ಮಸ್ಕ್‌ಗೆ ಹೊಸ ಟೆನ್ಶನ್ ಶುರು, ಮೆಟಾದಿಂದ ಟ್ವಿಟರ್‌ಗೆ ಪ್ರತಿಸ್ಪರ್ಧಿ ಸೋಶಿಯಲ್ ಮಿಡಿಯಾ!

By Suvarna News  |  First Published Mar 11, 2023, 5:24 PM IST

ಟ್ವಿಟರ್ ಖರೀದಿಸಿದ ಬಳಿಕ ಉದ್ಯೋಗ ಕಡಿತ, ತಾಂತ್ರಿಕ ಸಮಸ್ಯೆ, ಟ್ವಿಟರ್ ಕಚೇರಿ ಬಿಲ್ ಪಾವತಿ ಸೇರಿದಂತೆ ಒಂದಲ್ಲ ಒಂದು ಸಮಸ್ಯೆಗಳು ಮಾಲೀಕ ಎಲಾನ್ ಮಸ್ಕ್ ಹೆಗಲೇರಿದೆ. ಇವೆಲ್ಲವನ್ನು ಸಂಭಾಳಿಸಿಕೊಂಡು ಮುಂದೆ ಸಾಗುತ್ತಿರುವ ಬೆನ್ನಲ್ಲೇ ಇದೀಗ ಹೊಸ ಟೆನ್ಶನ್ ಶುರುವಾಗಿದೆ. ಫೇಸ್‌ಬುಕ್ ಇದೀಗ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಸೋಶಿಯಲ್ ಮಿಡಿಯಾ ಆರಂಭಿಸಲು ಸಜ್ಜಾಗಿದೆ.


ಕ್ಯಾಲಿಫೋರ್ನಿಯಾ(ಮಾ.11): ಸಾಮಾಜಿಕ ಮಾಧ್ಯಮಗಳ ಪೈಕಿ ಟ್ವಿಟರ್, ಫೇಸ್‌ಬುಕ್ ಅಗ್ರಸ್ಥಾನದಲ್ಲಿದೆ. ಅತೀ ಹೆಚ್ಚು ಮಂದಿ ಟ್ವಿಟರ್ ಹಾಗೂ ಫೇಸ್‌ಬುಕ್ ಬಳಕೆ ಮಾಡುತ್ತಾರೆ. ಟ್ವಿಟರ್ ಕಂಪನಿಯನ್ನು ಉದ್ಯಮಿ ಎಲಾನ್ ಮಸ್ಕ್ ಖರೀದಿಸಿ ಹಲವು ಬದಲಾವಣೆ ಮಾಡಿದ್ದಾರೆ. ಇದರ ಜೊತೆಗೆ ಅಷ್ಟೇ ಸಮಸ್ಯೆಯನ್ನು ಎದುರಿಸಿದ್ದಾರೆ. ಇದೀಗ ಟ್ವಿಟರ್ ಹೊಸ ನೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದರ ಬೆನ್ನಲ್ಲೇ ಎಲಾನ್ ಮಸ್ಕ್‌ಗೆ ಮತ್ತೊಂದು ಸವಾಲು ಎದುರಾಗಿದೆ. ಇದೀಗ  ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಫೇಸ್‌ಬುಕ್ ಪೇರೆಂಟ್ ಕಂಪನಿ ಮೆಟಾ ಹೊಸ ಸಾಮಾಜಿಕ ಮಾಧ್ಯಮ ಆರಂಭಿಸುತ್ತಿದೆ.

ಜನರು ತಮ್ಮ ತಮ್ಮ ಅಪ್‌ಡೇಟ್, ಮಾಹಿತಿ, ಫೋಟೋ, ವಿಡಿಯೋ ಹಂಚಿಕೊಳ್ಳಲು ಹಲವು ಸಾಮಾಜಿಕ ಮಾಧ್ಯಮ ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಂದು ಒಂದೊಂದು ಸ್ವರೂಪದ ಮಾಧ್ಯಮವಾಗಿದೆ. ಟ್ವಿಟರ್ ರೀತಿಯ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಇದೇ ರೀತಿಯ ಹೊಸ ಪ್ಲಾಟ್‌ಫಾರ್ಮ್ ಮೆಟಾ ಆರಂಭಿಸುತ್ತಿದೆ. ಈಗಾಗಲೇ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಸಾಗುತ್ತಿದೆ. ಶೀಘ್ರದಲ್ಲೇ ಹೊಸ ಸಾಮಾಜಿಕ ಮಾಧ್ಯಮ ಕಾರ್ಯಾರಂಭಿಸಲಿದೆ ಎಂದು ಮೆಟಾ ವಕ್ತಾರ ಹೇಳಿದ್ದಾರೆ.

Tap to resize

Latest Videos

undefined

ಸುದ್ದಿಗೆ ಫೇಸ್‌ಬುಕ್‌, ಗೂಗಲ್‌ ಹಣ ನೀಡಲಿ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌
 
P92 ಪ್ರಾಜೆಕ್ಟ್ ಅಡಿಯಲ್ಲಿ ಹೊಸ ಸೋಶಿಯಲ್ ಮೀಡಿಯಾ ಆ್ಯಪ್  ಕಾರ್ಯಗಳು ನಡೆಯುತ್ತಿದೆ. ಮೆಟಾ ಒಡೆತನದಲ್ಲಿರುವ ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಂಡ್ ಮೆಸ್ಸೋರಿ ನೇತೃತ್ವದಲ್ಲಿ ಹೊಸ ಸಾಮಾಜಿಕ ಮಾಧ್ಯಮ ಲಾಂಚ್ ಆಗಲಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಹೊಂದಿದವರು ಸುಲಭವಾಗಿ ಹೊಸ ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್‌ಗೆ ಸೇರಿಕೊಳ್ಳಬಹುದು. ಇನ್ನು ಹೊಸದಾಗಿ ಮೆಟಾ ಜೊತೆ ಖಾತೆ ಆರಂಭಿಸುವ ಬಳಕೆದಾರರು ಸುಲಭವಾಗಿ ಲಾಗಿನ್ ಆಗಲು ಸಾಧ್ಯವಿದೆ ಎಂದು ಮೆಟಾ ಹೇಳಿದೆ.

ಸಾಮಾಜಿಕ ಮಾಧ್ಯಮಗಳ ಪೈಕಿ ದೈತ್ಯ ಎಂದೇ ಗುರುತಿಸಿಕೊಂಡಿರುವ ಮೆಟಾ ಇದೀಗ ಹೊಸ ಆ್ಯಪ್ ಬಿಡುಗಡೆಗೆ ಸಜ್ಜಾಗಿದೆ. ಈ ಆ್ಯಪ್ ಯಾವಾಗ ಬಿಡುಗಡೆಯಾಗಲಿದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ತಂತ್ರಜ್ಞಾನರ ತಂಡ, ಕಾನೂನು ತಜ್ಞರ ತಂಡಗಳು ಪ್ರೈವೈಸ್ ಪಾಲಿಸಿ ಸೇರಿದಂತೆ ಹಲವು ಕಾನೂನಾತ್ಮಕ ವಿಚಾರಗಳ ಕುರಿತು ತೀವ್ರ ಮಾತುಕತೆ ನಡೆಸಿ ಅಂತಿಮರೂಪುರೇಶೆ ನೀಡಿದೆ. ಆ್ಯಪ್ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.

ಫೇಸ್‌ಬುಕ್‌ನಲ್ಲಿ ಮಹತ್ತರ ಬದಲಾವಣೆ, ಈ ವಿಷಯ ಇದ್ದರೆ ಡಿಲೀಟ್ ಆಗಲಿದೆ ಮಾಹಿತಿ!

ಇತ್ತೀಚೆಗೆ ಟ್ವಿಟರ್ ಮಾಸಿಕ ಚಂದಾದಾರಿಕೆ ಆರಂಭಿಸಿತ್ತು. ಇದರ ಬೆನ್ನಲ್ಲೇ ಫೇಸ್‌ಬುಕ್ ಕೂಡ ಈ ರೀತಿಯ ಯೋಜನೆ ಆರಂಭಿಸಿದೆ. ಮೆಟಾ ವೆರಿಫೈಡ್‌ ಎಂಬ ಚಂದಾ ಆಧರಿತ ಸೇವೆಯನ್ನು  ಬ್ಲೂ ಬ್ಯಾಡ್ಜ್‌, ಖಾತೆ ನಕಲು ಪ್ರಕರಣಗಳಿಂದ ಹೆಚ್ಚಿನ ಸುರಕ್ಷತೆ, ಗ್ರಾಹಕ ಸೇವಾ ಸಿಬ್ಬಂದಿ ಜೊತೆಗೆ ನೇರ ಸಂಪರ್ಕ ಮತ್ತು ಸರ್ಕಾರಿ ಐಡಿ ಸೌಲಭ್ಯಗಳು ಮಾಸಿಕ ಚಂದಾರಿಕೆ ಮೂಲಕ ಪಡೆಯಲು ಸಾಧ್ಯವಿದೆ. ಮೆಟಾ ವೆರಿಫೈಡ್‌ ಸೇವೆಯು ವೆಬ್‌ನಲ್ಲಿ ಮಾಸಿಕ 11.99 ಡಾಲರ್‌ನಿಂದ (850 ರು.) ಮತ್ತು ಐಫೋನ್‌ ಆಪರೇಟಿಂಗ್‌ ಸಿಸ್ಟಮ್‌ಗೆ ಮಾಸಿಕ 14.99 ಡಾಲರ್‌ನಿಂದ (1250 ರು.) ಆರಂಭವಾಗಲಿದೆ. ಮೊದಲ ಹಂತದಲ್ಲಿ ಆಸ್ಪ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಸೇವೆ ಆರಂಭಗೊಳ್ಳುತ್ತಿದೆ. ಶೀಘ್ರದಲ್ಲೇ ಭಾರತ ಸೇರಿದಂತೆ ಇತರ ದೇಶಕ್ಕೂ ಮಾಸಿಕ ಚಂದಾದಾರಿಕೆ ವಿಸ್ತರಣೆಯಾಗಲಿದೆ.

click me!