ವಿದ್ಯುತ್ ಬಿಲ್ ದುಬಾರಿಯಾಗುತ್ತಿದೆಯಾ? ಅರ್ಧಕ್ಕೆ ಇಳಿಸಲು ಈ ಪವರ್ ಸೇವರ್ ಅಳವಡಿಸಿ!

By Suvarna News  |  First Published Mar 4, 2023, 9:08 PM IST

ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಡೀಸೆಲ್ ಕೈಗೆಟುಕುತ್ತಿಲ್ಲ. ಇನ್ನು ಮನೆಯ ವಿದ್ಯುತ್ ಬಿಲ್ ತಲೆನೋವು ಆತಂಕ ಹೆಚ್ಚಿಸುತ್ತಿದೆ. ಇದು ಬಹುತೇಕ ಮನೆಯವರ ಚಿಂತೆ. ಅದರಲ್ಲೂ ಬೇಸಿಗೆ ಬಂದರೆ ವಿದ್ಯುತ್ ಉಪಯೋಗ ದುಪ್ಪಟ್ಟು, ಬಿಲ್ ಕೇಳುವುದೇ ಬೇಡ. ಇದೀಗ ವಿದ್ಯುತ್ ಬಿಲ್ ಅರ್ಧಕ್ಕೆ ಇಳಿಸಲು ಒಂದು ಪವರ್ ಸೇವರ್ ಸಾಧನವಿದೆ. ಇದನ್ನು ಅಳವಡಿಸಿದರೆ ಶೇಕಡಾ 45 ರಷ್ಟು ವಿದ್ಯುತ್ ಬಿಲ್ ಉಳಿಸಬಹುದು.


ನವದೆಹಲಿ(ಮಾ.04): ಉರಿಬಿಸಿಲು ಶುರುವಾಗಿದೆ. ಎಸಿ, ಫ್ಯಾನ್ ಇಲ್ಲದೆ ಮನೆಯಲ್ಲಿ ಇರಲು ಸಾಧ್ಯವಿಲ್ಲ. ಕುಡಿಯಲು ತಣ್ಣಗಿನ ನೀರೇ ಬೇಕು. ಇದರ ಪರಿಣಾಮ ವಿದ್ಯುತ್ ಬಿಲ್ ದುಬಾರಿಯಾಗಿದೆ. ಮೊದಲೇ ವಿದ್ಯುತ್ ಪ್ರತಿ ಯೂನಿಟ್ ಬೆಲೆಯೂ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ತಿಂಗಳು ಸಾವಿರಕ್ಕೂ ಹೆಚ್ಚು ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡುವ ಅನಿವಾರ್ಯತೆ ಎದುರಾಗಿದೆ.  ಇದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸ ಪವರ್ ಸೇವರ್ ಸಾಧನ ಲಭ್ಯವಿದೆ. ಈ ಪವರ್ ಸೇವರ್ ಅಳವಡಿಸಿದರೆ ಸಾಕು ನಿಮ್ಮ ಮಾಸಿಕ ವಿದ್ಯುತ್ ಬಿಲ್ ಅರ್ಧಕ್ಕೆ ಇಳಿಯಲಿದೆ ಎಂದು MD Proelectra ಕಂಪನಿ ಹೇಳಿದೆ. ಅಷ್ಟಕ್ಕೂ ಈ ಸೆವರ್ ಹೆಸರು MD Proelectra Power Saver( ಎಂಡಿ ಪ್ರೊಲೆಕ್ಟ್ರಾ ಪವರ್ ಸೇವರ್)

MD Proelectra Power Saver ಅಳವಡಿಸಿದರೆ ಮಾಸಿಕ ವಿದ್ಯುತ್ ಬಿಲ್ ಶೇಕಡಾ 45 ರಷ್ಟು ಕಡಿಮೆಯಾಗಲಿದೆ ಎಂದು MD Proelectra ಕಂಪನಿ ಹೇಳಿಕೊಂಡಿದೆ. ಈ ಉತ್ಪನ್ನ ಇದೀಗ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಲಭ್ಯವಿದೆ. ಇದರ ಬೆಲೆ 899 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್ ಆಫರ್ ಮೂಲಕ  499 ರೂಪಾಯಿಗೆ ಲಭ್ಯವಿದೆ. ಇದರ ಜೊತೆಗೆ ಕೆಲ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.

Tap to resize

Latest Videos

ಬಾಕಿ ಉಳಿದಿರುವ ವಿದ್ಯುತ್ ಬಿಲ್‌ ಪಾವತಿಗೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಕಿವಿಮಾತು

ಈ ಪವರ್ ಸೇವರ್ ಸಾಧನವನ್ನು ಖರೀದಿಸಿ ಎಲೆಕ್ಟ್ರೀಶಿಯನ್ ಸಂಪರ್ಕಿಸ ಬೇಕು. ಬಳಿಕ ಮನೆಯಲ್ಲಿ ಅಳವಡಿಸಿ. ಇದು ಅನಗತ್ಯ ವಿದ್ಯುತ್ ಪೋಲಾಗುವುದನ್ನು ತಪ್ಪಿಸಲಿದೆ. ಯಾವುದೇ ಎಲೆಕ್ಟ್ರಿಕ್ ಸಾಧನಗಳು ಅನಗತ್ಯವಾಗಿ ವಿದ್ಯುತ್ ಬಳಸುತ್ತಿದ್ದರೆ ಅದನ್ನು ತಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಉತ್ಪನ್ನ ಎಷ್ಟು ಗ್ಯಾರೆಂಟಿ, ಎಷ್ಟು ವಿದ್ಯುತ್ ಉಳಿತಾಯ ಮಾಡಲಿದೆ ಅನ್ನೋ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲ. ಸದ್ಯ ಲಭ್ಯವಿರುವ ಅಂಶಗಳು ಕಂಪನಿ ಹೇಳಿಕೊಂಡಿರುವ ಮಾಹಿತಿಗಳು ಮಾತ್ರ .

MD Proelectra ಕಂಪನಿ ಹೇಳುವಂತೆ, ನೀವು ಈ ಸೇವರ್ ಅಳವಡಿಸಿ ನಿಶ್ಚಿಂತೆಯಿಂದಿರಿ ಎಂದಿದೆ. ಕಾರಣ ನಿಮ್ಮ ವಿದ್ಯುತ್ ಮಾಸಿಕ ಬಿಲ್ 800 ರಿಂದ 1000 ರೂಪಾಯಿ ಇದ್ದರೆ. ಈ ಪೇವರ್ ಸೇವರ್ ಅಳವಡಿಸಿದ ಬಳಿಕ 400 ರಿಂದ 500 ರೂಪಾಯಿಗೆ ಇಳಿಕೆಯಾಗಲಿದೆ ಎಂದಿದೆ. ಇದು ಹೇಗೆ ಕೆಲಸ ಮಾಡಲಿದೆ? ಮನೆಯಲ್ಲಿರುವ ಫ್ರಿಡ್ಜ್, ಫ್ಯಾನ್ ಸೇರಿದಂತೆ ಇತರ ಎಲೆಕ್ಟ್ರಿಕ್ ಸಾಧನಗಳಿಗೆ ಪೋಲಾಗುತ್ತಿರುವ ಅನಗತ್ಯವಾಗಿ ವಿದ್ಯುತ್ ಈ ಸಾಧನ ಹೇಗೆ ನಿಯಂತ್ರಿಸಲಿದೆ ಅನ್ನೋ ಕುರಿತು ಯಾವುದೇ ಮಾಹಿತಿ ನೀಡಿಲ್ಲ. 

ವಿದ್ಯುತ್ ಬಿಲ್ ಮುಂದೂಡಿ ಎಂದವನಿಗೆ ಬಿತ್ತು 50 ಸಾವಿರ ರೂ. ದಂಡ!

ಈ ಎಲೆಕ್ಟ್ರಿಕ್ ಪವರ್ ಸೇವರ್ ಅಳವಡಿಕೆದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅನುಮತಿ ಇದೆಯಾ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಇ ಕಾಮರ್ಸ್‌ನಲ್ಲಿ ಅತೀ ಹೆಚ್ಚಿನ ಮಂದಿ ಇದೀಗ ಈ ಪವರ್ ಸೇವರ್ ಖರೀದಿ ಮಾಡುತ್ತಿದ್ದಾರೆ. 
 

click me!