Google Android 13: ನವೀಕೃತ ಥೀಮ್‌, ಉತ್ತಮ ಗೌಪ್ಯತೆ, ಭಾಷಾ ವೈಶಿಷ್ಟ್ಯಗಳೊಂದಿಗೆ ಇದೀಗ ಪರೀಕ್ಷೆಗೆ ಲಭ್ಯ!

Published : Feb 12, 2022, 09:00 AM ISTUpdated : Feb 12, 2022, 09:01 AM IST
Google Android 13: ನವೀಕೃತ ಥೀಮ್‌, ಉತ್ತಮ ಗೌಪ್ಯತೆ, ಭಾಷಾ ವೈಶಿಷ್ಟ್ಯಗಳೊಂದಿಗೆ ಇದೀಗ ಪರೀಕ್ಷೆಗೆ ಲಭ್ಯ!

ಸಾರಾಂಶ

ಗೂಗಲ್‌ ನ ಹೊಸ ಆಂಡ್ರಾಯ್ಡ್ 13 ಡೆವಲಪರ್ ಪೂರ್ವವೀಕ್ಷಣೆಯು ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಮಾತ್ರ ಮೀಸಲಾಗಿದೆ ಮತ್ತು ಇದು Pixel 4, Pixel 5 ಮತ್ತು Pixel 6 ಸಾಧನಗಳಿಗೆ ಲಭ್ಯವಿದೆ.

Tech Desk: ಆಂಡ್ರಾಯ್ಡ್ 12  ಇನ್ನೂ ಅಳವಡಿಕೆಯ ಆರಂಭಿಕ ಹಂತಗಳಲ್ಲಿದೆ, ಆದರೆ ಗೂಗಲ್ ಪ್ರತಿ ವರ್ಷದಂತೆ ತನ್ನು ಮುಂದಿನ ಯೋಜನೆಗಳನ್ನು ಬಹಿರಂಗಪಡಿಸಿದೆ. ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್‌ಗಳನ್ನು ಅಚ್ಚರಿಗೊಳಿಸುವ, ಆಂಡ್ರಾಯ್ಡ್‌ನ ಮುಂದಿನ ಆವೃತ್ತಿಯಾದ ಆಂಡ್ರಾಯ್ಡ್ 13 ನ ಮೊದಲ ಡೆವಲಪರ್ ಪೂರ್ವವೀಕ್ಷಣೆಯನ್ನು (Preview) ಪ್ರಾರಂಭಿಸಿದೆ. ಇದು ಕೇವಲ ಹೊಸ ಆಪರೇಟಿಂಗ್ ಸಿಸ್ಟಮ್‌ನ ಮೊದಲ ನೋಟವಾಗಿದ್ದು ಹೆಚ್ಚಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಆಂಡ್ರಾಯ್ಡ್ 13 ನಲ್ಲಿ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿರುವುದನ್ನು ಗೂಗಲ್ ಖಚಿತಪಡಿಸಿದೆ. 

ಗೂಗಲ್‌ನ ಆಂಡ್ರಾಯ್ಡ್ 13ನಲ್ಲಿ ಅಪ್‌ಗ್ರೇಡ್ ಮಾಡಿದ ಥೀಮಿಂಗ್ ಆಯ್ಕೆ, ಉತ್ತಮ ಗೌಪ್ಯತೆ ವೈಶಿಷ್ಟ್ಯಗಳು, ಉತ್ತಮ ಭಾಷಾ ನಿಯಂತ್ರಣಗಳು ಮತ್ತು ಅಪ್ಲಿಕೇಶನ್‌ಗಳಿಗೆ ಗ್ರ್ಯಾನ್ಯುಲರ್ ಅನುಮತಿ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಾಗಿದೆ.  ಅಲ್ಲದೇ ಹೊಸ ಅಪ್ಡೇಟ್ ಇಂಟರ್‌ಫೇಸ್‌ನಲ್ಲಿ ಹೆಚ್ಚಿನ ಗಮನವನ್ನು ಹೊಂದಿದೆ. 

ಇದನ್ನೂ ಓದಿ: Google Chrome New Logo: ಎಂಟು ವರ್ಷಗಳ ಬಳಿಕ ಲೋಗೋ ಬದಲಾಯಿಸುತ್ತಿರುವ ಟೆಕ್‌ ದೈತ್ಯ!

ಅಪ್ಲೀಕೇಶನ್‌ ಪರ್ಮಿಷನ್‌ ಮೇಲೆ ನಿಯಂತ್ರಣ: ಆಂಡ್ರಾಯ್ಡ್ 12 ಮುಖ್ಯವಾಗಿ ಆಪರೇಟಿಂಗ್ ಸಿಸ್ಟಮ್‌ನಾದ್ಯಂತ ಮೆಟೀರಿಯಲ್ ಯು ( Material You) ಥೀಮ್‌ಗೆ ಸಂಬಂಧಿಸಿದೆ, ಆದರೆ  ಆಂಡ್ರಾಯ್ಡ್ 13 ನೊಂದಿಗೆ,   ಗೂಗಲ್ ಮುಂದಿನ ಹಂತಕ್ಕೆ ಗ್ರಾಹಕೀಕರಣವನ್ನು (customisability) ವಿಸ್ತರಿಸುತ್ತಿದೆ. ಡೈನಾಮಿಕ್ ಅಪ್ಲಿಕೇಶನ್ ಐಕಾನ್‌ಗಳು ಈಗ ಗೂಗಲ್‌ ಹೊರತುಪಡಿಸಿ ಎಲ್ಲಾ ಅಪ್ಲಿಕೇಶನ್‌ಗಳಿಗೆ ಲಭ್ಯವಿದೆ. ಥೀಮ್ ಐಕಾನ್‌ಗಳು ವಾಲ್‌ಪೇಪರ್‌ಗೆ ಸಂಬಂಧಿಸಿದ ಬಣ್ಣವನ್ನು ಅಳವಡಿಸಿಕೊಳ್ಳಲು ಅಪ್ಲಿಕೇಶನ್ ಐಕಾನ್‌ಗಳಿಗೆ ಅನುಮತಿಸುವ ವೈಶಿಷ್ಟ್ಯವಾಗಿದೆ.

ಆಂಡ್ರಾಯ್ಡ್‌ 13 ನಲ್ಲಿ, ಬಳಕೆದಾರರು ಗ್ಯಾಲರಿ ಅಪ್ಲಿಕೇಶನ್‌ಗೆ ಆಕ್ಸಸ್ ವಿಷಯದಲ್ಲಿ ಅಪ್ಲಿಕೇಶನ್‌ಗೆ ಯಾವ ಮಟ್ಟದ ಅನುಮತಿಯನ್ನು ನೀಡಲು ಬಯಸುತ್ತಾರೆ ಎಂಬುದನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಹೊಸ ಫೋಟೋ ಪಿಕ್ಕರ್ ಬಳಕೆದಾರರಿಗೆ ಸಂಪೂರ್ಣ ಗ್ಯಾಲರಿ ಅಥವಾ ಈ ಪ್ರಕ್ರಿಯೆಯಲ್ಲಿ ನೀವು ಆಯ್ಕೆ ಮಾಡಬಹುದಾದ ಕೆಲವು ಆಯ್ದ ಫೋಟೋಗಳಿಗೆ ಪ್ರವೇಶವನ್ನು ನೀಡಲು ಅನುಮತಿಸುತ್ತದೆ. 

ಇದನ್ನೂ ಓದಿ: Google Duo Milestone: ಪ್ಲೇ ಸ್ಟೋರ್‌ನಲ್ಲಿ ವೀಡಿಯೋ ಕಾಲಿಂಗ್ ಆ್ಯಪ್ 500 ಕೋಟಿ ಡೌನ್‌ಲೋಡ್!

Apple ನ iOS 15 ಈ ವೈಶಿಷ್ಟ್ಯವನ್ನು ಹೊಂದಿದೆ, ಅಲ್ಲಿ ನೀವು ನಿರ್ದಿಷ್ಟ ಅಪ್ಲಿಕೇಶನ್‌ಗೆ ಅನುಮತಿಯನ್ನು ನೀಡಬಹುದು. ಆದರೆ ಗೂಗಲ್ ಈ ವೈಶಿಷ್ಟ್ಯವನ್ನು ಕೇವಲ Android 13 ಗೆ ಸೀಮಿತಗೊಳಿಸಲು ಬಯಸುವುದಿಲ್ಲ ಆದರೆ ಅಂತಿಮವಾಗಿ ಅದನ್ನು Android 11 ಮತ್ತು ಹೆಚ್ಚಿನ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಎಲ್ಲಾ ಫೋನ್‌ಗಳಿಗೆ ಬಿಡುಗಡೆ ಮಾಡಬಹುದು. 

ಭಾಷೆಯನ್ನು ಹೊಂದಿಸಲು ಅನುಮತಿ: Android 13 ನೊಂದಿಗೆ ಬರುವ ಕೆಲವು ಬದಲಾವಣೆಗಳನ್ನು ಗೂಗಲ್ ಸಹ ಹೈಲೈಟ್ ಮಾಡಿದೆ. ಉದಾಹರಣೆಗೆ, Wi-Fi ಅನುಮತಿಯು ಬದಲಾವಣೆ ಪಡೆದುಕೊಂಡಿದೆ ಮತ್ತು ಫೋನ್‌ನ ಸ್ಥಳವನ್ನು ನಿರ್ಧರಿಸುವ ಅಗತ್ಯವಿಲ್ಲದೇ Wi-Fi ಪಾಯಿಂಟ್‌ಗಳನ್ನು ಅನ್ವೇಷಿಸಲು ಮತ್ತು ಸಂಪರ್ಕಿಸಲು ಇದೀಗ ಅಪ್ಲಿಕೇಶನ್‌ಗಳಿಗೆ ಇದು ಅನುಮತಿಸುತ್ತದೆ. 

ಹೊಸ ಆಂಡ್ರಾಯ್ಡ್ ಆವೃತ್ತಿಯ ಉತ್ತಮ ಭಾಷಾ ಪ್ರಾಶಸ್ತ್ಯಗಳು ಹೊಂದಿದ್ದು ಬಳಕೆದಾರರಿಗೆ ಪ್ರತಿ ಅಪ್ಲಿಕೇಶನ್ ಆಧಾರದ ಮೇಲೆ ಭಾಷೆಯನ್ನು ಹೊಂದಿಸಲು ಅನುಮತಿಸುತ್ತದೆ. ಅಂದರೆ ಒಂದು ಅಪ್ಲಿಕೇಶನ್ ಇಂಗ್ಲಿಷನ್ನು ಬಳಸುತ್ತದೆ, ಇನ್ನೊಂದು ಹಿಂದಿಯಲ್ಲಿರಬಹುದು. ಪ್ರಸ್ತುತ ಆಂಡ್ರಾಯ್ಡ್ 13 ಡೆವಲಪರ್ ಪೂರ್ವವೀಕ್ಷಣೆ ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಮೀಸಲಾಗಿದೆ. ಇದು Pixel 4, Pixel 5 ಮತ್ತು Pixel 6 ಸಾಧನಗಳಿಗೆ ಲಭ್ಯವಿದೆ. 

ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಹೆಚ್ಚಿನ ಡೆವಲಪರ್ ಪೂರ್ವವೀಕ್ಷಣೆಗಳನ್ನು ಬಿಡುಗಡೆ ಮಾಡಲು ಗೂಗಲ್ ಯೋಜಿಸಿದೆ, ಆದರೆ ಬೀಟಾಗಳು‌ ಪರೀಕ್ಷೆಗಳು ಏಪ್ರಿಲ್‌ನಲ್ಲಿ ಬರಬಹುದು. ಆಂಡ್ರಾಯ್ಡ್ 13 ರ ಸ್ಥಿರ ಬಿಡುಗಡೆಯು ಜೂನ್ ಅಥವಾ ಜುಲೈನಲ್ಲಿ ಸಂಭವಿಸಬಹುದು, ಆದರೆ ಅಧಿಕೃತ ಬಿಡುಗಡೆಯು ಈ ವರ್ಷದ ನಂತರ ನಡೆಯಲಿದೆ ಎಂದು ಹೇಳಲಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?