ಬಿಗ್‌ ಬಿಲಿಯನ್ ಡೇ ಪ್ರಯುಕ್ತ, ಮ್ಯಾಕ್ಸ್ ಫ್ಯಾಷನ್ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!

By Suvarna News  |  First Published Sep 27, 2020, 7:59 PM IST
  • ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಫ್ಯಾಷನ್ ತಲುಪಿಸುವ ಉದ್ದೇಶ
  • ಫ್ಲಿಪ್‍ಕಾರ್ಟ್ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್‍ನಲ್ಲೂ ಮ್ಯಾಕ್ಸ್ ಫ್ಯಾಷನ್ ಉತ್ಪನ್ನಗಳು ಲಭ್ಯ
     

ಬೆಂಗಳೂರು(ಸೆ.27): ಭಾರತದ ದೇಶೀಯ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ ಫ್ಯಾಷನ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಮ್ಯಾಕ್ಸ್ ಫ್ಯಾಷನ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂಬರುವ ಹಬ್ಬದ ಋತು ಮತ್ತು ಫ್ಲಿಪ್‍ಕಾರ್ಟ್‍ನ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದುಕೊಂಡಿದೆ. ಈ ಒಪ್ಪಂದದ ಮೂಲಕ ಭಾರತದ  ಫ್ಯಾಷನ್ ಬ್ರಾಂಡ್‍ಗಳನ್ನು ಭಾರತೀಯ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.

ಫ್ಲಿಪ್‌ಕಾರ್ಟ್ ಸಹಯೋಗದಲ್ಲಿ ಗ್ಯಾಲಕ್ಸಿ F ಸೀರಿಸ್ ಬಿಡುಗಡೆ ಮಾಡಲಿದೆ ಸ್ಯಾಮ್ಸಂಗ್!...

Tap to resize

Latest Videos

undefined

ಭಾರತದಲ್ಲಿ 100 ಕ್ಕೂ ಹೆಚ್ಚು ನಗರಗಳಲ್ಲಿ 375 ಕ್ಕೂ ಅಧಿಕ ಸ್ಟೋರ್‌ಗಳನ್ನು ಹೊಂದಿರುವ ಮ್ಯಾಕ್ಸ್ ಫ್ಯಾಷನ್ ದೇಶದ ಅತಿ ದೊಡ್ಡ ಫ್ಯಾಷನ್ ಸಂಸ್ಥೆ ಎನಿಸಿದೆ. ಮ್ಯಾಕ್ಸ್ ಫ್ಯಾಷನ್ ಈ ಪಾಲುದಾರಿಕೆ ಮೂಲಕ ತನ್ನ ಮಾರುಕಟ್ಟೆಯನ್ನು ಇನ್ನೂ ವಿಸ್ತಾರಗೊಳಿಸಿಕೊಳ್ಳಲಿದೆ ಮತ್ತು ಅಕ್ಸೆಸರಿಗಳು, ಪಾದರಕ್ಷೆ, ಮಹಿಳೆಯರ ಉಡುಪು, ಪುರುಷರ ಉಡುಪುಗಳು ಮತ್ತು ಮಕ್ಕಳ ಉಡುಪುಗಳನ್ನು ಇನ್ನೂ ಹೆಚ್ಚಿನ ಭಾರತೀಯ ಗ್ರಾಹಕರಿಗೆ ತಲುಪಿಸಲಿದೆ. ಫ್ಲಿಪ್‍ಕಾರ್ಟ್‍ನಲ್ಲಿ ಮ್ಯಾಕ್ಸ್ ಫ್ಯಾಷನ್ ಸ್ಟೋರ್ 13,000 ಕ್ಕೂ ಹೆಚ್ಚು ಹೊಸ ಸ್ಟೈಲ್‍ಗಳ ಉಡುಪುಗಳನ್ನು ಹೊಂದಿರಲಿದೆ. ಇವುಗಳಲ್ಲಿ ಬಹುತೇಕ ಉತ್ಪನ್ನಗಳು 1000 ರೂಪಾಯಿಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಫ್ಲಿಪ್‍ಕಾರ್ಟ್‍ನೊಂದಿಗಿನ ಈ ಪಾಲುದಾರಿಕೆಯಿಂದಾಗಿ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಫ್ಲಿಪ್‍ಕಾರ್ಟ್ ಅತ್ಯುತ್ತಮವಾದ ವ್ಯಾಪ್ತಿಯ ಮೂಲಕ ವ್ಯಾಪಕವಾದ ರೀತಿಯಲ್ಲಿ ವ್ಯಾಪಾರಿಗಳನ್ನು ತಲುಪಲು ಬ್ರ್ಯಾಂಡ್‍ಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ ಫ್ಯಾಷನ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅವಕಾಶವನ್ನು ನೀಡುತ್ತದೆ. ಇದಲ್ಲದೇ, ಈ ಪಾಲುದಾರಿಕೆಯು ಫ್ಲಿಪ್‍ಕಾರ್ಟ್‍ನ ಫ್ಯಾಷನ್ ಪೋರ್ಟ್‍ಫೋಲಿಯೋವನ್ನು ನಿರಂತರವಾಗಿ ವಿಸ್ತರಣೆ ಮಾಡಲು ಅವಕಾಶ ನೀಡಲಿದ್ದು, ಭಾರತದಾದ್ಯಂತ ಇತ್ತೀಚಿನ ಟ್ರೆಂಡ್‍ಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಫ್ಲಿಪ್‌ಕಾರ್ಟ್‌ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ TV ಬಿಡುಗಡೆ.

ಶಾಪರ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವರಿಗೆ ಕೈಗೆಟುಕುವ ಫ್ಯಾಷನ್ ಅನ್ನು ಒದಗಿಸಿ ಅನುಕೂಲಕರವಾದ ಶಾಪಿಂಗ್ ಅನುಭವವನ್ನು ನೀಡುವತ್ತ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಎರಡು ಬ್ರ್ಯಾಂಡ್‍ಗಳ ಸಹಭಾಗಿತ್ವವು ಇತ್ತೀಚಿನ ಫ್ಯಾಷನ್‍ನ ವಿಸ್ತಾರವಾದ ಆಯ್ಕೆಗಳನ್ನು ಲಕ್ಷಾಂತರ ಗ್ರಾಹಕರಿಗೆ ಒದಗಿಸಲಿದೆ.

ಫ್ಲಿಪ್‍ಕಾರ್ಟ್‍ನಲ್ಲಿ ಮ್ಯಾಕ್ಸ್ ಫ್ಯಾಷನ್ ಅನ್ನು ಪರಿಚಯಿಸಲು ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಇದು ಈ ವರ್ಷದ ಅತ್ಯಂತ ದೊಡ್ಡ ಪಾಲುದಾರಿಕೆಯಾಗಿದೆ. ದೇಶಾದ್ಯಂತ ಇರುವ ಗ್ರಾಹಕರಿಗೆ ಇತ್ತೀಚಿನ ಟ್ರೆಂಡ್‍ನ ಫ್ಯಾಷನ್ ಉಡುಪುಗಳನ್ನು ತಲುಪಿಸುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಮತ್ತು ಮ್ಯಾಕ್ಸ್ ಫ್ಯಾಷನ್‍ನೊಂದಿಗಿನ ನಮ್ಮ ಸಹಭಾಗಿತ್ವವು ಈ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ. ನಾವು ಮೆಟ್ರೋಗಳು ಮತ್ತು 2+ ದರ್ಜೆಯ ಪ್ರದೇಶದ ಪಟ್ಟಣಗಳಲ್ಲಿರುವ ಗ್ರಾಹಕರ ನಡುವಿನ ಅಂತರಕ್ಕೆ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಈ ಮೂಲಕ ಗ್ರಾಹಕರು ಅತ್ಯುತ್ತಮವಾದ ಫ್ಯಾಷನ್ ಟ್ರೆಂಡ್‍ಗಳನ್ನು ಪಡೆಯಬಹುದಾಗಿದೆ. ಉದ್ಯಮದಲ್ಲಿ ಅತ್ಯುತ್ತಮವಾದ ಸಹಭಾಗಿತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ಮ್ಯಾಕ್ಸ್ ಫ್ಯಾಷನ್‍ನೊಂದಿಗೆ ಮಾಡಿಕೊಂಡಿರುವ ಸಹಭಾಗಿತ್ವವು ವಿಸ್ತಾರವಾದ ಆಯ್ಕೆ, ಶ್ರೇಣಿ ಮತ್ತು ಗುಣಮಟ್ಟದ ಫ್ಯಾಷನ್ ಉತ್ಪನ್ನಗಳ ಮೂಲಕ ಅತ್ಯದ್ಭುತವಾದ ಮೌಲ್ಯವನ್ನು ಒದಗಿಸಿ ಕೊಡಲಿದೆ ಎಂದು ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉಪಾಧ್ಯಕ್ಷ ನಿಶಿತ್ ಗಾರ್ಗ್ ಹೇಳಿದರು. 

ಭಾರತದಲ್ಲಿ ಮ್ಯಾಕ್ಸ್ ಫ್ಯಾಷನ್ ಏಕೈಕ ಅತಿದೊಡ್ಡ ಫ್ಯಾಷನ್ ಬ್ರ್ಯಾಂಡ್ ಆಗಿದೆ. ದೇಶದೆಲ್ಲೆಡೆ ಸ್ಟೋರ್‍ಗಳನ್ನು ಹೊಂದಿರುವುದಲ್ಲದೇ, ಆನ್‍ಲೈನ್ ವೇದಿಕೆಯಲ್ಲೂ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಹಲವಾರು ಗ್ರಾಹಕರನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟರ ಮಟ್ಟಿಗೆ ತಲುಪುವ ಮೂಲಕ ನಾವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದೇವೆ. ನಮ್ಮ ರೀಟೇಲ್ ಸ್ಟೋರ್‍ಗಳು ಮತ್ತು ಆನ್‍ಲೈನ್ ಜಾಲದ ಮೂಲಕ ಪ್ರಗತಿ ಕಾಣುತ್ತಿದ್ದೇವೆ. ಫ್ಲಿಪ್‍ಕಾರ್ಟ್ ಜತೆಗಿನ ಸಹಭಾಗಿತ್ವದೊಂದಿಗೆ ನಾವು ನಮ್ಮ ವಹಿವಾಟನ್ನು 2 ಮತ್ತು 3 ನೇ ದರ್ಜೆಯ ನಗರಗಳಲ್ಲಿನ ಮುಂದಿನ 200 ದಶಲಕ್ಷ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ. ಈ ಮೂಲಕ ನಂಬಲು ಸಾಧ್ಯವಿಲ್ಲದ ಬೆಲೆಗಳಲ್ಲಿ ಆಕರ್ಷಕವಾದ ಫ್ಯಾಷನ್ ಅನ್ನು ಅವರಿಗೆ ನೀಡಲಿದ್ದೇವೆ  ಎಂದು ಮ್ಯಾಕ್ಸ್ ಫ್ಯಾಷನ್ ಇಂಡಿಯಾದ ಸಿಇಒ ವ್ಯವಸ್ಥಾಪಕ ನಿರ್ದೇಶಕ ಶೀತಲ್ ಮೆಹ್ತಾ ಹೇಳಿದರು.

click me!