ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್‌‌ಕಾರ್ಟ್ ಹೊಸ ಹೆಜ್ಜೆ!

By Suvarna News  |  First Published Sep 17, 2020, 2:53 PM IST
  •  ಸಣ್ಣ ಕಚೇರಿಗಳು & ಗೃಹ ಕಚೇರಿಗಳು, ಎಸ್ಎಂಬಿಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ವ್ಯವಹಾರಗಳಿಗೆ ಜಿಎಸ್ ಟಿ ಇನ್ವಾಯ್ಸ್ ಸೌಲಭ್ಯ
  • ಹಬ್ಬದ ಋತು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತನ್ನ ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್ ಕಾರ್ಟ್ ಆದ್ಯತೆ

ಬೆಂಗಳೂರು(ಸೆ.17): ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ವ್ಯವಹಾರ ಗ್ರಾಹಕರನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದೀಗ ಗ್ರಾಹಕರು ತಮ್ಮ ಇನ್ವಾಯ್ಸ್ ಗಳಲ್ಲಿ ಜಿಎಸ್ ಟಿಐಎನ್ ಪಡೆಯಲು ಅವಕಾಶ ಕಲ್ಪಿಸುತ್ತಿದೆ. ಇದರ ಮೂಲಕ ವ್ಯವಹಾರ ಗ್ರಾಹಕರು ತಮ್ಮ ಖರೀದಿಗಳ ಮೇಲೆ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆಯಬಹುದಾಗಿದೆ. ವ್ಯವಹಾರಗಳು ಮತ್ತು ಉದ್ದಿಮೆಗಳಿಗೆ ಆನ್ ಲೈನ್ ಕಾಮರ್ಸ್ ಅನ್ನು ಕಲ್ಪಿಸುವತ್ತ ತೆಗೆದುಕೊಳ್ಳುತ್ತಿರುವ ಹಲವಾರು ಉಪಕ್ರಮಗಳಲ್ಲಿ ಇದು ಒಂದಾಗಿದೆ. ಲಕ್ಷಾಂತರ ವ್ಯವಹಾರಸ್ಥರು ತಮ್ಮ ಇನ್ವಾಯ್ಸ್ ಗಳ ಮೇಲೆ ಜಿಎಸ್ ಟಿಐಎನ್ ಪಡೆಯುವ ಅವಕಾಶದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದರ ಮೂಲಕ ಗ್ರಾಹಕರು ತಮ್ಮ ಖರೀದಿ ಸಂಬಂಧಿತ ವ್ಯವಹಾರಗಳ ಮೇಲೆ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಕ್ಲೇಮ್ ಮಾಡಿ, ತಮ್ಮ ಖರೀದಿಗಳ ಮೇಲೆ ಶೇ.28 ರವರೆಗೆ ಉಳಿತಾಯ ಮಾಡಿಕೊಳ್ಳಬಹುದಾಗಿದೆ.

70,000ಕ್ಕೂ ಅಧಿಕ ಉದ್ಯೋಗ: ನಿರುದ್ಯೋಗಿಗಳಿಗೆ ಇದು ಬಿಗ್​ ​ಡೇಸ್

Latest Videos

undefined

ಈ ಪ್ಲಾಟ್ ಫಾರ್ಮ್ ವಿವಿಧ ಬಗೆಯ ಮತ್ತು ವಿವಿಧ ಗಾತ್ರದ ಸಂಸ್ಥೆಗಳಿಗೆ ನೆರವಾಗುತ್ತಿದೆ. ಅವುಗಳಲ್ಲಿ ಕಾರ್ಪೊರೇಟ್ ಗಳು, ಉತ್ಪಾದನೆ ಮತ್ತು ವೇರ್ ಹೌಸಿಂಗ್ ಕಚೇರಿಗಳು, ಎಸ್ಒಎಚ್ಒಗಳು, ಸಿಎ ಸಂಸ್ಥೆಗಳ ಕಚೇರಿಗಳು, ಕ್ಲಿನಿಕ್ ಗಳು, ಕಾನೂನು ಕಂಪನಿಗಳು, ಕನ್ಸಲ್ಟೆನ್ಸಿಗಳು ಮತ್ತು ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಬ್ಯಾಂಕುಗಳು, ಸಲೂನುಗಳಂತಹ ಸೇವಾ ಆಧಾರಿತ ಸಂಸ್ಥೆಗಳಿಗೆ ನೆರವು ನೀಡಲಿದೆ.

ಭಾರತದಲ್ಲಿ ಕಚೇರಿ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಉದ್ಯಮದ ಪರಿಣತರ ಪ್ರಕಾರ, 50 ದಶಲಕ್ಷ ವ್ಯವಹಾರಗಳು ಉದ್ಯೋಗಾಧಾರಿತ ಕಚೇರಿ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಇದರ ಪರಿಣಾಮ, ಇ-ಕಾಮರ್ಸ್ ಮೂಲಕ ವರ್ಷದಿಂದ ವರ್ಷಕ್ಕೆ ಶೇ.80 ರಷ್ಟು ಪ್ರಗತಿಯನ್ನು ಕಾಣಬಹುದಾಗಿದೆ. ಸಾಂಕ್ರಾಮಿಕವು ಕಚೇರಿ ಮತ್ತು ಮೂಲಸೌಕರ್ಯಗಳ ಮೇಲೆ ಸಾಕಷ್ಟು ಒತ್ತಡವನ್ನು ತಂದಿದೆ. ಕಂಪನಿಗಳು ತಮ್ಮ ಕಚೇರಿ ಮೂಲಸೌಕರ್ಯಗಳೂ ಮತ್ತು ಅಗತ್ಯತೆಗಳ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವುದಷ್ಟೇ ಅಲ್ಲ, ತಮ್ಮ ನಗದು ಹರಿವಿನ ಬಗ್ಗೆಯೂ ಅವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಕಚೇರಿಗಳಿಗೆ ಸಂಬಂಧಿಸಿದ ಖರೀದಿಗಳಿಗೆ ಜಿಎಸ್ ಟಿ ಇನ್ವಾಯ್ಸ್ ಸಾಮರ್ಥ್ಯಗಳಂತಹ ಕ್ರಮಗಳು ಈ ಸಂಸ್ಥೆಗಳಿಗೆ ಹಣ ಉಳಿತಾಯ ಮತ್ತು ಸಮರ್ಪಕವಾಗಿ ಸಂಪನ್ಮೂಲಗಳನ್ನು ಪುನರ್ ನಿಗದಿಪಡಿಸಲು ನೆರವಾಗುತ್ತದೆ. ಇಂತಹ ಅವಕಾಶಗಳು ಮತ್ತು ಇದರಿಂದ ತಮ್ಮ ವ್ಯವಹಾರಕ್ಕೆ ಅನುಕೂಲವಾಗುವ ಸೌಲಭ್ಯಗಳ ಬಗ್ಗೆ ಫ್ಲಿಪ್ ಕಾರ್ಟ್ ಗೆ ಪ್ರತಿ ತಿಂಗಳು ಸರಾಸರಿ 4000 ದಷ್ಟು ವಿಚಾರಣೆಗಳು ಬ್ರ್ಯಾಂಡ್ ಗಳು ಮತ್ತು ಒ & ಐ ನಿಂದ ಬರುತ್ತಿವೆ.

ಫ್ಲಿಪ್ ಕಾರ್ಟ್ ನೊಂದಿಗೆ ವ್ಯವಹಾರ ನಡೆಸುವ ವ್ಯಾಪಾರಿ ಸಂಸ್ಥೆಗಳು ಸ್ಟೆಶನರಿ. ಮೊಬೈಲ್ ಗಳು, ಟಿವಿಗಳು, ಕಚೇರಿ ಕುರ್ಚಿಗಳು, ಲ್ಯಾಪ್ ಟಾಪ್ ಇತ್ಯಾದಿ ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ. ಇವುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿ ಬರುವ ಸಮಯ ಉಳಿತಾಯ, ಛಿದ್ರಗೊಂಡ ಪೂರೈಕೆದಾರರ ಮೂಲದಿಂದ ದೂರ ಇರುವ ಮೂಲಕ ಅತ್ಯಂತ ಪಾರದರ್ಶಕವಾಗಿ ಖರೀದಿ ಮಾಡಬಹುದಾಗಿದೆ. ಜಿಎಸ್ ಟಿ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆಯಲು ವ್ಯವಹಾರಸ್ಥರು ಅಥವಾ ವ್ಯಾಪಾರಿಗಳು ಜಿಎಸ್ ಟಿ ಶಕ್ತಗೊಂಡ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ತಮ್ಮ ಜಿಎಸ್ ಟಿಐಎನ್ ವಿವರಗಳನ್ನು ಚೆಕೌಟ್ ಸಂದರ್ಭದಲ್ಲಿ ಭರ್ತಿ ಮಾಡಬೇಕು ಹಾಗೂ ಈ ಜಿಎಸ್ ಟಿ ಇನ್ವಾಯ್ಸ್ ಅನ್ನು ಕ್ಲೇಮ್ ಪ್ರಯೋಜನಗಳಿಗೆ ಸಲ್ಲಿಸಬೇಕು.

2020 ರ ಸೆಪ್ಟೆಂಬರ್ ಆರಂಭದಲ್ಲಿ ಫ್ಲಿಪ್ ಕಾರ್ಟ್ ತನ್ನ ಫ್ಲಿಪ್ ಕಾರ್ಟ್ ಹೋಲ್ ಸೇಲ್ ಎಂಬ ಡಿಜಿಟಲ್ ಬಿ2ಬಿ ಮಾರ್ಕೆಟ್ ಪ್ಲೇಸ್ ಅನ್ನು ಆರಂಭಿಸಿತ್ತು. ಫ್ಲಿಪ್ ಕಾರ್ಟ್ ಗ್ರೂಪ್ ನ ಹೆಮ್ಮೆಯ ಸೇವೆ ಇದಾಗಿದ್ದು, ರೀಟೇಲ್ ಪರಿಸರ ವ್ಯವಸ್ಥೆಗೆ ಒನ್-ಸ್ಟಾಪ್ ಪರಿಹಾರವನ್ನು ನೀಡುವ ಮೂಲಕ ತನ್ನ ಗ್ರಾಹಕರಿಗೆ ಬಿ2ಬಿ ವ್ಯವಹಾರಗಳನ್ನು ನೀಡುವ ಬದ್ಧತೆಯನ್ನು ತೋರಿದೆ. ಇದರಲ್ಲಿ ಭಾರತೀಯ ವ್ಯಾಪಾರಸ್ಥರಿಗೆ ವಿಸ್ತಾರವಾದ ಉತ್ಪನ್ನಗಳ ಆಯ್ಕೆಯೊಂದಿಗೆ ಗಣನೀಯವಾದ ಮೌಲ್ಯವನ್ನು ನೀಡುತ್ತಿದೆ. ಇದು ತಂತ್ರಜ್ಞಾನ ಆಧಾರಿತ ಪರಿಹಾರವಾಗಿದ್ದು, ವ್ಯವಹಾರವನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತದೆ. ಫ್ಲಿಪ್ ಕಾರ್ಟ್ ಹೋಲ್ ಸೇಲ್ ಪ್ರಸ್ತುತ ಫ್ಯಾಷನ್ ರೀಟೇಲರ್ ಗಳು, ವಿಶೇಷವಾಗಿ ಪಾದರಕ್ಷೆ ಮತ್ತು ಜವಳಿ ಉತ್ಪನ್ನಗಳಿಗೆ ಲಭ್ಯವಿದ್ದು, ಗುರುಗ್ರಾಮ, ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯಾಚರಣೆಯಲ್ಲಿದೆ. 2020 ರ ಅಂತ್ಯದ ವೇಳೆಗೆ ಇನ್ನೂ ಹೆಚ್ಚು ನಗರಗಳಿಗೆ ಇದನ್ನು ವಿಸ್ತರಣೆ ಮಾಡುವ ಯೋಜನೆಯನ್ನು ರೂಪಿಸಿದೆ.

click me!