'Facebook' ಇನ್ನು ನೆನಪು ಮಾತ್ರ? 17 ವರ್ಷದ ಬಳಿಕ ಯಾಕೆ ಈ ನಿರ್ಧಾರ?

By Suvarna News  |  First Published Oct 20, 2021, 12:25 PM IST

-ತನ್ನ ಹೆಸರು ಬದಲಾಯಿಸಿಕೊಳ್ಳಲಿರುವ ಫೇಸ್‌ಬುಕ್!

-ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಘೋಷಣೆ ಸಾಧ್ಯತೆ'

-ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡದ ಸಂಸ್ಥೆ


ಯುಎಸ್‌ಎ (ಅ. 20 ) :  ಅತ್ಯಂತ ಜನಪ್ರಿಯ ಹಾಗೂ ಜಗತ್ತಿನಾದ್ಯಂತ ಅತಿ ಹೆಚ್ಚಿನ ಬಳಕೆದಾರರು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ (Facebook) ತನ್ನ ಹೆಸರನ್ನು ಬದಲಾಯಿಸಿಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಅಕ್ಟೋಬರ್‌ 28 ರಂದು ಫೇಸ್‌ಬುಕ್‌ನ ವಾರ್ಷಿಕ ಸಭೆ (Anual Connect Conference) ವರ್ಚುವಲ್‌ ಮೋಡ್‌ ನಲ್ಲಿ ನಡೆಯಲಿದ್ದು ಹೆಸರು ಬದಲಾವಣೆ ಬಗ್ಗೆ ಕಂಪನಿ ಸಿಐಒ(CEO) ಮಾರ್ಕ್ ಜುಕರ್‌ಬರ್ಗ್‌ (Mark Zuckerberg)  ಮಾತನಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಈವರೆಗೂ ಫೇಸ್‌ಬುಕ್ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅಲ್ಲದೇ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೂಡ ನಿರಾಕರಿಸಿದೆ.

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ?

Tap to resize

Latest Videos

undefined

ಕಂಪನಿಯನ್ನು ಮರುನಾಮಕರಣ ಮಾಡಿಕೊಳ್ಳುವ ಮೂಲಕ ಫೇಸ್‌ಬುಕ್ ಕಂಪನಿಯೂ ಬೇರೆ ಆ್ಯಪ್‌ಗಳ ರೀತಿ ಮಾತೃ ಸಂಸ್ಥೆಯೊಂದರ ಅಧೀನದಲ್ಲಿ ಕೆಲಸ ಮಾಡಲಿದೆ. ಈ ಮಾತೃ ಸಂಸ್ಥೆಯ ಅಧೀನದಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್‌, ವಾಟ್ಸಾಪ್ ಸೇರಿದಂತೆ ಇತರ ಕಂಪನಿಗಳು ಕೆಲಸ ಮಾಡಲಿವೆ. ಅಮೆರಿಕಾದ ಸಿಲಿಕನ್ ವ್ಯಾಲಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸಲು ಕಂಪನಿಗಳು ಈ ರೀತಿ ಹೆಸರು ಬದಲಾಯಿಸುವುದು ಸರ್ವೆ ಸಾಮಾನ್ಯ. ಆದರೆ ಯಾವ ಫೇಸ್‌ಬುಕ್ ಏನೆಂದು ಮರುನಾಮಕರಣವಾಗಲಿದೆ ಎಂದು ಇನ್ನೂ ತಿಳಿದು ಬಂದಿಲ್ಲ

‌Facebook ಬೆಳೆದು ಬಂದ ಹಾದಿ!

ಮಾರ್ಕ್‌ ಜುಕರ್‌ಬರ್ಗ್‌ ಜತೆಗೆ Harvard ಕಾಲೇಜಿನ ಇತರ ವಿದ್ಯಾರ್ಥಿಗಳು ಸೇರಿ 2004ರಲ್ಲಿ  ʼಫೇಸ್‌ ಮ್ಯಾಶ್‌ʼ ಆರಂಭಿಸಿದ್ದರು. ಇದೇ ಫೇಸ್‌ ಮ್ಯಾಶ್‌ ನಂತರ ʼದ ಫೇಸ್‌ಬುಕ್‌ʼ(The Facebook) ಎಂದು ಮರುನಾಮಕರಣಗೊಂಡು ಕೊನೆಗೆ ಕೇವಲ ಫೇಸ್‌ಬುಕ್‌ ಎಂಬ ಹೆಸರನ್ನು ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿತ್ತು. 2.8 ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಇಂದು ಜಗತ್ತಿನಾದ್ಯಂತ ಸುಪ್ರಸಿದ್ಧ ಜಾಲತಾಣವಾಗಿ ಬೆಳೆದು ನಿಂತಿದೆ. ಜಾಗತಿಕ ಮಟ್ಟದಲ್ಲಿ ದೈತ್ಯನಾಗಿ ಬೆಳೆದಿರುವ ಫೇಸ್‌ಬುಕ್ ಈವರೆಗೂ ಸಾಕಷ್ಟು ಕಂಪನಿಗಳನ್ನು ಖರೀದಿಸಿದೆ. 2012 ರಲ್ಲಿ  $1 ಬಿಲಿಯನ್‌ ಮೊತ್ತಕ್ಕೆ ಇನ್ಸ್ಟಾಗ್ರಾಮ್‌ (Instagram) ಖರೀದಿಸಿದ್ದರೆ, 2014 ರಲ್ಲಿ $19 ಬಿಲಿಯನ್‌ ಮೊತ್ತಕ್ಕೆ ಅತ್ಯಂತ ಜನಪ್ರಿಯ ಮೆಸೆಜಿಂಗ್‌  ವಾಟ್ಸಾಪ್ (WhatsApp) ಅನ್ನು ಖರೀದಿಸಿತ್ತು.

ಇತ್ತೀಚೆಗೆ ಫೇಸ್‌ಬುಕ್‌, ವಾಟ್ಸಾ ಪ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿ ಭಾರತ ಸೇರಿದಂತೆ ವಿಶ್ವದ ಹಲವೆಡೆ ಈ ಸೇವೆಗಳಲ್ಲಿ ಭಾರೀ ವ್ಯತ್ಯಯ ಕಂಡುಬಂದಿತ್ತು. ಇದರಿಂದಾಗಿ ಫೇಸ್‌ಬುಕ್‌ ಸೇರಿದಂತೆ ಫೇಸ್ಬುಕ್‌ ಒಡೆತನದ ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಸಂದೇಶ ಕಳಿಸಲು, ಸ್ವೀಕರಿಸಲು ಮತ್ತು ಲಾಗಿನ್‌ ಮಾಡಲಾಗದೆ ಪರದಾಡಿದ್ದರು.

8 ತಿಂಗಳ ಸಲುಗೆ, ಶಿಕ್ಷಕಿ ಅಪಹರಿಸಿ ಅತ್ಯಾಚಾರ ಎಸೆಗಿದ ಫೇಸ್‌ಬುಕ್ ಗೆಳೆಯ!

ಅಲ್ಲದೆ ಈ ಬಗ್ಗೆ ಟ್ವೀಟರ್‌ ಮುಖಾಂತರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಟ್ವೀಟರ್‌ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಫೇಸ್ಬುಕ್‌, ಸರ್ವರ್‌ ಡೌನ್‌ನಿಂದ ಆಗಿರುವ ಸಮಸ್ಯೆ ಪರಿಹಾರಕ್ಕೆ ಕಾರ್ಯ ನಿರ್ವಹಿಸಲಾಗುತ್ತಿದೆ. ಶೀಘ್ರದಲ್ಲೇ ಗ್ರಾಹಕರು ತಮ್ಮ ಸೇವೆಯನ್ನು ಬಳಸಬಹುದು ಎಂದು ಹೇಳಿತ್ತು. ಫೋಟೋ ಹಂಚಿಕೊಳ್ಳುವ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ಗಳು ಇದೇ ರೀತಿಯ ಸ್ಪಷ್ಟನೆ ನೀಡಿದವು. ಈ ಆ್ಯಪ್‌ಗಳ ಸ್ಥಗಿತದಿಂದ ವಿಶ್ವಾದ್ಯಂತ ಸಾವಿರಾರು ಜನ ಸಮಸ್ಯೆಗೆ ಸಿಲುಕಿದರು ಎಂದು ವೆಬ್‌ಸೈಟ್‌ ಮತ್ತು ಸೇವೆಗಳ ಬಗ್ಗೆ ಮಾಹಿತಿ ಒದಗಿಸುವ ಡೌನ್‌ಡಿಟೆಕ್ಟರ್‌.ಕಾಂ ಹೇಳಿತ್ತು.

 Screen ಸ್ವಚ್ಛಗೊಳಿಸುವ ದುಬಾರಿ ‌ಬಟ್ಟೆ ಬಿಡುಗಡೆ ಮಾಡಿದ Apple!

click me!