Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!

By Kannadaprabha News  |  First Published Apr 27, 2022, 5:02 AM IST
  • ಎಡಿಟ್‌ ಬಟನ್‌, ಅಕ್ಷರ ಮಿತಿ ಹೆಚ್ಚಳ
  • ಮತ್ತಷ್ಟುವಾಕ್‌ ಸ್ವಾತಂತ್ರ್ಯ- ಇತ್ಯಾದಿ ಫೀಚರ್‌ಗಳು
  • 3.3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸಿದ ಮಸ್ಕ್

ನ್ಯೂಯಾರ್ಕ್(ಏ.27):  ಜಗತ್ತಿನ ಅತ್ಯಂತ ಪ್ರಭಾವಿ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್‌ ಅನ್ನು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್‌್ಕ ಖರೀಸಿದ್ದಾರೆ. ಈ ಬೆನ್ನಲ್ಲೇ ಮಸ್‌್ಕ ಒಡೆತನದ ಟ್ವೀಟರ್‌ನಲ್ಲಿ ಏನೇನು ಬದಲಾವಣೆ ಆಗಬಹುದು ಎಂಬ ಚರ್ಚೆ ಜೋರಾಗಿದೆ. ಈ ಸಂಭಾವ್ಯ ಬದಲಾವಣೆ ವಿವರ ಇಲ್ಲಿದೆ

ಎಡಿಟ್‌ ಬಟನ್‌
ಸದ್ಯ ಟ್ವೀಟ್‌ ಮಾಡಿದ ನಂತರ ಅದನ್ನು ತಿದ್ದುವ ಅಥವಾ ಎಡಿಟ್‌ ಮಾಡುವ ಆಪ್ಷನ್‌ ಇಲ್ಲ. ಟ್ವೀಟರ್‌ ಖರೀದಿಗೂ ಒಂದು ತಿಂಗಳ ಹಿಂದಷ್ಟೇ ಮಸ್‌್ಕ, ‘ಟ್ವೀಟರ್‌ನಲ್ಲಿ ಎಡಿಟ್‌ ಬಟನ್‌ ಬಯಸುತ್ತೀರಾ’ ಎಂದು ಸಮೀಕ್ಷೆ ನಡೆಸಿದ್ದರು. ಶೇ.74ರಷ್ಟುಬಳಕೆದಾರರು ‘ಬೇಕು’ ಎಂದು ಉತ್ತರಿಸಿದ್ದರು. ಬಳಿಕ ಎಡಿಟ್‌ ಬಟನ್‌ ಅಳವಡಿಸುವ ಕಾರ‍್ಯ ಪ್ರಗತಿಯಲ್ಲಿದೆ ಎಂದು ಟ್ವೀಟರ್‌ ತಿಳಿಸಿತ್ತು.

Tap to resize

Latest Videos

undefined

 2017ರಲ್ಲೇ ಟ್ವಿಟರ್ ಖರೀದಿಸುವ ಕನಸು ಕಂಡಿದ್ದಎಲಾನ್ ಮಸ್ಕ್! ವೈರಲ್ ಆಯ್ತು 5 ವರ್ಷ ಹಳೆಯ ಟ್ವೀಟ್

ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆ
ಟ್ವೀಟರ್‌ ಉದ್ದೇಶವೇ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡುವುದಾಗಿದೆ. ಅದರಲ್ಲಿಯೇ ಟ್ವೀಟರ್‌ ಬೆಳವಣಿಗೆ ಇದೆ ಎಂದು ಮಸ್‌್ಕ ಹಲವು ಬಾರಿ ಹೇಳಿದ್ದಾರೆ. ಪ್ರಸ್ತುತ ನಿಯಮ ಉಲ್ಲಂಘಿಸುವ, ಹಿಂಸೆಗೆ ಪ್ರಚೋದನೆ ನೀಡುವ ಸಂದೇಶ ಇರುವ ಖಾತೆಗಳನ್ನು ಟ್ವೀಟರ್‌ ಅಮಾನತು ಮಾಡುತ್ತಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಾತೆಯನ್ನೂ ಅಮಾನತು ಮಾಡಿದೆ. ಕೆಲ ಟ್ವೀಟ್‌ಗಳ ಮೇಲೆ ಆಕ್ಷೇಪಾರ್ಹ/ವಿವಾದಿತ ಟ್ವೀಟ್‌ ಎಂದು ಷರಾ ಬರೆಯುತ್ತದೆ. ಆದರೆ ಮಸ್‌್ಕ ಒಡೆತನದ ಟ್ವೀಟರ್‌ ಹೆಚ್ಚು ವಾಕ್‌ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರಲಿದೆ ಎನ್ನಲಾಗುತ್ತಿದೆ.

ಅಕ್ಷರ ಮಿತಿ ಹೆಚ್ಚಳ
ಸದ್ಯ ಬಳಕೆದಾರರು 280 ಅಕ್ಷರಗಳ ಮಿತಿಯ ಸಂದೇಶಗಳನ್ನು ಮಾತ್ರ ಟ್ವೀಟ್‌ ಮಾಡಬಹುದು. 2017ರಲ್ಲಿ ಈ ಮಿತಿಯನ್ನು 140ರಿಂದ 280ಕ್ಕೆ ಹೆಚ್ಚಿಸಲಾಗಿದೆ. ಉದ್ದದ ಟ್ವೀಟ್‌ ಬಗ್ಗೆ ಆಸಕ್ತಿ ಇರುವುದಾಗಿ ಮಸ್‌್ಕ ಈ ಹಿಂದೆ ಟ್ವೀಟ್‌ ಮಾಡಿದ್ದರು. ಹೀಗಾಗಿ ಅಕ್ಷರಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ವಂಚಕರಿಗೆ ಗೇಟ್‌ಪಾಸ್‌
ಟ್ವೀಟರ್‌ನಲ್ಲಿರುವ ಸ್ಪಾಮ್‌ ಅಕೌಂಟ್‌ ಅಥವಾ ಸ್ಪಾಮ್‌ ಬೋಟ್‌ (ವಂಚಕರ ಖಾತೆ)ಗಳನ್ನು ತಗೆದು ಹಾಕುವ ನಿರೀಕ್ಷೆಯಿದೆ. ಸ್ಪಾಮ್‌ ಖಾತೆಗಳು ಅತ್ಯಂತ ಕಿರಿಕಿರಿ ವಿಷಯ ಎಂದು ಮಸ್‌್ಕ ಈ ಹಿಂದೆ ದೂರಿದ್ದರು.

ಟ್ವೀಟರ್‌ ಮಕ್ತ ಅಲ್ಗಾರಿದಂ
ಟ್ವೀಟರ್‌ನಲ್ಲಿ ಅಲ್ಗಾರಿದಂ ಮೂಲವನ್ನು ಮುಕ್ತವಾಗಿಡುವ ಸಾಧ್ಯತೆ ಇದೆ. ಈ ಮೂಲಕ ಜನರಿಗೆ ನ್ಯೂಸ್‌ ಫೀಡ್‌ನಲ್ಲಿ ಹೆಚ್ಚೆಚ್ಚು ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ.

Twitter CEO ಪರಾಗ್ ಕೆಲ್ಸ ಬಿಟ್ಟರೆ ಎಷ್ಟು ದುಡ್ಡು ಸಿಗುತ್ತೆ ಗೊತ್ತಾ?

 3.3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸಿದ ವಿಶ್ವದ ನಂ.1 ಕುಬೇರ
ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್‌ ಅನ್ನು ಖರೀದಿಸಲು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್‌್ಕ ಒಪ್ಪಂದ ಮಾಡಿಕೊಂಡಿದ್ದಾರೆ. 3.3 ಲಕ್ಷ ಕೋಟಿ ರು.ಗಳಿಗೆ ಮಸ್‌್ಕ ಅವರು ಟ್ವೀಟರ್‌ ಅನ್ನು ಖರೀದಿಸುತ್ತಿದ್ದು, ಷೇರುಪೇಟೆಯಲ್ಲಿ ನೋಂದಣಿಯಾದ ಕಂಪನಿಯೊಂದು ಈ ಮೊತ್ತಕ್ಕೆ ಬಿಕರಿಯಾಗಿದ್ದು ಇದೇ ಮೊದಲು ಎಂಬ ಇತಿಹಾಸ ಸೃಷ್ಟಿಯಾಗಿದೆ.

ಟ್ವೀಟರ್‌ನಲ್ಲಿ ಎಲಾನ್‌ ಮಸ್‌್ಕ ಶೇ.9.1ರಷ್ಟುಷೇರುಗಳನ್ನು ಹೊಂದಿದ್ದರು. ತನ್ಮೂಲಕ ಆ ಕಂಪನಿಯ ಅತಿದೊಡ್ಡ ಷೇರುದಾರ ಆಗಿದ್ದರು. ಈ ನಡುವೆ, ಇಡೀ ಕಂಪನಿಯನ್ನೇ ಖರೀದಿಸುವ ಸಲುವಾಗಿ ಅವರು ಟ್ವೀಟರ್‌ಗೆ ಆಫರ್‌ ನೀಡಿದ್ದರು. ಶೇ.91ರಷ್ಟುಷೇರುಗಳನ್ನು ತಲಾ 4150 ರು.ನಂತೆ ಖರೀದಿಸುವುದಾಗಿ ಹೇಳಿದ್ದರು. ಇದೀಗ ನಿರಂತರ ಮಾತುಕತೆ ನಡೆದು, ಮಸ್‌್ಕ ಹೇಳಿದ ದರಕ್ಕೆ ಕಂಪನಿ ಮಾರಾಟ ಮಾಡಲು ಟ್ವೀಟರ್‌ ಒಪ್ಪಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಲಾನ್‌ ಮಸ್‌್ಕ, ವಾಕ್‌ ಸ್ವಾತಂತ್ರ್ಯದ ವೇದಿಕೆಯಾಗಿರುವ ಟ್ವೀಟರ್‌ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅನ್ನಿಸಿದ್ದರಿಂದ ಅದನ್ನು ಖರೀದಿಸಲು ಮುಂದಾದೆ. ಜನರ ವಿಶ್ವಾಸ ಗಳಿಸಿ, ಉತ್ತಮವಾಗಿ ಸೇವೆ ಸಲ್ಲಿಸಲು ಇನ್ನು ಮುಂದೆ ಟ್ವೀಟರ್‌ ಅನ್ನು ಖಾಸಗಿ ಕಂಪನಿಯಾಗಿ ರೂಪಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ, ಖರೀದಿ ವ್ಯವಹಾರ ಪೂರ್ಣಗೊಂಡ ಬಳಿಕ ಟ್ವೀಟರ್‌ ಎಂಬುದು ಖಾಸಗಿ ಒಡೆತನದ ಕಂಪನಿಯಾಗಿರಲಿದೆ ಎಂದು ಟ್ವೀಟರ್‌ ಕೂಡ ಹೇಳಿಕೊಂಡಿದೆ. ಟ್ವೀಟರ್‌ಗೆ ಉದ್ದೇಶವಿದೆ, ಅದರ ಅಸ್ತಿತ್ವ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಮೂಲದ ಸಿಇಒ ಪರಾಗ್‌ ಅಗ್ರಾವಾಲ್‌ ತಿಳಿಸಿದ್ದಾರೆ.

click me!