*3.25 ಲಕ್ಷ ಕೋಟಿ ರೂ.ಗೆ ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
*ಸ್ವಾಧೀನವಾದ ವರ್ಷದೊಳಿಗೆ ಹುದ್ದೆ ತೊರಿದರೆ ಬೃಹತ್ ಮೊತ್ತದ ಹಣ ಸಿಗಲಿದೆ ಸಿಇಒಗೆ
*ಮಸ್ಕ್ ಕಂಪನಿ ಖರೀದಿಸುತ್ತಿದ್ದಂತೆ ಅನಿಶ್ಚಿತತೆಯಲ್ಲಿದೆ ಕಂಪನಿ ಎಂದು ಮೇಲ್ ಮಾಡಿದ ಪರಾಗ್
ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟರ್ (Twitter) ಅನ್ನು 3.25 ಲಕ್ಷ ಕೋಟಿ ರೂಪಾಯಿಗೆ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಖರೀದಿಸಿದ್ದು ಈಗ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಒಂದ ವೇಳೆ ಟ್ವಿಟರ್‌ನ ಹಾಲಿ ಸಿಇಒ (CEO) ಪರಾಗ್ ಅಗ್ರವಾಲ್ (Parag Agrawal) ಅವರನ್ನು ಸಿಇಒ ಹುದ್ದೆಯಿಂದ ಮಸ್ಕ್ ಕಿತ್ತು ಹಾಕಿದರೆ ಎಷ್ಟು ಹಣ ನೀಡಬೇಕಾಗುತ್ತದೆ ಎಂಬ ಪ್ರಶ್ನೆ? ಸೋಷಿಯಲ್ ಮೀಡಿಯಾ (Social Media) ಗಳಲ್ಲೂ ಈ ಬಗ್ಗೆ ಬಹಳ ಜೋರು ಚರ್ಚೆ ನಡೆಯುತ್ತದೆ. ಮತ್ತೊಂದಡೆ, ಅಗ್ರವಾಲ್, ಮಸ್ಕ್ ಸ್ವಾಧೀನ ಪಡಿಸಿಕೊಂಡ ಬಳಿಕ ಉದ್ಯೋಗಿಗಳ ಮೇಲ್ ಮಾಡಿ ಅನಿಶ್ಚಿತತೆ ಇದೆ ಎಂದು ಹೇಳಿದ್ದಾರೆ. ಅದೇ ಏನೇ ಇರಲಿ. ಒಂದು ವೇಳೆ ಟ್ವಿಟರ್ ಸಿಇಒ ಸ್ಥಾನವನ್ನು ಪರಾಗ್ ಅಗ್ರವಾಲ್ ತೊರೆದರೆ, ಕಂಪನಿಯು ಅವರಿಗೆ 42 ಮಿಲಿಯನ್ ಡಾಲರ್ (3,21,84,83,100 ರೂ.) ಹಣ ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆಯಾಗಿರುವ ಇಕ್ವಿಲರ್ (Equilar) ವಿಶ್ಲೇಷಣೆ ಮಾಡಿದೆ. 2013ರಿಂದ ಸಾರ್ವಜನಿಕ ಕಂಪನಿಯಾಗಿರುವ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿದ್ದಾರೆ.
Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಮಾಲೀಕ, 3.25 ಲಕ್ಷ ಕೋಟಿ ರೂಗೆ ಸಾಮಾಜಿಕ ಜಾಲತಾಣ ಖರೀದಿ!
ಆಡಳಿತ ಮಂಡಳಿ ಬದಲಾದ ಒಂದು ವರ್ಷದೊಳಗೇ ಅಗ್ರವಾಲ್ ಅವರ ಸೇವೆಯನ್ನು ರದ್ದುಗೊಳಿಸಿದರೆ ಟ್ವಿಟರ್ ಅವರಿಗೆ 44 ಮಿಲಿಯನ್ ಡಾಲರ್ ನೀಡಬೇಕಾಗುತ್ತದೆ. ಇಕ್ವಿಲರ್ (Equilar) ಅಂದಾಜಿನ ಪ್ರಕಾರ, ಅಗ್ರವಾಲ್ ಅವರ ಮೂಲ ಸಂಬಳ ಮತ್ತು ಎಲ್ಲ ಇಕ್ವಿಟಿಗಳು ಸೇರಿ ಭಾರಿ ಮೊತ್ತದ ಹಣವನ್ನು ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಕಂಪನಿಯ ಇತ್ತೀಚಿನ ಸ್ಟೇಟ್ಮೆಂಟ್ ಪ್ರಕಾರ ಹಾಗೂ ಮಸ್ಕ್ ಅವರು ಪ್ರತಿ ಷೇರಿಗೆ 54.20 ಡಾಲರ್ ಆಫರ್ ಮಾಡಿರುವ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಈ ವಿಶ್ಲೇಷಣೆ ಮಾಡಲಾಗಿದೆ. ಆದರೆ, ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲು ಟ್ವಿಟರ್ ಮುಂದಾಗಿಲ್ಲ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಅನೇಕ ಸುದ್ದಿ ತಾಣಗಳು ವರದಿ ಮಾಡಿವೆ.
undefined
ಅಗ್ರವಾಲ್ ಅವರು ಟ್ವಿಟರ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗುವ ಮುಂಚೆ, ಚೀಫ್ ಟೆಕ್ನಾಲಜಿ ಆಫೀಸರ್ (Chief Technology officer) ಆಗಿದ್ದರು. ಕಳೆದ ನವೆಂಬರ್‌ನಲ್ಲಿ ಅವರನ್ನು ಸಿಇಒ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. 2021ರಲ್ಲಿ ಅವರ ಕಾಂಪನ್ಷೇಷನ್ ಒಟ್ಟು 30.4 ಮಿಲಿಯನ್ ಡಾಲರ್ ಇತ್ತು ಎನ್ನಲಾಗಿದೆ.
ಮಸ್ಕ್ ಪಾಲಾದ ಟ್ವಿಟರ್
ವಿಶ್ವದ ಅತೀ ದೊಡ್ಡ ಹಾಗೂ ಪ್ರಬಲ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ಇದೀಗ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ. ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ನೀಡಿದ್ದ ಆಫರ್ ಒಪ್ಪಿಕೊಂಡಿರುವ ಟ್ವಿಟರ್ ಬರೋಬ್ಬರಿ 3.25 ಲಕ್ಷ ಕೋಟಿ ರೂಪಾಯಿಗೆ(44 ಬಿಲಿಯನ್ ಅಮೆರಿಕನ್ ಡಾಲರ್) ಮಾರಾಟವಾಗಿದೆ.
ಎಲಾನ್ ಮಸ್ಕ್ 44 ಬಿಲಿಯನ್ ಅಮೆರಿಕನ್ ಡಾಲರ್ ಆಫರ್ ನೀಡಿದ ಬೆನ್ನಲ್ಲೇ ಟ್ವಿಟರ್ ಪಾಲುದಾರರೊಂದಿಗೆ ಮಾತುಕತೆ ಆರಂಭಗೊಂಡಿತ್ತು. ಇದೀಗ ಟ್ವಿಟರ್ ತನ್ನ ಷೇರುದಾರರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದೆ. ಪ್ರತಿ ಷೇರಿಗೆ 54.20 ಅಮೆರಿಕನ್ ಡಾಲರ್ ಒಪ್ಪದಂವನ್ನು ಟ್ವಿಟರ್ ಘೋಷಿಸಿತು. ಎಲಾನ್ ಮಸ್ಕ್ ನಾಲ್ಕು ದಿನಗಳ ಹಿಂದೆ ಈ ಆಫರ್ ನೀಡಿದ್ದರು. ಅಷ್ಟೇ ವೇಗದಲ್ಲಿ ಟ್ವಿಟರ್ ಮಸ್ಕ್ ತೆಕ್ಕೆಗೆ ಜಾರಿಕೊಂಡಿದೆ.
Motorola Moto G52 ಬಿಡುಗಡೆ; ಕೈಗೆಟುಕುವ ಬೆಲೆ, ಸೂಪರ್ ಫೀಚರ್ಸ್
ಪ್ರತಿ ಷೇರಿಗೆ 4150 ರು. ನೀಡುವುದಾಗಿ ಮಸ್ಕ್ ನೀಡಿದ್ದ ಆಫರ್ ಕಂಪನಿಯನ್ನು ಒತ್ತಡಕ್ಕೆ ಸಿಲುಕಿಸಿತ್ತು. ಒಂದು ವೇಳೆ ಖರೀದಿಯ ನಡೆದರೆ ಟೈಮ್‌ಲೈನ್, ಶುಲ್ಕ ಮುಂತಾದವುಗಳು ಹೇಗಿರಬೇಕು ಎಂದು ಎರಡೂ ಕಡೆಯವರೂ ಚರ್ಚೆ ನಡೆಸಿದ್ದಾರೆ. ಎಲ್ಲಾ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಏ.14ರಂದು ಟ್ವೀಟರ್‌ನ ಪ್ರತಿ ಷೇರಿಗೆ 4150 ರು. ನೀಡುವ ಮೂಲಕ 3 ಲಕ್ಷ ಕೋಟಿ ರು.ಗೆ ಟ್ವೀಟರ್ ಖರೀದಿಸುವುದಾಗಿ ಮಸ್ಕ್ ಆಫರ್ ನೀಡಿದ್ದರು.