ಫ್ಲಿಪ್ ಕಾರ್ಟ್ ಮೂಲಕ ಮೊಟೊರೋಲಾ ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಬಿಡುಗಡೆ!

By Suvarna NewsFirst Published Sep 17, 2020, 7:21 PM IST
Highlights
  • ಜಾಗತಿಕವಾಗಿ ಬಿಡುಗಡೆ ಮಾಡುತ್ತಿರುವ ಮೊಟೊರೋಲಾ
  • ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕ ಸ್ಮಾರ್ಟ್ ಉತ್ಪನ್ನಗಳು ಲಭ್ಯ
  • ವಾಶಿಂಗ್ ಮಶೀನ್, ರೆಫ್ರಿಜರೇಟರ್ ಮತ್ತು ಏರ್ ಕಂಡೀಶನರ್ ಗಳ ನೈಜವಾದ ಸ್ಮಾರ್ಟ್

ಬೆಂಗಳೂರು(ಸೆ.17): ಸ್ಮಾರ್ಟ್ ಟಿವಿ ಮತ್ತು ಹೋಂ ಆಡಿಯೋ ಶ್ರೇಣಿಯ ಯಶಸ್ವಿ ಕಾರ್ಯಾರಂಭದ ನಂತರ ಮೊಟೊರೋಲಾ ಇದೀಗ ಫ್ಲಿಪ್ ಕಾರ್ಟ್ ನೊಂದಿಗಿನ  ತನ್ನ ಪಾಲುದಾರಿಕೆಯನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿದೆ. ಭಾರತದ ದೇಶೀಯವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮೂಲಕ ಮೊಟೊರೋಲಾ ಭಾರತದಲ್ಲಿ ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ವಿಭಾಗಕ್ಕೆ ಪ್ರವೇಶ ಮಾಡಿದೆ. ವಾಶಿಂಗ್ ಮಶಿನ್, ರೆಫ್ರೆಜರೇಟರ್ ಮತ್ತು ಏರ್ ಕಂಡೀಶನರ್ ಗಳು ಸೇರಿದಂತೆ ಇನ್ನಿತರೆ ಉತ್ಪನ್ನಗಳಿಗೆ ಹೊಸ ಆಫರ್ ಗಳನ್ನು ನೀಡುವ ಮೂಲಕ ಭಾರತೀಯ ಗ್ರಾಹಕರಿಗೆ `ನಿಜವಾದ ಸ್ಮಾರ್ಟ್, ನಿಜವಾದ ಕ್ರಾಂತಿಕಾರ’ ಉತ್ಪನ್ನಗಳನ್ನು ನೀಡುತ್ತಿದೆ. ಮೊಟೊರೋಲಾದ ಪ್ರೀಮಿಯಂ ಬ್ರ್ಯಾಂಡ್ ಪ್ರತಿಪಾದನೆ ಮತ್ತು ಡೈನಾಮಿಕ್ ಗ್ರಾಹಕರ ಬಗ್ಗೆ ಫ್ಲಿಪ್ ಕಾರ್ಟ್ ಮಾಡಿಕೊಂಡಿರುವ ಅರ್ಥದ ಆಧಾರದಲ್ಲಿ ಈ ಕ್ರಾಂತಿಕಾರಕ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ.

ವ್ಯವಹಾರ ಗ್ರಾಹಕರ ಪ್ರಗತಿಗೆ ಫ್ಲಿಪ್‌‌ಕಾರ್ಟ್ ಹೊಸ ಹೆಜ್ಜೆ!

ಒಂದು ವರ್ಷದಲ್ಲಿ, ಫ್ಲಿಪ್ ಕಾರ್ಟ್ ಮತ್ತು ಮೊಟೊರೋಲಾ ಮಾರುಕಟ್ಟೆಯಲ್ಲಿ ಬಾಳಿಕೆ ಬರುವ ಗ್ರಾಹಕ ಉತ್ಪನ್ನಗಳನ್ನು ನೀಡುವ ಮೂಲಕ ಬ್ರ್ಯಾಂಡ್ ನಿರ್ಮಾಣದಲ್ಲಿ ತೊಡಗಿವೆ. ಈ ಮೂಲಕ ಕ್ಷಿಪ್ರಗತಿಯ ತಾಂತ್ರಿಕ ಅಳವಡಿಕೆಗೆ ಸಾಕ್ಷಿಯಾಗಿವೆ. ಗ್ರಾಹಕರ ಪ್ರತಿಕ್ರಿಯೆ ಮತ್ತು ಒಳನೋಟಗಳನ್ನು ಬಳಸಿಕೊಳ್ಳುವಲ್ಲಿ ಫ್ಲಿಪ್ ಕಾರ್ಟ್ ಮುಂಚೂಣಿಯಲ್ಲಿದೆ. ತನ್ನ ಬೆಳೆಯುತ್ತಿರುವ ಗ್ರಾಹಕ ಆಧಾರಿತ ಬೆಳವಣಿಗೆಗೆ ಭಾರತದಾದ್ಯಂತ ಅತ್ಯುತ್ತಮ ದರ್ಜೆಯ ಉತ್ಪನ್ನಗಳ ಪೂರೈಕೆ ಮಾಡುತ್ತಿದೆ. ಈ ಎರಡೂ ಕಂಪನಿಗಳ ರಚನಾತ್ಮಕ ಪಾಲುದಾರಿಕೆಯು ಮೊಟೊರೋಲಾದ ತನ್ನ ಗ್ರಾಹಕರಿಗೆ ಆವಿಷ್ಕಾರಕ ಪ್ರೀಮಿಯಂ ತತ್ತ್ವವನ್ನು ಒದಗಿಸಲು ಸಾಧ್ಯವಾಗುತ್ತಿದೆ. ಈ ಮೂಲಕ ಮೊಟೊರೋಲಾ ತನ್ನ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗಳ ಉತ್ಪನ್ನಗಳನ್ನು ನೀಡುತ್ತಿದೆ.

ಸುಮಾರು ನೂರು ವರ್ಷಗಳ ಟ್ರಯಲ್ ಬ್ಲೇಜಿಂಗ್ ನಾವೀನ್ಯತೆಯ ಪ್ರಯಾಣದೊಂದಿಗೆ ಮೊಟೊರೋಲಾ ಹಲವಾರು ಪ್ರಥಮಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಯಾವಾಗಲೂ ನಾವೀನ್ಯತೆಯ ಉತ್ಪನ್ನಗಳನ್ನು ನೀಡುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಂಪನಿಯಾಗಿದೆ. ಈ ಪರಂಪರೆಯನ್ನು ಮುಂದುವರಿಸುತ್ತಾ, ಫ್ಲಿಪ್ ಕಾರ್ಟ್ ನೊಂದಿಗೆ ಭಾರತದಲ್ಲಿ ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಶ್ರೇಣಿಯನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ರೆಫ್ರಿಜರೇಟರ್, ವಾಶಿಂಗ್ ಮಶಿನ್ ಮತ್ತು ಏರ್ ಕಂಡೀಶನರ್ ನ ಈ ನಿಜವಾದ ಸ್ಮಾರ್ಟ್ ಮತ್ತು ಕ್ರಾಂತಿಕಾರಕ ವಿಸ್ತಾರವಾದ ಶ್ರೇಣಿಗಳ ಮೂಲಕ ಭಾರತೀಯ ಗ್ರಾಹಕರಿಗೆ ಪರಿವರ್ತಿತವಾದ ಅನುಭವಗಳನ್ನು ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಇದಲ್ಲದೇ, ಫ್ಲಿಪ್ ಕಾರ್ಟ್ ನೊಂದಿಗೆ ನಮ್ಮ ಬೆಳೆಯುತ್ತಿರುವ ಪಾಲುದಾರಿಕೆಯ ಬಲವರ್ಧನೆಗೆ ಈ ಘೋಷಣೆ ಪೂರಕವಾಗಲಿದೆ. ಅಲ್ಲದೇ, ನಮ್ಮ ಹಾಲಿ ಇರುವ ಸ್ಮಾರ್ಟ್ ಟಿವಿಗಳು, ಸ್ಮಾರ್ಟ್ ಫೋನ್ ಮತ್ತು ಹೋಂ ಆಡಿಯೋ ಪೋರ್ಟ್ ಫೋಲಿಯೋಗಳಿಗೆ ಪೂರಕವಾಗಿರಲು ನೆರವಾಗಲಿದೆ. ಈ ಮೂಲಕ ಹೋಂ ಅಪ್ಲೈಯನ್ಸಸ್ ಸ್ಮಾರ್ಟರ್ ಜೀವನವನ್ನು ಮರುವ್ಯಾಖ್ಯಾನಿಸಲಿದೆ ಎಂದು ಮೊಟೊರೋಲಾ ಮೊಬಿಲಿಟಿಯ ಕಂಟ್ರಿ ಹೆಡ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಮಣಿ ಹೇಳಿದರು.

ಒಂದು ಕಂಪನಿಯಾಗಿ ದೇಶೀಯವಾಗಿ ಬೆಳೆಯುತ್ತಿರುವ ಪ್ಲಾಟ್ ಫಾರ್ಮ್ ಆಗಿದ್ದು ಇದು ನಿಜವಾಗಿಯೂ ಭಾರತೀಯ ಗ್ರಾಹಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದೆ ಮತ್ತು ಹಾಲಿ ಹಾಗೂ ಮುಂಬರುವ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಪೂರೈಸುತ್ತಿದೆ. ಗ್ರಾಹಕರು ಸ್ಮಾರ್ಟರ್ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸುತ್ತಿದ್ದಾರೆ ಮತ್ತು ಮೊಟೊರೋಲಾದ ಟಾಪ್-ಆಫ್-ಲೈನ್ ನ ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಶ್ರೇಣಿಯೊಂದಿಗೆ ಅವರ ಜೀವನ ಶೈಲಿಯನ್ನು ರೂಪಾಂತರಗೊಳಿಸಲು ಸಾಧ್ಯವಾಗಲಿದೆ. ನಮ್ಮ ರಚನಾತ್ಮಕ ಪಾಲುದಾರಿಕೆಗಳು ಅತ್ಯುತ್ತಮ ಮತ್ತು ಇತ್ತೀಚಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವತ್ತ ಗಮನಹರಿಸಲಿವೆ. ಈ ನಿಟ್ಟಿನಲ್ಲಿ ಮೊಟೊರೋಲಾ ತನ್ನ ಆಫರ್ ಗಳಿಗೆ ಹೆಚ್ಚು ಶಕ್ತಿಯನ್ನು ತಂದುಕೊಳ್ಳಲು ಪಾಲುದಾರಿಕೆ ಹೊಂದಿರುವುದು ನಮಗೆ ಸಂತೋಷ ತಂದಿದೆ. ಮುಂಬರುವ ಹಬ್ಬದ ಸಂದರ್ಭದಲ್ಲಿ ಈ ಶಕ್ತಿವರ್ಧನೆಯಾಗಲಿದೆ ಫ್ಲಿಪ್ ಕಾರ್ಟ್ ನ ಪ್ರೈವೇಟ್ ಬ್ರ್ಯಾಂಡ್ ನ ಉಪಾಧ್ಯಕ್ಷ ದೇವ್ ಅಯ್ಯರ್ ಹೇಳಿದರು.

ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಗೆ ಪಾದಾರ್ಪಣೆ ಮಾಡುತ್ತಿರುವುದಲ್ಲದೇ, ಮೊಟೊರೋಲಾ ಫ್ಲಿಪ್ ಕಾರ್ಟ್ ನೊಂದಿಗೆ ಸಹಯೋಗದಲ್ಲಿ ಮೊಟೊರೋಲಾ ಸ್ಮಾರ್ಟ್ ಟಿವಿಗಳ ಶ್ರೇಣಿಯನ್ನು ವಿಸ್ತರಿಸಿಕೊಳ್ಳಲಿದೆ ಹಾಗೂ ಇತ್ತೀಚೆಗೆ ಬಿಡುಗಡೆಗೊಂಡಿರುವ ಹೋಂ ಆಡಿಯೋ ಶ್ರೇಣಿಯನ್ನು ಮುಂಬರುವ ಹಬ್ಬದ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ನ ಪ್ಲಾಟ್ ಫಾರ್ಮ್ ನಲ್ಲಿಟ್ಟು ಹೆಚ್ಚಿನ ಬೇಡಿಕೆಯನ್ನು ಪಡೆಯಲಿದೆ.

ಕಾರ್ಯಾಚರಣೆಯ ಸುಲಭತೆ ಮತ್ತು ವೈಯಕ್ತೀಕರಣವನ್ನು ನೀಡುವುದರ ಜತೆಗೆ ಸ್ಮಾರ್ಟ್ ಅಪ್ಲೈಯನ್ಸಸ್ ಗ್ರಾಹಕರ ಸ್ಮಾರ್ಟ್ ಫೋನ್/ರಿಮೋಟ್ ಕಂಟ್ರೋಲ್ ಬಟನ್ ಕ್ಲಿಕ್ ನಲ್ಲಿ ಇಡೀ ಮನೆಯನ್ನು ರೂಪಾಂತರಗೊಳಿಸುವ ಹಾಗೂ ಜೀವಂತಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಉದ್ಯಮದ ವರದಿಗಳ ಪ್ರಕಾರ ಭಾರತೀಯ ಸ್ಮಾರ್ಟ್ ಹೋಂ ಮಾರುಕಟ್ಟೆಯು 2022 ರ ವೇಳೆಗೆ ಸುಮಾರು 6 ಬಿಲಿಯನ್ ಡಾಲರ್ ನಷ್ಟು ವ್ಯವಹಾರ ನಡೆಸುವ ನಿರೀಕ್ಷೆ ಇದೆ. ಅದೇ ರೀತಿ ಜಾಗತಿಕ ಮಟ್ಟದಲ್ಲಿ ಇದರ ಪ್ರಮಾಣ 53.45 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಇದಕ್ಕೆ ಪ್ರಮುಖ ಕಾರಣ ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್ ಸಾಧನಗಳಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡುಬರುತ್ತಿರುವುದಾಗಿದೆ.

click me!