ಐಟಿ ಹಾಗೂ ತಂತ್ರಜ್ಞಾನದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಡುತ್ತಿದೆ. ಇದೀಗ ಗೂಗಲ್ ಹಾಗೂ ಆ್ಯಪಲ್ ಭಾರತದಲ್ಲಿ ಆ್ಯಪ್ ಸ್ಟೋರ್ ಆರಂಭಿಸಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಕೇಂದ್ರ ಸರ್ಕಾರ ಭಾರತದ ಆ್ಯಪ್ ಸ್ಟೋರ್ ಆರಂಭಿಸಲು ಮುಂದಾಗಿದೆ.
ನವದೆಹಲಿ(ಅ.02): ಭಾರತದ ಬಹುತೇಕ ವ್ಯವಹಾರಗಳು ಡಿಜಿಟಲ್ ಆಗಿದೆ. ವಿಶ್ವದ ಅತೀ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನೂ ಹೊಂದಿದೆ. ಎಲೆಕ್ಟ್ರಾನಿಕ್, ತಂತ್ರಜ್ಞಾನಗಳಲ್ಲಿ ಭಾರತದ ಮಹತ್ತರ ಪ್ರಗತಿ ಸಾಧಿಸಿದೆ. ಹೀಗಾಗಿ ವಿಶ್ವದ ಪ್ರಮುಖ ಕಂಪನಿಗಳು ಭಾರತದತ್ತ ಮುಖ ಮಾಡುತ್ತಿದೆ. ಭಾರತದಲ್ಲಿ ವ್ಯವಹಾರ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರ ಫಲವಾಗಿ ಆ್ಯಪಲ್ ಇದೀಗ ಭಾರತದಲ್ಲಿ ಆನ್‌ಲೈನ್ ಸ್ಟೋರ್ ಆರಂಭಿಸಿದೆ. ಗೂಗಲ್ ಸ್ಟೋರ್ ಆರಂಭಿಸಲು ತಯಾರಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತದ ಆ್ಯಪ್ ಸ್ಟೋರ್ ಆರಂಭಿಸಲು ಮುಂದಾಗಿದೆ.
ನಿಯಮ ಬಾಹಿರ ಚಟುವಟಿಕೆ; ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಡಿಲೀಟ್!.
ಟೆಕ್ನಾಲಜಿ ದಿಗ್ಗಜರು, ಉದ್ಯಮಿಗಳು ನೀಡಿದ ಮನವಿಯನ್ನು ಕೇಂದ್ರ ಮಾಹಿತ ಮತ್ತು ತಂತ್ರಜ್ಞಾನ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಮೆರಿಕದ ಗೂಗಲ್ ಹಾಗೂ ಆ್ಯಪಲ್ ಭಾರತದ ಡಿಜಿಟಲ್ ಮಾರ್ಕೆಟ್ ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಭಾರತದ ಆ್ಯಪ್ ಸ್ಟೋರ್ ಆರಂಭಿಸಲು ಮನವಿ ಮಾಡಲಾಗಿತ್ತು. ಈ ಮನವಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಸ್ಪಂದಿಸಿದ್ದಾರೆ.
ಭಾರತದ ಮಿತ್ರೊನ್ ಆ್ಯಪ್ ಡಿಲೀಟ್ ಮಾಡಿದ ಗೂಗಲ್ ; ಇದರ ಮೂಲ ಪಾಕಿಸ್ತಾನ!
ಭಾರತವು ಈಗಾಗಲೇ ಸರ್ಕಾರದ ಆಡಳಿತ ಕೇಂದ್ರಿತ ಅಪ್ಲಿಕೇಶನ್‌ಗಳಿಗಾಗಿ ಆಪ್ ಸ್ಟೋರ್ ಅನ್ನು ಹೊಂದಿದೆ. ಇದೀಗ ವಿದೇಶಿ ಕಂಪನಿಗಳು ಭಾರತದ ಡಿಜಿಟಲ್ ಮಾರ್ಕೆಟ್ ಸ್ಟೋರ್ ಆಕ್ರಮಿಸಿಕೊಳ್ಳುವ ಬದಲು ಭಾರತದ ಆಡಳಿತ ಕೇಂದ್ರಿತ ಆ್ಯಪ್ ಸ್ಟೋರ್ ವಿಸ್ತರಿಸವುದು ಉಚಿತ ಎಂಬು ಅಭಿಪ್ರಾಯ ವ್ಯಕ್ತವಾಗಿತ್ತು. ಗೂಗಲ್ ಪ್ಲೇನಂತಹ ಜನಪ್ರಿಯ ಕೊಡುಗೆಗಳ ಜೊತೆಗೆ ಪರ್ಯಾಯ ಅಪ್ಲಿಕೇಶನ್ ಸ್ಟೋರ್‌ಗಳನ್ನು ಭಾರತ ಬಿಡುಗಡೆ ಮಾಡಿದರೆ, ಆತ್ಮನಿರ್ಭರ್ ಭಾರತದ ಪರಿಕಲ್ಪನೆಗೆ ಪೂರಕವಾಗಲಿದೆ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರ್ಕಾರವು ತನ್ನದೇ ಆದ ಆಪ್ ಸ್ಟೋರ್ ಆರಂಭಿಸಲು ಹಿಂಜರಿಯುತ್ತಿಲ್ಲ. ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿಡಿಎಸಿ) ಅಭಿವೃದ್ಧಿಪಡಿಸಿದ ಸರ್ಕಾರಿ ಅಪ್ಲಿಕೇಶನ್‌ಗಳಿಗಾಗಿ ಅಸ್ತಿತ್ವದಲ್ಲಿರುವ ಡಿಜಿಟಲ್ ಸ್ಟೋರ್, ಇ-ಗವರ್ನೆನ್ಸ್ ಅಪ್ಲಿಕೇಶನ್ ಉಮಾಂಗ್, ಹೆಲ್ತ್ ಅಪ್ಲಿಕೇಶನ್ ಆರೋಗ್ಯ ಸೇತು ಮತ್ತು ಶೇಖರಣಾ ಅಪ್ಲಿಕೇಶನ್ ಡಿಜಿಲಾಕರ್‌ನಂತ ಹಲವು ಅಪ್ಲಿಕೇಶನ್‌ಗಳು ಭಾರತದ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.
ಭಾರತದಲ್ಲಿ ಲಭ್ಯವಾಗುವ ಆಪ್ಲಿಕೇಶನ್, ಆ್ಯಪ್‌ಗಳು ಕೇಂದ್ರ ಸರ್ಕಾರದ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಾಗಬೇಕು. ಇದು ನಿಜವಾದ ಆತ್ಮನಿರ್ಭರ್ ಭಾರತ ಯೋಜನೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ತಜ್ಞರ ಪ್ರಕಾರ ಇದು ಸುಲಭದ ಮಾತಲ್ಲ. ಕಾರಣ ಒಂದು ತಜ್ಞ ತಂಡ ಆ್ಯಪ್ ಸ್ಟೋರ್ ಮೇಲೆ 24 ಗಂಟೆ ನಿಗಾ ಇಡಬೇಕು. ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿಡಬೇಕು ಎಂದಿದ್ದಾರೆ.