ಕೊರೋನಾ ವೈರಸ್ ಕಾರಣ ಇದೀಗ ವ್ಯವಹಾರಗಳು ಸಂಪೂರ್ಣವಾಗಿ ಡಿಜಿಟಲ್ ಆಗಿವೆ. ಅದರಲ್ಲೂ ಹಣಕಾಸು ವ್ಯವಾಹರಕ್ಕೆ ಡಿಜಿಟಲ್ ಪೇಮೆಂಟ್ ಅವಲಂಬಿತವಾಗಿದೆ. ಆದರೆ ಆನ್‌ಲೈನ್ ಪೇಮೆಂಟ್ ಹೆಚ್ಚಾದಂತೆ ವಂಚನೆಗಳು ಹೆಚ್ಚಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ(ಸೆ.19): ಕೊರೋನಾ ವೈರಸ್ ಬಳಿಕ ವಿಶ್ವದಲ್ಲಿನ ಬಹುತೇಕ ವ್ಯವಹಾರಗಳೆಲ್ಲಾ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಡಿಜಿಟಲ್ ವ್ಯವಹಾರ ಇದೀಗ ಪ್ರಮುಖವಾಗಿದೆ. ಅದರಲ್ಲೂ ಹಣದ ವ್ಯವಾಹಾರ, ಬಿಲ್ ಪಾವತಿ, ಹಣ ವರ್ಗಾವಣೆ, ಖರೀದಿ ಬಿಲ್ ಪಾವತಿ ಸೇರಿದಂತೆ ಬಹೇತಕ ವ್ಯವಹಾರ ಡಿಜಿಟಲ್ ಪೇಮೆಂಟ್ ಮೂಲಕವೇ ನಡೆಯುತ್ತಿದೆ. ಇದರಿಂದ ಆನ್‌ಲೈನ್ ವಂಚನೆ ಕೂಡ ಹೆಚ್ಚಾಗುತ್ತಿದೆ.
ಖೊಟ್ಟಿ ನಕ್ಷೆ ತೋರಿಸಿದ ಪಾಕ್‌ಗೆ ಧೋವಲ್ ಬಿಸಿ!
undefined
ಡಿಜಿಟಲ್ ಪೇಮೆಂಟ್ ವಂಚನೆ ಕುರಿತು ಎಚ್ಚರದಿಂದ ಇರಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಹೇಳಿದ್ದಾರೆ. ಕೇರಳ ಪೊಲೀಸ್ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ COCONXIII-2020 ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಜಿತ್ ದೋವಲ್ ಮಹತ್ವದ ಮಾಹಿತಿ ಹಂಚಿಕೊಂಡರು.
ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಖ್ಯಾತೆ; ಹಿರಿಯ ಅಧಿಕಾರಿಗಳ ಜೊತೆ ಅಜಿತ್ ದೋವಲ್ ಸಭೆ!.
ನಾವೆಲ್ಲ ಡಿಜಿಟಲ್ ವ್ಯವಹಾರ, ಡಿಜಿಟಲ್ ಪೇಮೆಂಟ್ ಅವಲಂಬಿತವಾಗಿದ್ದೇವೆ. ಇದನ್ನು ಬಳಸಿಕೊಳ್ಳುವ ಕೆಲವರು ವಂಚನೆ ಮಾಡುತ್ತಿದಾರೆ. ಕೇಂದ್ರ ಸರ್ಕಾರ ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ಸ್ಟಾರ್ಟರ್ಜಿ 2020 ಮೂಲಕ ಸುರಕ್ಷಿತ ವ್ಯವಹಾರಕ್ಕೆ ಆದ್ಯತೆ ನೀಡಿದೆ. ವಂಚನೆಯಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ದೋವಲ್ ಹೇಳಿದರು.
ಸೈಬರ್ ಕ್ರೈಮ್ ಶೇಕಡಾ 500 ರಷ್ಟು ಹೆಚ್ಚಾಗಿದೆ. ಹೆಚ್ಚಿನವರಿಗೆ ಸರಿಯಾದ ಅರಿವು ಇಲ್ಲ. ಸುರಕ್ಷಿತ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ನಿಮ್ಮ ಹಣ ಮಾತ್ರವಲ್ಲ, ವೈಯುಕ್ತಿಕ ಮಾಹಿತಿ ಸೇರಿದಂತ ಹಲವು ಡಾಟಾಗಳು ಸುರಕ್ಷಿತವಾಗಿರಲಿದೆ ಎಂದು ದೋವಲ್ ಹೇಳಿದ್ದಾರೆ.
ಡಿಜಿಟಲ್ ಪಾವತಿ ಮೇಲೆ ಹೆಚ್ಚಿನ ಅವಲಂಬನೆಯಿಂದಾಗಿ ಹಣಕಾಸಿನ ವಂಚನೆಗಳ ಪ್ರಮಾಣ ಹೆಚ್ಚಾಗಿದೆ. ವಿವಿಧ ತಪ್ಪು ಮಾಹಿತಿ, ನಕಲಿ ಸುದ್ದಿ ಇತ್ಯಾದಿಗಳ ಮೂಲಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ವಂಚಕರು ಬಳಸಿಕೊಳ್ಳುತ್ತಿದ್ದಾರೆ. ಸೈಬರ್ ದತ್ತಾಂಶವು ನಮ್ಮ ನಾಗರಿಕರ ಗೌಪ್ಯತೆಗೆ ಧಕ್ಕೆ ತರುವಂತಹ ಮಾಹಿತಿಯನ್ನು ಹೊರತೆಗೆಯಲಾಗುತ್ತಿದೆ ಎಂದು ದೋವಲ್ ಹೇಳಿದ್ದಾರೆ.