈಗ ಪ್ರತಿವರ್ಷ ಅಕ್ಟೋಬರ್ 2 ರಿಂದ 8 ರವರೆಗೆ ನಡೆಯುವ ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಗೀವಿಂಗ್ ಟ್ಯೂಸ್ ಡೇ ಒಂದು ಜಾಗತಿಕ ಮಟ್ಟದ ಔದಾರ್ಯದ ಆಂದೋಲನವಾಗಿದೆ. ಇದು 70 ಕ್ಕೂ ಹೆಚ್ಚು ದೇಶಗಳಲ್ಲಿ ಇದ್ದು, ಭಾರತದಲ್ಲಿ ಗೈಡ್ ಸ್ಟಾರ್ ಇಂಡಿಯಾ ದಾನ ಉತ್ಸವವನ್ನಾಗಿ ಆಚರಿಸುತ್ತಿದೆ. ಈ ಹಿಂದೆ ಫ್ಲಿಪ್ ಕಾರ್ಟ್ ದಾನ ಉತ್ಸವ ಮತ್ತು ಗೀವಿಂಗ್ ಟ್ಯೂಸ್ ಡೇ ಇಂಡಿಯಾ ಜತೆಗೆ ಪಾಲುದಾರಿಕೆಯನ್ನು ಹೊಂದಿತ್ತು ಮತ್ತು ಸುಸ್ಥಿರತೆ, ಮಹಿಳಾ ಸಬಲೀಕರಣ, ಪ್ರಾಣಿಗಳ ಕಲ್ಯಾಣ ಮತ್ತು ವಿಕಲಚೇತನರಿಗಾಗಿ ಸಮಾನತೆ ಸೇರಿದಂತೆ ಇನ್ನಿತರೆ ಸಾಮಾಜಿಕ ಕಳಕಳಿಯ ವಿಚಾರಗಳಿಗೆ ಬೆಂಬಲವನ್ನು ನೀಡುತ್ತಾ ಬಂದಿದೆ.